ನವದೆಹಲಿ/ ಮುಂಬೈ (ಸೆ.11): ಇತ್ತೀಚೆಗಷ್ಟೇ ಫä್ಯಚರ್‌ ಗ್ರೂಪ್‌ನ ಬಿಗ್‌ ಬಜಾರ್‌ ಉದ್ದಿಮೆಯನ್ನು ಖರೀದಿ ಮಾಡಿದ್ದ ಮುಕೇಶ್‌ ಅಂಬಾನಿ ಒಡೆತನದ ರಿಲಯನ್ಸ್‌ ಕಂಪನಿ, ಇದೀಗ ತನ್ನ ಚಿಲ್ಲರೆ ಉದ್ದಿಮೆಯ 1.5 ಲಕ್ಷ ಕೋಟಿ ರು. ಮೌಲ್ಯದ ಷೇರುಗಳನ್ನು ಅಮೆರಿಕದ ದೈತ್ಯ ಇ-ಕಾಮರ್ಸ್‌ ಕಂಪನಿ ಅಮೆಜಾನ್‌ಗೆ ಮಾರಾಟ ಮಾಡಲು ಮುಂದಾಗಿದೆ ಎಂದು ತಿಳಿದುಬಂದಿದೆ.

ಬಿಗ್ ಬಜಾರನ್ನೇ ಶಾಪಿಂಗ್ ಮಾಡಿದ ರಿಲಯನ್ಸ್ ಅಂಬಾನಿ

ಈ ನಡುವೆ, ರಿಲಯನ್ಸ್‌ ರೀಟೇಲ್‌ನ 7,500 ಕೋಟಿ ರು. ಮೌಲ್ಯದ ಶೇ.1.75ರಷ್ಟುಷೇರುಗಳನ್ನು ಅಮೆರಿಕದ ಸಿಲ್ವರ್‌ ಲೇಕ್‌ ಕಂಪನಿ ಖರೀದಿಸಿದ್ದು, ಆ ಸುದ್ದಿಯಿಂದಾಗಿ ಗುರುವಾರ ಷೇರು ಮಾರುಕಟ್ಟೆಯಲ್ಲಿ ರಿಲಯನ್ಸ್‌ (ಆರ್‌ಐಎಲ್‌) ಷೇರುಗಳ ಮೌಲ್ಯ ಶೇ.8.5ರಷ್ಟುಭಾರಿ ಏರಿಕೆ ಕಂಡಿದೆ. ಅದರಿಂದಾಗಿ ರಿಲಯನ್ಸ್‌ ಇಂಡಸ್ಟ್ರೀಸ್‌ನ ಮಾರುಕಟ್ಟೆಮೌಲ್ಯ 14.66 ಲಕ್ಷ ಕೋಟಿ ರು.ಗೆ ಏರಿಕೆಯಾಗಿದೆ. ಭಾರತೀಯ ಕಂಪನಿಯೊಂದರ ಮಾರುಕಟ್ಟೆಮೌಲ್ಯ ಈ ಮಟ್ಟಮುಟ್ಟಿದ್ದು ಇದೇ ಮೊದಲು.

ಕೇವಲ ನಾಲ್ಕು ವರ್ಷದಲ್ಲಿ ಜಿಯೋ ಮೂಲಕ ಭಾರತದ ಅತಿದೊಡ್ಡ ಟೆಲಿಕಾಂ ಕಂಪನಿಯಾಗಿ ಬೆಳೆದ ರಿಲಯನ್ಸ್‌ ಇದೀಗ ಚಿಲ್ಲರೆ ವ್ಯಾಪಾರ ಕ್ಷೇತ್ರದಲ್ಲೂ ದೈತ್ಯ ಕಂಪನಿಯಾಗಿ ಹೊರಹೊಮ್ಮಲು ದಾಂಗುಡಿಯಿಡುತ್ತಿದೆ. ಹೀಗಾಗಿ ಆರ್‌ಐಎಲ್‌ನ ಅಧೀನದಲ್ಲಿರುವ ರಿಲಯನ್ಸ್‌ ರೀಟೇಲ್‌ ಕಂಪನಿಯ ಶೇ.40ರಷ್ಟುಷೇರುಗಳನ್ನು ಮಾರಾಟ ಮಾಡಲು ಮುಂದಾಗಿದೆ. ಈಗಾಗಲೇ ಫೇಸ್‌ಬುಕ್‌ ಮತ್ತು ಗೂಗಲ್‌ ಕಂಪನಿಗಳು ರಿಲಯನ್ಸ್‌ ರೀಟೇಲ್‌ನಲ್ಲಿ ಸುಮಾರು 1.5 ಲಕ್ಷ ಕೋಟಿ ರು. ಹೂಡಿಕೆ ಮಾಡಿವೆ. ಈಗ ಅಮೆಜಾನ್‌ ಕಂಪನಿ ಕೂಡ 1.5 ಲಕ್ಷ ಕೋಟಿ ರು. ಹೂಡಿಕೆ ಮಾಡಲು ಮುಂದಾಗಿದ್ದು, ಈ ಕುರಿತು ರಿಲಯನ್ಸ್‌ ಹಾಗೂ ಅಮೆಜಾನ್‌ ನಡುವೆ ಮಾತುಕತೆ ನಡೆಯುತ್ತಿದೆ ಎಂದು ತಿಳಿದುಬಂದಿದೆ.

ರಿಲಯನ್ಸ್‌ ಡಿಜಿಟಲ್‌ನಲ್ಲಿ ಸ್ಯಾಮ್ಸಂಗ್ ಟ್ಯಾಬಬ್ ಲಾಂಚ್