*ಬ್ಯಾಂಕುಗಳು ಹಾಗೂ ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಗಳಿಗೆ ವಿತ್ತ ಸಚಿವರ ಮನವಿ*ಸಾಲ ನೀಡಲು ಬ್ಯಾಂಕುಗಳಿಗೆ ಹಣಕಾಸಿನ ಕೊರತೆಯಿಲ್ಲ ಎಂದ ಸಚಿವೆ*ಅಕೌಂಟ್ ಅಗ್ರಿಗೇಟರ್ ಜಾಲದಿಂದ ಮುಕ್ತ ಬ್ಯಾಂಕಿಂಗ್ ವ್ಯವಸ್ಥೆಗೆ ಉತ್ತೇಜನ
ಮುಂಬೈ (ಫೆ.23): ಡಿಜಿಟಲ್ ಸಾಲಕ್ಕೆ (digital lending)ಉತ್ತೇಜನ ಹಾಗೂ ಸಣ್ಣ ಸಾಲಗಾರರಿಗೆ ಸಾಲ ಲಭ್ಯವಾಗಲು ಅಕೌಂಟ್ ಅಗ್ರಿಗೇಟರ್ (AA) ಜಾಲಕ್ಕೆ ಸೇರ್ಪಡೆಗೊಳ್ಳುವಂತೆ ಬ್ಯಾಂಕುಗಳು (Banks) ಹಾಗೂ ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಗಳ (NBFCs) ಮುಖ್ಯಸ್ಥರಿಗೆ ವಿತ್ತ ಸಚಿವೆ (Finance Minister) ನಿರ್ಮಲಾ ಸೀತಾರಾಮನ್ (Nirmala Sitharaman) ಮನವಿ ಮಾಡಿದ್ದಾರೆ.
ಬ್ಯಾಂಕುಗಳ ಹಾಗೂ ಫೈನಾನ್ಸ್ ಕಂಪನಿಗಳ ಮುಖ್ಯಸ್ಥರ ಜೊತೆಗೆ ನಿರ್ಮಲಾ ಸೀತಾರಾಮನ್ ಇತ್ತೀಚೆಗೆ ನಡೆಸಿದ ಸಭೆಯಲ್ಲಿ ಈ ಮನವಿ ಮಾಡಿದ್ದಾರೆ. ಅಕೌಂಟ್ ಅಗ್ರಿಗೇಟರ್ (AA) ಹಾಗೂ ಹಣದ ಹರಿವು ಆಧರಿತ ಸಾಲ ನೀಡೋ ವ್ಯವಸ್ಥೆಯ ಪೈಲಟ್ ಯೋಜನೆಗಳು ಈಶಾನ್ಯ ರಾಜ್ಯಗಳೂ ಸೇರಿದಂತೆ ದೇಶಾದ್ಯಂತ ಪ್ರತಿಫಲನಗೊಂಡಿವೆ ಎಂಬ ಅಭಿಪ್ರಾಯವನ್ನು ವಿತ್ತ ಸಚಿವರು ಈ ಸಂದರ್ಭದಲ್ಲೇ ವ್ಯಕ್ತಪಡಿಸಿದ್ದರು.
Senior Citizens Health Insurance: ಅಜ್ಜಿ-ತಾತನಿಗೆ ವಿಮೆ ಖರೀದಿ ಮಾಡ್ತಿದ್ದರೆ ಇದರ ಬಗ್ಗೆ ಗಮನವಿರಲಿ!
