Elon Musk Advice:ಯಾವ ಕಂಪನಿ ಷೇರು ಖರೀದಿಸಿದ್ರೆ ಲಾಭ? ಎಲಾನ್ ಮಸ್ಕ್ ನೀಡಿದ ಟಿಪ್ಸ್ ಹೀಗಿದೆ ನೋಡಿ

*ಟ್ವೀಟ್ ಮೂಲಕ ಷೇರು ಖರೀದಿ, ಮಾರಾಟದ ಟಿಪ್ಸ್ ನೀಡಿದ ಟೆಸ್ಲಾ ಮುಖ್ಯಸ್ಥ 
*ಷೇರು ಮಾರುಕಟ್ಟೆಯಲ್ಲಿ ಏರುಪೇರಾದ ತಕ್ಷಣ ಹೆದರಬೇಡಿ ಎಂದ ವಿಶ್ವದ ಸಿರಿವಂತ
*ನೀವು ನಂಬುವ ಉತ್ಪನ್ನ ಹಾಗೂ ಸೇವೆಗಳನ್ನು ಒದಗಿಸುವ ಕಂಪನಿ ಷೇರು ಖರೀದಿಸಲು ಮಸ್ಕ್ ಸಲಹೆ

Elon Musk business advice on buying and selling stocks

Business Desk: ಎಲಾನ್ ಮಸ್ಕ್  (Elon Musk) ಇಂದು ವಿಶ್ವದ ನಂ.1 ಶ್ರೀಮಂತನಾಗಿರಬಹುದು, ಆದ್ರೆ ಈ ಸ್ಥಾನಕ್ಕೇರುವ ಮುನ್ನ ಅವರು ಕೂಡ ಹಲವು ವೈಫಲ್ಯಗಳು, ಸವಾಲುಗಳನ್ನು ಎದುರಿಸಿದವರೇ. ಮೂರು ದಶಕಗಳ ಅವಧಿಯಲ್ಲಿ ಬಂಡವಾಳ ಹೂಡಿಕೆ ಮಾಡಿ ಕಳೆದು, ಗಳಿಸಿಕೊಂಡ ಈ ಅನುಭವಿ ಉದ್ಯಮಿ, ಷೇರುಗಳ (Shares) ಖರೀದಿ ಹಾಗೂ ಮಾರಾಟಕ್ಕೆ ಸಂಬಂಧಿಸಿ ಕೆಲವು ಸಲಹೆಗಳನ್ನು ಟ್ವಿಟರ್ ನಲ್ಲಿ (Twitter) ಹಂಚಿಕೊಂಡಿದ್ದಾರೆ.

ಷೇರು ಮಾರುಕಟ್ಟೆಯಲ್ಲಿ ಲಾಭ-ನಷ್ಟ ಕಾಮನ್. ಆದ್ರೆ ಷೇರುಗಳನ್ನು (Shares) ಖರೀದಿಸುವಾಗ (Purchase) ಹಾಗೂ ಮಾರಾಟ (Sale) ಮಾಡುವಾಗ ಒಂದಿಷ್ಟು ಗೊಂದಲಗಳು ಇದ್ದೇಇರುತ್ತವೆ. ಪ್ರತಿದಿನ ಷೇರು ಮಾರುಕಟ್ಟೆಯಲ್ಲಿ ಬದಲಾವಣೆಗಳಾಗುವ ಕಾರಣ ಇಂದು ಲಾಭವಾಗಿದೆ, ಹಾಗಾಗಿ ನಾಳೆ ಕೂಡ ಅದೇ ಷೇರಿನ ಮೇಲೆ ಹೂಡಿಕೆ ಮಾಡಿದ್ರೆ ಲಾಭ ಬರುತ್ತೆ ಎಂದು ಹೇಳಲು ಸಾಧ್ಯವಿಲ್ಲ. ಹೀಗಾಗಿ ಇಂದಿನ ಲೆಕ್ಕಾಚಾರ ನಾಳೆಗೆ ತಪ್ಪಾಗಬಹುದು. ಕೆಲವರಂತೂ ತಮ್ಮ ಬಳಿಯಿರುವ ಷೇರಿನ ಮೌಲ್ಯ ಸ್ವಲ್ಪ ಕುಸಿದ ತಕ್ಷಣ ಹೆದರಿ ಮಾರಿ ಬಿಡುತ್ತಾರೆ. ಆದ್ರೆ ಹಾಗೇ ಮಾರಿದ ಷೇರಿನ ಬೆಲೆ ಕೆಲವೇ ದಿನಗಳಲ್ಲಿ ದುಪ್ಪಾಟ್ಟಾಗಬಹುದು. ಇಂಥ ಹಲವು ಗೊಂದಲಗಳು, ಪ್ರಶ್ನೆಗಳು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವವರಿಗೆ ಇರುತ್ತದೆ. ಇಂಥ ಗೊಂದಲ, ಪ್ರಶ್ನೆಗಳನ್ನು ನಿವಾರಿಸಲು ಟೆಸ್ಲಾ(Tesla)ಕಂಪನಿಯ ಮುಖ್ಯಸ್ಥ ಎಲಾನ್ ಮಸ್ಕ್ ಪ್ರಯತ್ನಿಸಿದ್ದಾರೆ.

