Asianet Suvarna News Asianet Suvarna News

Tax Returns: ಆದಾಯ ತೆರಿಗೆ ಪಾವತಿ ಗಡುವು ವಿಸ್ತರಣೆ ಇಲ್ಲ: ಕೇಂದ್ರ

  • ಆದಾಯ ತೆರಿಗೆ ಗಡುವು ದಿನಾಂಕ ವಿಸ್ತರಣೆ ಇಲ್ಲ
  • ಕಳೆದ ಬಾರಿ ಕೊರೋನಾ ಸಾಂಕ್ರಾಮಿಕದ ಕಾರಣಕ್ಕೆ ಸೆಪ್ಟೆಂಬರ್‌ 30ರವರೆಗೂ ಗಡುವು
December 31 Deadline For Income Tax Returns Not Extended dpl
Author
Bangalore, First Published Jan 1, 2022, 5:00 AM IST

ನವದೆಹಲಿ(ಜ.01): ಆದಾಯ ತೆರಿಗೆ ಗಡುವು ದಿನಾಂಕ ವಿಸ್ತರಣೆ ಇಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಡಿ. 31 ಆದಾಯ ತೆರಿಗೆ ಪಾವತಿಗೆ ಕೊನೆಯ ದಿನಾಂಕವಾಗಿತ್ತು ಎಂದು ಕಂದಾಯ ಇಲಾಖೆ ಕಾರ‍್ಯದರ್ಶಿ ತರುಣ್‌ ಬಜಾಜ್‌ ಮಾಹಿತಿ ನೀಡಿದ್ದಾರೆ. ಸಾಮಾನ್ಯವಾಗಿ ಜುಲೈ 31 ತೆರಿಗೆ ಪಾವತಿಗೆ ಕೊನೆಯ ದಿನಾಂಕವಾಗಿರುತ್ತದೆ. ಆದರೆ ಕಳೆದ ಬಾರಿ ಕೊರೋನಾ ಸಾಂಕ್ರಾಮಿಕದ ಕಾರಣಕ್ಕೆ ಸೆಪ್ಟೆಂಬರ್‌ 30ರವರೆಗೂ ಗಡುವು ವಿಸ್ತರಿಸಲಾಗಿತ್ತು. ಆ ಬಳಿಕ ಡಿ. 31ರವರೆಗೂ ತೆರಿಗೆದಾರರಿಗೆ ಸಮಯ ನೀಡಲಾಗಿತ್ತು. ಗಡುವು ಮುಗಿದ ಬಳಿಕ ಪಾವತಿ ಮಾಡುವವರಿಗೆ ದಂಡ ವಿಧಿಸಲಾಗುತ್ತದೆ. ಆದರೆ ಇ-ವೆರಿಫೈ ಅವಧಿಯನ್ನು ಮಾತ್ರ 2022ರ ಫೆ.28ಕ್ಕೆ ವಿಸ್ತರಿಸಲಾಗಿತ್ತು.

2020-21ನೇ ಆರ್ಥಿಕ ಸಾಲಿನ ಆದಾಯ ತೆರಿಗೆ ರಿಟರ್ನ್ಸ್ (ITR)ಸಲ್ಲಿಕೆಗೆ ಡಿಸೆಂಬರ್ 31 ಕೊನೆಯ ದಿನಾಂಕವಾಗಿದೆ. ಆದ್ರೆ ಐಟಿ ಫೋರ್ಟಲ್ ನಲ್ಲಿನ (Portal)ತಾಂತ್ರಿಕ ಸಮಸ್ಯೆಗಳ ಕಾರಣಕ್ಕೆ ಐಟಿಆರ್ ಫೈಲ್(ITR file) ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಅನೇಕ ತೆರಿಗೆದಾರರು(Taxpayers) ದೂರಿದ್ದಾರೆ. ಈ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಇಲಾಖೆ(Income tax department) ಐಟಿಆರ್ ಸಲ್ಲಿಕೆಗಿರೋ ಅಂತಿಮ ಗಡುವು ವಿಸ್ತರಿಸೋ ಸಾಧ್ಯತೆಯಿದೆ. ಒಂದು ವೇಳೆ ತೆರಿಗೆದಾರ ಅಂತಿಮ ದಿನಾಂಕದೊಳಗೆ ಆದಾಯ ತೆರಿಗೆ ರಿಟರ್ನ್(ITR) ಸಲ್ಲಿಕೆ ಮಾಡಲು ವಿಫಲನಾದ್ರೆ ಏನಾಗುತ್ತೆ? ಇದಕ್ಕೆ ಎಷ್ಟು ದಂಡ ವಿಧಿಸಲಾಗುತ್ತೆ?  ಈ ಎಲ್ಲ ಮಾಹಿತಿಗಳು ಇಲ್ಲಿವೆ.

