Asianet Suvarna News Asianet Suvarna News

ದೊಡ್ಡ ಮೊತ್ತದ ಕ್ರೆಡಿಟ್ ಕಾರ್ಡ್ ಬಿಲ್ ಅಥವಾ ಸಾಲದ ಸುಳಿಯಲ್ಲಿ ಸಿಲುಕಿದ್ದೀರಾ? ಈ 5 ಟಿಪ್ಸ್ ಪಾಲಿಸಿ ಸಾಲಮುಕ್ತರಾಗಿ!

ದೊಡ್ಡ ಮೊತ್ತದ ಕ್ರೆಡಿಟ್ ಕಾರ್ಡ್ ಬಿಲ್ ಅಥವಾ ಸಾಲ ಅನೇಕರ ನೆಮ್ಮದಿ ಕೆಡಿಸಿರುತ್ತದೆ. ಇದರ ಸುಳಿಯಿಂದ ಹೊರಬರೋದು ಹೇಗೆ ಎಂಬುದೇ ತಿಳಿಯುವುದಿಲ್ಲ. ಅಂಥವರು ಈ 5 ಟಿಪ್ಸ್ ಪಾಲಿಸಿದ್ರೆ ಬೇಗ ಸಾಲಮುಕ್ತರಾಗಬಹುದು. 
 

Debt repayment 5 key tips to help you clear a big credit card bill or loan easily anu
Author
First Published Mar 2, 2024, 5:22 PM IST

Business Desk:ಇಂದು ಕ್ರೆಡಿಟ್ ಕಾರ್ಡ್ ನಮಗೆ ಅನೇಕ ವಿಧದಲ್ಲಿ ನೆರವಾಗಿದೆ. ಬ್ಯಾಂಕ್ ಖಾತೆಯಲ್ಲಿ ಹಣವಿಲ್ಲದಿದ್ರೂ ನಮಗೆ ಅಗತ್ಯವಾದ ವಸ್ತು ಅಥವಾ ಸೇವೆಗಳನ್ನು ಖರೀದಿಸಲು ಅದು ನೆರವು ನೀಡುತ್ತಿದೆ. ಆದರೆ, ಕ್ರೆಡಿಟ್ ಕಾರ್ಡ್ ಅನ್ನು ಬಳಸುವಾಗ ಎಚ್ಚರ ವಹಿಸೋದು ಕೂಡ ಅಗತ್ಯ. ಏಕೆಂದ್ರೆ ಅನೇಕರು ಕೈಯಲ್ಲಿ ಕ್ರೆಡಿಟ್ ಕಾರ್ಡ್ ಇದೆಯೆಂದು ಅಗತ್ಯಕ್ಕಿಂತ ಹೆಚ್ಚಿನ ಮೊತ್ತವನ್ನು ವ್ಯಯಿಸುತ್ತಾರೆ. ಆ ಬಳಿಕ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಸೋದು ಕಷ್ಟವಾಗುತ್ತದೆ. ಒಂದು ವೇಳೆ ಒಂದಕ್ಕಿಂತ ಹೆಚ್ಚಿನ ಕ್ರೆಡಿಟ್ ಕಾರ್ಡ್ ಗಳಿರುವ ಸಂದರ್ಭದಲ್ಲಿ ಸಾಲ ಹೆಚ್ಚುತ್ತ ಸಾಗಿ ನಮ್ಮ ಕೈಮೀರಿ ಹೋಗುವ ಸಾಧ್ಯತೆಯಿರುತ್ತದೆ. ಇದನ್ನೇ ಕ್ರೆಡಿಟ್ ಕಾರ್ಡ್ ಸಾಲದ ಸೈಕಲ್ ಎಂದು ಕರೆಯುತ್ತೇವೆ. ಈ ರೀತಿ ಕ್ರೆಡಿಟ್ ಕಾರ್ಡ್ ಗಳ ಬಿಲ್ ಹೆಚ್ಚಿ ಪಾವತಿಸಲು ಕಷ್ಟವಾದ ಸಂದರ್ಭದಲ್ಲಿ ಸಾಲ ಮಾಡೋರು ಕೂಡ ಇದ್ದಾರೆ. ಇದರಿಂದ ಸಾಲದ ಪ್ರಮಾಣ ಹೆಚ್ಚುತ್ತ ಸಾಗಿ ಮುಂದೆ ಸಾಲದ ಸುಳಿಯಲ್ಲಿ ಸಿಲುಕುವ ಸಾಧ್ಯತೆ ಹೆಚ್ಚಿರುತ್ತದೆ. ಹೀಗಿರುವ ದೊಡ್ಡ ಮೊತ್ತದ ಕ್ರೆಡಿಟ್ ಕಾರ್ಡ್ ಬಿಲ್ ಅಥವಾ ಸಾಲವನ್ನು ತೀರಿಸೋದು ಹೇಗೆ?

