ಸೋಶಿಯಲ್ ಮೀಡಿಯಾದಲ್ಲಿ ಎಲಾನ್ ಮಸ್ಕ್ ಮತ್ತು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಒಟ್ಟಿಗೆ ಇರುವ ಫೋಟೋ ವೈರಲ್ ಆಗಿದ್ದು, ಇಬ್ಬರೂ ಡೇಟಿಂಗ್ ಮಾಡ್ತಿದ್ದಾರೆ ಅನ್ನೋ ಗಾಸಿಪ್ ಹಬ್ಬಿದೆ. ಮಸ್ಕ್ ಒಂದು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮೆಲೋನಿಯವರನ್ನು ಹೊಗಳಿದ್ದು, ಆ ಬಳಿಕ ಈ ಫೋಟೋ ವೈರಲ್ ಆಗಿದೆ.
ನವದೆಹಲಿ: ಅಮೆರಿಕದ ಬಿಲಿಯನೇರ್ ಉದ್ಯಮಿ ಎಲಾನ್ ಮಸ್ಕ್ ಮತ್ತು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರ ಒಂದು ಫೋಟೋ ವೈರಲ್ ಆಗಿದೆ. ಈ ಫೋಟೋದಲ್ಲಿ ಇಬ್ಬರೂ ಪರಸ್ಪರ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಿರುವುದನ್ನು ಕಾಣಬಹುದು. ಸೋಶಿಯಲ್ ಮೀಡಿಯಾದಲ್ಲಿ ಇಬ್ಬರೂ “ಡೇಟಿಂಗ್” ಮಾಡ್ತಿದ್ದಾರೆ ಅನ್ನೋ ಗಾಸಿಪ್ ಹಬ್ಬಿದೆ. ಸಾಮಾಜಿಕ ಜಾಲತಾಣದಲ್ಲಿ ಎಲಾಮ್ ಮಸ್ಕ್ ಮತ್ತು ಜಾರ್ಜಿತಾ ಮೆಲೋನಿ ಫೋಟೋಗಳು ತರೇಹವಾರಿ ಶೀರ್ಷಿಕೆಯಡಿ ಶೇರ್ ಆಗುತ್ತಿವೆ.
ಮಂಗಳವಾರ ನ್ಯೂಯಾರ್ಕ್‌ನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಸ್ಕ್ ಮಾತನಾಡುವಾಗ ಮೆಲೋನಿಯವರನ್ನು ಹೊಗಳಿದ್ದರು. ಮೆಲೋನಿ ಅವರನ್ನು “ಪ್ರಾಮಾಣಿಕ ಮತ್ತು ಸತ್ಯವಂತರು” ಎಂದು ಕರೆದಿದ್ದರು. ಮೆಲೋನಿ ಅವರಿಗೆ ಅಟ್ಲಾಂಟಿಕ್ ಕೌನ್ಸಿಲ್ ಗ್ಲೋಬಲ್ ಸಿಟಿಜನ್ ಪ್ರಶಸ್ತಿ ನೀಡಿ ಮಾತನಾಡಿದ ಮಸ್ಕ್, ಅವರು ಹೊರಗಿನಿಂದ ಎಷ್ಟು ಸುಂದರವಾಗಿದ್ದಾರೋ ಒಳಗಿನಿಂದ ಅದಕ್ಕಿಂತಲೂ ಹೆಚ್ಚು ಸುಂದರವಾಗಿದ್ದಾರೆ ಎಂದಿದ್ದಾರೆ.
