Asianet Suvarna News Asianet Suvarna News

ESIC social security scheme: ಇಎಸ್ಐಸಿ ಯೋಜನೆಗೆ ಅಕ್ಟೋಬರ್ ನಲ್ಲಿ 12.19ಲಕ್ಷ ಹೊಸ ಸದಸ್ಯರ ಸೇರ್ಪಡೆ

*ಕೊರೋನಾ ಎರಡನೇ ಅಲೆ ಬಳಿಕ  ESIC ಸಾಮಾಜಿಕ ಭದ್ರತಾ ಯೋಜನೆಗೆ ದಾಖಲೆ ಪ್ರಮಾಣದಲ್ಲಿ ಸದಸ್ಯರ ಸೇರ್ಪಡೆ
*ಜೂನ್, ಜುಲೈ ಹಾಗೂ ಆಗಸ್ಟ್ ನಲ್ಲಿ ಇಎಸ್ಐ ಯೋಜನೆಗೆ ಸೇರ್ಪಡೆಗೊಂಡವರ ಪ್ರಮಾಣ ಹೆಚ್ಚಿದೆ
*2020-21ನೇ ಸಾಲಿನಲ್ಲಿ 1.15 ಕೋಟಿ ಹೊಸ ಚಂದಾದಾರರು ನೋಂದಣಿ

ESIC social security scheme adds 12.19 lakh new members in October 2021 anu
Author
Bangalore, First Published Dec 25, 2021, 6:05 PM IST

ನವದೆಹಲಿ (ಡಿ.25): ಇಎಸ್ಐಸಿ (Employees State Insurance Corporation) ಸಾಮಾಜಿಕ ಭದ್ರತಾ ಯೋಜನೆಗೆ ( social security scheme) ಈ ಸಾಲಿನ ಅಕ್ಟೋಬರ್ ನಲ್ಲಿ ಸುಮಾರು 12.19 ಲಕ್ಷ ಹೊಸ ಸದಸ್ಯರು ಸೇರ್ಪಡೆಗೊಂಡಿದ್ದಾರೆ. ಇದೇ ವರ್ಷ ಸೆಪ್ಟೆಂಬರ್ ನಲ್ಲಿ 13.57 ಲಕ್ಷ ಹೊಸ ಸದಸ್ಯರು ಈ ಯೋಜನೆಗೆ ಸೇರ್ಪಡೆಗೊಂಡಿದ್ದಾರೆ ಎಂಬ ಅಧಿಕೃತ ಮಾಹಿತಿ ಸಿಕ್ಕಿದೆ. ಈ ಹೊಸ ಮಾಹಿತಿಯು ರಾಷ್ಟ್ರೀಯ ಸಾಂಖ್ಯಿಕ ಕಚೇರಿ  (NSO) ಪ್ರಕಟಿಸಿದ ವರದಿಯಿಂದ ಲಭಿಸಿದೆ. 

