Asianet Suvarna News Asianet Suvarna News

ಗೂಗಲ್ ಮುಖ್ಯಸ್ಥ ಹುದ್ದೆಗೆ ಸುಂದರ್ ಪಿಚ್ಚೈ ರಾಜೀನಾಮೆ?

ಗೂಗಲ್ ಮುಖ್ಯಸ್ಥನ ಹುದ್ದೆಗೆ ಸುಂದರ್ ಪಿಚ್ಚೈ ರಾಜೀನಾಮೆ?| ಸಂಚಲನ ಮೂಡಿಸಿದ ಸುಂದರ್ ಪಿಚ್ಚೈ ರಾಜೀನಾಮೆ ವಿಚಾರ| ಸಿಇಒ ಬದಲಾಯಿಸುವ ಉದ್ದೇಶ ಹೊಂದಿದೆಯಾ ಗೂಗಲ್| ಲಿಂಕ್ಡ್ಇನ್’ನಲ್ಲಿ ಗೂಗಲ್ ಸಿಇಒ ಹುದ್ದೆ ಖಾಲಿ ಇದೆ ಎಂಬ ಪೋಸ್ಟ್| ತಾಂತ್ರಿಕ ದೋಷ ಪತ್ತೆ ಹಚ್ಚಿ ಗಮನಕ್ಕೆ ತಂದ ಮೈಕೆಲ್ ರಿಜಿಂಡರ್ಸ್| ಕೂಡಲೇ ತಾಂತ್ರಿಕ ದೋಷ ಸರಿಪಡಿಸಿಕೊಂಡ ಲಿಂಕ್ಡ್ಇನ್| 

Does Google CEO Sundar Pichai Quitting Job
Author
Bengaluru, First Published Jul 30, 2019, 8:10 PM IST

ಸ್ಯಾನ್ ಫ್ರಾನ್ಸಿಸ್ಕೊ(ಜು.30): ಗೂಗಲ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹುದ್ದೆಗೆ ಸುಂದರ್ ಪಿಚ್ಚೈ ರಾಜೀನಾಮೆ ನೀಡಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದ್ದು, ವಿಶ್ವದಾದ್ಯಂತ ಸಂಚಲನ ಮೂಡಿಸಿದೆ.

ಗೂಗಲ್ ತನ್ನ ಸಿಇಒ ಬದಲಾಯಿಸುವ ಉದ್ದೇಶ ಹೊಂದಿದ್ದು, ಈ ಹಿನ್ನೆಲೆಯಲ್ಲಿ ಸುಂದರ್ ಪಿಚ್ಚೈ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂಬ ವದಂತಿ ಹಬ್ಬಿದೆ.

Well, that escalated worldwide. pic.twitter.com/1mnmrzMhxx

ಇಷ್ಟಕ್ಕೆಲ್ಲಾ ಕಾರಣವಾಗಿದ್ದು, ಲಿಂಕ್ಡ್ಇನ್ ಸಾಮಾಜಿಕ ಜಾಲ ತಾಣದಲ್ಲಿ ಗೂಗಲ್ ಸಿಇಒ ಹುದ್ದೆ ಖಾಲಿ ಇದೆ ಎಂಬ ಪೋಸ್ಟ್.  ಲಿಂಕ್ಡ್ಇನ್’ನ ಸೆಕ್ಯುರಿಟಿ ಬಗ್‌ನಿಂದಾಗಿ ಈ ಅಚಾತುರ್ಯ ಸಂಭವಿಸಿದ್ದು, ಡಚ್ ನೇಮಕಾತಿ ಕಂಪನಿಯ ಮೈಕೆಲ್ ರಿಜಿಂಡರ್ಸ್ ಎಂಬವರು ಈ ತಾಂತ್ರಿಕ ದೋಷವನ್ನು ಪತ್ತೆ ಹಚ್ಚಿ ಅದನ್ನು ಲಿಂಕ್ಡ್ಇನ್ ಸಂಸ್ಥೆಯ ಗಮನಕ್ಕೆ ತಂದಿದ್ದಾರೆ. 

ಲಿಂಕ್ಡ್ಇನ್ ಈ ತಾಂತ್ರಿಕ ದೋಷಕ್ಕೆ ಸ್ಪಂದಿಸಿ ಸರಿಪಡಿಸಿದ್ದು, ದೋಷ ಪತ್ತೆ ಮಾಡಿ ಸರಿಪಡಿಸಿಕೊಳ್ಳಲು ನೆರವಾಗಿದ್ದಕ್ಕಾಗಿ ಮೈಕೆಲ್‌ಗೆ ಧನ್ಯವಾದ ತಿಳಿಸಿದೆ ಮತ್ತು ಗೂಗಲ್ ಸಿಇಒ ಕುರಿತ ಉದ್ಯೋಗದ ಪೋಸ್ಟ್ ಡಿಲೀಟ್ ಮಾಡಿದೆ.

Follow Us:
Download App:
  • android
  • ios