Netflix India cuts prices:ಇಂದಿನಿಂದ ನೆಟ್ ಫ್ಲಿಕ್ಸ್ ಸಬ್ ಸ್ಕ್ರಿಪ್ಷನ್ ದರದಲ್ಲಿ ಭಾರೀ ಇಳಿಕೆ

*ಒಒಟಿ ಫ್ಲ್ಯಾಟ್ ಫಾರ್ಮ್ ನಲ್ಲಿ ಹೆಚ್ಚಿದ ಸ್ಪರ್ಧೆ ಕಾರಣಕ್ಕೆ ಈ ನಿರ್ಧಾರ ಕೈಗೊಂಡ ನೆಟ್ ಫ್ಲಿಕ್ಸ್ 
*ಜನಪ್ರಿಯ ಮೊಬೈಲ್ ಪ್ಲ್ಯಾನ್ ದರ ಮಾಸಿಕ 199ರೂ.ನಿಂದ 149ರೂ.ಗೆ ಇಳಿಕೆ 
*ಈ ದರ ಇಳಿಕೆ ಯೋಜನೆಗೆ 'ಹ್ಯಾಪಿ ನ್ಯೂ ಪ್ರೈಸರ್ಸ್' ಎಂದು ಹೆಸರಿಟ್ಟಿರೋ ನೆಟ್ ಫ್ಲಿಕ್ಸ್  

Netflix India cuts prices across its streaming plans from December 14th anu

ನವದೆಹಲಿ (ಡಿ.14): ಇತ್ತೀಚಿನ ದಿನಗಳಲ್ಲಿ ಒಒಟಿ ಫ್ಲ್ಯಾಟ್ ಫಾರ್ಮ್ ನಲ್ಲಿ ಸ್ಪರ್ಧೆ ಹೆಚ್ಚಿರೋ ಹಿನ್ನೆಲೆಯಲ್ಲಿ ನೆಟ್ ಫ್ಲಿಕ್ಸ್ ಇಂಡಿಯಾ (Netflix India) ಎಲ್ಲ ಚಂದಾದಾರಿಕೆ ಯೋಜನೆಗಳ (subscription plans) ದರ ಇಳಿಕೆ ಮಾಡಿದೆ. ಹೊಸ ದರವು ಇಂದಿನಿಂದ (ಡಿ.14) ಅನ್ವಯಿಸಲಿದೆ.  ಡಿಸ್ನಿ+ ಹಾಟ್ ಸ್ಟಾರ್ (Disney+Hotstar),ಅಮೆಜಾನ್ ಪ್ರೈಮ್(Amazon Prime) ಹಾಗೂ ಇತರ ಭಾರತೀಯ ಸಬ್ ಸ್ಕ್ರಿಪ್ಷನ್ ವಿಡಿಯೋ ಆನ್ ಡಿಮ್ಯಾಂಡ್ (SVOD)ಸಂಸ್ಥೆಗಳಿಂದ ತೀವ್ರ ಸ್ಪರ್ಧೆ ಎದುರಾಗಿರೋ ಕಾರಣ ತನ್ನ ಬಳಕೆದಾರರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ನೆಟ್ ಫ್ಲಿಕ್ಸ್ ಇಂಡಿಯಾ ಈ ನಿರ್ಧಾರ ಕೈಗೊಂಡಿದೆ.

