Asianet Suvarna News Asianet Suvarna News

e-PAN Card Download:ಇ-ಪ್ಯಾನ್ ಕಾರ್ಡ್ ಡೌನ್ಲೋಡ್ ಮಾಡೋದು ಹೇಗೆ? ಇಲ್ಲಿದೆ ಮಾಹಿತಿ

*ಮೊಬೈಲ್ ನಲ್ಲೇ ಇ-ಪ್ಯಾನ್ ಕಾರ್ಡ್ ಡೌನ್ಲೋಡ್ ಮಾಡಿಟ್ಟುಕೊಳ್ಳಬಹುದು.
*ಆನ್ಲೈನ್ನಲ್ಲಿ ಇ-ಪ್ಯಾನ್ ಕಾರ್ಡ್ ಪಡೆಯೋದು ತುಂಬಾ ಸುಲಭ.
*ಡೌನ್ ಲೋಡ್ ಮಾಡಿದ ಇ-ಪ್ಯಾನ್ ಕಾರ್ಡ್ ಪಿಡಿಎಫ್ ಮಾದರಿಯಲ್ಲಿದ್ದು, ಪಾಸ್ ವರ್ಡ್ನಿಂದ  ಸುರಕ್ಷಿತ.
 

e PAN Card how to download it here is step by step guide
Author
Bangalore, First Published Feb 28, 2022, 7:10 PM IST

Business Desk:  ಭಾರತೀಯ ನಾಗರಿಕನಿಗೆ (Citizen) ಆಧಾರ್ ಕಾರ್ಡ್ (Aadhar card) ಜೊತೆಗೆ ಅತ್ಯಗತ್ಯವಾದ ಇನ್ನೊಂದು ಪ್ರಮುಖ ದಾಖಲೆಯೆಂದ್ರೆ ಅದು ಪ್ಯಾನ್ ಕಾರ್ಡ್ (Pan Card). ಅದ್ರಲ್ಲೂ ವೇತನ ಪಡೆಯೋ ವರ್ಗಕ್ಕೆ ಆದಾಯ ತೆರಿಗೆ ರಿಟರ್ನ್ (ITR) ಸಲ್ಲಿಕೆಗೆ ಪ್ಯಾನ್ ಕಾರ್ಡ್ ಅತ್ಯಗತ್ಯ. ಬ್ಯಾಂಕ್ ಖಾತೆ (Bank account), ಡಿಮ್ಯಾಟ್ ಖಾತೆ (Demat accunt) ತೆರೆಯೋವಾಗ ಅಧಿಕೃತ ಪ್ಯಾನ್ ಕಾರ್ಡ್ ಪ್ರತಿಯನ್ನು ಕೇಳಿಯೇ ಕೇಳುತ್ತಾರೆ. ಅಷ್ಟೇ ಅಲ್ಲ, ಒಂದು ವೇಳೆ ನೀವು ಬ್ಯಾಂಕಿನಲ್ಲಿ  50,000 ರೂ.ಗಿಂತ ಅಧಿಕ ಹಣ ಜಮೆ (Deposit) ಮಾಡಬೇಕಾದ್ರೂ ಪ್ಯಾನ್ ಕಾರ್ಡ್ ಬೇಕೇಬೇಕು. ಇಂಥ ಹತ್ತಾರು ಕೆಲಸಗಳಿಗೆ ಅಗತ್ಯವಿರೋ ಪ್ಯಾನ್ ಕಾರ್ಡ್ ಅನ್ನು ಎಲ್ಲ ಕಡೆ ತೆಗೆದುಕೊಂಡು ಹೋಗೋದು ಕಷ್ಟದ ಕೆಲಸ. ಇದಕ್ಕೆ ಇ-ಪ್ಯಾನ್ ಕಾರ್ಡ್ (e-pan card) ಡೌನ್ ಲೋಡ್ ಮಾಡಿಟ್ಟುಕೊಂಡ್ರೆ ತಲೆಬಿಸಿಯಿಲ್ಲ.

