*2014ರಲ್ಲಿ ಸರ್ಕಾರ ಪಿಎಫ್ ವೇತನ ಮಿತಿಯನ್ನು ಕೊನೆಯದಾಗಿ ಹೆಚ್ಚಿಸಿತ್ತು *ವೇತನ ಮಿತಿ ಹೆಚ್ಚಳದಿಂದ 75 ಲಕ್ಷ ಉದ್ಯೋಗಿಗಳಿಗೆ ಪ್ರಯೋಜನ*ಇಪಿಎಫ್ಒ ವೇತನ ಮಿತಿ ಹೆಚ್ಚಳ ಪ್ರಸ್ತಾವಕ್ಕೆ ಇನ್ನೂ ಹಸಿರು ನಿಶಾನೆ ತೋರದ ಸರ್ಕಾರ

ನವದೆಹಲಿ (ಏ.19): ಸಂಘಟಿತ ವಲಯದ ಉದ್ಯೋಗಿಗಳಿಗೆ ಸಿಹಿ ಸುದ್ದಿ. ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ಉದ್ಯೋಗಿಗಳಿಗೆ (Employees) ಪಿಂಚಣಿ (Pension) ಪಡೆಯಲು ಇರುವ ವೇತನ ಮಿತಿಯನ್ನು (Salary limit) 15000 ರೂ.ನಿಂದ 21,000 ರೂ.ಗೆ ಹೆಚ್ಚಿಸಲು ಚಿಂತನೆ ನಡೆಸಿದೆ. 

ಇಪಿಎಫ್ಒ (EPFO) ಪಿಂಚಣಿ ಪಡೆಯಲು ಉದ್ಯೋಗಿಗಳ (Employees) ವೇತನ ಮಿತಿಯನ್ನು ಹೆಚ್ಚಿಸುವ ಕುರಿತು ಚರ್ಚೆಗಳು ನಡೆಯುತ್ತಿದ್ದು, ಇಪಿಎಫ್ಒ (EPFO) ಸದಸ್ಯರು ಈ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂಬುದನ್ನು ವರದಿಗಳು ದೃಢಪಡಿಸಿವೆ. ಸರ್ಕಾರ ಪಿಎಫ್ ವೇತನ ಮಿತಿಯನ್ನು ಕೊನೆಯದಾಗಿ 2014ರಲ್ಲಿ ಹೆಚ್ಚಳ ಮಾಡಿದ್ದು, 6,500 ರೂ.ನಿಂದ 15,000ರೂ.ಗೆ ಏರಿಕೆ ಮಾಡಿತ್ತು. ಇಪಿಎಫ್ ಪಿಂಚಣಿ (Pension) ವೇತನ ಮಿತಿ ಹೆಚ್ಚಳದಿಂದ 75 ಲಕ್ಷ ಉದ್ಯೋಗಿಗಳಿಗೆ (Employees) ಪ್ರಯೋಜನವಾಗಲಿದೆ ಎಂದು ಹೇಳಲಾಗಿದೆ. 

ಇಪಿಎಫ್ ನಾಮಿನಿ ಬದಲಾಯಿಸ್ಬೇಕಾ? ಈಗ ಈ ಪ್ರಕ್ರಿಯೆ ಬಹಳ ಸುಲಭ

ಇಪಿಎಫ್ಒ ಪಿಂಚಣಿ ಹೊಸ ವೇತನ (Salary) ಮಿತಿಯಿಂದ ಸರ್ಕಾರದ ಬೊಕ್ಕಸಕ್ಕೆ ಹೆಚ್ಚಿನ ಹೊರೆ ಬೀಳಲಿದೆ. ಈ ನಿರ್ಧಾರದಿಂದ ಸರ್ಕಾರ 6,750 ಕೋಟಿ ರೂ.ವೆಚ್ಚ ಭರಿಸಲು ವ್ಯವಸ್ಥೆ ಮಾಡಿಕೊಳ್ಳಬೇಕಾದ ಅಗತ್ಯವಿದೆ. ಹೀಗಾಗಿ ಈ ಪ್ರಸ್ತಾವನೆಗೆ ಸರ್ಕಾರ ಇನ್ನೂ ಹಸಿರು ನಿಶಾನೆ ನೀಡಿಲ್ಲ. ಉನ್ನತ ಮಟ್ಟದ ಸಮಿತಿ ಇಪಿಎಫ್ಒ ಪಿಂಚಣಿ ವೇತನ ಮಿತಿ ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರೂ ಅದರ ಅನುಷ್ಠಾನಕ್ಕೆ ಸರ್ಕಾರದ ಅನುಮತಿ ಅಗತ್ಯ. ಪ್ರಸ್ತುತ ಇಪಿಎಫ್ಒ ಚಂದಾದರರ ಮೂಲ ವೇತನದ (Basic Salary) ಶೇ. 1.16ರಷ್ಟನ್ನು ಸರ್ಕಾರ ಇಪಿಎಫ್ ಗೆ (EPF) ಕೊಡುಗೆಯಾಗಿ ನೀಡುತ್ತಿದೆ. ಪ್ರಸ್ತುತ ತಿಂಗಳಿಗೆ 15,000ರೂ. ವೇತನ ಪಡೆಯುತ್ತಿರೋರು ಮಾತ್ರ ಇಪಿಎಫ್ಒ ಯೋಜನೆ ಪ್ರಯೋಜನ ಪಡೆಯಬಹುದಾಗಿದೆ.