ನೆಟ್ ಫ್ಲಿಕ್ಸ್ ಇಂಡಿಯಾ ತನ್ನ ಜನಪ್ರಿಯ ಮೊಬೈಲ್ ಪ್ಲ್ಯಾನ್ ದರವನ್ನು ಮಾಸಿಕ 199ರೂ.ನಿಂದ 149ರೂ.ಗೆ ಇಳಿಕೆ ಮಾಡಿದೆ. ಇನ್ನುಮುಂದೆ ಈ ಸಂಸ್ಥೆಯ ಬೇಸಿಕ್ ಪ್ಲ್ಯಾನ್ ( basic plan) ಮಾಸಿಕ 199ರೂ.ಗೆ ದೊರೆಯಲಿದೆ. ಈ ಹಿಂದೆ ಬೇಸಿಕ್ ಪ್ಲ್ಯಾನ್ ಮಾಸಿಕ ದರ 499ರೂ. ಆಗಿತ್ತು. ಇನ್ನು ಸ್ಟ್ಯಾಂಡರ್ಡ್ ಪ್ಲ್ಯಾನ್ ( standard plan) ದರವನ್ನು ಮಾಸಿಕ(Monthly) 649ರೂ.ನಿಂದ 499ರೂ.ಗೆ ಇಳಿಕೆ ಮಾಡಲಾಗಿದೆ. ಪ್ರೀಮಿಯಂ ಪ್ಲ್ಯಾನ್ (Premium plan) ದರವನ್ನು ಮಾಸಿಕ 799ರೂ.ನಿಂದ 649ರೂ.ಗೆ ಇಳಿಕೆ ಮಾಡಲಾಗಿದೆ.  ನೆಟ್ ಫ್ಲಿಕ್ಸ್ ಪ್ರತಿಸ್ಪರ್ಧಿಗಳಾದ ಅಮೆಜಾನ್ ಪ್ರೈಮ್ ಮಾಸಿಕ ಪ್ಲ್ಯಾನ್ 129 ರೂ.ನಿಂದ ಪ್ರಾರಂಭವಾಗುತ್ತದೆ. ಇನ್ನು ಡಿಸ್ನಿ +ಹಾಟ್ ಸ್ಟಾರ್ ತನ್ನ ಚಂದಾದಾರರಿಗೆ ಪ್ರೀಮಿಯಂ ಸೇವೆಗಳಿಗೆ ವಾರ್ಷಿಕ 1499ರೂ. ಶುಲ್ಕ ವಿಧಿಸುತ್ತದೆ. ಇನ್ನು ಡಿಸ್ನಿ +ಹಾಟ್ ಸ್ಟಾರ್ ಮೊಬೈಲ್  ಸೇವೆಗೆ 499ರೂ. ಶುಲ್ಕವಿದೆ.

IT Returns Deadline: ಡಿ.31 ಅಂತಿಮ ಗಡುವು, ಇ-ಫೈಲಿಂಗ್ ಪೋರ್ಟಲ್ ಮೂಲಕ ಐಟಿ ರಿಟರ್ನ್ಸ್ ಸಲ್ಲಿಕೆಗೆ ಒತ್ತಾಯ

