Asianet Suvarna News Asianet Suvarna News

ಜಿಯೋ-ಏರ್‌ಟೆಲ್‌ ಟೆಲಿಕಾಂ ಏಕಸ್ವಾಮ್ಯಕ್ಕೆ ಮಸ್ಕ್‌ 'ಸ್ಟಾರ್‌ಲಿಂಕ್‌' ಎಂಟ್ರಿ ಖಚಿತ, ಅಂಬಾನಿಗೆ ಶುರು ತಳಮಳ!

ಭಾರತದಲ್ಲಿ ಸ್ಯಾಟಲೈಟ್ ಬ್ರಾಡ್‌ಬ್ಯಾಂಡ್ ಸ್ಪೆಕ್ಟ್ರಮ್ ಹಂಚಿಕೆ ವಿಚಾರದಲ್ಲಿ ಮುಖೇಶ್ ಅಂಬಾನಿ ಮತ್ತು ಎಲೋನ್ ಮಸ್ಕ್ ನಡುವೆ ಜಟಾಪಟಿ ನಡೆಯುತ್ತಿದೆ. ಸ್ಪೆಕ್ಟ್ರಮ್ ಹಂಚಿಕೆ ಹರಾಜು ಮಾರ್ಗದ ಮೂಲಕ ಆಗಬೇಕೆಂದು ಅಂಬಾನಿ ಬಯಸಿದರೆ, ಆಡಳಿತಾತ್ಮಕವಾಗಿ ಹಂಚಿಕೆ ಆಗಬೇಕೆಂದು ಮಸ್ಕ್ ಬಯಸುತ್ತಾರೆ.

Elon Musk Happy After government confirms no satellite broadband spectrum auction san
Author
First Published Oct 16, 2024, 5:47 PM IST | Last Updated Oct 16, 2024, 5:57 PM IST

ನವದೆಹಲಿ (ಅ.16): ಭಾರತದಲ್ಲಿ ಸ್ಯಾಟಲೈಟ್ ಬ್ರಾಡ್‌ಬ್ಯಾಂಡ್ ಸ್ಪೆಕ್ಟ್ರಮ್ ಹಂಚಿಕೆಗೆ ಸಂಬಂಧಿಸಿದಂತೆ ವಿಶ್ವದ ಶ್ರೀಮಂತ ವ್ಯಕ್ತಿಗಳ ನಡುವೆ ದೊಡ್ಡ ಮಟ್ಟದ ಜಟಾಪಟಿ ನಡೆಯುತ್ತಿದೆ. ಇದರ ನಡುವೆ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಅವರನ್ನು ಒಳಗೊಂಡ ಮೀಮ್‌ಗೆ ಎಲೋನ್ ಮಸ್ಕ್ ಪ್ರತಿಕ್ರಿಯಿಸಿದ್ದಾರೆ. "ಭಾರತದ ಜನರಿಗೆ ಇಂಟರ್ನೆಟ್ ಸೇವೆಗಳನ್ನು ಒದಗಿಸಲು ಸ್ಟಾರ್‌ಲಿಂಕ್‌ಗೆ ಸ್ಪರ್ಧಿಸಲು ಅವಕಾಶ ನೀಡುವುದು ತುಂಬಾ ತೊಂದರೆಯಾಗುವುದಿಲ್ಲವೇ ಎಂದು ನಾನು ಅವರಿಗೆ ಕರೆ ಮಾಡಿ ಕೇಳುತ್ತೇನೆ" ಎಂದು ಸ್ಪೇಸ್‌ಎಕ್ಸ್‌ನ ಸಿಇಒ ಮಂಗಳವಾರ ಭರವಸೆ ನೀಡಿದ್ದಾರೆ. ಮೀಮ್‌ನಲ್ಲಿ ಸ್ಟಾರ್‌ಲಿಂಕ್‌ಅನ್ನೋ ಮೊಲಕ್ಕೆ ಮುಖೇಶ್‌ ಅಂಬಾನಿ ಹೆದರಿಕೊಂಡರೆ ಹೇಗೆ ಎಂದು ಡಾಗ್‌ ಡಿಸೈನರ್‌ ಮೀಮ್‌ ಹಂಚಿಕೊಂಡಿತ್ತು. ಅದರೊಂದಿಗೆ, 'ಭಾರತದ ಬಿಲಿಯನೇರ್ ಮುಖೇಶ್ ಅಂಬಾನಿ ಎಲೋನ್ ಮಸ್ಕ್‌ಗೆ ಯಾಕೆ ಹೆದರುತ್ತಾರೆ? ಭಾರತಕ್ಕೆ ಸ್ಟಾರ್‌ಲಿಂಕ್‌ನ ಪ್ರವೇಶವು ತನ್ನ ಟೆಲಿಕಾಂ ಸಾಮ್ರಾಜ್ಯವನ್ನು ಅಡ್ಡಿಪಡಿಸುತ್ತದೆ ಎಂದು ಅವರು ಚಿಂತಿಸುತ್ತಿದ್ದಾರೆಯೇ?' ಎಂದು ಬರೆಯಲಾಗಿತ್ತು. ಇದಕ್ಕೆ ಮಸ್ಕ್‌ ಪ್ರತಿಕ್ರಿಯೆ ನೀಡಿದ್ದರು.

