Asianet Suvarna News Asianet Suvarna News

ಅಂಬಾನಿ ಮನೆ ​‘ಬಾಂಬ್‌ ಕಾರು’ ಕೇಸ್‌ ತನಿಖೆ ಎನ್‌​ಐಎಗೆ!

ದೇಶದ ಶ್ರೀಮಂತ ಉದ್ಯಮಿ ಮುಕೇಶ್‌ ಅಂಬಾನಿ ನಿವಾ​ಸದ ಮುಂದೆ ಸ್ಫೋಟ​ಕ| ಅಂಬಾನಿ ಮನೆ ​‘ಬಾಂಬ್‌ ಕಾರು’ ಕೇಸ್‌ ತನಿಖೆ ಎನ್‌​ಐಎಗೆ

Explosives outside Mukesh Ambani house NIA to probe death of vehicle owner pod
Author
Bangalore, First Published Mar 9, 2021, 9:27 AM IST

ನವ​ದೆ​ಹ​ಲಿ(ಮಾ.09): ದೇಶದ ಶ್ರೀಮಂತ ಉದ್ಯಮಿ ಮುಕೇಶ್‌ ಅಂಬಾನಿ ನಿವಾ​ಸದ ಮುಂದೆ ಸ್ಫೋಟ​ಕದ ಜಿಲೆಟಿನ್‌ ಕಡ್ಡಿ​ಗ​ಳನ್ನು ಒಳ​ಗೊಂಡ ಸ್ಕಾರ್ಪಿಯೋ ಕಾರಿನ ಪ್ರಕ​ರ​ಣದ ತನಿ​ಖೆ​ಯನ್ನು ರಾಷ್ಟ್ರೀಯ ತನಿಖಾ ದಳ(ಎನ್‌​ಐ​ಎ) ವಹಿ​ಸಿ​ಕೊಂಡಿದೆ.

ಕೇಂದ್ರ ಗೃಹ ಇಲಾ​ಖೆ ಆದೇ​ಶ​ಗಳ ಹಿನ್ನೆ​ಲೆ​ಯಲ್ಲಿ ಈ ಪ್ರಕ​ರ​ಣದ ತನಿ​ಖೆ​ಯನ್ನು ವಹಿ​ಸಿ​ಕೊ​ಳ್ಳ​ಲಾ​ಗಿದೆ ಎಂದು ಎನ್‌​ಐಎ ವಕ್ತಾ​ರರು ತಿಳಿ​ಸಿ​ದ್ದಾರೆ.

20 ಜಿಲೆ​ಟಿನ್‌ ಕಡ್ಡಿ​ಗ​ಳನ್ನು ಒಳ​ಗೊಂಡಿದ್ದ ಸ್ಕಾರ್ಪಿಯೋ ಕಾರು ಫೆ.25ರಂದು ದಕ್ಷಿಣ ಮುಂಬೈ​ನ​ಲ್ಲಿ​ರುವ ಅಂಬಾನಿ ನಿವಾ​ಸದ ಮುಂದೆ ತಂದು ನಿಲ್ಲಿ​ಸ​ಲಾ​ಗಿತ್ತು. ಈ ಘಟನೆ ನಡೆ​ಯುವ ವಾರದ ಮುಂಚೆಯೇ ತಮ್ಮ ಕಾರು ಕಳ್ಳ​ತ​ನ​ವಾ​ಗಿದೆ ಎಂದು ಆ ಸ್ಕಾರ್ಪಿಯೋ ಮಾಲಿಕ ಹಿರೇನ್‌ ಮನ್‌​ಸುಖ್‌ ದೂರು ನೀಡಿ​ದ್ದರು.

ಶುಕ್ರ​ವಾ​ರ​ವಷ್ಟೇ ಹಿರೇನ್‌ ಅವರು ನಿಗೂ​ಢ​ವಾಗಿ ಸಾವಿ​ಗೀ​ಡಾ​ಗಿದ್ದು, ಈ ಪ್ರಕ​ರ​ಣ​ವನ್ನು ಮುಚ್ಚಿ​ಹಾ​ಕಲು ಯತ್ನಿ​ಸಿದ ಶಕ್ತಿ​ಗಳು ಈ ಸಾವಿನ ಹಿಂದೆ ಇರ​ಬ​ಹುದು ಎಂಬ ಶಂಕೆ ವ್ಯಕ್ತ​ವಾ​ಗಿದೆ.

Follow Us:
Download App:
  • android
  • ios