ಭಾರತದಿಂದ ಪರಾರಿಯಾಗಿರುವ ವಿಜಯ್ ಮಲ್ಯ ಅವರ ಆಸ್ತಿಗಳನ್ನು ಬ್ಯಾಂಕ್ ಮುಟ್ಟುಗೋಲು ಮಾಡಲಾಗಿದೆ. 9 ವರ್ಷಗಳಿಂದ ಲಂಡನ್‌ನಲ್ಲಿ ನೆಲೆಸಿರುವ ವಿಜಯ್ ಮಲ್ಯ, ಭಾರತದಲ್ಲಿ ಎಲ್ಲವನ್ನೂ ಕಳೆದುಕೊಂಡಿಲ್ಲ. ಈಗಲೂ ವಿಜಯ್ ಮಲ್ಯ ಭಾರತದಲ್ಲಿ ಬರೋಬ್ಬರಿ 4,400 ಕೋಟಿ ರೂ ಮೌಲ್ಯದ ಆಸ್ತಿ ಹೊಂದಿದ್ದಾರೆ.
ನವದೆಹಲಿ(ಜೂ.10) ಬ್ಯಾಂಕ್ ವಂಚನೆ ಪ್ರಕರಣದಲ್ಲಿ ಭಾರತದಿಂದ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ ಇತ್ತೀಚೆಗೆ ರಾಜ್ ಶಮಾನಿ ಪಾಡ್‌ಕಾಸ್ಟ್‌ನಲ್ಲಿ ಕಾಣಿಕೊಂಡು ಭಾರಿ ಸಂಚಲನ ಸೃಷ್ಟಿಸಿದ್ದಾರೆ. ವಿಜಯ್ ಮಲ್ಯ ಮಾತುಗಳು ಹಲವರ ಅಭಿಪ್ರಾಯವನ್ನೇ ಬದಲಿಸಿದೆ. ಕಳ್ಳ, ವಂಚಕ ಎಂದು ಟ್ರೋಲ್ ಮಾಡುತ್ತಿದ್ದ ಹಲವರು ಇದೀಗ ವಿಜಯ್ ಮಲ್ಯ ಮಾತುಗಳನ್ನು ಕೇಳಿಸಿಕೊಂಡು ತಮ್ಮ ಅಭಿಪ್ರಾಯವನ್ನೇ ಬದಲಿಸಿದ್ದಾರೆ. ವಿಜಯ್ ಮಲ್ಯ ಬ್ಯಾಂಕ್‌ಗೆ ವಂಚಿಸಿದ ಹಣ ವಸೂಲಿ ಮಾಡಲು ಕೋರ್ಟ್ ಮುಖಾಂತರ ಮಲ್ಯ ಸ್ಥಿರಾಸ್ತಿ ಹಾಗೂ ಚರಾಸ್ತಿಗಳನ್ನು ಮುಟ್ಟುಗೋಲು ಹಾಕಿ ಹಣ ವಸೂಲಿ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ವಿಜಯ್ ಮಲ್ಯ ಭಾರತದಲ್ಲಿ ಸಂಪಾದಿಸಿದ ಎಲ್ಲಾ ಆಸ್ತಿಗಳನ್ನು ಕಳೆದುಕೊಂಡರೂ ಈಗಲೂ ವಿಜಯ್ ಮಲ್ಯ ಭಾರತದಲ್ಲಿ 4,400 ಕೋಟಿ ರೂಪಾಯಿ ಆಸ್ತಿ ಹೊಂದಿದ್ದಾರೆ.
ಎಲ್ಲಿದೆ ವಿಜಯ್ ಮಲ್ಯ 4,400 ಕೋಟಿ ರೂ ಆಸ್ತಿ?
ಕಿಂಗ್ ಆಫ್ ಗುಡ್ ಟೈಮ್ಸ್ ಎಂದೇ ಜನಪ್ರಿಯವಾಗಿದ್ದ ವಿಜಯ್ ಮಲ್ಯ ಭಾರತದಲ್ಲಿ ಯಾವುದೇ ಆಸ್ತಿ ಇಲ್ಲ ಎಂದಲ್ಲ. ಮಲ್ಯ ಆಸ್ತಿಗಳನ್ನು ಬ್ಯಾಂಕ್ ಮಾರಾಟ ಮಾಡಿ ಸಾಲದ ಹಣ ವಸೂಲಿ ಮಾಡಿಕೊಂಡಿದೆ ಎಂದು ವರದಿಗಳು ಹೇಳುತ್ತಿದೆ. ಆದರೆ ಟ್ರೆಂಡ್‌ಲೈನ್ ಡೇಟಾ ಪ್ರಕಾರ ಭಾರತದ BSE ಹಾಗೂ NSE ನಲ್ಲಿ ಮೂರು ಸ್ಟಾಕ್ಸ್ ಹೊಂದಿದ್ದಾರೆ. ಮೂರು ಕೂಡ ಮದ್ಯ ಷೇರುಗಳಾಗಿದ್ದು ಇದರ ಮೌಲ್ಯ 4,400 ಕೋಟಿ ರೂಪಾಯಿ
ಮಾರ್ಚ್ 31, 2025ರ ಕಾರ್ಪೋರೇಟ್ ಷೇರು ಹೋಲ್ಡಿಂಗ್ಸ್ ವರದಿ ಪ್ರಕಾರ ಮೂರು ಲಿಕ್ಕರ್ ಸ್ಟಾಕ್ಸ್ ವಿಜಯ್ ಮಲ್ಯ ಹೆಸರಿನಲ್ಲಿದೆ. ವಿಜಯ್ ಮಲ್ಯ ಅವರ ಯುನೈಟೆಡ್ ಬ್ರಿವರಿಸಿ ಲಿಮಿಟೆಡ್ ಇದೀಗ ಮಲ್ಯ ಬಳಿ ಇಲ್ಲ. ಇದನ್ನು ಯನೈಟೆಡ್ ಸ್ಪಿರಿಟ್ ಕಂಪನಿ ಖರೀದಿಸಿದೆ. ಆದರೆ ಈ ಯುನೈಟೆಡ್ ಬ್ರಿವರಿಸಿ ಲಿಮಿಟೆಡ್(ಯುಬಿಎಲ್) ಶೇಕಡಾ 8.08ರಷ್ಟು ಷೇರು ಹೊಂದಿದ್ದಾರೆ. ವಿಜಯ್ ಮಲ್ಯ ಅವರ ತಂದೆ ವಿಠಲ್ ಮಲ್ಯದಿಂದ ವಿಜಯ್ ಮಲ್ಯಗೆ ಬಂದಿರುವ ಷೇರುಗಳಲ್ಲಿ ಶೇಕಡಾ 8 ರಷ್ಟು ಉಳಿಸಿಕೊಂಡಿದ್ದಾರೆ. 21,353,620 ಈಕ್ವಿಟಿ ಷೇರುಗಳನ್ನು ವಿಜಯ್ ಮಲ್ಯ ಹೊಂದಿದ್ದಾರೆ. ಇದರ ಮೌಲ್ಯ 4,456.7 ಕೋಟಿ ರೂಪಾಯಿ.