ಇ-ಪ್ಯಾನ್ (e-PAN)  ಕಾರ್ಡ್ ಡೌನ್ಲೋಡ್ ಮಾಡಿಟ್ಟುಕೊಂಡ್ರೆ ಯಾವಾಗ ಬೇಕಾದ್ರೂ ಅದನ್ನು ಸಂಬಂಧಪಟ್ಟವರಿಗೆ ಸಲ್ಲಿಕೆ ಮಾಡಲು ಸಾಧ್ಯವಾಗುತ್ತೆ. ಅಲ್ಲದೆ, ಪ್ರತಿ ಕೆಲಸಕ್ಕೂ ಪ್ಯಾನ್ ಕಾರ್ಡ್ ಅನ್ನು ಜೇಬಿನಲ್ಲೋ, ಪರ್ಸ್ ನಲ್ಲೋ ಇಟ್ಟುಕೊಂಡು ಹೋಗಬೇಕಾದ ಅಗತ್ಯವಿಲ್ಲ. ಅಷ್ಟೇ ಅಲ್ಲ, ಕಳೆದು ಹೋಗೋ ಭಯವೂ ಇಲ್ಲ. ಸರ್ಕಾರವು ನಾಗರಿಕರ ಹಣಕಾಸು ವಹಿವಾಟುಗಳ ಮೇಲೆ ನಿಗಾಯಿಡಲು ಪ್ಯಾನ್ ಕಾರ್ಡ್ ಬಳಸಿಕೊಳ್ಳುತ್ತದೆ ಎಂಬುದು ಎಲ್ಲರಿಗೂ ತಿಳಿದಿರೋ ವಿಚಾರವೇ. ಹೀಗಾಗಿ ಆದಾಯ ಹೊಂದಿರೋ, ತೆರಿಗೆ ಪಾವತಿಸೋ ಪ್ರತಿ ವ್ಯಕ್ತಿ ಪ್ಯಾನ್ ಕಾರ್ಡ್ ಹೊಂದಿರೋದು ಹಾಗೂ ಅದರ ಸುರಕ್ಷತೆ ಬಗ್ಗೆ ಗಮನ ವಹಿಸೋದು ಅಗತ್ಯ.

EPF Withdraw For Medical Emergency:ವೈದ್ಯಕೀಯ ತುರ್ತು ವೆಚ್ಚಕ್ಕೆ ಇಪಿಎಫ್ ನಿಂದ 1ಲಕ್ಷ; ಕ್ಲೇಮ್ ಮಾಡೋದು ಹೇಗೆ?

