*ಕೋವಿಡ್ -19 ಸೇರಿದಂತೆ ಮರಣಾಂತಿಕ ಕಾಯಿಲೆಗಳ ವೈದ್ಯಕೀಯ ವೆಚ್ಚಕ್ಕೆ ಮುಂಗಡ ಹಣ ಪಡೆಯಲು ಅವಕಾಶ*ಯಾವುದೇ ಅಂದಾಜು ವೆಚ್ಚ ಅಥವಾ ಬಿಲ್ ಗಳ ಅಗತ್ಯವಿಲ್ಲದೆ ಹಣ ಪಡೆಯಲು ಅವಕಾಶ*ಇಪಿಎಫ್ಒ ಅಧಿಕೃತ ವೆಬ್ ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು
Business Desk:ಕೋವಿಡ್ -19 (COVID-19) ಬಳಿಕ ಹಲವರ ಬದುಕು ಅನೇಕ ತಿರುವುಗಳನ್ನು ಪಡೆದುಕೊಂಡಿರೋದಂತೂ ಸತ್ಯ. ಕೊರೋನಾ ಕಾರಣದಿಂದ ಆಸ್ಪತ್ರೆ (Hospital) ಸೇರಿದ ತನ್ನ ಹಾಗೂ ಕುಟುಂಬ ಸದಸ್ಯರ ದುಬಾರಿ ವೈದ್ಯಕೀಯ ವೆಚ್ಚ (Medical expenses) ಭರಿಸಲಾಗದೆ ಕಷ್ಟಪಟ್ಟವರ ಸಂಖ್ಯೆ ಕಡಿಮೆಯೇನಿಲ್ಲ. ನೀವು ನೌಕರರ ಭವಿಷ್ಯ ನಿಧಿ (EPF) ಖಾತೆ ಹೊಂದಿದ್ರೆ ಇಂಥ ತುರ್ತು ವೈದ್ಯಕೀಯ ವೆಚ್ಚಗಳಿಗೆ ಅದ್ರಿಂದ ಹಣ ಡ್ರಾ ಮಾಡಬಹುದು. ತುರ್ತು ವೈದ್ಯಕೀಯ ವೆಚ್ಚಗಳಿಗೆ 1ಲಕ್ಷ ರೂ. ತನಕ ಹಣ ವಿತ್ ಡ್ರಾ ಮಾಡಲು ತನ್ನ ಸದಸ್ಯರಿಗೆ ಇಪಿಎಫ್ಒ (EPFO) ಅವಕಾಶ ನೀಡಿದೆ.
ಕೋವಿಡ್ -19 ಪರಿಣಾಮ ವೈದ್ಯಕೀಯ ವೆಚ್ಚ ಭರಿಸಲು ನೌಕರ ವರ್ಗ ಅನುಭವಿಸಿದ ಸಂಕಷ್ಟವನ್ನು ಗಮನಿಸಿ ಕೋವಿಡ್ -19 ಸೇರಿದಂತೆ ಪ್ರಾಣಕ್ಕೆ ಅಪಾಯವುಂಟು ಮಾಡೋ ಗಂಭೀರ ಕಾಯಿಲೆಗಳ ಸಂದರ್ಭದಲ್ಲಿ ಆಸ್ಪತ್ರೆ ವೆಚ್ಚಕ್ಕೆ ಹಾಗೂ ವೈದ್ಯಕೀಯ ತುರ್ತು ಅಗತ್ಯವಾಗಿ 1ಲಕ್ಷ ರೂ. ತನಕ ಪಿಎಫ್ ಖಾತೆಯಿಂದ ಹಣ ವಿತ್ ಡ್ರಾ ಮಾಡಬಹುದೆಂದು ಇಪಿಎಫ್ಒ (EPFO)2021ರ ಮೇನಲ್ಲಿ ಹೊರಡಿಸಿದ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ. ಹೀಗಾಗಿ ಉದ್ಯೋಗಿಗಳು ವೈದ್ಯಕೀಯ ವೆಚ್ಚಕ್ಕೆ ಪಿಎಫ್ ಖಾತೆಯಿಂದ ಹಣ ಪಡೆಯಬಹುದು. ಈ ಹಿಂದೆ ಕೂಡ ವೈದ್ಯಕೀಯ ವೆಚ್ಚಗಳಿಗೆ ಪಿಎಫ್ ಖಾತೆಯಿಂದ ಮುಂಗಡವಾಗಿ ಹಣ ಪಡೆಯೋ ಅವಕಾಶವಿತ್ತು. ಆದ್ರೆ ಆಸ್ಪತ್ರೆಯಿಂದ ಅಂದಾಜು ವೆಚ್ಚದ ವಿವರಗಳನ್ನು ಪಡೆದು ಇಪಿಎಫ್ ಒಗೆ ಸಲ್ಲಿಕೆ ಮಾಡಿದ ಬಳಿಕವಷ್ಟೇ ಹಣ ಪಡೆಯಲು ಸಾಧ್ಯವಿತ್ತು. ಆದ್ರೆ ಇಪಿಎಫ್ಒ ತನ್ನ ಹೊಸ ಆದೇಶದಲ್ಲಿ ರೋಗಿಯು ಮರಣಾಂತಿಕ ಕಾಯಿಲೆಯಿಂದ ಬಳಲುತ್ತಿದ್ದು, ಪ್ರಾಣ ಕಾಪಾಡಲು ತುರ್ತಾಗಿ ಆತ ಅಥವಾ ಆಕೆಯನ್ನು ಆಸ್ಪತ್ರೆಗೆ ಭರ್ತಿ ಮಾಡಿದಂಥ ಗಂಭೀರ ಪರಿಸ್ಥಿತಿಗಳಲ್ಲಿ ಆಸ್ಪತ್ರೆಯಿಂದ ಅಂದಾಜು ವೆಚ್ಚ ಪಡೆಯೋದು ಕಷ್ಟಸಾಧ್ಯ, ಹೀಗಾಗಿ ಇಂಥ ಸಂದರ್ಭಗಳಲ್ಲಿ ಅಂದಾಜು ವೆಚ್ಚದ ಮಾಹಿತಿಯ ಅಗತ್ಯವಿಲ್ಲದೆ ಪ್ರಾಧಿಕಾರವು 1ಲಕ್ಷ ರೂ. ತನಕ ಹಣವನ್ನು ಮುಂಗಡವಾಗಿ ನೀಡಬಹುದು.
ಇಪಿಎಫ್ ನಾಮಿನಿ ಬದಲಾಯಿಸ್ಬೇಕಾ? ಈಗ ಈ ಪ್ರಕ್ರಿಯೆ ಬಹಳ ಸುಲಭ
ಇಪಿಎಫ್ಒ ನಿಂದ ವೈದ್ಯಕೀಯ ಮುಂಗಡ ಪಡೆಯೋದು ಹೇಗೆ?
* ಇಪಿಎಫ್ಒ ಅಧಿಕೃತ ವೆಬ್ ಸೈಟ್ epfindia.gov.in ಭೇಟಿ ನೀಡಿ.
*ನಿಮ್ಮ ಖಾತೆಗೆ ಲಾಗ್ ಇನ್ ಆಗಲು ಯುಎಎನ್ (UAN),ಪಾಸ್ ವರ್ಡ್ (password) ಹಾಗೂ ಕ್ಯಾಪ್ಚ (captcha) ಮಾಹಿತಿಗಳನ್ನು ನಮೂದಿಸಿ.
*‘Online Services’ ತೆರೆದು ಅದರಲ್ಲಿ 'ಕ್ಲೇಮ್ ' ((Form-31, 19,10C & 10D) ಆಯ್ಕೆ ಮೇಲೆ ಕ್ಲಿಕ್ ಮಾಡಿ.
*ಈಗ ಹೊಸ ಪುಟ ತೆರೆದುಕೊಳ್ಳುತ್ತದೆ. ಇದ್ರಲ್ಲಿ ನೀವು ನಿಮ್ಮ ಬ್ಯಾಂಕ್ ಖಾತೆ ಮಾಹಿತಿಯನ್ನು ಪರಿಶೀಲಿಸಬೇಕು. ಇದಕ್ಕಾಗಿ ನಿಮ್ಮ ಬ್ಯಾಂಕ್ ಖಾತೆ ಸಂಖ್ಯೆಯ ಕೊನೆಯ ನಾಲ್ಕು ಅಂಕೆಗಳನ್ನು ನಮೂದಿಸಬೇಕು. ಈ ಬ್ಯಾಂಕ್ ಖಾತೆ ನಿಮ್ಮ ಯುಎಎನ್ ಗೆ ಲಿಂಕ್ ಆಗಿರಬೇಕು.
