ಆಧಾರ್ ಕಾರ್ಡ್ ನಲ್ಲಿರುವ ನಿಮ್ಮ ಫೋಟೋ ಚೆನ್ನಾಗಿಲ್ವ? ಬದಲಾಯಿಸಲು ಹೀಗೆ ಮಾಡಿ

ಆಧಾರ್ ಕಾರ್ಡ್ ನಲ್ಲಿರುವ ಫೋಟೋ ಚೆನ್ನಾಗಿ ಬಂದಿಲ್ಲ ಎಂದು ಕೆಲವರು ಬೇಸರಿಸಿಕೊಳ್ಳುತ್ತಾರೆ. ಆದರೆ, ಆಧಾರ್ ಕಾರ್ಡ್ ನಲ್ಲಿರುವ ಫೋಟೋ ಬದಲಾಯಿಸಲು ಸಾಧ್ಯವಿದೆ. ಆದರೆ, ಈ ಪ್ರಕ್ರಿಯೆಯನ್ನು ಆನ್ ಲೈನ್ ನಲ್ಲಿ ಮಾಡಲು ಸಾಧ್ಯವಿಲ್ಲ. ನೀವು ಸಮೀಪದ ಆಧಾರ್ ಸೇವಾ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ಮಾಡಬಹುದು.

Donot Like Your Picture On Aadhaar Check How To Replace Photo On Aadhaar Card anu

Business Desk:ಆಧಾರ್ 12 ಅಂಕೆಗಳ ವಿಶಿಷ್ಟ ಗುರುತಿನ ಚೀಟಿಯಾಗಿದೆ. ಭಾರತದ ವಿಶಿಷ್ಟ ಗುರುತು ಪ್ರಾಧಿಕಾರ (ಯುಐಡಿಎಐ) ಆಧಾರ್ ಕಾರ್ಡ್ ಅನ್ನು ಭಾರತದ ನಾಗರಿಕರಿಗೆ ವಿತರಿಸುತ್ತದೆ. ದೇಶದಲ್ಲಿ ಆಧಾರ್ ಕಾರ್ಡ್ ಅನ್ನು ಪ್ರಮುಖ ದೃಢೀಕರಣ ದಾಖಲೆಯಾಗಿ ಬಳಸಲಾಗುತ್ತದೆ. ಬ್ಯಾಂಕ್ ಖಾತೆ ತೆರೆಯಲು, ಪಾಸ್ ಪೋರ್ಟ್ ಅಥವಾ ಡ್ರೈವಿಂಗ್ ಲೈಸೆನ್ಸ್, ಮೊಬೈಲ್ ಸಂಪರ್ಕಕ್ಕೆ, ಸರ್ಕಾರದ ಸಬ್ಸಿಡಿಗಳನ್ನು ಪಡೆಯಲು ಹಾಗೂ ಸಮಾಜ ಕಲ್ಯಾಣ ಯೋಜನೆಗಳ ಫಲಾನುಭವಿಯಾಗಲು ಆಧಾರ್ ಕಾರ್ಡ್ ಅತ್ಯಗತ್ಯ. ಆಧಾರ್ ಕಾರ್ಡ್ ನಲ್ಲಿ ಹೆಸರು, ವಿಳಾಸ, ಜನ್ಮದಿನಾಂಕ, ವಯಸ್ಸು, ಲಿಂಗ, ಮೊಬೈಲ್ ಸಂಖ್ಯೆ, ಇ-ಮೇಲ್ ವಿಳಾಸ ಮುಂತಾದ ಮಾಹಿತಿಗಳು ಇರುತ್ತವೆ. ಆಧಾರ್ ಸಂಖ್ಯೆಯು ಮೊಬೈಲ್ ಸಂಖ್ಯೆ ಹಾಗೂ ಬ್ಯಾಂಕ್ ಖಾತೆಗೆ ಲಿಂಕ್ ಆಗಿರುತ್ತದೆ. ಹಾಗೆಯೇ ಪ್ಯಾನ್ ಕಾರ್ಡ್ ಜೊತೆಗೆ ಕೂಡ ಲಿಂಕ್ ಮಾಡೋದನ್ನು ಕಡ್ಡಾಯಗೊಳಿಸಲಾಗಿದೆ. ಇದರಿಂದ ಆಧಾರ್ ಕಾರ್ಡ್ ಬಳಸಿ ವಿವಿಧ ಸೇವೆಗಳು ಹಾಗೂ ಪ್ರಯೋಜನಗಳನ್ನು ಪಡೆಯೋದು ಸುಲಭವಾಗಲಿದೆ. ಹೀಗಿರುವಾಗ ಆಧಾರ್ ಕಾರ್ಡ್ ನಲ್ಲಿರುವ ನಿಮ್ಮ ಫೋಟೋ ಚೆನ್ನಾಗಿಲ್ಲ, ಅದನ್ನು ಬದಲಾಯಿಸಬೇಕು ಎಂದು ನಿಮಗೆ ಅನಿಸಿದರೆ ಅದನ್ನು ಬದಲಾಯಿಸೋದು ಹೇಗೆ? ಇಲ್ಲಿದೆ ಮಾಹಿತಿ.