ಇ-ಪ್ಯಾನ್ ಕಾರ್ಡ್ ಪಡೆಯೋದು ಹೇಗೆ?
ಆನ್ಲೈನ್ನಲ್ಲಿ ಇ-ಪ್ಯಾನ್ ಕಾರ್ಡ್ ಪಡೆಯೋದು ತುಂಬಾ ಸುಲಭ. ಇ-ಪ್ಯಾನ್ ಕಾರ್ಡ್ ಡೌನ್ಲೋಡ್ ಮಾಡೋದು ಹೇಗೆ ಎಂಬ ಮಾಹಿತಿಯನ್ನು ಈ ಕೆಳಗೆ ಹಂತ ಹಂತವಾಗಿ ನೀಡಲಾಗಿದೆ.
ಹಂತ1: www.onlineservices.nsdl.com/paam/requestAndDownloadEPAN.html ಈ ಪೋರ್ಟಲ್ಗೆ ಭೇಟಿ ನೀಡಿ.
ಹಂತ 2: ‘Apply for PAN’ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ. ಆ ಬಳಿಕ ಮಾಹಿತಿಗಳನ್ನು ಭರ್ತಿ ಮಾಡಿ.
ಹಂತ 3: Captcha ನಮೂದಿಸಿ, ಆ ಬಳಿಕ ‘Submit’ಮೇಲೆ ಕ್ಲಿಕ್ ಮಾಡಿ.
ಹಂತ 4: ಈಗ ನಿಮಗೆ ಭರ್ತಿ ಮಾಡಿದ ಮಾಹಿತಿಗಳನ್ನು ಮರುಪರಿಶೀಲಿಸಲು ಆಯ್ಕೆ ನೀಡಲಾಗಿದೆ. ಭರ್ತಿ ಮಾಡಿದ ಮಾಹಿತಿಗಳನ್ನು ಮರುಪರಿಶೀಲಿಸಿದ ಬಳಿಕ ‘Generate OTP’ ಮೇಲೆ ಕ್ಲಿಕ್ ಮಾಡಿ.
ಹಂತ 5: ಈಗ ನಿಮ್ಮ ಮೊಬೈಲಿಗೆ ಒಟಿಪಿ (OTP) ಬರುತ್ತದೆ. ಅದನ್ನು ನಮೂದಿಸಿ.
ಹಂತ 6: ‘Paid e-PAN Download Facility’ ಮೇಲೆ ಕ್ಲಿಕ್ ಮಾಡಿ.
ಹಂತ 7: ಪಾವತಿ ವಿಧಾನ ಆಯ್ಕೆ ಮಾಡಿ. 9ರೂ. ಪಾವತಿಸಿ.
ಹಂತ 8:  ಪಾವತಿ ಬಳಿಕ ‘Continue’ಆಯ್ಕೆ ಮೇಲೆ ಕ್ಲಿಕ್ ಮಾಡಿ.
ಹಂತ 9: ಆನ್ಲೈನ್ ಪ್ಯಾನ್  ಕಾರ್ಡ್ ಪಾವತಿ ರಸೀದಿಯನ್ನು ಡೌನ್ಲೋಡ್ ಮಾಡಿ.
ಹಂತ 10: ಈಗ ಇ-ಪ್ಯಾನ್ ಕಾರ್ಡ್ ನಿಮ್ಮ ಮೊಬೈಲ್ ಅಥವಾ ಪಿಸಿಯಲ್ಲಿ ಅಟೋಮ್ಯಾಟಿಕ್ ಆಗಿ ಡೌನ್ಲೋಡ್ ಆಗುತ್ತದೆ. 

ಇಪಿಎಫ್ ನಾಮಿನಿ ಬದಲಾಯಿಸ್ಬೇಕಾ? ಈಗ ಈ ಪ್ರಕ್ರಿಯೆ ಬಹಳ ಸುಲಭ

ಡೌನ್ ಲೋಡ್ ಮಾಡಿದ ಇ-ಪ್ಯಾನ್ ಕಾರ್ಡ್ ಪಿಡಿಎಫ್ ಮಾದರಿಯಲ್ಲಿದ್ದು, ಪಾಸ್ ವರ್ಡ್ನಿಂದ ಸುರಕ್ಷಿತವಾಗಿರುತ್ತದೆ. ಇದನ್ನು ತೆರೆಯಲು ಜನ್ಮದಿನಾಂಕ ನಮೂದಿಸಬೇಕು. ಜನ್ಮದಿನಾಂಕವನ್ನು ಪಾಸ್ವರ್ಡ್ ಆಗಿ ನೀಡಲಾಗಿರುತ್ತದೆ. 
ಈ ಮೇಲೆ ವಿವರಿಸಲಾಗಿರೋ ಹಂತಗಳನ್ನು ಅನುಸರಿಸೋ ಮೂಲಕ ನೀವು ನಿಮ್ಮ ಇ-ಪ್ಯಾನ್ ಕಾರ್ಡ್ ಡೌನ್ಲೋಡ್ ಮಾಡಿಕೊಳ್ಳಬಹುದು. 

Follow Us:
Download App:
  • android
  • ios