ನವದೆಹಲಿ(ನ.6): ಹೆಚ್ಚೂ ಕಡಿಮೆ ದೀವಾಳಿಯ ಅಂಚಿಗೆ ಬಂದು ತಲುಪಿರುವ ಪಾಕಿಸ್ತಾನ, ಆರ್ಥಿಕ ನೆರವಿಗಾಗಿ ಕಂಡ ಕಂಡವರಲ್ಲಿ ಮನವಿ ಮಾಡುತ್ತಿದೆ. ಇಮ್ರಾನ್ ಖಾನ್ ಪಾಕ್ ಪ್ರಧಾನಿ ಹುದ್ದೆ ಅಲಂಕರಿಸುತ್ತಿದ್ದಂತೇ ಆರ್ಥಿಕ ಸಹಾಯ ಕೋರಿ ಐಎಂಎಫ್ ಗೆ ಮನವಿ ಮಾಡಿದ್ದರು.

ಪಾಕ್‌ಗೆ ಐಎಂಎಫ್ ಆರ್ಥಿಕ ಸಹಾಯ ಮಾಡುವುದನ್ನು ವಿರೋಧಿಸಿದ್ದ ಅಮೆರಿಕ, ಈ ಹಣವನ್ನೆಲ್ಲಾ ಪಾಕ್ ಚೀನಾ ಸಾಲ ತೀರಿಸಲು ಬಳಸಿಕೊಳ್ಳಲಿದೆ ಎಂದು ದೂರಿತ್ತು.

ಸರಿ ನೀವಾದ್ರೂ ಕೊಡಿ ಅಂತಾ ಇಮ್ರಾನ್ ಅಮೆರಿಕಕ್ಕೆ ಮನವಿ ಮಾಡಿದ್ದರು. ಆದರೆ ಮೋದಿ ಕೇಳದೇ ಈ ಕುರಿತು ಏನನ್ನು ಮಾಡಲು ಸಾಧ್ಯವಿಲ್ಲ ಎಂದು ಟ್ರಂಪ್ ಕಡ್ಡಿ ಮುರಿದಂತೆ ಹೇಳಿ ಕಳುಹಿಸಿದ್ದು ಸುಳ್ಳಲ್ಲ.

ಬೊಗಸೆ ತುಂಬಿಸಿ ದೂರ ದೂಡಿದ ಸೌದಿ:

ಸರಿ ಹಳೆ ಗಂಡನ ಪಾದವೇ ಗತಿ ಎಂಬಂತೆ ಪಾಕ್ ಹಣಕ್ಕಾಗಿ ಇತ್ತೀಚಿಗಷ್ಟೇ ಸೌದಿ ಮೊರೆ ಹೋಗಿತ್ತು. ಅಯ್ಯೋ ಕೇಳ್ತಾರಲ್ಲಾ ಅಂತಾ ಸೌದಿ ಒಂದಿಷ್ಟು ಹಣ ಕೊಟ್ಟು ಈಗಿಷ್ಟು ಇಟ್ಕೊಳ್ಳಿ ಮುಂದೆ ನೋಡೋಣ ಅಂತಾ ಇಮ್ರಾನ್ ಖಾನ್‌ರನ್ನು ಸಾಗಿ ಹಾಕಿತ್ತು.

ಡ್ರ್ಯಾಗನ್ ಕೊಟ್ಟಿದ್ದಕ್ಕಿಂತ ಕೂಗಿದ್ದೇ ಜಾಸ್ತಿ:

ಸೌದಿಯಿಂದಲೂ ನಿರೀಕ್ಷಿತ ಸಹಾಯ ದೊರೆಯದಾದಾಗ ಇಮ್ರಾನ್ ಭಾರತದ ಶತ್ರು ರಾಷ್ಟ್ರ ಚೀನಾಗೆ ನಗು ನಗುತ್ತಲೇ ಓಡಿ ಹೋದರು. ಅಲ್ಲಿಯೂ ನಮಗೆ ದುಡ್ಡು ಕೊಡಿ ಅಂತಾ ಚೀನಾ ಅಧ್ಯಕ್ಷರ ದಂಬಾಲು ಬಿದ್ದರು ಪಾಕ್ ಪ್ರಧಾನಿ.

ಆದರೆ ಇದೇ ಸಮಯಕ್ಕೆ ಕಾಯುತ್ತಿದ್ದ ಕಪಟ ಡ್ರ್ಯಾಗನ್, ಸಾಲ ಬೇಕಾದ್ರೆ ನಾ ಹೇಳ್ದಂಗೆ ಕೇಳ್ಬೇಕು ಅಂತಾ ಶರತ್ತು ವಿಧಿಸಿತು. ಇಮ್ರಾನ್ ಪಾಲಿಗೆ ಇದು ಬಿಸಿ ತುಪ್ಪದಂತೆ ಭಾಸವಾಗಿತ್ತು.

ಒಂದಿಷ್ಟು ಒಪ್ಪಿಕೊಳ್ಳಬಹುದಾದ, ಬಹಳಷ್ಟು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲದಾದ ಶರತ್ತುಗಳನ್ನು ಇಮ್ರಾನ್ ಖಾನ್ ಕೇಳಬೇಕಾಯ್ತು. ಇರಿ ಪಾಕಿಸ್ತಾನದ ಸುಪ್ರೀಂ ಪವರ್ ಸೇನೆಯನ್ನು ಈ ಕುರಿತು ಕೇಳಿ ಆಮೇಲೆ ಮತ್ತೆ ಬರ್ತಿನಿ ಅಂತಾ ಇಮ್ರಾನ್ ತಣ್ಣಗೆ ಅಲ್ಲಿಂದ ಕಾಲ್ಕಿತ್ತರು.

ಮೋದಿ ಬಳಿ ಹೋಗ್ತಿನಿ:

ಸದ್ಯ ಇಸ್ಲಾಮಾಬಾದ್‌ಗೆ ಮತ್ತೆ ಮರಳಿ ಬಂದಿರುವ ಇಮ್ರಾನ್ ಖಾನ್, ದುಡ್ಡಿಗಾಗಿ ಮತ್ತೆ ಯಾವ ರಾಷ್ಟ್ರಕ್ಕೆ ಹೋಗಲಿ ಅಂತಾ ಭೂಪಟ ತೆರೆದು ಕುಳಿತಿದ್ದಾರಂತೆ. ಒಂದ ಕ್ಷಣ ಖಾನ್ ಸಾಹೇಬರ ಕಣ್ಣು ಭಾರತದ ನಕ್ಷೆ ಮೇಲೆ ಬಿದ್ದರೂ, ಪಕ್ಕದಲ್ಲೇ ಇದ್ದ ಸೇನಾ ಜನರಲ್‌ಗಳ ಮುಖ ನೋಡಲಾರದೆ ಸುಮ್ಮನಾಗಿದ್ದಾರಂತೆ.

ಅಷ್ಟಕ್ಕೂ ಭಾರತ ತನ್ನ ಸಾಂಪ್ರದಾಯಿಕ ಶತ್ರು ಪಾಕಿಸ್ತಾನಕ್ಕೆ ಆರ್ಥಿಕ ಸಹಾಯ ಮಾಡುತ್ತಾ?. ಖಂಡಿತ ಇಲ್ಲ. ಬೇಡಿ ಬಂದರೂ ಸಹಾಯ ಮಾಡಲಾರದ ಕಠೋರ ಸ್ಥಿತಿಗೆ ಭಾರತವನ್ನು ದೂಡಿರುವುದು ಇದೇ ಪಾಕಿಸ್ತಾನವೇ ಅಲ್ಲವೇ?.

ಭಾರತದೊಂದಿಗೆ ಸಂಬಂಧ ಸುಧಾರಣೆ ಕುರಿತು ಮಾತನಾಡುತ್ತಿರುವ ಪಾಕ್ ಪ್ರಧಾನಿ ಇಮ್ರಾನ್ ಖಾನ್, ಈ ಮುಳಕ ಹೇಗಾದರೂ ಮಾಡಿ ಪ್ರಧಾಣಿ ಮೋದಿ ಮನವೋಲಿಸಿ ಒಂದಿಷ್ಟು ಆರ್ಥಿಕ ಸಹಾಯ ಪಡೆದುಕೊಳ್ಳುವ ಯೋಜನೆಯಲ್ಲಿದ್ದಾರೆ ಎಂಬ ಮಾತುಗಳು ಕೆಳಿ ಬರುತ್ತಿವೆ. ಆದರೆ ಪಾಕಿಸ್ತಾನದ ಮೊಸಳೆ ಕಣ್ಣೀರಿಗೆ ಮೋದಿ ಕರಗಲು ಸಾಧ್ಯವೇ ಇಲ್ಲ ಎಂಬುದು ಇಮ್ರಾನ್ ಖಾನ್ ಅವರಿಗೆ ಗೊತ್ತಾಗಿದೆ.