Asianet Suvarna News Asianet Suvarna News

RBI Card Data Storage Norms:ಜ.1ರಿಂದ ಗ್ರಾಹಕರ ಕಾರ್ಡ್ ಮಾಹಿತಿ ಸಂಗ್ರಹಿಸುವಂತಿಲ್ಲ; ಇನ್ನೂ ಸಿದ್ಧಗೊಳ್ಳದ ವ್ಯಾಪಾರಿಗಳು!

*ಇ-ಕಾಮರ್ಸ್ ಸಂಸ್ಥೆಗಳು ಗ್ರಾಹಕರ ಕ್ರೆಡಿಟ್/ ಡೆಬಿಟ್ ಕಾರ್ಡ್ಗಳ ಮಾಹಿತಿಯನ್ನು ಜ.1ರಿಂದ ಸಂಗ್ರಹಿಸುವಂತಿಲ್ಲ
*RBI ನೀಡಿರೋ ಗಡುವಿನೊಳಗೆ ನಿಯಮ ಅನುಷ್ಠಾನಕ್ಕೆ ಹೆಣಗಾಡುತ್ತಿರೋ ಕೆಲವು ಬ್ಯಾಂಕುಗಳು, ಇ-ಕಾಮರ್ಸ್ ಸಂಸ್ಥೆಗಳು
*ಗಡುವು ವಿಸ್ತರಿಸುವಂತೆ ಆರ್ ಬಿಐ ಗೆ ಮನವಿ ಮಾಡೋ ಸಾಧ್ಯತೆ
*ಕೆಲವು ಇ-ಕಾಮರ್ಸ್ ಸಂಸ್ಥೆಗಳು ಈಗಾಗಲೇ ನಿಯಮ ಅನುಷ್ಠಾನಗೊಳಿಸಿವೆ
 

E commerce merchants banks are racing against time to implement RBI mandate on card storage norms anu
Author
Bangalore, First Published Dec 14, 2021, 7:03 PM IST

ಮುಂಬೈ (ಡಿ.14): ಗ್ರಾಹಕರ  ಕಾರ್ಡ್ ಮಾಹಿತಿ ಸಂಗ್ರಹಕ್ಕೆ ಸಂಬಂಧಿಸಿ  ನಿಯಮಗಳ ಅನುಷ್ಠಾನಕ್ಕೆ ಆರ್ ಬಿಐ (RBI)ನೀಡಿರೋ ಗಡುವಿನ ಕುರಿತು  ಇ-ಕಾಮರ್ಸ್ ವ್ಯಾಪಾರಿಗಳು (E-commerce merchants)ಹಾಗೂ ಬ್ಯಾಂಕ್ ಗಳು(Banks) ವಿರೋಧ ವ್ಯಕ್ತಪಡಿಸಿವೆ. ನಿಯಮಗಳ ಅನುಸರಣೆಗೆ ವಹಿವಾಟಿನ ಸರಪಳಿಯಲ್ಲಿರೋ(Transaction chains) ವಿವಿಧ ಘಟಕಗಳ ಸನ್ನದ್ಧತೆಯ ಅಗತ್ಯವಿರೋ ಕಾರಣ ಕೆಲವು ಇ-ಕಾಮರ್ಸ್(e-commerce) ವ್ಯಾಪಾರಿಗಳಿಗೆ(merchants) ಆರ್ ಬಿಐ (RBI) ವಿಧಿಸಿರೋ ಗಡುವಿನೊಳಗೆ ನಿಯಮಗಳನ್ನು ಅನುಷ್ಠಾನ ಮಾಡೋದು ಸವಾಲಿನ ಕೆಲಸವಾಗಿ ಪರಿಣಮಿಸಿದೆ. ಜನವರಿ 1ರಿಂದ ವ್ಯಾಪಾರಿಗಳು ಗ್ರಾಹಕರ ಕ್ರೆಡಿಟ್ (Credit)ಅಥವಾ ಡೆಬಿಟ್ ಕಾರ್ಡ್(Debit card) ಸಂಖ್ಯೆಯನ್ನು ತಮ್ಮ ವ್ಯವಸ್ಥೆಯಲ್ಲಿ ಸಂಗ್ರಹಿಸಿಡುವಂತಿಲ್ಲ ಎಂದು ಆರ್ ಬಿಐ (RBI) ಆದೇಶಿಸಿದೆ. 