ಸ್ಯಾಟಲೈಟ್‌ ಬ್ರಾಡ್‌ಬ್ಯಾಂಡ್‌ ಸ್ಪೆಕ್ಟ್ರಮ್‌ಅನ್ನು ಹರಾಜು ಹಾಕುವ ಬದಲು ಆಡಳಿತಾತ್ಮಕ ಮಾರ್ಗದಿಂದ ವಿತರಣೆ ಮಾಡುವ ಬಗ್ಗೆ ಭಾರತ ಸರ್ಕಾರ ನಿರ್ಧಾರ ಮಾಡಿದ್ದಕ್ಕೆ ಎಲೋನ್‌ ಮಸ್ಕ್‌ ಸಂತಸ ವ್ಯಕ್ತಪಡಿಸಿದ್ದಾರೆ. ಸ್ಯಾಟಲೈಟ್‌ ಬ್ರ್ಯಾಡ್‌ಬ್ಯಾಂಡ್‌ ಸ್ಪೆಕ್ಟ್ರಮ್‌ ಹರಾಜು ಪ್ರಕ್ರಿಯೆಗೆ ಹೋದಲ್ಲಿ, ಭಾರತದಲ್ಲಿ ತಮ್ಮ ದೊಡ್ಡ ಪ್ರತಿಸ್ಪರ್ಧಿಯಾಗಿರುವ ಮುಖೇಶ್‌ ಅಂಬಾನಿ ಹರಾಜು ಪಡೆದುಕೊಳ್ಳುವ ನಿಟ್ಟಿನಲ್ಲಿ ಸರ್ಕಾರದ ಅಧಿಕಾರಿಗಳಿಗೆ ಲಾಬಿ ಮಾಡಬಹುದು ಎನ್ನುವ ಆತಂಕ ವ್ಯಕ್ತಪಡಿಸಿದ್ದರು. ಮಸ್ಕ್‌ ಟೀಕೆ ಬಂದ ಬಳಿಕ ಟೆಲಿಕಾಂ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ, ಸ್ಯಾಟಲೈಟ್‌ ಬ್ರಾಡ್‌ಬ್ಯಾಂಡ್‌ ಸ್ಪೆಕ್ಟ್ರಮ್‌ಅನ್ನು ಹರಾಜು ಹಾಕೋದಿಲ್ಲ, ಆಡಳಿತಾತ್ಮಕವಾಗಿ ಇದನ್ನು ನೀಡಲಿದ್ದೇವೆ ಎಂದಿದ್ದರು.

ಕೋಟ್ಯಧಿಪತಿಗಳ ಫೈಟ್: ಇಬ್ಬರು ಬಿಲಿಯನೇರ್‌ಗಳ ನಡುವಿನ ನೇರ ಯುದ್ಧದಲ್ಲಿ, ಸ್ಟಾರ್‌ಲಿಂಕ್ ಲೈಸೆನ್ಸ್‌ಗಳ ಆಡಳಿತಾತ್ಮಕ ಹಂಚಿಕೆ ಜಾಗತಿಕ ಪ್ರವೃತ್ತಿಗೆ ಅನುಗುಣವಾಗಿರಬೇಕು ಎಂದು ಹೇಳಿತ್ತು.ಇದಕ್ಕೆ ನೇರವಾಗಿ ವಿರೋಧ ವ್ಯಕ್ತಪಡಿಸಿರುವ ಅಂಬಾನಿಯ ರಿಲಯನ್ಸ್‌, ದೇಶದ ಸಾಂಪ್ರದಾಯಿಕ ಟೆಲಿಕಾಂ ಕಂಪನಿಗಳೊಂದಿಗೆ ವಿದೇಶದ ಕಂಪನಿಗಳು ಧ್ವನಿ ಮತ್ತು ಡೇಟಾ ಸೇವೆಗಳನ್ನು ನೀಡಲು ಮತ್ತು ಸ್ಪರ್ಧಿಸಲು ಹರಾಜಿನಂಥ ವೇದಿಕೆ ಅಗತ್ಯವಿದೆ ಎಂದು ಹೇಳಿತ್ತು. ಹೆಚ್ಚಿನ ವೇಗದ ಇಂಟರ್ನೆಟ್ ಕೊರತೆ ಇರುವ ಭಾರತದ ಗ್ರಾಮೀಣ ಪ್ರದೇಶಗಳಿಗೆ ಸ್ಟಾರ್‌ಲಿಂಕ್‌ನ ಉಪಗ್ರಹ ಇಂಟರ್ನೆಟ್ ಸೇವೆಗಳನ್ನು ವಿಸ್ತರಿಸುವ ಗುರಿಯನ್ನು ಮಸ್ಕ್ ಹೊಂದಿದೆ. ಸ್ಪೆಕ್ಟ್ರಮ್ ಅನ್ನು ಹರಾಜು ಹಾಕುವುದು ಭೌಗೋಳಿಕ ನಿರ್ಬಂಧಗಳನ್ನು ವಿಧಿಸುತ್ತದೆ ಮತ್ತು ವೆಚ್ಚವನ್ನು ಹೆಚ್ಚಿಸುತ್ತದೆ ಎಂದು ಟೆಸ್ಲಾ ಬಿಲಿಯನೇರ್ ವಾದ ಮಾಡಿದೆ. ಇದು ಸ್ಟಾರ್‌ಲಿಂಕ್‌ನಂತಹ ಕಂಪನಿಗಳಿಗೆ ಸ್ಪರ್ಧಾತ್ಮಕವಾಗಿ ಕಾರ್ಯನಿರ್ವಹಿಸಲು ಕಷ್ಟವಾಗುತ್ತದೆ.