*ಈಗ ಅಲ್ಲಿನ ಎಲ್ಲ ನಿಯಮಗಳು ಹಾಗೂ ಷರತ್ತುಗಳನ್ನು ಓದಿ, ಸ್ವೀಕರಿಸಬೇಕು.
*ಆ ಬಳಿಕ ‘Proceed for Online Claim’ಮೇಲೆ ಕ್ಲಿಕ್ ಮಾಡಿ. ಆ ನಂತರ ಮುಂಗಡ ಅರ್ಜಿ ಸಲ್ಲಿಕೆ ಆಯ್ಕೆಯಲ್ಲಿ ‘Medical emergency’ಮೇಲೆ ಕ್ಲಿಕ್ ಮಾಡಿ.
*ಈಗ ಅಗತ್ಯವಿರೋ ಮೊತ್ತ ನಮೂದಿಸಿ. ಸ್ಕ್ಯಾನ್ ಮಾಡಿದ ಚೆಕ್ ಪ್ರತಿ ಅಪ್ಲೋಡ್ ಮಾಡಿ. ವಿಳಾಸ ನಮೂದಿಸಿ.
*ಈಗ ನಿಮ್ಮ ಮೊಬೈಲ್ ಗೆ ಒಟಿಪಿ ಬರುತ್ತದೆ. ಅದನ್ನು ನಮೂದಿಸಿ.
ITR Verification: ನೀವಿನ್ನೂ ಆದಾಯ ತೆರಿಗೆ ರಿಟರ್ನ್ ದೃಢೀಕರಿಸಿಲ್ವಾ? ಗಮನಿಸಿ ಫೆ. 28 ಅಂತಿಮ ಗಡುವು
ಈ ಅಂಶಗಳನ್ನು ಗಮನಿಸಿ
*ಸಿಎಸ್ (MA) ನಿಯಮಗಳು ಹಾಗೂ ಕೇಂದ್ರ ಸರ್ಕಾರದ ಆರೋಗ್ಯ ಯೋಜನೆ (CGHS) ಹಾಗೂ CS(MA) ನಿಯಮಗಳಡಿಯಲ್ಲಿ ಕವರೇಜ್ ನಲ್ಲಿ ಬರೋ ಉದ್ಯೋಗಿಗಳು ಮಾತ್ರ ವೈದ್ಯಕೀಯ ಮುಂಗಡ ಪಡೆಯಲು ಸಾಧ್ಯ.
*ಸರ್ಕಾರಿ ಅಥವಾ ಸಾರ್ವಜನಿಕ ವಲಯದ ಘಟಕ (PSU)ಅಥವಾ ಸಿಜಿಎಚ್ ಎಸ್ ಆಸ್ಪತ್ರೆಗಳಲ್ಲಿ ರೋಗದ ಚಿಕಿತ್ಸೆಗೆ ಭರ್ತಿ ಹೊಂದೋ ರೋಗಿಗಳಿಗೆ ಮಾತ್ರ ಈ ಸೌಲಭ್ಯ ಸಿಗುತ್ತದೆ. ಒಂದು ವೇಳೆ ರೋಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರೆ ಇಪಿಎಫ್ಒ ನಿಗದಿತ ಪ್ರಾಧಿಕಾರದಿಂದ ಈ ಬಗ್ಗೆ ಪರಿಶೀಲನೆ ನಡೆಸಿ ಹಣ ನೀಡಬೇಕಾ ಅಥವಾ ಬೇಡವಾ ಎಂಬುದನ್ನು ನಿರ್ಧರಿಸುತ್ತದೆ.
*ವೈದ್ಯಕೀಯ ಮುಂಗಡ ಹಣ ಉದ್ಯೋಗಿಯ ವೇತನ ಖಾತೆಗೆ ಅಥವಾ ನೇರವಾಗಿ ಸಂಬಂಧಪಟ್ಟ ಆಸ್ಪತ್ರೆಗೆ ಜಮೆಯಾಗುತ್ತದೆ.
*ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ 45 ದಿನಗಳೊಳಗೆ ಉದ್ಯೋಗಿ ವೈದ್ಯಕೀಯ ಬಿಲ್ ಸಲ್ಲಿಕೆ ಮಾಡಬೇಕು.
