Asianet Suvarna News Asianet Suvarna News

Gold Rate: ಬಂಗಾರ ಖರೀದಿಗೆ ಶುಭದಿನ, ಬೆಂಗಳೂರಿನಲ್ಲಿ ಚಿನ್ನದ ದರ ಇಳಿಕೆ

ಶುಕ್ರವಾರ ಚಿನ್ನ ಖರೀದಿಸಲು ಹೊರಟವರ ಪಾಲಿಗೆ ಶುಭಸುದ್ದಿ.ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿಇಂದು (ಡಿ.3) ಚಿನ್ನದ ದರದಲ್ಲಿಇಳಿಕೆಯಾಗಿದೆ.   

Drop in gold price at Bangalore major cities of India Dec 3 2021 anu
Author
Bangalore, First Published Dec 3, 2021, 11:00 AM IST
  • Facebook
  • Twitter
  • Whatsapp

ಬೆಂಗಳೂರು (ಡಿ.3): ಮಗಳ ಮದುವೆಗೆ ಚಿನ್ನ (Gold) ಖರೀದಿಸಬೇಕು, ಪತ್ನಿಗೆ ನೆಕ್ಲೆಸ್ (Necklace) ಗಿಫ್ಟ್  (Gift) ಮಾಡ್ಬೇಕು, ಸ್ನೇಹಿತೆಗೆ ಕಿವಿಯೋಲೆ ಕೊಳ್ಳಬೇಕು....ಹೀಗೆ ಚಿನ್ನ ಖರೀದಿಗೆ ನೆಪವಿಟ್ಟುಕೊಂಡು ದರ ಇಳಿಕೆಯಾಗುತ್ತ ಎಂದು ಕಾಯುತ್ತ ಇರುತ್ತೇವೆ. ಪ್ರೀತಿಪಾತ್ರರಿಗೆ ಚಿನ್ನದೊಡವೆಗಿಂತ ಉತ್ತಮ ಉಡುಗೊರೆ ಬೇರಿಲ್ಲ ಎಂಬುದು ಎಲ್ಲರ ಅಭಿಪ್ರಾಯ. ಆದ್ರೆ ಕೊರೋನಾ (Corona)  ಕಾಲಿಟ್ಟ ಬಳಿಕ ಬದುಕು ಹಳಿತಪ್ಪಿದಂತೆ ಚಿನ್ನದ ದರದಲ್ಲಿಯೂ ಗಮನಾರ್ಹ ಬದಲಾವಣೆಯಾಯ್ತು. ಚಿನ್ನ ಖರೀದಿಸೋದೇ ಬೇಡಪ್ಪ ಎಂಬಷ್ಟು ದುಬಾರಿಯಾಯ್ತು. ಆದ್ರೆ ಕೆಲವು ತಿಂಗಳಿಂದ ಚಿನ್ನದ ದರ ಇಳಿಕೆಯತ್ತ ಮುಖ ಮಾಡಿದೆ. ಆದ್ರೆ ಜಗತ್ತಿನಲ್ಲಿ ಒಮಿಕ್ರಾನ್ (Omicron) ವೈರಸ್ (Virus)  ಹಾವಳಿ ಹೆಚ್ಚುತ್ತಿರೋ ಹಿನ್ನೆಲೆಯಲ್ಲಿ ಚಿನ್ನದ ದರ ಏರಿಕೆಯಾಗಬಹುದಾ ಎಂಬ ಅನುಮಾನವೂ ಕಾಡುತ್ತಿದೆ. ಅದೇನೇ ಇರಲಿ, ಇಂದು (ಡಿ.3) ಮಾತ್ರ ಬಂಗಾರಪ್ರಿಯರ ಪಾಲಿಗೆ ಶುಭಸುದ್ದಿಯಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ (Bangalore) ನಿನ್ನೆ(ಡಿ.2) ಯಾವುದೇ ಬದಲಾವಣೆ ದಾಖಲಿಸದ ಚಿನ್ನದ (Gold) ದರ (Price)ಇಂದು (ಡಿ.3) ಇಳಿಕೆಯಾಗಿದೆ. ಆದ್ರೆ ಕಳೆದ ಕೆಲವು ದಿನಗಳಿಂದ ಇಳಿಕೆಯಾಗಿದ್ದ ಬೆಳ್ಳಿ(Silver) ದರದಲ್ಲಿ ಇಂದು ಕೊಂಚ ಏರಿಕೆ ಕಂಡುಬಂದಿದೆ. ದೇಶದ ಪ್ರಮುಖ ನಗರಗಳಲ್ಲಿ22 ಕ್ಯಾರಟ್(Carrat) 10ಗ್ರಾಂ ಚಿನ್ನದ ಬೆಲೆಯಲ್ಲಿ 500ರೂ. ಇಳಿಕೆಯಾಗಿದೆ. ಹೀಗಾಗಿ ಬಂಗಾರದ ಒಡವೆ (Ornaments) ಖರೀದಿಸೋರ ಪಾಲಿಗೆ ಇಂದು ಶುಭ ಶುಕ್ರವಾರ. ದೇಶದ ಪ್ರಮುಖ ನಗರಗಳಲ್ಲಿಇಂದು (ಡಿ.3) ಚಿನ್ನ ಹಾಗೂ ಬೆಳ್ಳಿ ದರ ಎಷ್ಟಿದೆ?

