Asianet Suvarna News Asianet Suvarna News

ನೋಟುಗಳ ಹಿಂಪಡೆತಕ್ಕಿದೆ ಸುದೀರ್ಘ ಇತಿಹಾಸ: ಆರ್ಥಿಕತೆ ಮೇಲೆ ಶೂನ್ಯ ಪರಿಣಾಮ: ತಜ್ಞರು

ನೋಟುಗಳನ್ನು ಚಲಾವಣೆಯಿಂದ ಹಿಂದಕ್ಕೆ ಪಡೆಯುವ ನಿರ್ಧಾರ ಇದೇ ಮೊದಲಲ್ಲ. ಸ್ವತಂತ್ರ ಮತ್ತು ಸ್ವತಂತ್ರ ಪೂರ್ವ ಭಾರತದ ಇತಿಹಾಸದಲ್ಲಿ ಈ ಹಿಂದೆ ಹಲವು ಬಾರಿ ಹೀಗೆ ಚಲಾವಣೆಯಲ್ಲಿದ್ದ ನೋಟುಗಳನ್ನು ಬಳಕೆಯಿಂದ ಹಿಂದಕ್ಕೆ ಪಡೆದ ಉದಾಹರಣೆಯಿದೆ.

Demonetization has long history RS 2 thousand ban have Zero impact on economy: economic Experts akb
Author
First Published May 21, 2023, 6:49 AM IST

ನವದೆಹಲಿ: ಭಾರತೀಯ ರಿಸರ್ವ ಬ್ಯಾಂಕ್‌ ಶುಕ್ರವಾರ, 2000 ರು. ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂದಕ್ಕೆ ಪಡೆಯುವ ಘೋಷಣೆ ಮಾಡಿತ್ತು. ಆದರೆ ಇಂಥ ನಿರ್ಧಾರ ಇದೇ ಮೊದಲಲ್ಲ. ಸ್ವತಂತ್ರ ಮತ್ತು ಸ್ವತಂತ್ರ ಪೂರ್ವ ಭಾರತದ ಇತಿಹಾಸದಲ್ಲಿ ಈ ಹಿಂದೆ ಹಲವು ಬಾರಿ ಹೀಗೆ ಚಲಾವಣೆಯಲ್ಲಿದ್ದ ನೋಟುಗಳನ್ನು ಬಳಕೆಯಿಂದ ಹಿಂದಕ್ಕೆ ಪಡೆದ ಉದಾಹರಣೆಯಿದೆ. 1946ರಲ್ಲಿ ಅಂದಿನ ಸರ್ಕಾರ 500 ರು ಮತ್ತು ಅದಕ್ಕಿಂತ ಹೆಚ್ಚಿನ ಮುಖಬೆಲೆಯ ನೋಟುಗಳನ್ನು ಬಳಕೆಯಿಂದ ಹಿಂದಕ್ಕೆ ಪಡೆದಿತ್ತು. ತೆರಿಗೆ ವಂಚನೆ ಮತ್ತು ಕಪ್ಪುಹಣದ ವ್ಯವಹಾರಕ್ಕೆ ಕಡಿವಾಣ ಹಾಕಲು ಅಂದಿನ ಸರ್ಕಾರ ಈ ನಿರ್ಧಾರ ಕೈಗೊಂಡಿತ್ತು.

ಆದರೆ 1954ರಲ್ಲಿ ಮತ್ತೆ ಸರ್ಕಾರ 1000, 5000 ಮತ್ತು 10000 ರು. ಮುಖಬೆಲೆಯ ನೋಟುಗಳನ್ನು ಮರಳಿ ಬಿಡುಗಡೆ ಮಾಡಿತು. 1978ರಲ್ಲಿ ಮತ್ತೆ ತೆರಿಗೆ ವಂಚನೆ (Tax evasion) ಮತ್ತು ಕಪ್ಪುಹಣದ (Black Money) ವ್ಯವಹಾರದ ಕಡಿವಾಣದ ಹೆಸರಲ್ಲಿ ಸರ್ಕಾರ ಈ ನೋಟುಗಳನ್ನು ರದ್ದುಪಡಿಸಿತು. 2014ರಲ್ಲಿ ಆದೇಶವೊಂದನ್ನು ಹೊರಡಿಸಿದ್ದ ಆರ್‌ಬಿಐ, 2005ಕ್ಕಿಂತ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದ ಎಲ್ಲಾ ಮುಖಬೆಲೆಯ ನೋಟುಗಳನ್ನು ಹಿಂದಕ್ಕೆ ಪಡೆಯುವ ಘೋಷಣೆ ಮಾಡಿತ್ತು. ಇನ್ನು 2016ರಲ್ಲಿ ಕೇಂದ್ರ ಸರ್ಕಾರ 500 ರು. ಮತ್ತು 1000 ರು. ಮುಖಬೆಲೆಯ ನೋಟುಗಳನ್ನು ರದ್ದುಪಡಿಸಿತ್ತು.

ಬ್ಯಾಂಕ್ ಖಾತೆ ಇಲ್ಲದವರು 2000ರೂ. ನೋಟು ವಿನಿಮಯ ಮಾಡಿಕೊಳ್ಳುವುದು ಹೇಗೆ? ಎಲ್ಲಿ?

