ಕೈಗಾರಿಕಾ ಕ್ಷೇತ್ರದಲ್ಲಿ ಹೆಚ್ಚು ಹೂಡಿಕೆ ಸಾಧ್ಯವಾಗುವಂತ ಪ್ರೋತ್ಸಾಹಕ ವಾತಾವರಣ ರಾಜ್ಯದಲ್ಲಿದೆ. ನಮ್ಮ ಕೈಗಾರಿಕಾ ನೀತಿ ಹೆಚ್ಚು ಪ್ರಗತಿಪರವಾಗಿದೆ. ಅದನ್ನು ಇನ್ನಷ್ಟುಗಟ್ಟಿಗೊಳಿಸಲು ಕೈಗಾರಿಕೋದ್ಯಮಿಗಳ ಜೊತೆ ಸಮಾಲೋಚಿಸಿ ರಫ್ತು ಬೆಳವಣಿಗೆಗೆ ಪೂರಕವಾಗುವಂತ ಕೈಗಾರಿಕಾ ನೀತಿ ಜಾರಿಗೊಳಿಸಲಾಗುವುದು ಎಂದ ಮುಖ್ಯಮಂತ್ರಿ ಸಿದ್ದರಾಮಯ್ಯ 

ಬೆಂಗಳೂರು(ಜು.23): ರಾಜ್ಯದಲ್ಲಿ ರಫ್ತಿಗೆ ಪೂರಕವಾದ ಕೈಗಾರಿಕಾ ನೀತಿ ಜಾರಿಗೆ ತರÜಲಾಗುವುದು ಹಾಗೂ ಕೈಗಾರಿಕೆಗಳ ಬೆಳವಣಿಗೆಗೆ ಪೂರಕವಾದ ಕಾನೂನು ಸುವ್ಯವಸ್ಥೆ ತರಲಿದ್ದೇವೆ ಎಂದು ಉದ್ಯಮಿಗಳಿಗೆ ಅಭಯ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ರಫ್ತಿನಲ್ಲಿ ಕರ್ನಾಟಕವನ್ನು ದೇಶದಲ್ಲೇ ಮೊದಲ ಸ್ಥಾನಕ್ಕೆ ಕೊಂಡೊಯ್ಯಲು ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು. ಅವರು ಶನಿವಾರ ವಿಧಾನಸೌಧ ಬ್ಯಾಂಕ್ವೆಟ್‌ ಸಭಾಂಗಣದಲ್ಲಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಆಯೋಜಿಸಿದ್ದ ರಾಜ್ಯ ಶ್ರೇಷ್ಠ ರಫ್ತು ಪ್ರಶಸ್ತಿಗಳ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಕೈಗಾರಿಕಾ ಕ್ಷೇತ್ರದಲ್ಲಿ ಹೆಚ್ಚು ಹೂಡಿಕೆ ಸಾಧ್ಯವಾಗುವಂತ ಪ್ರೋತ್ಸಾಹಕ ವಾತಾವರಣ ರಾಜ್ಯದಲ್ಲಿದೆ. ನಮ್ಮ ಕೈಗಾರಿಕಾ ನೀತಿ ಹೆಚ್ಚು ಪ್ರಗತಿಪರವಾಗಿದೆ. ಅದನ್ನು ಇನ್ನಷ್ಟು ಗಟ್ಟಿಗೊಳಿಸಲು ಕೈಗಾರಿಕೋದ್ಯಮಿಗಳ ಜೊತೆ ಸಮಾಲೋಚಿಸಿ ರಫ್ತು ಬೆಳವಣಿಗೆಗೆ ಪೂರಕವಾಗುವಂತ ಕೈಗಾರಿಕಾ ನೀತಿ ಜಾರಿಗೊಳಿಸಲಾಗುವುದು ಎಂದರು.

ಹಾಲಿನ ದರ ಏರಿಕೆ ಬೆನ್ನಲ್ಲೇ ಹೋಟೆಲ್‌ ತಿಂಡಿ-ತಿನಿಸು ದರ ಏರಿಕೆ

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮಾತನಾಡಿ, ರಾಜ್ಯದಲ್ಲಿ ರಾಜಕೀಯ ಇಚ್ಛಾಶಕ್ತಿ ಇರುವ ಅಧಿಕಾರದಲ್ಲಿದೆ. ಬೆಂಗಳೂರಿನ ಮೇಲಿನ ಒತ್ತಡ ಕಡಿಮೆ ಮಾಡುವ ಅಗತ್ಯತೆ ನಮ್ಮೆದುರಿದೆ. ಹೀಗಾಗಿ ರಾಜ್ಯದ ಎರಡು, ಮೂರನೇ ಹಂತದ ನಗರಗಳಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಉದ್ಯಮಿಗಳು ಮುಂದಾಗಬೇಕು. ಗ್ರಾಮಾಂತರ ಪ್ರದೇಶದ ಯುವಜನತೆಗೆ ಅವರ ಸುತ್ತಮುತ್ತಲ ನಗರದಲ್ಲೇ ಉದ್ಯೋಗ ಸಿಗುವಂತಾಗಬೇಕು. ಹೀಗೆ ಎರಡು, ಮೂರನೇ ಹಂತದ ನಗರದಲ್ಲಿ ಕೈಗಾರಿಕೆ ಸ್ಥಾಪಿಸಿ ಉದ್ಯೋಗ ಸೃಷ್ಟಿಸುವ ಉದ್ಯಮಿಗಳಿಗೆ ಸರ್ಕಾರದಿಂದ ಹೆಚ್ಚಿನ ಪ್ರೋತ್ಸಾಹಧನ ನೀಲಾಗುವುದು ಎಂದರು.

