ನವದೆಹಲಿ(ಮಾ.31);  ಕಳೆದ ತಿಂಗಳು ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬೆಲೆ ಗೂಳಿಯಂತೆ ನೆಗೆದಿತ್ತು. ಫೆಬ್ರವರಿ ಒಂದೇ ತಿಂಗಳು ನಾಲ್ಕು ಬಾರಿ ಹಾಗೂ ಮಾರ್ಚ್ ಮೊದಲ ದಿನ ಮತ್ತೊಂದು ಬಾರಿ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆಯಾಗಿತ್ತು. ಇದು ಜನಸಾಮಾನ್ಯರಿಗೆ ತೀವ್ರ ಹೊಡೆತ ನೀಡಿತ್ತು. ಇದೀಗ ಎಪ್ರಿಲ್ 1 ರಿಂದ ಗ್ಯಾಸ್ ಸಿಲಿಂಡರ್ ಬೆಲೆ ಇಳಿಕೆಯಾಗುವ ಸೂಚನೆ ಸಿಕ್ಕಿದೆ.

ಪೆಟ್ರೋಲ್‌, ಡೀಸೆಲ್‌, ಗ್ಯಾಸ್‌ ಬಗ್ಗೆ ಮಹತ್ವದ ನಿರ್ಧಾರ ಪ್ರಕಟಿಸಿದ ಕೇಂದ್ರ!.

ಎಪ್ರಿಲ್ 1 ರಿಂದ ಗ್ಯಾಸ್ ಸಿಲಿಂಡರ್ ಬೆಲೆ 10 ರೂಪಾಯಿ ಕಡಿಮೆಯಾಗಲಿದೆ. ಸದ್ಯ ಬೆಂಗಳೂರಿನಲ್ಲಿ ಗ್ಯಾಸ್ ಸಿಲಿಂಡರ್ ಬೆಲೆ 822 ರೂಪಾಯಿ ಆಗಿದ್ದರೆ, ದೆಹಲಿಲ್ಲಿ 819 ರೂಪಾಯಿ, ಕೋಲ್ಕತಾದಲ್ಲಿ 845 ರೂಪಾಯಿ, ಮುಂಬೈನಲ್ಲಿ 819 ರೂಪಾಯಿ ಹಾಗೂ ಚೆನ್ನೈನಲ್ಲಿ 835 ರೂಪಾಯಿ ಆಗಿದೆ.

ಜನವರಿ ತಿಂಗಳಲ್ಲಿ 694 ರೂಪಾಯಿ ಇದ್ದ ಗ್ಯಾಸ್ ಸಿಲಿಂಡರ್ ಬೆಲೆ ಫೆಬ್ರವರಿ ಆರಂಭದಲ್ಲಿ 719 ರೂಪಾಯಿ ಆಗಿದೆ. ಇನ್ನು ಫೆಬ್ರವರಿ 15ಕ್ಕೆ 769ರೂಪಾಯಿಗೆ ಏರಿಕೆಯಾಗಿದ್ದರೆ, ಫಬ್ರವರಿ 25ಕ್ಕೆ 794 ರೂಪಾಯಿ ಆಗಿತ್ತು. ಮಾರ್ಚ್ ಆರಂಭಕ್ಕೆ 819 ರೂಪಾಯಿ ಆಗಿತ್ತು. ಇದೀಗ 10 ರೂಪಾಯಿ ಇಳಿಕೆಯಾಗುವ ಸೂಚನೆ ಸಿಕ್ಕಿದೆ. ಆದರೆ ಮುಂದಿನ ದಿನಗಳಲ್ಲಿ ಮತ್ತಷ್ಟು ಬೆಲೆ ಇಳಿಕೆ ಕುರಿತು ಯಾವುದೇ ಖಚಿತತೆ ಇಲ್ಲ.