ಆಧಾರ್ ನಲ್ಲಿ ಏನೆಲ್ಲ ಅಪ್ಡೇಟ್ ಮಾಡ್ಬಹುದು?
ಹೆಸರು, ವಿಳಾಸ, ಜನ್ಮದಿನಾಂಕ, ವಯಸ್ಸು, ಲಿಂಗ, ಮೊಬೈಲ್ ಸಂಖ್ಯೆ, ಇ-ಮೇಲ್ ವಿಳಾಸ, ಸಂಬಂಧದ ಸ್ಟೇಟಸ್ ಅನ್ನು ಅಪ್ಡೇಟ್ ಮಾಡಬಹುದು. ಹಾಗೆಯೇ ಕಣ್ರೆಪ್ಪೆ, ಬೆರಳಚ್ಚು ಹಾಗೂ ಮುಖದ ಫೋಟೋ ಕೂಡ ಅಪ್ಲೋಡ್ ಮಾಡಬಹುದು. 

ವೇತನ ಖಾತೆ ಹೊಂದಿರುವ ಗ್ರಾಹಕರಿಗೆ ಬ್ಯಾಂಕ್ ಎಷ್ಟೊಂದು ಸೌಲಭ್ಯ ನೀಡುತ್ತೆ ಗೊತ್ತಾ?

ಅಪ್ಡೇಟ್ ಮಾಡೋದು ಹೇಗೆ?
ನಿಮ್ಮ ವೈಯಕ್ತಿಕ ಮಾಹಿತಿಗಳನ್ನು ಆಧಾರ್ ನಲ್ಲಿ ನವೀಕರಿಸಲು ಎರಡು ಮಾರ್ಗಗಳಿವೆ. ಒಂದು ಸಮೀಪದ  ಆಧಾರ್ ಸೇವಾ ಅಥವಾ ನೋಂದಣಿ ಕೇಂದ್ರಕ್ಕೆ ಭೇಟನೀಡುವ ಮೂಲಕ ಈ ಕೆಲಸ ಮಾಡಬಹುದು. uidai.gov.in ವೆಬ್ ಸೈಟ್ ನಲ್ಲಿ 'Locate an Enrolment Center'ಮೇಲೆ ಕ್ಲಿಕ್ ಮಾಡುವ ಮೂಲಕ ನಿಮ್ಮ ಸಮೀಪದ ಆಧಾರ್ ಸೇವಾ ಅಥವಾ ನೋಂದಣಿ ಕೇಂದ್ರಗಳನ್ನು ಪತ್ತೆ ಮಾಡಬಹುದು. ಇನ್ನೊಂದು myAadhaar ಅಪ್ಲಿಕೇಷನ್ ಬಳಸಿ ಕೂಡ ಈ ಮಾಹಿತಿಗಳನ್ನು ಅಪ್ಡೇಟ್ ಮಾಡಬಹುದು.