ಡಿ.31 ಐಟಿಆರ್ ಸಲ್ಲಿಕೆಗೆ ಕೊನೆಯ ಅವಕಾಶವೇ? : ಐಟಿ ಫೋರ್ಟಲ್ ನಲ್ಲಿನ ತಾಂತ್ರಿಕ ದೋಷದ ಹಿನ್ನೆಲೆಯಲ್ಲಿ ಸದ್ಯ ಇಂಥದೊಂದು ಪ್ರಶ್ನೆ ತೆರಿಗೆದಾರರ ಮನಸ್ಸಿನಲ್ಲಿ ಮೂಡೋದು ಸಹಜ. ಆದಾಯ ತೆರಿಗೆ ರಿಟರ್ನ್(ITR) ಸಲ್ಲಿಕೆಗೆ ಸಂಬಂಧಿಸಿ ಎರಡು ದಿನಾಂಕಗಳಿರುತ್ತವೆ. ಒಂದು ನಿಗದಿತ ದಿನಾಂಕ (Due date)ಹಾಗೂ ಇನ್ನೊಂದು ಅಂತಿಮ ದಿನಾಂಕ(Last date).ಸಾಮಾನ್ಯವಾಗಿ ಈ ಹಿಂದಿನ ವರ್ಷಗಳಲ್ಲಿ ಜುಲೈ 31 ನಿಗದಿತ ದಿನಾಂಕ ಹಾಗೂ ಡಿಸೆಂಬರ್ 31 ಅಂತಿಮ ದಿನಾಂಕವಾಗಿರುತ್ತಿತ್ತು, ಆದ್ರೆ ಈ ಬಾರಿ ಹೊಸದಾಗಿ ಪ್ರಾರಂಭಿಸಿರೋ ಐಟಿ ಪೋರ್ಟಲ್ ನಲ್ಲಿ ತಾಂತ್ರಿಕ ಸಮಸ್ಯೆ ಎದುರಾದ ಹಿನ್ನೆಲೆಯಲ್ಲಿ ನಿಗದಿತ ದಿನಾಂಕವನ್ನು ಡಿಸೆಂಬರ್ 31ಕ್ಕೆ ಹಾಗೂ ಅಂತಿಮ ದಿನಾಂಕವನ್ನು ಮಾರ್ಚ್ 31ಕ್ಕೆ ವಿಸ್ತರಿಸಲಾಗಿದೆ. ಹೀಗಾಗಿ ಈ ವರ್ಷ ಆದಾಯ ತೆರಿಗೆ ರಿಟರ್ನ್ ಸಲ್ಲಿಕೆಗೆ ಡಿ.31 ಕೊನೆಯ ಅವಕಾಶವಲ್ಲ. ಒಂದು ವೇಳೆ ನಿಮಗೆ ಡಿ.31ರೊಳಗೆ ಐಟಿಆರ್ ಫೈಲ್ ಮಾಡಲು ಸಾಧ್ಯವಾಗದಿದ್ರೆ 2022ರ ಮಾರ್ಚ್ 31ರೊಳಗೆ ನೀವು ಐಟಿಆರ್ ಸಲ್ಲಿಕೆ ಮಾಡಬಹುದು. 

ಡಿ.31ರೊಳಗೆ ಸಲ್ಲಿಕೆ ಮಾಡದಿದ್ರೆ ಏನೆಲ್ಲ ಸಮಸ್ಯೆಗಳಾಗುತ್ತವೆ?

