ತಾಯಿ ಸತ್ತಾಗ ರಜೆ ಕೇಳಿದ್ರೆ ಕೆಲಸದಿಂದ್ಲೇ ತೆಗೆಯೋದಾ ಕಂಪನಿ?!
ಕೆಲವೊಂದು ಭಾವನಾತ್ಮಕ ವಿಷ್ಯದಲ್ಲಿ ಕಂಪನಿ ಉದ್ಯೋಗಿಯನ್ನು ಹೆಚ್ಚು ಪ್ರಶ್ನೆ ಮಾಡಲು ಹೋಗೋದಿಲ್ಲ. ಇದೇ ಕಾರಣಕ್ಕೆ ಕೆಲವರು ಸಾವಿನ ಸುಳ್ಳು ಕಥೆ ಹೇಳಿ ಕೆಲಸಕ್ಕೆ ಗೈರಾಗ್ತಾರೆ. ಆದ್ರೆ ಈತ ತಾಯಿ ಸತ್ತನ ನಂತ್ರ ಕೆಲಸಕ್ಕೆ ರಜೆ ಕೇಳಿದ್ದಾನೆ. ಆದ್ರೆ ಕಂಪನಿ ಕಠಿಣ ನಿರ್ಧಾರ ತೆಗೆದುಕೊಂಡು ಈಗ ಪೇಚಿಗೆ ಸಿಲುಕಿದೆ.
ಮಾಜಿ ಸಿಬ್ಬಂದಿ ಕಾರಣಕ್ಕೆ ಅಮೆರಿಕಾದ ಕಂಪನಿಯೊಂದು ತನ್ನ ಸಾಮಾಜಿಕ ಜಾಲತಾಣದ ತನ್ನ ಖಾತೆಯನ್ನು ಬ್ಲಾಕ್ ಮಾಡಿದೆ. ತಾಯಿ ಸಾವಿನ ನಂತ್ರ ರಜೆ ಕೇಳಿದ ಉದ್ಯೋಗಿಯನ್ನು ಕೆಲಸದಿಂದ ತೆಗೆದು ಹಾಕಿದ್ದೇ ಸಾಮಾಜಿಕ ಜಾಲತಾಣದ ಖಾತೆ ಬ್ಲಾಕ್ ಮಾಡಲು ಕಾರಣವಾಗಿದೆ. ಪಾಲಕರು ಅಥವಾ ಆಪ್ತರು ಸಾವನ್ನಪ್ಪಿದಾಗ ಪ್ರತಿಯೊಬ್ಬರೂ ದುಃಖ ವ್ಯಕ್ತಪಡಿಸುತ್ತಾರೆ. ಆಪ್ತರನ್ನು ಕಳೆದುಕೊಂಡವರಿಗೆ ಸಾಂತ್ವಾನ ಹೇಳುವ ಜೊತೆಗೆ ಅವರಿಗೆ ರಜೆ ನೀಡ್ತಾರೆ. ಒಂದು ನಾಲ್ಕೈದು ದಿನ ಅನಿವಾರ್ಯವಾದ್ರೆ 12 ದಿನಗಳ ಕಾಲ ರಜೆ ತೆಗೆದುಕೊಳ್ಳುವವರಿದ್ದಾರೆ. ಆದ್ರೆ ಈ ಅಮೆರಿಕಾ ಕಂಪನಿ, ತಾಯಿ ಕಳೆದುಕೊಂಡ ವ್ಯಕ್ತಿ ರಜೆ ಕೇಳಿದ್ದೇ ತಪ್ಪು ಎನ್ನುವಂತೆ ವರ್ತಿಸಿದೆ. ರಜೆಯನ್ನು ವಿಸ್ತರಿಸುವಂತೆ ಆತ ಕೇಳಿದ್ದಕ್ಕೆ ಆತನನ್ನು ಕೆಲಸದಿಂದಲೇ ತೆಗೆದು ಹಾಕಿದೆ.