ಬೆಂಗಳೂರಿನಲ್ಲಿ( Bangalore) ದರ ಎಷ್ಟಿದೆ?
ಬೆಂಗಳೂರಿನಲ್ಲಿ ಚಿನ್ನದ ಬೆಲೆಯಲ್ಲಿಇಂದು ನಿನ್ನೆಗಿಂತ 500ರೂ.ಇಳಿಕೆಯಾಗಿದೆ. 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ 44,100ರೂ.ಇದ್ದು, ನಿನ್ನೆ 44,600ರೂ.ಇತ್ತು. 24 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ ನಿನ್ನೆ 48,650 ರೂ.ಇದ್ದು,ಇಂದು 540ರೂ.ಇಳಿಕೆಯಾಗಿ 48,110ರೂ.ಇದೆ. ಇನ್ನು ಕಳೆದ ಕೆಲವು ದಿನಗಳಿಂದ ಇಳಿಕೆಯತ್ತ ಮುಖ ಮಾಡಿದ್ದ ಬೆಳ್ಳಿ ದರದಲ್ಲಿಇಂದು 500ರೂ. ಏರಿಕೆ ಕಂಡುಬಂದಿದೆ. ಒಂದು ಕೆ.ಜಿ.ಬೆಳ್ಳಿಗೆ ನಿನ್ನೆ 60,700ರೂ.ಇತ್ತು.ಆದ್ರೆ ಇಂದು 61,200ರೂ.ಗೆ ಏರಿಕೆಯಾಗಿದೆ.

ಈಗ ಮನೆಯಲ್ಲೇ ಕುಳಿತು PFಹಣ ವಿತ್‌ಡ್ರಾ ಮಾಡಿ, ಹೀಗಿದೆ ಪ್ರಕ್ರಿಯೆ

ದೆಹಲಿಯಲ್ಲಿ (Delhi) ಹೇಗಿದೆ?
ದೆಹಲಿಯಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ ಇಂದು 46,250ರೂ.ಆಗಿದ್ದು, ನಿನ್ನೆ 46,750ರೂ. ಇತ್ತು. ಅಂದ್ರೆ ನಿನ್ನೆಗಿಂತ ಇಂದು 500ರೂ.ಇಳಿಕೆಯಾಗಿದೆ. 24 ಕ್ಯಾರಟ್ 10 ಗ್ರಾಂ ಚಿನ್ನದ ದರದಲ್ಲಿ ಕೂಡ 550ರೂ.ಇಳಿಕೆಯಾಗಿದೆ. ನಿನ್ನೆ 51,000 ರೂ. ಇತ್ತು,ಇಂದು 50,540ರೂ. ಆಗಿದೆ. ನಿನ್ನೆಇಳಿಕೆ ಕಂಡಿದ್ದಬೆಳ್ಳಿ ದರದಲ್ಲಿಇಂದು 500ರೂ.ಏರಿಕೆಯಾಗಿದೆ. ನಿನ್ನೆಒಂದು ಕೆ.ಜಿ.ಬೆಳ್ಳಿಗೆ 60,700ರೂ.ಇತ್ತು.ಆದ್ರೆ ಇಂದು 61,200ರೂ. ಆಗಿದೆ.

ಮುಂಬೈನಲ್ಲಿ(Mumbai) ಎಷ್ಟಿದೆ ದರ?
ಮುಂಬೈನಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ ನಿನ್ನೆ 46,580ರೂ.ಇದ್ದು,ಇಂದು 500ರೂ.ಇಳಿಕೆ ಕಂಡು 46,080ರೂ.ಆಗಿದೆ. 24 ಕ್ಯಾರಟ್ 10 ಗ್ರಾಂ ಚಿನ್ನದ ದರ ನಿನ್ನೆ47,580ರೂ.ಇತ್ತು,ಇಂದು 500ರೂ. ಇಳಿಕೆಯಾಗಿ 47,080ರೂ. ಆಗಿದೆ. ಒಂದು ಕೆ.ಜಿ. ಬೆಳ್ಳಿಗೆ ನಿನ್ನೆ 60,700ರೂ.ಇತ್ತು.ಆದ್ರೆ ಇಂದು 61,200ರೂ. ಆಗಿದೆ. ಅಂದ್ರೆ ನಿನ್ನೆಗಿಂತ ಇಂದು 500 ರೂ.ಏರಿಕೆಯಾಗಿದೆ.

ಕಚ್ಚಾವಸ್ತುಗಳ ದರ ಏರಿಕೆ : ಸಿಮೆಂಟ್‌ ಬೆಲೆ ಹೆಚ್ಚಳ!

ಚೆನ್ನೈಯಲ್ಲಿ(Chennai) ದರ ಹೀಗಿದೆ
ಚೆನ್ನೈಯಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ ಇಂದು 44,170ರೂ.ಇದೆ. ನಿನ್ನೆ 44,670ರೂ.ಇತ್ತು. ಅಂದ್ರೆ ನಿನ್ನೆಗಿಂತ ಇಂದು 500ರೂ.ಇಳಿಕೆಯಾಗಿದೆ. 24 ಕ್ಯಾರಟ್ 10 ಗ್ರಾಂ ಚಿನ್ನದ ದರದಲ್ಲಿ ಕೂಡ ನಿನ್ನೆಗಿಂತ ಇಂದು 540ರೂ.ಇಳಿಕೆಯಾಗಿದೆ. ನಿನ್ನೆ 48,730 ರೂ.ಇತ್ತು,ಇಂದು 48,190 ರೂ.ಇದೆ. ಒಂದು ಕೆ.ಜಿ. ಬೆಳ್ಳಿಗೆ ನಿನ್ನೆ 65,000ರೂ.ಇದ್ದು, ಇದು ಯಾವುದೇ ಬದಲಾವಣೆ ದಾಖಲಿಸಿಲ್ಲ.

"

 

Follow Us:
Download App:
  • android
  • ios