15 ಸಾವಿರಕ್ಕಿಂತ ಹೆಚ್ಚು ವೇತನ ಪಡೆಯೋರಿಗೆ ಹೊಸ ಯೋಜನೆ?
ರೂ.15,000 ಕ್ಕಿಂತ ಹೆಚ್ಚು ಮೂಲ ವೇತನವನ್ನು ಪಡೆಯುತ್ತಿರುವವರಿಗೆ ಮತ್ತು ನೌಕರರ ಪಿಂಚಣಿ ಯೋಜನೆ-1995 (ಇಪಿಎಸ್-95) ಅಡಿಯಲ್ಲಿ ಕಡ್ಡಾಯವಾಗಿ ಒಳಪಡದವರಿಗೆ ಹೊಸ ಪಿಂಚಣಿ ತರಲು ಇಪಿಎಫ್‌ಒ ಯೋಚಿಸುತ್ತಿದೆ. ಹೆಚ್ಚಿನ ಕೊಡುಗೆಯ ಮೇಲೆ ಹೆಚ್ಚಿನ ಪಿಂಚಣಿಗಾಗಿ ನೌಕರರು ಬೇಡಿಕೆಯಿಟ್ಟಿರುವ ಕಾರಣ ಮಾಸಿಕ ಮೂಲ ವೇತನ 15,000 ರೂ.ಗಿಂತ ಹೆಚ್ಚು ಇರುವವರಿಗೆ ಹೊಸ ಪಿಂಚಣಿ ಉತ್ಪನ್ನ ಅಥವಾ ಯೋಜನೆಯನ್ನು ತರಲು ಇಪಿಎಫ್ಒ (EPFO) ಸಕ್ರಿಯವಾಗಿ ಚಿಂತನೆ ನಡೆಸುತ್ತಿದೆ ಎಂದು ಫೆಬ್ರವರಿಯಲ್ಲಿ ವರದಿಯಾಗಿತ್ತು.

EPF Scheme: ಇಪಿಎಫ್ ಖಾತೆದಾರರಿಗೆ ಪ್ರೀಮಿಯಂ ಪಾವತಿಸದೆ 7ಲಕ್ಷ ರೂ. ಜೀವ ವಿಮಾ ಸೌಲಭ್ಯ; ಪಡೆಯೋದು ಹೇಗೆ? ಇಲ್ಲಿದೆ ಮಾಹಿತಿ

ಇಪಿಎಫ್ ನಿಯಮಗಳೇನು?
ಪ್ರತಿ ತಿಂಗಳು ನೌಕರರ ಮೂಲ ವೇತನದಿಂದ (Basic Salary) ಶೇ. 12ರಷ್ಟು ಮೊತ್ತವನ್ನು ಪಿಎಫ್ ಖಾತೆಗೆ ಜಮಾ ಮಾಡಲಾಗುತ್ತದೆ.ಹಾಗೆಯೇ ಕಂಪನಿ (Company) ಕೂಡ ಶೇ.12 ರಷ್ಟು ಪಾಲನ್ನು ತನ್ನ ನೌಕರನ ಪಿಎಫ್ ಖಾತೆಗೆ ಜಮೆ ಮಾಡುತ್ತದೆ. ಕಂಪನಿಯ ಶೇ. 12%ರಷ್ಟು ಕೊಡುಗೆಯಲ್ಲಿ 3.67% EPF ಮತ್ತು 8.33% EPS ಅನ್ನು ಒಳಗೊಂಡಿದೆ. ಕಂಪನಿಯು ನೀಡಿದ ಒಟ್ಟು ಕೊಡುಗೆಯನ್ನು ನೌಕರರ ಪಿಂಚಣಿ ಯೋಜನೆಗೆ 8.33% ಮತ್ತು ನೌಕರರ ಭವಿಷ್ಯ ನಿಧಿಗೆ 3.67% ರಂತೆ ವಿತರಿಸಲಾಗಿದೆ. ಉದ್ಯೋಗಿ ನೀಡಿದ ಕೊಡುಗೆ ಸಂಪೂರ್ಣವಾಗಿ ಕಾರ್ಮಿಕರ ಭವಿಷ್ಯ ನಿಧಿಗೆ ಹೋಗುತ್ತದೆ. ಈ ಕೊಡುಗೆಯ ಜೊತೆಗೆ, EDLI ಗಾಗಿ ಹೆಚ್ಚುವರಿ 0.5% ಅನ್ನು ಕಂಪನಿಯು ಪಾವತಿಸಬೇಕು. EDLI ಮತ್ತು EPF ನ ಕೆಲವು ಆಡಳಿತಾತ್ಮಕ ವೆಚ್ಚಗಳನ್ನು ಕಂಪನಿಯು ಕ್ರಮವಾಗಿ 1.1% ಮತ್ತು 0.01% ದರದಲ್ಲಿ ಭರಿಸುತ್ತದೆ. ಇದರರ್ಥ ಕಂಪನಿಯು ಈ ಯೋಜನೆಗೆ ಒಟ್ಟು 13.61% ಸಂಬಳವನ್ನು ನೀಡಬೇಕಾಗುತ್ತದೆ. ಉದ್ಯೋಗಿಗೆ ಕೊಡುಗೆ ದರವನ್ನು ಸಾಮಾನ್ಯವಾಗಿ 12%ಕ್ಕೆ ನಿಗದಿಪಡಿಸಲಾಗುತ್ತದೆ.