ಇ-ಕಾಮರ್ಸ್ ಕಂಪನಿಗಳು(E-commerce companies) ಈ ಗಡುವನ್ನು ವಿಸ್ತರಿಸುವಂತೆ ಆರ್ ಬಿಐಗೆ ಮನವಿ ಮಾಡೋ ಸಾಧ್ಯತೆಯಿದೆ ಎಂದು ಕೆಲವು ಮೂಲಗಳು ತಿಳಿಸಿವೆ. ಆದ್ರೆ ಆರ್ ಬಿಐ ಮಾತ್ರ ಈ ವಿಷಯದಲ್ಲಿ ತನ್ನ ಪಟ್ಟು ಬಿಡುತ್ತಿಲ್ಲ, ಹೀಗಾಗಿ ಗಡುವು ವಿಸ್ತರಿಸೋದು ಸದ್ಯದ ಮಟ್ಟಿಗೆ ಅಸಾಧ್ಯವೆಂದೇ ಹೇಳಬಹುದು. ಅನೇಕ ವ್ಯಾಪಾರಿಗಳು ಈಗಾಗಲೇ ಈ ನಿಯಮ ಅನುಷ್ಠಾನಕ್ಕೆ ಮುಂದಾಗಿದ್ದಾರೆ. ಇದೇ ಕಾರಣಕ್ಕೆ ಕೆಲವು ಆನ್ಲೈನ್ ಶಾಪಿಂಗ್ ತಾಣಗಳಲ್ಲಿ ಪಾವತಿ ಸಮಯದಲ್ಲಿ ನೀವು ಕಾರ್ಡ್ ಮಾಹಿತಿಗಳನ್ನು ಸುರಕ್ಷಿತ ವಿಧಾನದಲ್ಲಿ ಸಂಗ್ರಹಿಸಿಡಲು ಬಯಸುತ್ತೀರಾ ಎಂಬ ಆಯ್ಕೆಯನ್ನು ನೀಡಲಾಗುತ್ತಿದೆ. ಈ ಆಯ್ಕೆ ನೀಡುತ್ತಿರೋ ಇ-ಕಾಮರ್ಸ್ ವ್ಯಾಪಾರಿಗಳು ಈಗಾಗಲೇ ಆರ್ ಬಿಐ ನಿಯಮ ಪಾಲಿಸಲು ಪ್ರಾರಂಭಿಸಿದ್ದಾರೆ. 

Cryptocurrency Bill: ಸಚಿವ ಸಂಪುಟದ ಅಂಗಳದಲ್ಲಿ ಕ್ರಿಪ್ಟೋಕರೆನ್ಸಿ ನಿಯಂತ್ರಣ ಮಸೂದೆ!