“ಪ್ರಾಮಾಣಿಕ ಮತ್ತು ಸತ್ಯವಂತೆ” ಮೆಲೋನಿ: ಎಲಾನ್ ಮಸ್ಕ್
“ಜಾರ್ಜಿಯಾ ಮೆಲೋನಿ ನಾನು ಮೆಚ್ಚುವ ವ್ಯಕ್ತಿ. ಇಟಲಿ ಪ್ರಧಾನಿಯಾಗಿ ಅವರು ಊಹೆಗೂ ಮೀರಿದ ಹಲವು ಕೆಲಸಗಳನ್ನು ಮಾಡಿದ್ದಾರೆ. ಅವರು ನಿಜವಾದ, ಪ್ರಾಮಾಣಿಕ ಮತ್ತು ಸತ್ಯವಂತೆ. ರಾಜಕಾರಣಿಗಳ ಬಗ್ಗೆ ಯಾವಾಗಲೂ ಹೀಗೆ ಹೇಳಲಾಗದು” ಎಂದು ಮಸ್ಕ್ ಹೇಳಿಕೆ ನೀಡಿದ್ದರು.
ಇದನ್ನೂ ಓದಿ: ವೈರಲ್ ಆದ ಇಟಲಿ ಪ್ರಧಾನಿಯ ಮೆಲೋಡಿ ಸೆಲ್ಫಿಗೆ ನರೇಂದ್ರ ಮೋದಿ ಪ್ರತಿಕ್ರಿಯೆ!
ಮೆಲೋನಿ ತಮ್ಮ X ಖಾತೆಯಲ್ಲಿ ಮಸ್ಕ್ ಅವರಿಗೆ ಅವರ ಮೆಚ್ಚುಗೆಗೆ ಧನ್ಯವಾದ ಅರ್ಪಿಸಿದ್ದಾರೆ. ಇದಾದ ಬಳಿಕ ಟೆಸ್ಲಾ ಫ್ಯಾನ್ ಕ್ಲಬ್ ಮಸ್ಕ್ ಮತ್ತು ಮೆಲೋನಿ ಫೋಟೋವನ್ನು X ನಲ್ಲಿ ಪೋಸ್ಟ್ ಮಾಡಿದೆ. “ನಿಮಗೆ ಅವರು ಡೇಟ್ ಮಾಡ್ತಾರೆ ಅಂತ ಅನ್ಸುತ್ತಾ?” ಎಂದು ಬರೆದಿದೆ. ಇದಕ್ಕೆ ಉತ್ತರಿಸಿದ ಮಸ್ಕ್, “ನಾವು ಡೇಟ್ ಮಾಡ್ತಿಲ್ಲ” ಎಂದಿದ್ದಾರೆ.
ಜಾರ್ಜಿಯಾ ಮೆಲೋನಿಗೆ ಅಟ್ಲಾಂಟಿಕ್ ಕೌನ್ಸಿಲ್ ಪ್ರಶಸ್ತಿ ಏಕೆ?
ಇಟಲಿ ಪ್ರಧಾನಿ ಮೆಲೋನಿ ಅವರಿಗೆ “ಯುರೋಪಿಯನ್ ಒಕ್ಕೂಟಕ್ಕೆ ಅವರ ಬಲವಾದ ಬೆಂಬಲ ಮತ್ತು ಇಟಲಿಯ ಮೊದಲ ಮಹಿಳಾ ಪ್ರಧಾನಿಯಾದ್ದಕ್ಕಾಗಿ” ಅಟ್ಲಾಂಟಿಕ್ ಕೌನ್ಸಿಲ್ ಗೌರವಿಸಿದೆ. ಮೆಲೋನಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾಗವಹಿಸಲು ನ್ಯೂಯಾರ್ಕ್‌ಗೆ ಆಗಮಿಸಿದ್ದರು. ಈ ಸಭೆಯಲ್ಲಿ 190 ಕ್ಕೂ ಹೆಚ್ಚು ದೇಶಗಳ ನಾಯಕರು ಭಾಗವಹಿಸಿದ್ದರು.
ಇದನ್ನೂ ಓದಿ: ಟ್ರೆಂಡ್ ಆಗ್ತಿದೆ #Melodi; ಮೆಲೋನಿ-ಮೋದಿ ಸೆಲ್ಫಿಗೆ ನೆಟ್ಟಿಗರು ಕಮೆಂಟ್ ಏನು?
