Asianet Suvarna News Asianet Suvarna News

ಬೆಂಗಳೂರಲ್ಲಿ ಫೇಸ್‌ಬುಕ್: ಯಾರಿಗಿದೆ ಉದ್ಯೋಗದ ಲಕ್?

ಬೆಂಗಳೂರಿಗೆ ಬರುತ್ತಿದೆ ಫೇಸ್‌ಬುಕ್ ಕಚೇರಿ! 2.2 ಲಕ್ಷ ಚದರದಡಿ ವಿಸ್ತೀರ್ಣದ ಬೃಹತ್ ಕಚೇರಿ! ಎಂಬೆಸಿ ಗಾಲ್ಫ್ ಲಿಂಕ್ಸ್ ಸಂಕೀರ್ಣದಲ್ಲಿ ಕಚೇರಿ! 34 ಕೋಟಿ ರೂ. ವಾರ್ಷಿಕ ಬಾಡಿಗೆ ನೀಡಲಿದೆ ಫೇಸ್‌ಬುಕ್

Facebook Plans to Open its Office in Bengaluru
Author
Bengaluru, First Published Oct 23, 2018, 11:04 AM IST

ಬೆಂಗಳೂರು(ಅ.23): ದೇಶದ ಐಟಿ ರಾಜಧಾನಿ ಎಂದೇ ಖ್ಯಾತಿ ಪಡೆದಿರುವ ಬೆಂಗಳೂರಿಗೆ ಇದೇ ಮೊದಲ ಬಾರಿ ಜನಪ್ರಿಯ ಸಾಮಾಜಿಕ ಮಾಧ್ಯಮ ಫೇಸ್‌ಬುಕ್ ಕಾಲಿರಿಸುತ್ತಿದೆ.

ನಗರದಲ್ಲಿ ಫೇಸ್ ಬುಕ್ 2.2 ಲಕ್ಷ ಚದರದಡಿ ವಿಸ್ತೀರ್ಣದ ಬೃಹತ್ ಕಚೇರಿ ಸ್ಥಾಪಿಸಲಿದೆ ಎಂದು ಮೂಲಗಳು ತಿಳಿಸಿವೆ. ಬೆಂಗಳೂರಿನ ಎಂಬೆಸಿ ಗಾಲ್ಫ್ ಲಿಂಕ್ಸ್ ಸಂಕೀರ್ಣದಲ್ಲಿ ಕಚೇರಿಯನ್ನು ಸ್ಥಾಪನೆ ಮಾಡಲಿದ್ದು, ಸುಮಾರು 2,200 ಮಂದಿಗೆ ಉದ್ಯೋಗ ನೀಡುವ ನಿರೀಕ್ಷೆ ಇದೆ. 

ಇದೇ ವೇಳೆ ಫೇಸ್‌ಬುಕ್ ಆಗಮನದೊಂದಿಗೆ ಜಗತ್ತಿನ ಐದು ಅತೀ ದೊಡ್ಡ ಸಾಫ್ಟ್ ವೇರ್ ತಂತ್ರಜ್ಞಾನ ಕಂಪನಿಗಳನ್ನು ಬೆಂಗಳೂರು ಹೊಂದಿದಂತಾಗಲಿದೆ. ಈಗಾಗಲೇ ಅಮೇಜಾನ್, , ಮೈಕ್ರೋಸಾಫ್ಟ್ ಹಾಗೂ ಗೂಗಲ್ ಕಂಪನಿಗಳು ಬೆಂಗಳೂರಿನಲ್ಲಿವೆ.

ಐಟಿ ರಾಜಧಾನಿಗಳಲ್ಲಿ ಫೇಸ್ ಬುಕ್ 2,200 ಜನರಿಗೆ ಜನರಿಗೆ ನೌಕರಿ ನೀಡುವ ಸಾಧ್ಯತೆಗಳಿವೆ ಎಂದು ತಿಳಿದುಬಂದಿದ್ದು, ಬೆಂಗಳೂರಿನ ಹಳೇ ವಿಮಾನ ನಿಲ್ದಾಣ ರಸ್ತೆಗೆ ಹೊಂದಿಕೊಂಡ ಚಲ್ಲಘಟ್ಟದ ಬಳಿಯ ಎಂಬೆಸಿ ಗಾಲ್ಫ್ ಲಿಂಕ್ಸ್ ಐಟಿ ಪಾರ್ಕ್ ಇದೆ.

ಇದರಲ್ಲಿ ಈಗಾಗಲೇ ಐಬಿಎಂ, ಮೈಕ್ರೋಸಾಫ್ಟ್, ಗೋಲ್ಟ್ ಮ್ಯಾನ್ ಸ್ಯಾಚ್ಸ್ ಸೇರಿದಂತೆ ಅನೇಕ ಘಟಾನುಘಟಿ ಕಂಪನಿಗಳಿವೆ. ಕಂಪನಿ ಆರಂಭವಾಗಲಿರುವ ಕಟ್ಟಡಕ್ಕೆ ವರ್ಷಕ್ಕೆ 34 ಕೋಟಿ ರೂ. ಬಾಡಿಗೆಯನ್ನು ಫೇಸ್‌ಬುಕ್ ನೀಡಲಿದೆ ಎಂದು ತಿಳಿದುಬಂದಿದೆ.

Follow Us:
Download App:
  • android
  • ios