Elon Musk Twitter ಟ್ವಿಟರ್‌ಗೆ ಎಲಾನ್ ಮಸ್ಕ್ ಬಾಸ್, 5 ಬದಲಾವಣೆ ಸಾಧ್ಯತೆ!

ಸದಾ ಸಾಮಾಜಿಕ ಜಾಲತಾಣದಲ್ಲಿ (Social Media) ಸಕ್ರಿಯವಾಗಿರುವ ಎಲಾನ್ ಮಸ್ಕ್, ಷೇರುಗಳ (Shares) ಖರೀದಿ  (Purchase) ಹಾಗೂ ಮಾರಾಟಕ್ಕೆ (Sale) ಸಂಬಂಧಿಸಿದ ವ್ಯವಹಾರ ಸಲಹೆಯನ್ನು ಟ್ವೀಟ್ (tweet) ಮೂಲಕ ಹಂಚಿಕೊಂಡಿದ್ದಾರೆ. 'ಅನೇಕರು ಈ ಬಗ್ಗೆ ನನ್ನಲ್ಲಿ ಪ್ರಶ್ನಿಸಿರುವ ಕಾರಣ ಈ ಮಾತು ಹೇಳುತ್ತಿದ್ದೇನೆ. ನೀವು ನಂಬುವ ಉತ್ಪನ್ನಗಳು ಹಾಗೂ ಸೇವೆಗಳನ್ನು ಒದಗಿಸುವ ಹಲವು ಕಂಪನಿಗಳ ಷೇರುಗಳನ್ನು ಖರೀದಿಸಿ. ಆ ಕಂಪನಿಗಳ ಉತ್ಪನ್ನಗಳು ಹಾಗೂ ಸೇವೆಗಳು ಕೆಟ್ಟದ್ದಾಗಿವೆ ಎಂದು ನಿಮಗೆ ಅನಿಸಿದರೆ ಮಾತ್ರ ಆ ಷೇರುಗಳನ್ನು ಮಾರಾಟ ಮಾಡಿ. ಆದ್ರೆ ಮಾರುಕಟ್ಟೆಯಲ್ಲಿ ತುಸು ಏರುಪೇರಾದ ತಕ್ಷಣ ಭಯಪಟ್ಟು ಷೇರುಗಳನ್ನು ಮಾರಬೇಡಿ. ಇಂಥ ಅಭ್ಯಾಸ ದೀರ್ಘಾವಧಿಯಲ್ಲಿ ನಿಮಗೆ ಲಾಭ ಗಳಿಸಲು ನೆರವು ನೀಡುತ್ತದೆ' ಎಂದು ಮಸ್ಕ್ ತಮ್ಮ 89 ಮಿಲಿಯನ್ ಫಾಲೋವರ್ಸ್ ಗೆ ಟ್ವೀಟ್ ಮೂಲಕ ಸಲಹೆ ನೀಡಿದ್ದಾರೆ.