ಎನ್ ಎಸ್ ಒ ವರದಿ ನೀಡಿರೋ ಮಾಹಿತಿ ಪ್ರಕಾರ ಇಎಸ್ಐಯಲ್ಲಿ ಹೊಸದಾಗಿ ಸೇರ್ಪಡೆಯಾದ ಸದಸ್ಯರ ಸಂಖ್ಯೆ ಏಪ್ರಿಲ್ ನಲ್ಲಿ10.78ಲಕ್ಷ, ಮೇನಲ್ಲಿ 8.91ಲಕ್ಷ, ಜೂನ್ ನಲ್ಲಿ  10.68ಲಕ್ಷ, ಜುಲೈನಲ್ಲಿ 13.40ಲಕ್ಷ ಹಾಗೂ ಆಗಸ್ಟ್ ನಲ್ಲಿ 13.47ಲಕ್ಷ ಆಗಿದೆ. ಈ ಅಂಕಿಅಂಶಗಳನ್ನು ಗಮನಿಸಿದ್ರೆ ಜೂನ್, ಜುಲೈ ಹಾಗೂ ಆಗಸ್ಟ್ ನಲ್ಲಿ ಇಎಸ್ಐ ಯೋಜನೆಗೆ ಸೇರ್ಪಡೆಗೊಂಡವರ ಪ್ರಮಾಣ ಹೆಚ್ಚಿರೋದು ಕಂಡುಬರುತ್ತದೆ. ಈ ಸಮಯದಲ್ಲಿ ಸರ್ಕಾರ  ಕೋವಿಡ್ ಎರಡನೇ ಅಲೆ ನಿಯಂತ್ರಣಕ್ಕೆ ವಿಧಿಸಿದ್ದ ನಿಯಮಗಳನ್ನು ಸಡಿಲಗೊಳಿಸಿದ ಹಿನ್ನೆಲೆಯಲ್ಲಿ ನೋಂದಣಿ ಪ್ರಮಾಣದಲ್ಲಿ ಹೆಚ್ಚಳವಾಗಿರೋದು ಕಂಡುಬಂದಿದೆ. ಈ ವರ್ಷದ ಏಪ್ರಿಲ್ ಮಧ್ಯಭಾಗದಲ್ಲಿ ಕೊರೋನಾ ಎರಡನೇ ಅಲೆ ದೇಶಕ್ಕೆ ಅಪ್ಪಳಿಸಿತ್ತು. 
ಎನ್ ಎಸ್ಒ ವರದಿ ಪ್ರಕಾರ ಇಎಸ್ಐಸಿಗೆ  2020-21ನೇ ಸಾಲಿನಲ್ಲಿ  1.15 ಕೋಟಿ ಹೊಸ ಚಂದಾದಾರರು ನೋಂದಣಿಯಾಗಿದ್ದಾರೆ. ಇದು  2018-19ನೇ ಸಾಲಿಗೆ ಹೋಲಿಸಿದ್ರೆ ಹೆಚ್ಚಿನ ಪ್ರಮಾಣದಲ್ಲಿದೆ.  2018-19ನೇ ಸಾಲಿನಲ್ಲಿ 1.49 ಕೋಟಿ ಚಂದಾದಾರರು ನೋಂದಣಿ ಮಾಡಿಸಿದ್ದಾರೆ. 

EPFO Rules: ಎಚ್ಚರ! ಈ ತಪ್ಪಿನಿಂದಾಗಿ ಕಷ್ಟಪಟ್ಟು ಕೂಡಿಟ್ಟ ಹಣ ಕೈತಪ್ಪಿ ಹೋಗ್ಬಹುದು!

2017ರ ಸೆಪ್ಟೆಂಬರ್ ನಿಂದ 2018ರ ಮಾರ್ಚ್ ತನಕ ಸುಮಾರು 83.35 ಲಕ್ಷ ಹೊಸ ಚಂದಾದಾರರು ESIC ಯೋಜನೆಗೆ ಸೇರ್ಪಡೆಗೊಂಡಿದ್ದಾರೆ. ವರದಿ ಪ್ರಕಾರ  2017ರ ಸೆಪ್ಟೆಂಬರ್ ನಿಂದ 2021ರ ಅಕ್ಟೋಬರ್ ತನಕ  5.82 ಕೋಟಿ ಮಂದಿ ಇಎಸ್ಐಸಿಗೆ  ಹೊಸದಾಗಿ ಸೇರ್ಪಡೆಗೊಂಡಿದ್ದಾರೆ. 

ಇಎಸ್ಐಸಿ ನಡೆಸೋ ಸಾಮಾಜಿಕ ಭದ್ರತಾ ಯೋಜನೆಗಳಾದ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ  (EPFO) ಹಾಗೂ ಪಿಂಚಣಿ ನಿಧಿ ನಿಯಂತ್ರಣ ಹಾಗೂ ಅಭಿವೃದ್ಧಿ ಪ್ರಾಧಿಕಾರಕ್ಕೆ (PFRDA) ಹೊಸದಾಗಿ ಸೇರ್ಪಡೆಗೊಂಡ ಕಾರ್ಮಿಕರ ವೇತನ ಪಟ್ಟಿ ಅಂಕಿಅಂಶಗಳನ್ನು ಆಧರಿಸಿ ಎನ್ಎಸ್ಒ ವರದಿ ತಯಾರಿಸಿದೆ.  2018ರ ಏಪ್ರಿಲ್ ನಿಂದ ಎನ್ಎಸ್ಒ ಈ ಎರಡೂ ಸಂಸ್ಥೆಗಳಿಗೆ ಸಂಬಂಧಿಸಿ ಈ ವರದಿಯನ್ನು ಪ್ರಕಟಿಸುತ್ತ ಬಂದಿದೆ. ಈ ವರದಿ ಪ್ರಕಾರ ನಿವೃತ್ತ ನಿಧಿ ಸಂಸ್ಥೆ EPFOಗೆ ಒಟ್ಟು ಹೊಸ ನೋಂದಣಿ ಅಕ್ಟೋಬರ್ ನಲ್ಲಿ 12.73ಲಕ್ಷ . ಈ ಪ್ರಮಾಣ 2021ರ ಸೆಪ್ಟೆಂಬರ್ ಗಿಂತ ಕಡಿಮೆ. ಸೆಪ್ಟೆಂಬರ್ ನಲ್ಲಿ 13.97 ಲಕ್ಷ ಮಂದಿ ಹೊಸದಾಗಿ EPFOಗೆ ಸೇರ್ಪಡೆಗೊಂಡಿದ್ದರು. 2017 ಸಪ್ಟೆಂಬರ್ ನಿಂದ 2021ರ ಅಕ್ಟೋಬರ್ ತನಕ ಸುಮಾರು 4.79 ಕೋಟಿ ಹೊಸ ಚಂದಾದಾರರು ಇಪಿಎಫ್ ಗೆ ಸೇರ್ಪಡೆಗೊಂಡಿದ್ದರು. 

How To Find UAN: ನಿಮ್ಮ PF ಖಾತೆ UAN ಮರೆತು ಹೋಯ್ತಾ? ಮುಂದೇನು ಮಾಡ್ಬೇಕು? ಇಲ್ಲಿದೆ ಮಾಹಿತಿ

ಪಿಎಫ್ (PF)ಖಾತೆಗೆ ನಾಮಿನಿ(( nominee)) ಸೇರ್ಪಡೆ 
ಒಂದು ವೇಳೆ ನೀವು ನೌಕರರ ಭವಿಷ್ಯ ನಿಧಿ (EPF )ಖಾತೆ ಹೊಂದಿದ್ರೆ ಅದಕ್ಕೆ ನಾಮಿನಿ(( nominee)) ಸೇರ್ಪಡೆ ಮಾಡಲು ಡಿ.31 ಕೊನೆಯ ದಿನಾಂಕವಾಗಿದೆ.  ನೌಕರರ ಭವಿಷ್ಯ ನಿಧಿ ಸಂಸ್ಥೆ( EPFO) ಎಲ್ಲ ಪಿಎಫ್ ಖಾತೆದಾರರು ಈ ದಿನಾಂಕದೊಳಗೆ ನಾಮಿನಿ ಸೇರ್ಪಡೆ ಮಾಡುವಂತೆ ತಿಳಿಸಿದೆ. ಒಂದು ವೇಳೆ ನೀವು ಈ ದಿನಾಂಕದೊಳಗೆ ನಾಮಿನಿ ಸೇರ್ಪಡೆ ಮಾಡಲು ವಿಫಲರಾದ್ರೆ ಇಪಿಎಫ್ ನಿಂದ  (EPF)ಸಿಗೋ ಕೆಲವು ಪ್ರಯೋಜನಗಳಿಂದ ವಂಚಿತರಾಗುತ್ತೀರಿ. 'ಪಿಎಫ್ ಚಂದಾದಾರರು ಆನ್ಲೈನ್ ಪಿಎಫ್, ಪಿಂಚಣಿ (pension)ಹಾಗೂ ಇನ್ಯುರೆನ್ಸ್(insurance)ಸೇವೆಗಳ ಮೂಲಕ ತಮ್ಮ ಸಂಗಾತಿ, ಮಕ್ಕಳು ಹಾಗೂ ಪೋಷಕರನ್ನು ಸಂರಕ್ಷಿಸಲು ನಾಮಿನೇಷನ್ ನೋಂದಣಿ ಮಾಡೋದು ಅತೀಮುಖ್ಯ' ಎಂದು ಇಪಿಎಫ್ಒ ಪ್ರಕಟಣೆಯಲ್ಲಿ ತಿಳಿಸಿದೆ. ಒಂದು ವೇಳೆ ನೀವು ಇನ್ನೂ ಪಿಎಫ್ ಖಾತೆಗೆ ನಾಮಿನಿ ಸೇರ್ಪಡೆ ಮಾಡದಿದ್ರೆ EPFO ಅಧಿಕೃತ ವೆಬ್ ಸೈಟ್ epfindia.gov.in ಮೂಲಕ ಇ-ನಾಮಿನಿ ಅರ್ಜಿ(e-nominee form) ಭರ್ತಿ ಮಾಡಿ.
 

Follow Us:
Download App:
  • android
  • ios