ಅಮೆರಿಕಾದ Keroseal ಹೆಸರಿನ ಕಂಪನಿ ವಾಲ್ ಕವರ್ ತಯಾರಿಸುವ ಕೆಲಸ ಮಾಡುತ್ತದೆ. ಅದ್ರಲ್ಲಿ ಈ ನೊಂದ ವ್ಯಕ್ತಿ ಮಶಿನ್ ಕೆಲಸ ಮಾಡ್ತಿದ್ದನಂತೆ. ಕೆಲಸ ಕಳೆದುಕೊಂಡ ಮೇಲೆ ವ್ಯಕ್ತಿ ರೆಡ್ಡಿಟ್ (Reddit) ನಲ್ಲಿ ನೋವು ತೋಡಿಕೊಂಡಿದ್ದಾನೆ. ತಾಯಿ ಸಾವಿನ ನಂತ್ರ ಮಾಜಿ ಉದ್ಯೋಗಿ ರಜೆ (vacation) ಕೇಳಿದ್ದಾನೆ. ಕಂಪನಿ ಮೂರು ದಿನಗಳ ಪೇಡ್ ಲಿವ್ ನೀಡಿದೆ. ಉದ್ಯೋಗಿ ಪ್ಲೋರಿಡಾಗೆ ವಿಮಾನದಲ್ಲಿ ಪ್ರಯಾಣ ಬೆಳೆಸಿ, ತಾಯಿಯ ಅಂತ್ಯಕ್ರಿಯೆ ನಡೆಸಿ ವಾಪಸ್ ತನ್ನ ನಗರಕ್ಕೆ ಬಂದಿದ್ದಾನೆ. ಆದ್ರೆ ಸತತ ಮೂರು ದಿನಗಳ ಕಾಲ ವಿಶ್ರಾಂತಿ ಇಲ್ಲದ ಕಾರಣ ರಜೆಯನ್ನು ವಿಸ್ತರಿಸುವಂತೆ ಕೇಳಿದ್ದಾನೆ. ನಾಲ್ಕು ದಿನಗಳ ಕಾಲ ಪಾವತಿ ಇಲ್ಲದ ರಜೆ ನೀಡುವಂತೆ ಕೇಳಿದ್ದಾನೆ. ಆದ್ರೆ ಹೆಚ್ ಆರ್ ರಜೆ ನೀಡುವ ಬದಲು ಯಾವುದೇ ವಿಶೇಷ ಕಾರಣವಿಲ್ಲದೆ ಉದ್ಯೋಗಿಯನ್ನು ಕೆಲಸದಿಂದ ತೆಗೆದು ಹಾಕಿದ್ದಾರೆ. ತಾಯಿ ಸಾವಿನ ನಂತ್ರ ಪೇಯ್ಡ್ ಲಿವ್ ನೀಡಿ ಕರುಣೆ ತೋರಿದ್ದೇನೆ ಎಂದು ಹೇಳಿದ ಹೆಚ್ ಆರ್, ಫೈನಲ್ ಸ್ಯಾಲರಿ ಚೆಕ್ ನಿನಗೆ ತಲುಪಿಸುತ್ತೇನೆಂದು ಮೇಲ್ ಮಾಡಿದ್ದಾರಂತೆ.
ಅಂಬಾನಿ ಬಿಸಿನೆಸ್ ಬಡವಾಯ್ತಾ, ಉದ್ಯೋಗಿಗಳಿಗೆ ಮೂರು ತಿಂಗಳಿಂದ ಸ್ಯಾಲರೀನೆ ಕೊಟ್ಟಿಲ್ಲ!