ಫೋಟೋ ಬದಲಾಯಿಸೋದು ಹೇಗೆ?
ಆಧಾರ್ ಕಾರ್ಡ್ ನಲ್ಲಿ ಫೋಟೋ ಬದಲಾಯಿಸಲು ನೀವು ಸಮೀಪದ ಆಧಾರ್ ಸೇವಾ ಅಥವಾ ನೋಂದಣಿ ಕೇಂದ್ರಕ್ಕೆ ಭೇಟಿ ನೀಡಬೇಕು. ಈ ಮೇಲೆ ವಿವರಿಸಿದಂತೆ https://appointments.uidai.gov.in ವೆಬ್ ಸೈಟ್ ನಲ್ಲಿ ನೀವು ಸಮೀಪದ ಆಧಾರ್ ನೋಂದಣಿ ಕೇಂದ್ರದ ಮಾಹಿತಿ ಪಡೆಯಬಹುದು.
ಹಂತ 1: ಆಧಾರ್ ಕಾರ್ಡ್ ನಲ್ಲಿ ಫೋಟೋ ಬದಲಾವಣೆಗೆ ಸಂಬಂಧಿಸಿದ ಅರ್ಜಿ ಭರ್ತಿ ಮಾಡಿ. ನೋಂದಣಿ ಕೇಂದ್ರಕ್ಕೆ ಸಲ್ಲಿಕೆ ಮಾಡಿ.
ಹಂತ 2: ಈ ಕೇಂದ್ರದಲ್ಲಿರುವ ನಿರ್ವಾಹಕರು ನೀವು ನೀಡಿರುವ ಅರ್ಜಿಯಲ್ಲಿರುವ ಮಾಹಿತಿ ಅನ್ವಯ ಬಯೋಮೆಟ್ರಿಕ್ ಮಾಹಿತಿಗಳನ್ನು ಕಲೆ ಹಾಕುತ್ತಾರೆ.
ಹಂತ 3: ನೀವು ಈ ಅರ್ಜಿಯಲ್ಲಿ ಫೋಟೋ ಬದಲಾವಣೆ ಬಗ್ಗೆ ಉಲ್ಲೇಖಿಸಿದ್ದರೆ ನಿರ್ವಾಹಕರು ನಿಮ್ಮ ಫೋಟೋ ತೆಗೆಯುತ್ತಾರೆ.
ಹಂತ 4: ಅಪ್ಡೇಟ್ ಮನವಿ ಸಂಖ್ಯೆ (URN) ಹೊಂದಿರುವ ಸ್ವೀಕೃತಿ ಸ್ಲಿಪ್ ಅನ್ನು ರೆಫರೆನ್ಸ್ ಗಾಗಿ ಸೃಷ್ಟಿಸಲಾಗುತ್ತದೆ.

ನೋ ಕಾಸ್ಟ್ ಇಎಂಐ ನಿಜಕ್ಕೂ ಗ್ರಾಹಕರಿಗೆ ಲಾಭದಾಯಕವೇ? ಇದರ ಹಿಂದಿನ ಮಾರ್ಕೆಟಿಂಗ್ ಗಿಮಿಕ್ ಏನು? ಇಲ್ಲಿದೆ ಮಾಹಿತಿ

ಫೋಟೋ ಅಪ್ಡೇಟ್ ಮಾಡಿದ ಬಳಿಕ ನೀವು ಆಧಾರ್ ಕಾರ್ಡ್ ಡಿಜಿಟಲ್ (ಇ-ಆಧಾರ್) ಪ್ರತಿಯನ್ನು UIDAI ಅಧಿಕೃತ ವೆಬ್ ಸೈಟ್ uidai.gov.in ಇಲ್ಲಿಂದ ಡೌನ್ಲೋಡ್ ಮಾಡಬಹುದು. 
ಆಧಾರ್ ಕಾರ್ಡ್ ನಲ್ಲಿ ಕೆಲವು ಮಾಹಿತಿಗಳನ್ನು ಆನ್ ಲೈನ್ ನಲ್ಲಿ ಬದಲಾವಣೆ ಮಾಡಲು ಅವಕಾಶ ನೀಡಲಾಗಿದೆ. ಆದರೆ, ಫೋಟೋ ಬದಲಾವಣೆ ಮಾಡಲು ಆಧಾರ್ ಸೇವಾ ಕೇಂದ್ರಕ್ಕೆ ಭೇಟಿ ನೀಡುವುದು ಅಗತ್ಯ.

Latest Videos
Follow Us:
Download App:
  • android
  • ios