ಮೆಲೋನಿ ಕಣ್ಣಲ್ಲಿ ಕಣ್ಣಿಟ್ಟು ನೋಡಿದ ಮಸ್ಕ್, ಡೇಟಿಂಗ್ ಬಗ್ಗೆ ಹೇಳಿದ್ದೇನು?

ಮತ್ತೊಂದೆಡೆ, ಅಂಬಾನಿಯ ರಿಲಯನ್ಸ್ ಜಿಯೋ ಹರಾಜು ಮಾರ್ಗಕ್ಕೆ ಒಲವು ಹೊಂದಿದೆ. ಸ್ಪೆಕ್ಟ್ರಮ್ ಅನ್ನು ಹರಾಜು ಮಾಡುವುದರಿಂದ ವಿದೇಶಿ ಕಂಪನಿಗಳು ಸ್ಥಳೀಯ ಟೆಲಿಕಾಂ ಪೂರೈಕೆದಾರರ ಮೇಲೆ ಅನ್ಯಾಯದ ಪ್ರಯೋಜನವನ್ನು ಹೊಂದುವುದನ್ನು ತಡೆಯುತ್ತದೆ.ಎರಡೂ ಕಂಪನಿಗಳು ಒಂದೇ ರೀತಿಯ ಮೈದಾನವಿರರಬೇಕು ಎಂದು ಜಿಯೋ ಬಯಸುತ್ತದೆ ಎಂದು ಹೇಳಿತ್ತು. 

ದೃಷ್ಟಿ ಹೀನರೂ ಇನ್ಮುಂದೆ ನೋಡಬಲ್ಲರು! ಹುಟ್ಟು ಕುರುಡರ ಬಾಳಲ್ಲಿ ಎಲಾನ್​ ಮಸ್ಕ್​ ಬೆಳಕು

ಭಾರತದಲ್ಲಿ ಉಪಗ್ರಹ ಸೇವೆಗಳಿಗೆ ಸ್ಪೆಕ್ಟ್ರಮ್ ಅನ್ನು ನೀಡುವ ವಿಧಾನ ವಿಭಿನ್ನವಾಗಿದೆ.  2030 ರ ವೇಳೆಗೆ $1.9 ಶತಕೋಟಿಯನ್ನು ತಲುಪುವ ಮಾರುಕಟ್ಟೆಯು ವರ್ಷಕ್ಕೆ 36% ರಷ್ಟು ಬೆಳೆಯುತ್ತದೆ ಎಂದು ಅಂದಾಜಿಸಲಾಗಿದೆ. ಆದರೆ, ಕಳೆದ ವರ್ಷದಿಂದ ವಿವಾದಾತ್ಮಕ ವಿಷಯವಾಗಿದೆ. ಭಾರತವು ಹರಾಜಿನ ಬದಲು ಹಂಚಿಕೆಯನ್ನು ಆರಿಸಿಕೊಳ್ಳುವುದರೊಂದಿಗೆ, ಮಸ್ಕ್‌ ಪರವಾಗಿ ಸದ್ಯಕ್ಕೆ ಲಾಭವಾಗಿರುವಂತೆ ಕಂಡಿದೆ.

Latest Videos
Follow Us:
Download App:
  • android
  • ios