ಪೆಟ್ರೋಲ್ ಬಂಕ್ ನಲ್ಲಿ ಡಿಜಿಟಲ್ ಪೇಮೆಂಟ್: ಡಿಸ್ಕೌಂಟ್ ಗೆ ಕೊಕ್ಕೆ!

First Published 3, Aug 2018, 1:25 PM IST
Discount on digital payment at petrol pumps reduced
Highlights

ಡಿಜಿಟಲ್ ಪೇಮೆಂಟ್ ಮೇಲಿನ ವಿನಾಯಿತಿ ಕಡಿತ! ಪೆಟ್ರೋಲ್ ಬಂಕ್ ಗಳಲ್ಲಿ ಡಿಜಿಟಲ್ ಪೇಮೆಂಟ್! !ಶೇ.0.075 ದಿಂದ ಶೇ.0.25ಗೆ ಇಳಿಕೆ! ಗ್ರಾಹಕರಿಗೆ ಮತ್ತೊಂದು ಬರೆ ಎಳೆದ ಸರ್ಕಾರ

 

ನವದೆಹಲಿ(ಆ.3): ಪೆಟ್ರೋಲ್ ಬಂಕ್ ಗಳಲ್ಲಿ ಡಿಜಿಟಲ್ ಪೇಮೆಂಟ್ ಗಳಿಗೆ ನೀಡುತ್ತಿದ್ದ ರಿಯಾಯಿತಿಯನ್ನು ಶೇ.0.75 ರಿಂದ ಶೇ.0.25ಗೆ ಇಳಿಕೆ ಮಾಡಲಾಗಿದೆ.

ಕೇಂದ್ರ ಸರ್ಕಾರದ 2016 ರ ಡಿಸೆಂಬರ್ 13 ರಂದು ಪೆಟ್ರೋಲ್ ಬಂಕ್ ಗಳಲ್ಲಿ ಡಿಜಿಟಲ್ ಪೇಮೆಂಟ್ ಗೆ ಡಿಸ್ಕೌಂಟ್ ಘೋಷಣೆ ಮಾಡಿತ್ತು. ಇದೀಗ ಈ ರಿಯಾಯಿತಿಯನ್ನು ಕಡಿತ ಮಾಡುವ ನಿರ್ಧಾರಕ್ಕೆ ಬಂದಿದೆ.

ಪೆಟ್ರೋಲ್ ಬಂಕ್ ಗಳಲ್ಲಿ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ಇ-ವ್ಯಾಲೇಟ್, ಮೊಬೆಐಲ್ ವ್ಯಾಲೇಟ್ ಗಳ ಮೂಲಕ ಡಿಜಿಟಲ್ ವಿಧಾನದಲ್ಲಿ ಹಣ ಪಾವತಿ ಮಾಡುವ ಗ್ರಾಹಕರಿಗೆ ಶೇ.0.75 ಡಿಸ್ಕೌಂಟ್ ಘೋಷಣೆ ಮಾಡಲಾಗಿತ್ತು. ಕ್ಯಾಶ್ ಬ್ಯಾಕ್ ರೂಪದಲ್ಲಿ ಇದನ್ನು ಬಳಕೆದಾರರ ಖಾತೆಗೆ ವರ್ಗಾಯಿಸಲಾಗುತ್ತಿತ್ತು.

ಆದರೆ ಈ ಟಿಸ್ಕೌಂಟ್ ಅನ್ನು ಶೇ.0.25 ಗೆ ಇಳಿಕೆ ಮಾಡಲಾಗಿದ್ದು, ಈ ಕುರಿತು ತೈಲ ಕಂಪನಿಗಳು ಎಲ್ಲಾ ಪೆಟ್ರೋಲ್ ಬಂಕ್ ಗಳಿಗೆ ಮಾಹಿತಿ ರವಾನಿಸಿದೆ.

loader