* ರಾಜಸ್ಥಾನದಲ್ಲಿ ಡೀಸೆಲ್‌ ಬೆಲೆ 98 ರು.ಗೆ ಏರಿಕೆ* ತಿಂಗಳಲ್ಲಿ 16ನೇ ಬಾರಿ ಪೆಟ್ರೋಲ್‌, ಡೀಸೆಲ್‌ ದರ ಹೆಚ್ಚಳ* ಡೀಸೆಲ್‌ ದರ ಮುಂಬೈನಲ್ಲಿ 92.45 ರು., 90.27 ರು., ಚೆನ್ನೈ 89.90 ರು. ಕೋಲ್ಕತಾದಲ್ಲಿ 88 ರು., ದೆಹಲಿಯಲ್ಲಿ 85.15 ರು.

ನವದೆಹಲಿ(ಜೂ.01): ದೇಶದ ಹಲವು ನಗರಗಳಲ್ಲಿ ಪೆಟ್ರೋಲ್‌ ದರ 100ರ ಗಡಿ ದಾಟಿ ಗ್ರಾಹಕರ ಜೇಬು ಸುಟ್ಟಿದ್ದಾಯ್ತು, ಇದೀಗ ಡೀಸೆಲ್‌ ಸರದಿ.

ಹೌದು, ತೈಲ ಕಂಪನಿಗಳು ಸೋಮವಾರ ಪೆಟ್ರೋಲ್‌ ಬೆಲೆಯನ್ನು ಲೀ.ಗೆ 29 ಪೈಸೆ ಮತ್ತು ಡೀಸೆಲ್‌ ಬೆಲೆಯನ್ನು ಲೀಗೆ. 26 ಪೈಸೆಯಷ್ಟುಹೆಚ್ಚಳ ಮಾಡಿವೆ. ಈ ತಿಂಗಳಲ್ಲಿ 16ನೇ ಬಾರಿಗೆ ಮಾಡಿದ ಈ ಹೆಚ್ಚಳದಿಂದಾಗಿ, ದೇಶದಲ್ಲೇ ಅತಿ ಹೆಚ್ಚು ಮೌಲ್ಯವರ್ಧಿತ ತೆರಿಗೆ ಮತ್ತು ಸ್ಥಳೀಯ ತೆರಿಗೆ ವಿಧಿಸುವ ರಾಜಸ್ಥಾನದ ಶ್ರೀಗಂಗಾನಗರದಲ್ಲಿ ಪೆಟ್ರೋಲ್‌ ಬೆಲೆ ಲೀ.ಗೆ 105.24 ರು. ಮತ್ತು ಡೀಸೆಲ್‌ ಬೆಲೆ 98.08 ರು.ಗೆ ತಲುಪಿದೆ. ಇದು ದೇಶದ ಯಾವುದೇ ನಗರದಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ನ ಗರಿಷ್ಠ ದರವಾಗಿದೆ. ಕಳೆದ 16 ದಿನಗಳಲ್ಲಿ ಮಾಡಿದ ಏರಿಕೆಯ ಪರಿಣಾಮ ಪೆಟ್ರೋಲ್‌ ದರದಲ್ಲಿ ಒಟ್ಟಾರೆ 3.83 ರು. ಮತ್ತು ಡೀಸೆಲ್‌ ದರಲ್ಲಿ 4.42 ರು.ನಷ್ಟು ಹೆಚ್ಚಳವಾಗಿದೆ.

ಪೆಟ್ರೋಲ್‌ 100 ರೂ: ಶತಕ ದಾಟಿದ ಮೊದಲ ಮೆಟ್ರೋ ನಗರ ಮುಂಬೈ!

ಸೋಮವಾರದ ದರ ಏರಿಕೆ ಬಳಿಕ ಪೆಟ್ರೋಲ್‌ ದರ ಮುಂಬೈನಲ್ಲಿ 100.47, ಬೆಂಗಳೂರು 97.37 ರು., ಚೆನ್ನೈ 95.26, ಕೋಲ್ಕತಾ 94.25 ರು.. ದೆಹಲಿಯಲ್ಲಿ 94. 23 ರು.ಗೆ ತಲುಪಿದೆ.

ಡೀಸೆಲ್‌ ದರ ಮುಂಬೈನಲ್ಲಿ 92.45 ರು., 90.27 ರು., ಚೆನ್ನೈ 89.90 ರು. ಕೋಲ್ಕತಾದಲ್ಲಿ 88 ರು., ದೆಹಲಿಯಲ್ಲಿ 85.15 ರು.ಗೆ ತಲುಪಿದೆ.

ಅಮೆರಿಕದ ತೈಲ ಪೂರೈಕೆ ಜಾಲದ ಮೇಲೆ ಸೈಬರ್‌ ದಾಳಿ, ಕಾರ್ಯಚರಣೆ ಸಂರ್ಪೂ ಸ್ಥಗಿತ!

ಪೆಟ್ರೋಲ್‌ಗೆ ಹೋಲಿಸಿದರೆ ಡೀಸೆಲ್‌ ದರಗಳು ಹಣದುಬ್ಬರ ಮೇಲೆ ಜೊತೆಗೆ ಜನಸಾಮಾನ್ಯರ ನಿತ್ಯದ ಜೀವನದ ಮೇಲೂ ಗಂಭೀರ ಪರಿಣಾಮ ಹೊಂದಿದೆ. ಡೀಸೆಲ್‌ ದರ ಹೆಚ್ಚಾದರೆ ಎಲ್ಲಾ ರೀತಿಯ ಸಾಗಣೆ ವೆಚ್ಚ ಹೆಚ್ಚಾಗುವ ಕಾರಣ, ಅಗತ್ಯ ವಸ್ತುಗಳ ಬೆಲೆ ಮತ್ತಷ್ಟುಗಗನಕ್ಕೇರುವ ಭೀತಿ ಎದುರಾಗಿದೆ.