ಏಕಗವಾಕ್ಷಿ ವ್ಯವಸ್ಥೆ ಜಾರಿ:

ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ… ಮಾತನಾಡಿ, ಕೈಗಾರಿಕೆ ಸ್ಥಾಪನೆ, ವಿವಿಧ ಪರವಾನಗಿ ಏಕಗವಾಕ್ಷಿ ವ್ಯವಸ್ಥೆಯಡಿ ಲಭ್ಯವಾಗುವಂತೆ ಮಾಡಲು ಬದ್ಧವಾಗಿದ್ದು, ಶೀಘ್ರವಾಗಿ ಇದರ ಜಾರಿ ಕುರಿತು ನಿರ್ಣಯ ಕೈಗೊಳ್ಳಲಾಗುವುದು. ಕೆಐಎಡಿಬಿ ನಲ್ಲಿನ ವ್ಯಾಜ್ಯ, ತೊಂದರೆ ಪರಿಹರಿಸಲು ಕ್ರಮ ವಹಿಸಲಾಗುವುದು. ಈ ಸಂಬಂಧ ಮುಖ್ಯಮಂತ್ರಿಗಳ ಜೊತೆಗೆ ಶೀಘ್ರವೇ ಉದ್ಯಮಿಗಳ ಸಭೆ ಆಯೋಜಿಸಲಾಗುವುದು ಎಂದರು.
ಶಾಸಕ ರಿಜ್ವಾನ್‌ ಅರ್ಷದ್‌ ಮಾತನಾಡಿದರು. ವಿಧಾನ ಪರಿಷತ್‌ ಗೋವಿಂದರಾಜ್‌, ಶಾಸಕ, ಉದ್ಯಮಿ ಶಾಮನೂರು ಶಿವಶಂಕರಪ್ಪ, ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್‌, ಆಯುಕ್ತೆ ಕೃಷ್ಣಾ ಗುಂಜನ್‌ ಇದ್ದರು.

68 ಕಂಪನಿಗಳಿಗೆ ಪ್ರಶಸ್ತಿ ಪ್ರದಾನ

12 ವಿಭಾಗಗಳಲ್ಲಿ ವಿವಿಧ ಜಿಲ್ಲೆಗಳ ಒಟ್ಟು 68 ಕೈಗಾರಿಕೋದ್ಯಮಿಗಳಿಗೆ 2017-18, 2018-19 ಮತ್ತು 2019-20ನೇ ಸಾಲಿನ ರಾಜ್ಯ ಶ್ರೇಷ್ಠ ರಫ್ತು ಪ್ರಶಸ್ತಿ ಪುರಸ್ಕಾರ ಪ್ರದಾನ ಮಾಡಲಾಯಿತು. ಬಿಪಿಇ ಬಯೋಟ್ರೀ ಇಂಡಿಯಾ ಪ್ರೈ. ಲಿ., ಗೋಕುಲದಾಸ್‌ ಎಕ್ಸ್‌ಪೋಟ್ಸ್‌ರ್‍ ಲಿ., ಇಂಡಿಯನ್‌ ಕೇನ್‌ ಪವರ್‌ ಲಿ., ಮೈಕ್ರೋ ಲ್ಯಾಬ್ಸ್‌ ಲಿ., ಗ್ರೀನ್‌ ಅಗ್ರೋ ಪ್ಯಾಕ್‌ ಪ್ರೈ.ಲಿ., ಸೇರಿದಂತೆ ಬಯೋಕಾನ್‌, ಟೊಯೋಟಾ ಕಿರ್ಲೋಸ್ಕರ್‌, ಎಚ್‌ಎಎಲ್‌, ಮೈಸೂರು ಪೇಂಟ್ಸ…, ವಾರ್ನಿಶ್‌, ಜಿ.ಇ.ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌, ಗೋಕಲ್‌ದಾಸ್‌ ಎಕ್ಸ್‌ಪೋಟ್ಸ್‌ರ್‍ ಮತ್ತಿತರ ಕಂಪನಿಗಳ ಪ್ರತಿನಿಧಿಗಳು ಪುರಸ್ಕಾರಗಳನ್ನು ಸ್ವೀಕರಿಸಿದರು.