ನೌಕರರ ಭವಿಷ್ಯನಿಧಿ ಮಂಡಳಿ (ಇಪಿಎಫ್‌ಒ), 2019-20ನೇ ಸಾಲಿನ ಶೇ.8.5 ಬಡ್ಡಿದರ| ಶೇ.8.5 ಬಡ್ಡಿದರವನ್ನು ಒಂದೇ ಹಂತದಲ್ಲಿ ಈ ಮಾಸಾಂತ್ಯಕ್ಕೆ ತನ್ನ 6 ಕೋಟಿ ಚಂದಾದಾರರಿಗೆ ನೀಡುವ ಸಾಧ್ಯತೆ
ನವದೆಹಲಿ(ಡಿ.15): ನೌಕರರ ಭವಿಷ್ಯನಿಧಿ ಮಂಡಳಿ (ಇಪಿಎಫ್‌ಒ), 2019-20ನೇ ಸಾಲಿ® ಶೇ.8.5 ಬಡ್ಡಿದರವನ್ನು ಒಂದೇ ಹಂತದಲ್ಲಿ ಈ ಮಾಸಾಂತ್ಯಕ್ಕೆ ತನ್ನ 6 ಕೋಟಿ ಚಂದಾದಾರರಿಗೆ ನೀಡುವ ಸಾಧ್ಯತೆ ಇದೆ.
ಈ ಮುನ್ನ ಶೇ.8.5ರ ಬಡ್ಡಿದರವನ್ನು 2 ಹಂತಗಳಲ್ಲಿ ವಿಭಜಿಸಿ (ಶೇ.8.15 ಹಾಗೂ ಶೇ.0.35) ನೀಡಲು ಇಪಿಎಫ್‌ಒ ನಿರ್ಧರಿಸಿತ್ತು. ಆದರೆ ಇದೀಗ ಒಂದೇ ಹಂತಕ್ಕೆ ಶೇ.8.5ರ ಬಡ್ಡಿ ದರವನ್ನು ಸಂದಾಯ ಮಾಡುವ ಪ್ರಸ್ತಾಪವನ್ನು ಕೇಂದ್ರ ಕಾರ್ಮಿಕ ಇಲಾಖೆಯು ಹಣಕಾಸು ಸಚಿವಾಲಯಕ್ಕೆ ಕಳಿಸಿದೆ ಎಂದು ಮೂಲಗಳು ಹೇಳಿವೆ.
ಇದಕ್ಕೆ ಹಣಕಾಸು ಸಚಿವಾಲಯ ಶೀಘ್ರ ಒಪ್ಪಿಗೆ ನೀಡುವ ನಿರೀಕ್ಷೆಯಿದ್ದು, ಮಾಸಾಂತ್ಯಕ್ಕೆ ಸಂದಾಯವಾಗಲಿದೆ ಎಂದು ಅವು ಹೇಳಿವೆ.
ಹೊಸದಾಗಿ ಕೆಲಸಕ್ಕೆ ಸೇರುವವರ ಪಿಎಫ್ ಭರಿಸುವ ಸ್ಕೀಂಗೆ ಒಪ್ಪಿಗೆ
ಕೊರೋನಾ ಲಾಕ್‌ಡೌನ್ ವೇಳೆ ಉದ್ಯೋಗ ಕಳೆದುಕೊಂಡವರು ಹಾಗೂ ಹೊಸದಾಗಿ ಕೆಲಸ ಗಿಟ್ಟಿಸಲು ಪರದಾಡುತ್ತಿರುವವರ ನೆರವಿಗೆ ನಿಲ್ಲಲು ಮುಂದಾಗಿರುವ ಕೇಂದ್ರ ಸರ್ಕಾರ ಬರೋಬ್ಬರಿ 22,810 ಕೋಟಿ ರು. ವೆಚ್ಚದ ಆತ್ಮನಿರ್ಭರ ಭಾರತ ರೋಜಗಾರ್ ಯೋಜನೆ (ಸ್ವಾವಲಂಬಿ ಭಾರತ ಉದ್ಯೋಗ ಯೋಜನೆ)ಗೆ ಅನುಮತಿ ನೀಡಿದೆ. ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ಉದ್ದಿಮೆಗಳು ಹೊಸದಾಗಿ ಜನರನ್ನು ಕೆಲಸಕ್ಕೆ ಸೇರಿಸಿಕೊಳ್ಳಲು ಪ್ರೋತ್ಸಾಹಿಸುವ ಈ ಯೋಜನೆಗೆ ಕೇಂದ್ರ ಸಚಿವ ಸಂಪುಟ ಸಭೆ ಬುಧವಾರ ಅಂಗೀಕಾರದ ಮುದ್ರೆಯೊತ್ತಿದೆ.
ಯೋಜನೆಗೆ ಪ್ರಸಕ್ತ ಹಣಕಾಸು ವರ್ಷದಲ್ಲಿ 1584 ಕೋಟಿ ಹಾಗೂ ಒಟ್ಟಾರೆ 2020-2023ರ ಅವಧಿಯಲ್ಲಿ 22810 ಕೋಟಿ ರು.ಗಳನ್ನು ವೆಚ್ಚ ಮಾಡಲಾಗುತ್ತದೆ. ಈ ಯೋಜನೆಯಿಂದ ಸಾಂಪ್ರದಾಯಿಕ ವಲಯದಲ್ಲಿ ಉದ್ಯೋಗ ಸೃಷ್ಟಿಗೆ ಉತ್ತೇಜನ ಸಿಗಲಿದೆ ಎಂದು ಸರ್ಕಾರದ ಪ್ರಕಟಣೆ ತಿಳಿಸಿದೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Dec 15, 2020, 8:32 AM IST