ಏ.1 ರಿಂದ ಪೆಟ್ರೋಲ್ ದರ 1 ರೂ ಹೆಚ್ಚಳ?
ಏ.1 ಒಂದರಿಂದ ಕಡ್ಡಾಯವಾಗಿ ಬಿಎಸ್-6 ಮಾದರಿಯ ಇಂಧನ ಮಾರಾಟ ಮಾಡಬೇಕಾಗಿರುವುದರಿಂದ ಇಂಧನ ಬೆಲೆಯಲ್ಲಿ ಲೀಟರ್‌ಗೆ 1 ರು.ನಷ್ಟು ಏರಿಕೆಯಾಗುವ ಸಂಭವ ಇದೆ.
ಮುಂಬೈ (ಫೆ. 29): ಏ.1 ಒಂದರಿಂದ ಕಡ್ಡಾಯವಾಗಿ ಬಿಎಸ್-6 ಮಾದರಿಯ ಇಂಧನ ಮಾರಾಟ ಮಾಡಬೇಕಾಗಿರುವುದರಿಂದ ಇಂಧನ ಬೆಲೆಯಲ್ಲಿ ಲೀಟರ್‌ಗೆ 1 ರು.ನಷ್ಟುಏರಿಕೆಯಾಗುವ ಸಂಭವ ಇದೆ.
ಜಿಡಿಪಿ ಬೆಳವಣಿಗೆ 3 ನೇ ತ್ರೈಮಾಸಿಕದಲ್ಲಿ ಶೇ.4.7 ಕ್ಕೆ ಇಳಿಕೆ
ಹಾಲಿ ಇರುವ ಬಿಎಸ್-4 ಮಾದರಿಯಿಂದ ಬಿಎಸ್-6ಗೆ ಮಾರ್ಪಾಟು ಮಾಡಿಕೊಳ್ಳಲು ತೈಲ ಕಂಪನಿಗಳು ಸುಮಾರು 35 ಸಾವಿರ ಕೋಟಿ ರು. ಬಂಡವಾಳ ಹೂಡಿದ್ದು, ಇದರ ನೇರ ಪರಿಣಾಮ ಗ್ರಾಹಕರಿಗೆ ತಟ್ಟಲಿದೆ.
ಷೇರುಪೇಟೆ ಮೇಲೆ ಮಾರಕ ಕೊರೋನಾ ದಾಳಿ
ದೇಶದ ಅತೀ ದೊಡ್ಡ ತೈಲ ಕಂಪನಿ ಇಂಡಿಯನ್ ಆಯಿಲ್ ಇದಕ್ಕೆ 17 ಸಾವಿರ ಕೋಟಿ ಬಂಡವಾಳ ಹೂಡಿದ್ದು, ತೈಲ ದರ ಲೀಟರ್‌ಗೆ 70 ಪೈಸೆಯಿಂದ 1.20 ರು.ವರೆಗೆ ತುಟ್ಟಿಯಾಗುವ ಸಾಧ್ಯತೆಯಿದೆ.
ಫೆಬ್ರವರಿ 29ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