ಆರ್ ಬಿಐ ಇ ನಿಯಮ ರೂಪಿಸಲು ಕಾರಣವೇನು?
ಪ್ರಸ್ತುತ ನೀವು ಒಂದು ಇ-ಕಾಮರ್ಸ್ ತಾಣದಲ್ಲಿ ಒಮ್ಮೆ ಶಾಪಿಂಗ್ (Shopping) ಮಾಡಿದ್ರೆ ಇನ್ನೊಮ್ಮೆ ಅದೇ ತಾಣದಲ್ಲಿ ಖರೀದಿ ಮಾಡೋವಾಗ ಪಾವತಿ ಸಮಯದಲ್ಲಿ ನಿಮ್ಮ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಮಾಹಿತಿಗಳನ್ನು ನೀಡಬೇಕಾಗಿಲ್ಲ. ಅಂದ್ರೆ ಇ-ಕಾಮರ್ಸ್ ಕಂಪನಿ ನಿಮ್ಮ ಕಾರ್ಡ್ ಮಾಹಿತಿಗಳನ್ನು ಸಂಗ್ರಹಿಸಿಟ್ಟುಕೊಂಡಿರುತ್ತದೆ. ಹೀಗಾಗಿ ನೀವು ಶಾಪಿಂಗ್ ಮಾಡೋವಾಗ ಪದೇಪದೆ ಕಾರ್ಡ್ ಮಾಹಿತಿಗಳನ್ನು ದಾಖಲಿಸಬೇಕಾದ ಅಗತ್ಯವಿಲ್ಲ. ಆದ್ರೆ ಈ ರೀತಿ ಕಾರ್ಡ್ ಮಾಹಿತಿಗಳು ಇ-ಕಾಮರ್ಸ್ ತಾಣಗಳಲ್ಲಿ ಸಂಗ್ರಹಿಸಿಟ್ಟುಕೊಂಡ್ರೆ ಮುಂದೆ ಇದ್ರಿಂದ ಆನ್ಲೈನ್ ವಂಚನೆ (Online frauds) ಪ್ರಕರಣಗಳು ಹೆಚ್ಚಾಗಬಹುದು. ಈ ಮಾಹಿತಿಗಳನ್ನು ಕಳವು ಮಾಡಿ ಗ್ರಾಹಕರ ಖಾತೆಯಿಂದ ಆನ್ಲೈನ್ ವಂಚಕರು ಹಣ ದೋಚಬಹುದು ಎಂಬುದು ಆರ್ ಬಿಐ ಕಾಳಜಿ. ಇದೇ ಕಾರಣಕ್ಕೆ ಆನ್ ಲೈನ್ ವ್ಯವಹಾರಗಳನ್ನು ಇನ್ನಷ್ಟು ಸುರಕ್ಷಿತವಾಗಿಡಲು ಆರ್ ಬಿಐ ಇ-ಕಾಮರ್ಸ್ ವ್ಯಾಪಾರಿಗಳಿಗೆ ಗ್ರಾಹಕರ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಮಾಹಿತಿಗಳನ್ನು ಸಂಗ್ರಹಿಸದಂತೆ ಆದೇಶ ನೀಡಿದೆ. 2021ರ ಜುಲೈಯಿಂದಲೇ ಈ ಆದೇಶ ಅನುಷ್ಠಾನಕ್ಕೆ ಸೂಚಿಸಿತ್ತು. ಆದ್ರೆ ಇ-ಕಾಮರ್ಸ್ ಸಂಸ್ಥೆಗಳು ಹಾಗೂ ಬ್ಯಾಂಕ್ ಗಳು ಈ ಪ್ರಕ್ರಿಯೆಗೆ ಸಿದ್ಧಗೊಳ್ಳದ ಕಾರಣ ಈ ಗಡುವನ್ನು 2022ರ ಜನವರಿ1ರ ತನಕ ವಿಸ್ತರಿಸಿತ್ತು. 

Netflix India cuts prices:ಇಂದಿನಿಂದ ನೆಟ್ ಫ್ಲಿಕ್ಸ್ ಸಬ್ ಸ್ಕ್ರಿಪ್ಷನ್ ದರದಲ್ಲಿ ಭಾರೀ ಇಳಿಕೆ