ಯುನೈಟೆಡ್ ಬ್ರಿವರಿಸಿ ಲಿಮಿಟೆಡ್ (ಯುಬಿಎಲ್) ಮಲ್ಯ ಒಡೆತದನಲ್ಲಿದ್ದ ಕಂಪನಿ. ಯುಬಿಎಲ್ ಕಂಪನಿ ಅಡಿಯಲ್ಲಿ ಕಿಂಗ್‌ಫಿಶರ್ ಸ್ಟ್ರಾಂಗ್ ಬಿಯರ್, ಕಿಂಗ್‌ಫಿಶರ್ ಪ್ರಿಮಿಯಂ, ಕಿಂಗ್‌ಫಿಶನ್ ಅಲ್ಟ್ರಾ, ಕಿಂಗ್‌ಫಿಶರ್ ಅಲ್ಟ್ರಾ ಮ್ಯಾಕ್ಸ್, ಕಿಂಗ್‌ಫಿಶನ್ ಅಲ್ಟ್ರಾ ವಿಟ್‌ಬಿಯರ್, ಕ್ವೀನ್‌ಫಿಶರ್ ಪ್ರಿಮಿಯಂ, ಕಿಂಗ್‌ಫಿಶನ್ ಸ್ಟಾರ್ಮ್, ಹೈನ್‌ಕೆನ್, ಹೈನ್‌ಕೆನ್ ಸಿಲ್ವರ್, ಹೈನ್‌ಕೆನ್ 0.0 ಬಿಯರ್ ಉತ್ಪನ್ನ ಹೊಂದಿದೆ. ಇದರ ದೊತೆಗೆ ಕಿಂಗ್‌ಶಿಫರ್ ನೀರು ಹಾಗೂ ಕಿಂಗ್‌ಫಿಶರ್ ಸೋಡಾ ಉತನ್ನಗಳನ್ನು ಸರೋಗೇಟೆಡ್ ಆಗಿ ಬಳಕೆ ಮಾಡಿಕೊಂಡಿದೆ.
ಯುನೈಟೆಡ್ ಸ್ಪಿರಿಟ್ಸ್ ಕಂಪನಿಯಲ್ಲಿ ವಿಜಯ್ ಮಲ್ಯ ಶೇಕಡಾ 0.01 ರಷ್ಟು ಷೇರು ಹೊಂದಿದ್ದಾರೆ. ಅಂದರೆ 62,550 ಈಕ್ವಿಟಿ ಷೇರು ಹೊಂದಿದ್ದಾರೆ. ಇದರ ಮೌಲ್ಯ ಕೇವಲ 10 ಕೋಟಿ ರೂಪಾಯಿ. ಇದಕ್ಕೆ ಪ್ರಮೋಟರ್ ಗ್ರೂಪ್ ಆಗಿರುವ ವಿಠಲ್ ಇನ್ವೆಸ್ಟ್‌ಮೆಂಟ್ ಪ್ರೈವೇಟ್ ಲಿಮಿಟೆಡ್ ಶೇಕಡಾ 0.02ರಷ್ಟು ಷೇರು ಹೊಂದಿದೆ. ಈ ಹೂಡಿಕೆ ಕಂಪನಿ ವಿಜಯ್ ಮಲ್ಯ ತಂದೆ ವಿಠಲ್ ಮಲ್ಯ ಆರಂಭಿಸಿದ ಕಂಪನಿ. ಸಹಜವಾಗಿ ಈ ಕಂಪನಿಗೆ ವಾರಸುದಾರ ಇದೀಗ ವಿಜಯ್ ಮಲ್ಯ ಆದರೆ ಎಲ್ಲಾ ಕಂಪನಿಗಳನ್ನು ಮಾರಾಟ ಮಾಡಿರುವ ಕಾರಣ ಕೇವಲ 0.02ರಷ್ಟು ಮಾತ್ರ ಷೇರು ವಿಜಯ್ ಮಲ್ಯ ಹೊಂದಿದ್ದಾರೆ.