ನೆಟ್ ಫ್ಲಿಕ್ಸ್ ತನ್ನ ಹೊಸ ಯೋಜನೆಗಳನ್ನು ( new plans) 'ಹ್ಯಾಪಿ ನ್ಯೂ ಪ್ರೈಸರ್ಸ್' (Happy New Prices) ಎಂದು ಕರೆದಿದ್ದು, ಇಂದಿನಿಂದ (ಡಿಸೆಂಬರ್ 14) ಜಾರಿಗೆ ಬಂದಿವೆ. ಈ ಬಗ್ಗೆ ಮಾಹಿತಿ ನೀಡಿರೋ ನೆಟ್ ಫ್ಲಿಕ್ಸ್ ಇಂಡಿಯಾ ಕಂಟೆಂಡ್ ಉಪಾಧ್ಯಕ್ಷರಾದ ಮೋನಿಕಾ ಶೆರ್ಗಿಲ್ ' ಕಳೆದ ಮೂರು ವಾರಗಳಿಂದ ದೊಡ್ಡ ಟೈಟಲ್ ಗಳನ್ನು ಬಿಡುಗಡೆ ಮಾಡುತ್ತಿದ್ದೇವೆ. ನೆಟ್ ಫ್ಲಿಕ್ಸ್ ಕ್ಯಾಲೆಂಡರ್ ಪ್ರಕಾರ ನಾವು ದೊಡ್ಡ ಟೈಟಲ್ ಗಳ ವೆಬ್ ಸೀರೀಸ್ ಹಾಗೂ ಸಿನಿಮಾಗಳನ್ನು ನಿರಂತರವಾಗಿ ಪರಿಚಯಿಸುತ್ತಿದ್ದೇವೆ. ಈಗ ದೊಡ್ಡ ಸಂಖ್ಯೆಯಲ್ಲಿ ವೀಕ್ಷಕರನ್ನು ತಲುಪುವ ಕಂಟೆಂಟ್ ಸಿದ್ಧಗೊಂಡಿದ್ದು, ವೀಕ್ಷಕರಿಗೆ ಅದನ್ನು ತಲುಪಿಸಲು ಇದು ರೈಟ್ ಟೈಮ್' ಎಂದು ಹೇಳಿದ್ದಾರೆ. ಅಂತಾರಾಷ್ಟ್ರೀಯ ಆಕ್ಷನ್ ಸಿನಿಮಾಗಳಾದ ರೆಡ್ ನೋಟೀಸ್ (Red Notice), ದಿ ಹಾರ್ಡರ್ ದೆ ಫಾಲ್ (The Harder They Fall) ಹಾಗೂ ದಿ ಪ್ರಿನ್ಸಸ್ ಸ್ವಿಚ್ (The Princess Switch) ಜೊತೆಗೆ ಭಾರತದ ಎರಡು ಸಿನಿಮಾಗಳಾದ ರಾಮ್ ಮಧ್ವನಿ ಅವರ 'ಧಮಾಕ'(Dhamaka) ಹಾಗೂ ಮೀನಾಕ್ಷಿ ಸುಂದರೇಶ್ವರ್ ( Meenakshi Sundareshwar) ಸಿನಿಮಾಗಳನ್ನು ನವೆಂಬರ್ ನಲ್ಲಿ ನೆಟ್ ಫಿಕ್ಸ್ ಮೂಲಕ ತೆರೆಗೆ ಬರಲಿದೆ.  ಇನ್ನು ಆರ್. ಮಾಧವನ್ ಹಾಗೂ ಸುರ್ವಿನ್ ಚಾವ್ಲಾ ಅವರ 'ಡಿಕಪಲ್ಡ್' ( Decoupled) ಡಿಸೆಂಬರ್ ನಲ್ಲಿ ನೆಟ್ ಫಿಕ್ಸ್ ನಲ್ಲಿ ತೆರೆಕಾಣಲಿವೆ. 

LPG subsidy: ನಿಮ್ಮ ಅಕೌಂಟ್ ಗೆ LPG ಸಬ್ಸಿಡಿ ಕ್ರೆಡಿಟ್ ಆಗ್ತಿದ್ಯಾ?

ನೆಟ್ ಫ್ಲಿಕ್ಸ್ ಗ್ರಾಹಕಸ್ನೇಹಿ ಮಾಸಿಕ 199 ರೂ. ಪ್ಲ್ಯಾನ್ ಅನ್ನು 2019ರ ಜುಲೈನಲ್ಲಿ ಬಿಡುಗಡೆ ಮಾಡಿತ್ತು. ಇದು ನೆಟ್ ಫ್ಲಿಕ್ಸ್ ಗೆ ಸಾಕಷ್ಟು ಚಂದಾದಾರರನ್ನು ಒದಗಿಸಿತ್ತು ಕೂಡ. ನೆಟ್ ಫ್ಲಿಕ್ಸ್ ಇಂಡಿಯಾದ ಆರ್ ಒಸಿ ಫೈಲಿಂಗ್ ಪ್ರಕಾರ 2012ನೇ ಆರ್ಥಿಕ ವರ್ಷದಲ್ಲಿ ಕಂಪನಿ 1526.36 ಕೋಟಿ ರೂ. ಆದಾಯ ಗಳಿಸಿದೆ.  ಇದಕ್ಕೂ ಹಿಂದಿನ ವರ್ಷದಲ್ಲಿ  923.33 ಕೋಟಿ ರೂ. ಆದಾಯ ಗಳಿಸಿತ್ತು. ಅಂದ್ರೆ ಈ ಆರ್ಥಿಕ ಸಾಲಿನಲ್ಲಿ ಕಂಪನಿಯ ಗಳಿಕೆಯಲ್ಲಿ ಏರಿಕೆ ಕಂಡುಬಂದಿದೆ. 

Latest Videos
Follow Us:
Download App:
  • android
  • ios