ಈಗಾಗಲೇ 2000 ರು. ನೋಟು ಬಳಕೆ ಬಹುತೇಕ ಸ್ಥಗಿತ

2000 ರು. ಮುಖಬೆಲೆಯ ನೋಟು ಅಪನಗದೀಕರಣ ಭಾರತದ ಆರ್ಥಿಕತೆ, ಜಿಡಿಪಿ ಮತ್ತು ಹಣಕಾಸು ನೀತಿಯ ಮೇಲೆ ಶೂನ್ಯ ಪರಿಣಾಮ ಬೀರಲಿದೆ ಎಂದು ಹಲವು ಆರ್ಥಿಕ ತಜ್ಞರು ಪ್ರತಿಕ್ರಿಯಿಸಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಕೇಂದ್ರ ಹಣಕಾಸು ಇಲಾಖೆಯ ಮಾಜಿ ಕಾರ್ಯದ ಕಾರ್ಯದರ್ಶಿ ಸುಭಾಶ್‌ ಚಂದ್ರ ಗರ್ಗ್ (subhash chandra Garg) ‘2016ರಲ್ಲಿ ಕೈಗೊಂಡ ನೋಟು ಅಮಾನ್ಯೀಕರಣ ವೇಳೆ ಆಕಸ್ಮಿಕ ಕಾರಣಗಳಿಂದಾಗಿ ತಾತ್ಕಾಲಿಕ ಹಣದ ಕೊರತೆಯನ್ನು ನೀಗಿಸಲು ಹೆಚ್ಚಿನ ಮೌಲ್ಯದ 2,000 ರು. ನೋಟು ಚಲಾವಣೆಗೆ ತರಲಾಯಿತು. ಆದರೆ ಕಳೆದ ಐದಾರು ವರ್ಷಗಳಿಂದ ಡಿಜಿಟಲ್‌ ಪಾವತಿಯಲ್ಲಿ (digital Payment) ತ್ವರಿತ ಬೆಳವಣಿಗೆಯಾಗುತ್ತಿದೆ. ಜತೆಗೆ ಈ ನೋಟುಗಳ ಬಳಕೆಯೂ ಕಡಿಮೆಯಾಗಿದೆ. ಹೀಗಾಗಿ 2000 ರು. ನೋಟುಗಳ ಚಲಾವಣೆ ಸ್ಥಗಿತವು ಚಲಾವಣೆಯಲ್ಲಿರುವ ನೋಟುಗಳ ಮೇಲೆ ಹಾಗೂ ಯಾವುದೇ ವಿತ್ತೀಯ ಕಾರ್ಯಾಚರಣೆಗಳ ಮೇಲೆ ನೋಟು ಅಮಾನ್ಯೀಕರಣ (Demonitaization) ಪರಿಣಾಮ ಬೀರುವುದಿಲ್ಲ’ ಎಂದು ಹೇಳಿದ್ದಾರೆ.

ಕಪ್ಪು ಹಣದ ವಿರುದ್ದ ಸರ್ಜಿಕಲ್ ಸ್ಟ್ರೈಕ್, 2000 ನೋಟು ಹಿಂತೆಗೆದ ಪ್ರಶಂಸಿದ ಮೋದಿ ಮಾಜಿ ಕಾರ್ಯದರ್ಶಿ!

ಇನ್ನು ‘2000.ರು ಮುಖಬೆಲೆಯ ನೋಟುಗಳ ಚಲಾವಣೆಯನ್ನು ಸ್ಥಗಿತಗೊಳಿಸಿದ ಆರ್‌ಬಿಐ (RBI) ನಿರ್ಧಾರದಿಂದ ದೇಶದ ಆರ್ಥಿಕತೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಏಕೆಂದರೆ ಅಮಾನ್ಯವಾದ ನೋಟುಗಳ ಮೌಲ್ಯವನ್ನು ಕಡಿಮೆ ಮುಖ ಬೆಲೆಯ ನೋಟುಗಳಿಂದ ಸಮಾನವಾದ ನಗದು ಅಥವಾ ಠೇವಣಿಯಿಂದ ಬದಲಾಯಿಸಲಾಗುತ್ತದೆ. ಹೀಗಾಗಿ ಹಣ ಪೂರೈಕೆಯ ಮೇಲೆ ಪರಿಣಾಮ ಬೀರುವುದಿಲ್ಲ. ಅಕ್ರಮ ಸಾಗಣೆಯನ್ನು ಹೆಚ್ಚು ಕಠಿಣಗೊಳಿಸುವುದು ಈ ಕ್ರಮದ ಹಿಂದಿನ ಉದ್ದೇಶವಾಗಿದೆ’ ಎಂದು ನೀತಿ ಆಯೋಗದ ಮಾಜಿ ಉಪಾಧ್ಯಕ್ಷ ಅರವಿಂದ್‌ ಪನಾಗರಿಯಾ ಹೇಳಿದ್ದಾರೆ.

ಅಲ್ಲದೇ ಪ್ರಸ್ತುತ 2,000 ಮುಖಬೆಲೆಯ ನೋಟುಗಳು ಸಾರ್ವಜನಿಕರ ಬಳಿ ಇರುವ ಹಣದ ಕೇವಲ ಶೇ.10.8 ರಷ್ಟನ್ನು ಪ್ರತಿನಿಧಿಸುತ್ತದೆ. ಬಹುಷ ಅದರಲ್ಲಿ ಹೆಚ್ಚಿನವು ಅಕ್ರಮ ವಹಿವಾಟುಗಳಿಗೆ ಬಳಸಲ್ಪಡುತ್ತವೆ ಎಂದಿದ್ದಾರೆ.

Follow Us:
Download App:
  • android
  • ios