50 ವರ್ಷದ ಟೆಕ್ ಉದ್ಯಮಿ ಏ.26ರಂದು 3.25 ಲಕ್ಷ ಕೋಟಿ ರೂಪಾಯಿಗೆ (44 ಬಿಲಿಯನ್ ಅಮೆರಿಕನ್ ಡಾಲರ್)  ಟ್ವಿಟರ್ ಖರೀದಿಸಿದ್ದರು.ಅಷ್ಟೇ ಅಲ್ಲ,ಕಳೆದ ಕೆಲವು ದಿನಗಳ ಹಿಂದೆ 8.5 ಬಿಲಿಯನ್ ಡಾಲರ್ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದರು. ಈ ವಾರದ ಪ್ರಾರಂಭದಲ್ಲಿ ಟೆಸ್ಲಾ (Tesla) ಷೇರುಗಳು ಶೇ.12ರಷ್ಟು ಇಳಿಕೆ ದಾಖಲಿಸಿದ್ದವು. 2020ರ ಸೆಪ್ಟೆಂಬರ್ ಬಳಿಕ ಇದು ಒಂದು ದಿನದಲ್ಲಿ ದಾಖಲಾದ ಅತೀದೊಡ್ಡ ಇಳಿಕೆಯಾಗಿದೆ ಎಂದು ವರದಿಯಾಗಿದೆ.

ಭಾರತದ ಎಲಾನ್ ಮಸ್ಕ್ ಯಾರು? ಇಲ್ಲಿದೆ ನೋಡಿ ಸ್ನ್ಯಾಪ್ ಡೀಲ್ ಸಿಇಒ ಕುನಾಲ್ ಬಹ್ಲ್ ನೀಡಿರುವ ಉತ್ತರ

ಟ್ವಿಟರ್ ಸ್ವಾಧೀನ ಪ್ರಕ್ರಿಯೆ ಈ ವರ್ಷದ ಅಂತ್ಯದೊಳಗೆ ಮುಗಿಯಲಿದೆ. ಆ ಬಳಿಕ ಟ್ವಿಟರ್ ಖಾಸಗಿ ಒಡೆತನದ ಸಂಸ್ಥೆಯಾಗಲಿದೆ. ದಕ್ಷಿಣ ಆಫ್ರಿಕಾದಲ್ಲಿ(South Africa) ಜನಿಸಿದ ಎಲಾನ್ ಮಸ್ಕ್, ಪಿಎಚ್ ಡಿ ಪದವಿ ಪಡೆಯುತ್ತಿರುವ ಸಮಯದಲ್ಲೇ ಇಂಟರ್ನೆಟ್ ಬೂಮ್ ನಿಂದ ಪ್ರಭಾವಿತರಾಗಿ ಉದ್ಯಮ ಪ್ರಾರಂಭಿಸಿದ್ದರು. 1995ರಿಂದ ಪ್ರಾರಂಭವಾದ ಎಲಾನ್ ಮಸ್ಕ್ ಉದ್ಯಮ ಜರ್ನಿಯಲ್ಲಿ ಹಲವು ಏಳುಬೀಳುಗಳು ಎದುರಾಗಿದ್ದವು. ಆದ್ರೆ ದೂರದೃಷ್ಟಿ, ಬುದ್ಧಿವಂತಿಕೆ ಹಾಗೂ ಛಲ ಇಂದು ಎಲಾನ್ ಮಸ್ಕ್ ಅವರನ್ನು ವಿಶ್ವದ ನಂ.1 ಶ್ರೀಮಂತನನ್ನಾಗಿ ಮಾಡಿದೆ. 
 

Latest Videos
Follow Us:
Download App:
  • android
  • ios