ಕಂಪನಿಗೆ ದುಬಾರಿಯಾಯ್ತು ಕೆಲಸದಿಂದ ವಜಾ ಮಾಡಿದ್ದು : ನೊಂದ ವ್ಯಕ್ತಿ ರೆಡ್ಡಿಟ್ ನಲ್ಲಿ ತನ್ನ ನೋವನ್ನು ಹೇಳಿಕೊಳ್ಳುತ್ತಿದ್ದಂತೆ ಬಳಕೆದಾರರು ಕೋಪಗೊಂಡಿದ್ದಾರೆ. Keroseal ಕಂಪನಿ ಸಾಮಾಜಿಕ ಜಾಲತಾಣಕ್ಕೆ ಹೋಗಿ ಮನಸ್ಸಿಗೆ ಬಂದಂತೆ ಕೋಪ ವ್ಯಕ್ತಪಡಿಸಿದ್ದಾರೆ. ಅವರ ಕಮೆಂಟ್ ನೋಡಿ ಕಂಪನಿ ಬೇಸತ್ತಿದೆ. ಆರಂಭದಲ್ಲಿ ಒಂದಿಷ್ಟು ಕಮೆಂಟ್ ಗಳನ್ನು ಡಿಲಿಟ್ ಮಾಡುವ ಪ್ರಯತ್ನ ನಡೆಸಿದೆ. ಆದ್ರೆ ಅದು ಸಾಧ್ಯವಾಗದೆ ಹೋದಾಗ ಸಾಮಾಜಿಕ ಜಾಲತಾಣದ ತನ್ನ ಖಾತೆಯನ್ನು ಬ್ಲಾಕ್ ಮಾಡಿದೆ.
ಕೋಟಿ ಆಸ್ತಿಯ ಒಡತಿಯಾಗಿದ್ರೂ ಖಾಸಗಿ ಕಂಪೆನಿಯಲ್ಲಿ ಕೆಲ್ಸ ಮಾಡ್ತಿದ್ದ ಅಂಬಾನಿ ಸೊಸೆ!
Keroseal ಕಂಪನಿ ಬಗ್ಗೆ ಉದ್ಯೋಗಿ ಹೇಳಿದ್ದೇನು? : ಮಾಜಿ ಉದ್ಯೋಗಿ ತಾನು ಕೆಲಸ ಮಾಡ್ತಿದ್ದ ಕಂಪನಿ ಬಗ್ಗೆಯೂ ಮಾಹಿತಿ ನೀಡಿದ್ದಾನೆ. ಸಾಮಾಜಿಕ ಜಾಲತಾಣದಲ್ಲಿ ಈ ಕಂಪನಿ ತಾನು ಉತ್ತಮ ಕೆಲಸ ಮಾಡ್ತಿದ್ದೇನೆಂದು ಬಿಂಬಿಸಿಕೊಳ್ಳುವ ಪ್ರಯತ್ನ ನಡೆಸುತ್ತದೆ. ಆದ್ರೆ ಒಳಗೆ ನಡೆಯೋದೇ ಬೇರೆ ಎಂದು ಉದ್ಯೋಗಿ ಹೇಳಿದ್ದಾನೆ. ಅಷ್ಟೇ ಅಲ್ಲ, ನಾನು ರಜೆ ಕೇಳಿದಾಗ ನನ್ನ ಕೆಲಸ ಮಾಡುವ ಇನ್ನೂ ಅನೇಕರು ಕಂಪನಿಯಲ್ಲಿದ್ದರು. ಅವರಿಂದ ಕೆಲಸ ಮಾಡಿಸಿ, ನನಗೆ ರಜೆ ನೀಡ್ಬಹುದಿತ್ತು. ಆದ್ರೆ ಕಂಪನಿ ಆ ಕೆಲಸ ಮಾಡಿಲ್ಲ. ನನ್ನನ್ನು ಕೆಲಸದಿಂದ ವಜಾ ಮಾಡಿದೆ. ಈಗ ರೆಡ್ಡಿಟ್ ಪೋಸ್ಟ್ ಡಿಲಿಟ್ ಮಾಡುವಂತೆ ಕಂಪನಿ ನನಗೆ ಹೇಳ್ತಿದೆ ಎಂದು ಮಾಜಿ ಉದ್ಯೋಗಿ ಹೇಳಿದ್ದಾನೆ. ಅಲ್ಲದೆ ರೆಡ್ಡಿಟ್ ಗೆ ಧನ್ಯವಾದ ಹೇಳಿದ್ದಾನೆ. ವ್ಯಕ್ತಿಯ ರೆಡ್ಡಿಟ್ ಪೋಸ್ಟ್ ಇತರ ಸಾಮಾಜಿಕ ಜಾಲತಾಣದಲ್ಲೂ ವೈರಲ್ ಆಗಿದೆ.