 2020-21ನೇ ಆರ್ಥಿಕ ಸಾಲಿನ ಐಟಿಆರ್ ಸಲ್ಲಿಕೆಗೆ ಡಿ.31 ನಿಗದಿತ ದಿನಾಂಕವಾಗಿದೆ((Due date) ಹೀಗಾಗಿ ನೀವು ಡಿ.31ರೊಳಗೆ ನೀವು ಐಟಿಆರ್ ಸಲ್ಲಿಕೆ ಮಾಡದಿದ್ರೆ ಇನ್ನೊಂದು ಅವಕಾಶವಿದ್ರು ಕೂಡ ಕೆಲವೊಂದು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅದೇನಂದ್ರೆ ಈ ವರ್ಷ ನೀವು ಅನುಭವಿಸಿದ ನಷ್ಟವನ್ನು ಮುಂದಿನ ಆರ್ಥಿಕ ಸಾಲಿನಲ್ಲಿ ನೀವು ಗಳಿಸೋ ಲಾಭಕ್ಕೆ ಸರಿಹೊಂದಿಸೋ (Setoff)ಅವಕಾಶವನ್ನು ನೀವು ಕಳೆದುಕೊಳ್ಳುತ್ತೀರಿ. ಇನ್ನು ನಿಮ್ಮ ಆದಾಯದಿಂದ ಈಗಾಗಲೇ ಹೆಚ್ಚುವರಿಯಾಗಿ ಕಡಿತಗೊಂಡ ತೆರಿಗೆಗೆ ನೀವು ಸೂಕ್ತ ದಾಖಲೆಗಳನ್ನು ಒದಗಿಸಿದ್ರೆ ಅದನ್ನು ಆದಾಯ ತೆರಿಗೆ ಇಲಾಖೆ ನಿಮಗೆ ಮರುಪಾವತಿ (Refund) ಮಾಡುತ್ತದೆ. ಆದ್ರೆ ನೀವು ಡಿ.31ರೊಳಗೆ ಐಟಿಆರ್ ಫೈಲ್ ಮಾಡದಿದ್ರೆ ನಿಮಗೆ ತೆರಿಗೆ ಮರುಪಾವತಿ ಮಾಡಲಾಗೋದಿಲ್ಲ. ಅಷ್ಟೇ ಅಲ್ಲ, ಒಂದು ವೇಳೆ ನೀವು ಈ ತನಕ ಪಾವತಿ ಮಾಡಿದ ತೆರಿಗೆ ಆದಾಯ ತೆರಿಗೆ ಇಲಾಖೆ ಲೆಕ್ಕ ಹಾಕಿದ ತೆರಿಗೆಗಿಂತ ಕಡಿಮೆ ಇದ್ರೆ ಬಾಕಿ ತೆರಿಗೆ ಪಾವತಿಸೋ ಜೊತೆಗೆ ಅದಕ್ಕೆ ಬಡ್ಡಿಯನ್ನು(Interest) ಕೂಡ ಕಟ್ಟಬೇಕಾಗುತ್ತದೆ. 

ಡಿ.31ರೊಳಗೆ ಐಟಿಆರ್ ಸಲ್ಲಿಸದಿದ್ರೆ 5,000ರೂ. ದಂಡ

ನಿಗದಿತ ದಿನಾಂಕದೊಳಗೆ ಅಂದ್ರೆ ಡಿ.31ರೊಳಗೆ ಐಟಿಆರ್ ಫೈಲ್ ಮಾಡದಿದ್ರೆ 5ಸಾವಿರ ರೂ. ದಂಡ(Fine) ಪಾವತಿಸಬೇಕಾಗುತ್ತದೆ. ಆದ್ರೆ ತೆರಿಗೆಗೊಳಪಡೋ ಆದಾಯ 5ಲಕ್ಷ ರೂ. ಗಿಂತ ಹೆಚ್ಚಿದ್ರೆ ಮಾತ್ರ ಇದು ಅನ್ವಯಿಸುತ್ತದೆ. ಒಂದು ವೇಳೆ ತೆರಿಗೆಗೊಳಪಡೋ ಆದಾಯ 5ಲಕ್ಷ ರೂ.ಗಿಂತ ಕಡಿಮೆಯಿದ್ರೆ ಒಂದು ಸಾವಿರ ರೂ. ದಂಡ ವಿಧಿಸಲಾಗುತ್ತದೆ. 

Follow Us:
Download App:
  • android
  • ios