ರಾಜ್ಯದಲ್ಲಿ 25 ಮಿನಿ ಜವಳಿ ಪಾರ್ಕ್ ಸ್ಥಾಪನೆ, ಬಾಂಗ್ಲಾ ಅರಾಜಕತೆ ಲಾಭ ಪಡೆಯವುದು ನಮ್ಮ ಗುರಿ: ಸಚಿವ ಪಾಟೀಲ್

ಬಾಂಗ್ಲಾದೇಶದಲ್ಲಿ ಶೇ.30ರಷ್ಟು ಜವಳಿ ಉತ್ಪಾದನೆ ಆಗುತ್ತಿತ್ತು. ಈಗ ಅಲ್ಲಿ ಅರಾಜಕತೆ ಸೃಷ್ಟಿಯಾಗಿರುವುದರಿಂದ ಜವಳಿ ಉತ್ಪಾದನೆ ಕುಸಿಯಲಿದ್ದು, ಭಾರತದ ಜವಳಿಗೆ ಬೇಡಿಕೆ ಹೆಚ್ಚಾಗಲಿದೆ. ಇದರ ಲಾಭ ನಾವು ಪಡೆಯಬೇಕು' ಎಂದು ಕರೆ ನೀಡಿದ ಜವಳಿ, ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ 

Establishment of 25 Mini Textile Parks in Karnataka says minister shivanand patil grg

ಬೆಂಗಳೂರು(ಆ.08): ರಾಜ್ಯದಲ್ಲಿ 25 ಮಿನಿ ಜವಳಿ ಪಾರ್ಕ್ ಸ್ಥಾಪನೆ ಮಾಡುವ ಯೋಜನೆ ಹಾಕಿ ಕೊಂಡಿದ್ದೇವೆ ಎಂದು ಜವಳಿ, ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ ಹೇಳಿದ್ದಾರೆ. 

ಇದೇ ವೇಳೆ, 'ಬಾಂಗ್ಲಾದೇಶದಲ್ಲಿ ಶೇ.30ರಷ್ಟು ಜವಳಿ ಉತ್ಪಾದನೆ ಆಗುತ್ತಿತ್ತು. ಈಗ ಅಲ್ಲಿ ಅರಾಜಕತೆ ಸೃಷ್ಟಿಯಾಗಿರುವುದರಿಂದ ಜವಳಿ ಉತ್ಪಾದನೆ ಕುಸಿಯಲಿದ್ದು, ಭಾರತದ ಜವಳಿಗೆ ಬೇಡಿಕೆ ಹೆಚ್ಚಾಗಲಿದೆ. ಇದರ ಲಾಭ ನಾವು ಪಡೆಯಬೇಕು' ಎಂದು ಕರೆ ನೀಡಿದರು. 

ಕರ್ನಾಟಕ ಸೇರಿದಂತೆ 7 ರಾಜ್ಯದಲ್ಲಿ ಪಿಎಂ ಮಿತ್ರ ಮೆಗಾ ಟೆಕ್ಸ್‌ಟೈಲ್‌ ಪಾರ್ಕ್‌, ಏನಿದು ಯೋಜನೆ?

ಕೈ ಮಗ್ಗ ಮತ್ತು ಜವಳಿ ಇಲಾಖೆ, ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಸಹಯೋಗದಲ್ಲಿ ವಿಧಾನಸೌಧದಲ್ಲಿ ಹಮ್ಮಿ ಕೊಂಡಿದ್ದ 10ನೇ ರಾಷ್ಟ್ರೀಯ ಕೈ ಮಗ್ಗ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವ ಹಿಸಿ ಅವರು ಮಾತನಾಡಿ ದರು. ಜವಳಿ ಕ್ಷೇತ್ರದಲ್ಲಿ ಉದ್ಯೋಗ ಸೃಷ್ಟಿ ಮಾಡುತ್ತಿದ್ದೇವೆ. ಗ್ರಾಮೀಣ ಭಾಗದ ಲಕ್ಷಾಂತರ ಮಂದಿಗೆ ಜವಳಿ ಕ್ಷೇತ್ರದಿಂದ ಉದ್ಯೋಗ ಲಭಿಸುತ್ತಿದೆ. ಹೀಗಾಗಿ ಜವಳಿ ಘಟಕ ಸ್ಥಾಪಿಸಲು ಅನುದಾನ ನೀಡುತ್ತಿದೆ ಎಂದರು.

Latest Videos
Follow Us:
Download App:
  • android
  • ios