ವರ್ಷಾಂತ್ಯಕ್ಕೆ ಸಿಹಿ ಸುದ್ದಿ: ಡಿಸೆಂಬರ್‌ನಲ್ಲಿ ಪೆಟ್ರೋಲ್ ದರ ಪಾತಾಳಕ್ಕೆ!
ವರ್ಷಾಂತ್ಯಕ್ಕೆ ನಿಮಗೆ ಇದಕ್ಕಿಂತ ಸಿಹಿ ಸುದ್ದಿ ಬೇಕೆ?! ಡಿಸೆಂಬರ್ ತಿಂಗಳಲ್ಲಿ ಭಾರೀ ಪ್ರಮಾಣದಲ್ಲಿ ಇಳಿಯುತ್ತೆ ತೈಲದರ! ಡಿಸೆಂಬರ್‌ನಲ್ಲಿ ಜನತೆಗೆ ಸಿಹಿ ಸುದ್ದಿ ನೀಡಲು ಕೇಂದ್ರ ಸರ್ಕಾರ ಸಜ್ಜು! ಪೆಟ್ರೋಲ್, ಡೀಸೆಲ್ ದರದಲ್ಲಿ ಇಳಿಕೆ ಸಂಭವ ಎಂದ ಆಟೋಮೊಬೈಲ್ ಅಸೋಸಿಯೇಷನ್! ಎನರ್ಜಿ ಫಂಡ್ ಬಿಡುಗಡೆ ಮಾಡಿದ ಮಾಸಾಂತ್ಯದ ಇಂಧನ ದರ ಪಟ್ಟಿಯಿಂದ ಅಂದಾಜು
ನವದೆಹಲಿ(ಡಿ.1): ವರ್ಷಾಂತ್ಯಕ್ಕೆ ಕೇಂದ್ರ ಸರ್ಕಾರ ವಾಹನ ಸವಾರರಿಗೆ ಭಾರೀ ಸಿಹಿ ಸುದ್ದಿ ನೀಡುವ ಸಂಭವ ಹೆಚ್ಚಿದೆ. ಕಾರಣ ಸತತವಾಗಿ ಇಳಿಕೆಯತ್ತ ಮುಖ ಮಾಡಿರುವ ಪೆಟ್ರೋಲ್, ಡೀಸೆಲ್ ಬೆಲೆ, ಡಿಸೆಂಬರ್‌ನಲ್ಲಿ ಗಮನಾರ್ಹ ಇಳಿಕೆ ಕಾಣಲಿದೆ.
ಈ ಕುರಿತು ಮಾಹಿತಿ ನೀಡಿರುವ ಆಟೋಮೊಬೈಲ್ ಅಸೋಸಿಯೇಷನ್, ಸದ್ಯ ನಿತ್ಯವೂ ಇಳಿಕೆಯಾಗುತ್ತಿರುವ ಪೆಟ್ರೋಲ್, ಡೀಸೆಲ್ ದರದತ್ತ ಗಮನಹರಿಸಿದರೆ ಡಿಸೆಂಬರ್ ತಿಂಗಳಲ್ಲಿ ದರಗಳಲ್ಲಿ ಗಮನಾರ್ಹ ಇಳಿಕೆ ಕಾಣಲಿದೆ ಎಂದು ಅಂದಾಜಿಸಲಾಗಿದೆ.
ಸೆಂಟ್ರಲ್ ಎನರ್ಜಿ ಫಂಡ್ ಬಿಡುಗಡೆ ಮಾಡಿದ ಮಾಸಾಂತ್ಯದ ಇಂಧನ ದರ ಪಟ್ಟಿಯನ್ನು ಆಧಾರವಾಗಿಟ್ಟುಕೊಂಡು ಅಟೋಮೊಬೈಲ್ ಅಸೋಸಿಯೇಷನ್ ಈ ಅಂದಾಜು ಮಾಡಿದೆ.
ಕಳೆದ ಎಂಟು ತಿಂಗಳಿಂದ ಏರಿಕೆಯಾಗುತ್ತಲೇ ಇದ್ದ ತೈಲದರ ನವೆಂಬರ್ ತಿಂಗಳಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆಯನ್ನು ಕಂಡಿತ್ತು. ಇಳಿಕೆ ಪ್ರಮಾಣ ಹೀಗೇ ಮುಂದುವರಿದಲ್ಲಿ ಪೆಟ್ರೋಲ್ ದರ 1.85 ರೂ. ಹಾಗೂ ಡೀಸೆಲ್ 1.40 ರೂ. ಗೆ ಇಳಿಕೆಯಾಗುವ ಸಂಭವ ಇದೆ ಎಂದು ಅಂದಾಜಿಸಲಾಗಿದೆ.
ಪೆಟ್ರೋಲ್ 8, ಡೀಸೆಲ್ 3 ತಿಂಗಳ ಕನಿಷ್ಟ ಮಟ್ಟಕ್ಕೆ: ಚಿಲ್ರೆ ಯಾವ ಲೆಕ್ಕಕ್ಕೆ?
ಪೆಟ್ರೋಲ್ ಬೆಲೆಯಲ್ಲಿ ಭಾರೀ ಇಳಿಕೆ: ಈ ವರ್ಷದ ಕನಿಷ್ಠ ದರ ದಾಖಲು!
ಪೆಟ್ರೋಲ್ ದರ ಮಾಡ್ಬೇಡಿ ಗೆಸ್: ಮಾಡಿ ಜಸ್ಟ್ ಒಂದು SMS!