ನವದೆಹಲಿ[ಮೇ.29]: ಲೋಕಸಭೆ ಚುನಾವಣೆ ಮುಗಿದ ಬೆನ್ನಲ್ಲೇ, ಪೆಟ್ರೋಲ್‌ ಮತ್ತು ಡೀಸೆಲ್‌ ದರಗಳು ಏರಿಕೆಯ ಹಾದಿ ಹಿಡಿದಿವೆ. ಮೇ 20ರಿಂದ ತೈಲ ದರಗಳು ಏರಿಕೆಯಾಗುತ್ತಲೇ ಇದ್ದು, ಕಳೆದ 9 ದಿನಗಳಲ್ಲಿ ತೈಲ ದರ 70ರಿಂದ 80 ಪೈಸೆಯಷ್ಟು ಏರಿಕೆಯಾಗಿದೆ.

ಪ್ರತಿ ಲೀಟರ್‌ಗೆ ಪೆಟ್ರೋಲ್‌ 83 ಪೈಸೆ ಹಾಗೂ ಡೀಸೆಲ್‌ 73 ಪೈಸೆ ಏರಿಕೆ ಕಂಡಿದೆ. ಏಪ್ರಿಲ್‌ ಮತ್ತು ಮೇ ತಿಂಗಳಿನಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ದರಗಳು ಏರಿಕೆಯಾಗಿದ್ದ ಹೊರತಾಗಿಯೂ ಚುನಾವಣೆಯ ಹಿನ್ನೆಲೆಯಲ್ಲಿ ಪೆಟ್ರೋಲ್‌, ಡೀಸೆಲ್‌ ದರ ಏರಿಕೆಗೆ ಕಡಿವಾಣ ಹಾಕಲಾಗಿತ್ತು. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ತೈಲ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದ್ದವು.

ಇದೀಗ ಚುನಾವಣೆ ಮುಗಿದಿರುವ ಕಾರಣದಿಂದ ನಷ್ಟವನ್ನು ಸರಿದೂಗಿಸುವ ಸಲುವಾಗಿ ತೈಲ ದರ ಏರಿಕೆ ಮಾಡಲಾಗುತ್ತಿದೆ.