ಹೊಸ ಸೇವೆ ಪರಿಚಯಿಸಲು ಸಿದ್ಧತೆ?
ಪಾವತಿ ಸೇವಾ ಸಂಸ್ಥೆಗಳು ಈಗಾಗಲೇ ಹೊಸ ಸೇವೆಯೊಂದನ್ನು ಪರಿಚಯಿಸಲು ಸಿದ್ಧತೆ ಮಾಡಿಕೊಂಡಿವೆ. ಈ ಸೇವೆಯಡಿಯಲ್ಲಿ ವ್ಯಾಪಾರಿ ಬ್ಯಾಂಕ್ಗಳ ಬಳಿ ಗ್ರಾಹಕರ ಕಾರ್ಡ್ ಮಾಹಿತಿಗಳನ್ನು ಸಂಗ್ರಹಿಸುವಂತೆ ಮನವಿ ಮಾಡಿ, ಕಾರ್ಡ್ ಪ್ರತಿನಿಧಿಸೋ ಟೋಕನ್ ಪಡೆಯುತ್ತಾನೆ. ಈ ಟೋಕನ್ ಮೂಲಕ ವ್ಯಾಪಾರಿಯು ಕಾರ್ಡ್ ಸಂಖ್ಯೆಯನ್ನು ಆನ್ಲೈನ್ ತಾಣದಲ್ಲಿ ಒಮ್ಮೆ ದಾಖಲಿಸಿದ ಬಳಿಕ ಮತ್ತೆ ಮತ್ತೆ ದಾಖಲಿಸೋ ಅವಶ್ಯಕತೆಯಿಲ್ಲದೆ ಪಾವತಿ ಮಾಡಲು ಗ್ರಾಹಕನಿಗೆ ಅವಕಾಶ ಕಲ್ಪಿಸಿಕೊಡಲು ಸಾಧ್ಯವಾಗುತ್ತದೆ. ಆದ್ರೆ ತಜ್ಞರ ಪ್ರಕಾರ ಈ ಪ್ರಕ್ರಿಯೆಯಲ್ಲಿ ಒಟ್ಟು ನಾಲ್ಕು ಸಂಸ್ಥೆಗಳು ತೊಡಗಿಕೊಳ್ಳಬೇಕಾಗುತ್ತದೆ- ವ್ಯಾಪಾರಿ ಹೊಂದಿರೋ ಬ್ಯಾಂಕ್, ಪಾವತಿ ನೆಟ್ ವರ್ಕ್ (ಮಾಸ್ಟರ್ ಕಾರ್ಡ್/ರುಪೇ/ವೀಸಾ), ಪಾವತಿ ಗೇಟ್ ವೇ (payment gateway) ಹಾಗೂ ಕಾರ್ಡ್ ವಿತರಿಸೋ ಬ್ಯಾಂಕ್. ಪಾವತಿ ಸೇವಾ ಸಂಸ್ಥೆ ರೇಝರ್ಪೇಯ್ (Razorpay) ಈಗಾಗಲೇ  ರೇಝರ್ಪೇಯ್ ಟೋಕನ್ ಎಚ್ ಕ್ಯು (Razorpay TokenHQ) ಬಿಡುಗಡೆ ಮಾಡಿದ್ದು, ಇದು ಮಲ್ಟಿ ನೆಟ್ ವರ್ಕ್ ಕಾರ್ಡ್ ಆನ್ ಫೈಲ್ (CoF) ಟೋಕನ್ ವ್ಯವಸ್ಥೆಯನ್ನು ಹೊಂದಿದೆ. ಈ ಯೋಜನೆಯು ಈಗಾಗಲೇ ಪಾವತಿ ನೆಟ್ ವರ್ಕ್ ಗಳಾದ ವೀಸಾ(Visa), ಮಾಸ್ಟರ್ ಕಾರ್ಡ್(Mastercard), ರುಪೇ (RuPay)ಜೊತೆ ಈಗಾಗಲೇ ಒಪ್ಪಂದ ಮಾಡಿಕೊಂಡಿವೆ. ಅಲ್ಲದೆ, ಅನೇಕ ಬ್ಯಾಂಕ್ ಗಳನ್ನು ಕೂಡ ಪಾಲುದಾರರನ್ನಾಗಿ ಮಾಡಿಕೊಂಡಿವೆ. 
 

Follow Us:
Download App:
  • android
  • ios