ಮಧ್ಯವರ್ತಿಗಳ ವೆಚ್ಚವನ್ನು ತಗ್ಗಿಸುವ ಹಾಗೂ ಪರಿಣಾಮಕಾರಿ ವೆಚ್ಚದಲ್ಲಿ ಸೇವೆಗಳನ್ನು ಒದಗಿಸಲು ಹೊಸ ಮಾರ್ಗಗಳನ್ನು ಕಂಡುಕೊಳ್ಳಲು ಬ್ಯಾಂಕುಗಳಿಗೆ ಡಿಜಿಟಲ್ ಬ್ಯಾಂಕಿಂಗ್ ಅವಕಾಶ ಒದಗಿಸಿದೆ ಎಂಬ ವಿಚಾರಕ್ಕೆ ಈ ಸಂದರ್ಭದಲ್ಲಿ ನಿರ್ಮಲಾ ಸೀತಾರಾಮನ್ ಹೆಚ್ಚಿನ ಒತ್ತು ನೀಡಿದರು ಕೂಡ. 2021ನೇ ಆರ್ಥಿಕ ಸಾಲಿನಲ್ಲಿ ಬ್ಯಾಂಕುಗಳು 1.2 ಲಕ್ಷ ಕೋಟಿ ರೂ. ದಾಖಲೆಯ ಲಾಭ ಗಳಿಸಿವೆ. ಹೀಗಾಗಿ ಬ್ಯಾಂಕುಗಳ ಬಳಿ ಸಾಕಷ್ಟು ಪ್ರಮಾಣದಲ್ಲಿ ಹಣವಿದೆ. ಆದಕಾರಣ ಬ್ಯಾಂಕುಗಳು ಹೆಚ್ಚಿನ ಪ್ರಮಾಣದಲ್ಲಿ ಸಾಲ ಒದಗಿಸಲು ಪ್ರಯತ್ನಿಸಬೇಕು ಎಂದರು.
ಇತ್ತೀಚೆಗೆ ನಡೆದ ಕೈಗಾರಿಕೆಗಳಿಗೆ ಸಂಬಂಧಿಸಿದ ಸಂವಾದ ಕಾರ್ಯಕ್ರಮದಲ್ಲಿ ನಗದು ಹರಿವಿನ ಕುರಿತ ಮಾಹಿತಿ ವೈಯಕ್ತಿಕ ಹಣಕಾಸಿಗೆ ಮಾತ್ರವಲ್ಲ, ಸಣ್ಣ ಉದ್ಯಮಗಳ ಅಭಿವೃದ್ಧಿಗೂ ನೆರವು ನೀಡಲಿದೆ ಎಂಬ ಮಾಹಿತಿಯನ್ನು ಎಸ್ ಬಿಐ ಮುಖ್ಯಸ್ಥ ದಿನೇಶ್ ಖಾರ ಅವರು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ನೀಡಿದ್ದರು.
ವಿಮೆ ಕ್ಲೈಮ್ ಮಾಡಲು Insurance Company ನಿರಾಕರಿಸಿದ್ರೆ, ದೂರು ನೀಡೋದೆಲ್ಲಿ?
ಏನಿದು ಅಕೌಂಟ್ ಅಗ್ರಿಗೇಟರ್?
ಅಕೌಂಟ್ ಅಗ್ರಿಗೇಟರ್ (AA) ವೇದಿಕೆ ಮುಕ್ತ ಬ್ಯಾಂಕಿಂಗ್ ವ್ಯವಸ್ಥೆಗೆ ಉತ್ತೇಜನ ನೀಡುತ್ತದೆ. ಇದು ಆರ್ ಬಿಐ ನಿಯಂತ್ರಿತ ಸಂಸ್ಥೆಯಾಗಿದೆ. ಎಎ ಮೂಲಕ ಯಾವುದೇ ಒಂದು ಬ್ಯಾಂಕಿನ ಗ್ರಾಹಕನ ಹಣಕಾಸಿನ ವಹಿವಾಟುಗಳ ಮಾಹಿತಿಯನ್ನು ಇನ್ನೊಂದು ನಿಯಂತ್ರಿತ ಹಣಕಾಸು ಸಂಸ್ಥೆಯೊಂದಿಗೆ ಹಂಚಿಕೊಳ್ಳಬಹುದು. ಆದ್ರೆ ಗ್ರಾಹಕನ ಒಪ್ಪಿಗೆಯಿಲ್ಲದೆ ಮಾಹಿತಿ ಹಂಚಿಕೆ ಸಾಧ್ಯವಿಲ್ಲ. ಇನ್ನು ಗ್ರಾಹಕ ಖಾತೆ ಹೊಂದಿರೋ ಬ್ಯಾಂಕ್ ಕೂಡ ಎಎ ಜಾಲಕ್ಕೆ ಸೇರ್ಪಡೆಗೊಂಡಿರಬೇಕು. ಈ ವ್ಯವಸ್ಥೆಯಿಂದ ಗ್ರಾಹಕರು ತಮ್ಮ ಹಣಕಾಸು ದತ್ತಾಂಶಗಳನ್ನು ಡಿಜಿಟಲ್ ರೂಪದಲ್ಲಿ ಪಡೆಯೋ ಜೊತೆಗೆ ಇತರ ಹಣಕಾಸು ಸಂಸ್ಥೆಗಳೊಂದಿಗೆ ಕೂಡ ಸುರಕ್ಷಿತವಾಗಿ ಹಂಚಿಕೊಳ್ಳಬಹುದು. ಇದ್ರಿಂದ ಗ್ರಾಹಕರಿಗೆ ಇತರ ಸಂಸ್ಥೆಗಳಿಂದ ಸಾಲ ಪಡೆಯೋ ಪ್ರಕ್ರಿಯೆ ಸುಲಭವಾಗುತ್ತದೆ. ಗ್ರಾಹಕರ ನಗದು ವಹಿವಾಟಿನ ಡಿಜಿಟಲ್ ದಾಖಲೆಗಳನ್ನು ಆಧರಿಸಿ ಇತರ ಸಂಸ್ಥೆಗಳು ಅವರಿಗೆ ಸಾಲಗಳನ್ನು ನೀಡುತ್ತವೆ.
ಸಾಲ ಪಡೆಯೋದು ಸುಲಭ
ಬ್ಯಾಂಕ್ ಖಾತೆ ಹೊಂದಿರುವ ಯಾವುದೇ ವ್ಯಕ್ತಿ ಅಕೌಂಟ್ ಅಗ್ರಿಗೇಟರ್ ಜಾಲಕ್ಕೆ ಸೇರ್ಪಡೆಯಾಗಬಹುದು. ಹೀಗೆ ಸೇರ್ಪಡೆಗೊಂಡ ವ್ಯಕ್ತಿ ತಾನು ಖಾತೆ ಹೊಂದಿರೋ ಬ್ಯಾಂಕಿನಲ್ಲಿನ ತನ್ನ ವಹಿವಾಹಿಟಿನ ಆಯ್ದ ದತ್ತಾಂಶಗಳನ್ನು ಇನ್ನೊಂದು ಹಣಕಾಸು ಸಂಸ್ಥೆಯೊಂದಿಗೆ ಹಂಚಿಕೊಳ್ಳಲು ಎಎ ಅವಕಾಶ ಒದಗಿಸುತ್ತದೆ. ಗ್ರಾಹಕನ ಒಪ್ಪಿಗೆಯಿಲ್ಲದೆ ಎಎ ದತ್ತಾಂಶ ಹಂಚಿಕೊಳ್ಳೋದಿಲ್ಲ. ಗ್ರಾಹಕರು ಸಾಲ ಪಡೆಯಲು ಬಯಸಿದ್ರೆ ಅದಕ್ಕಾಗಿ ಸಾಕಷ್ಟು ದಾಖಲೆಗಳನ್ನು ಬ್ಯಾಂಕಿನ ಜೊತೆಗೆ ಹಂಚಿಕೊಳ್ಳಬೇಕಾದ ಅಗತ್ಯವಿದೆ. ಇದಕ್ಕಾಗಿ ಸಾಕಷ್ಟು ಅಲೆದಾಟ ಕೂಡ ನಡೆಸಬೇಕಾಗುತ್ತದೆ. ಈ ಭೌತಿಕ ಮೌಲ್ಯಮಾಪನ ಅಥವಾ ಪರಿಶೀಲನೆ ಪ್ರಕ್ರಿಯೆ ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ ಕೂಡ. ಆದ್ರೆ ಎಎ ಮೂಲಕ ಹಣಕಾಸು ವಹಿವಾಟಿನ ಮಾಹಿತಿಗಳನ್ನು ಇನ್ನೊಂದು ಸಂಸ್ಥೆಯೊಂದಿಗೆ ತ್ವರಿತವಾಗಿ ಹಂಚಿಕೊಳ್ಳಬಹುದಾಗಿದೆ. ಇದ್ರಿಂದ ಶೀಘ್ರವಾಗಿ ಸಾಲ ಸಿಗುತ್ತದೆ.