ಸಾಲದ ತ್ವರಿತ ಪಾವತಿಗೆ ಈ ಐದು ಟಿಪ್ಸ್
1.ಜಾಣತನದಿಂದ ವ್ಯಯಿಸಿ:

ಕ್ರೆಡಿಟ್ ಕಾರ್ಡ್ ಕೈಯಲ್ಲಿದೆ ಎಂದು ಮನಸ್ಸು ಬಯಸಿದ್ದೆಲ್ಲವನ್ನು ಖರೀದಿಸಬೇಡಿ. ಆಸೆ ಹಾಗೂ ಅಗತ್ಯಗಳ ನಡುವಿನ ವ್ಯತ್ಯಾಸ ಅರಿಯಿರಿ. ಕ್ರೆಡಿಟ್ ಕಾರ್ಡ್ ಇದ್ದರೆ ಆ ಕ್ಷಣಕ್ಕೆ ಕಂಡಿದ್ದೆಲ್ಲವನ್ನು ಖರೀದಿಸಬಹುದು. ಆದರೆ, ನಂತರ ಆ ಹಣವನ್ನು ನೀವೇ ಪಾವತಿಸಬೇಕು ಎಂಬುದು ನೆನಪಿರಲಿ. ಹೀಗಾಗಿ ಅನಗತ್ಯ ವೆಚ್ಚ ಮಾಡಬೇಡಿ. ತಿಂಗಳ ಕೊನೆಯಲ್ಲಿ ದೊಡ್ಡ ಮೊತ್ತದ ಕ್ರೆಡಿಟ್ ಕಾರ್ಡ್ ಬಿಲ್ ಸೃಷ್ಟಿಯಾಗದಂತೆ ಎಚ್ಚರ ವಹಿಸಿ. 

ಬೀದಿಬದಿ ವ್ಯಾಪಾರಿಗಳಿಗೆ ವರದಾನ ಪಿಎಂ ಸ್ವನಿಧಿ ಯೋಜನೆ; ಈ ಸಾಲಕ್ಕೆ ಅರ್ಜಿ ಸಲ್ಲಿಸೋದು ಹೇಗೆ?

2.ಸಾಲದ ಸೈಕಲ್ ಅರಿಯಿರಿ: ಸಾಲದ ಸೈಕಲ್ ಬಗ್ಗೆ ಮೊದಲು ತಿಳಿಯಿರಿ.  ಕ್ರೆಡಿಟ್ ಕಾರ್ಡ್ ಸಾಲ ಸುಳಿಯಂತೆ. ಒಮ್ಮೆ ಅದಕ್ಕೆ ಸಿಲುಕಿದರೆ ಮತ್ತೆ ಹೊರಬರಲು ಹೆಣಗಾಡಬೇಕಾಗುತ್ತದೆ. ಒಂದು ತಿಂಗಳು ನಿಮ್ಮ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಸೋದು ಕಷ್ಟವಾಗಿ ಅದು ಉಳಿದರೆ, ಮುಂದಿನ ತಿಂಗಳು ಕೂಡ ಸಾಲ ಪಾವತಿಸೋದು ಕಷ್ಟವಾಗುತ್ತದೆ. ಈ ಸೈಕಲ್ ಹೀಗೆ ಮುಂದುವರಿಯುತ್ತದೆ. ಹೀಗಾಗಿ ಈ ಸಾಲದ ಸೈಕಲ್ ಬಗ್ಗೆ ನೀವು ಮಾಹಿತಿ ಹೊಂದಿರೋದು ಅಗತ್ಯ. ಎಲ್ಲ ಸಾಲಗಳಿಗೂ ಕನಿಷ್ಠ ಮೊತ್ತವನ್ನು ಪಾವತಿಸಿ. ಹಾಗೆಯೇ ಅಧಿಕ ಬಡ್ಡಿದರದ ಸಾಲಕ್ಕೆ ಹೆಚ್ಚಿನ ಮೊತ್ತವನ್ನು ಮೀಸಲಿಡಿ. ಹೀಗೆ ಮಾಡೋದ್ರಿಂದ ಒಟ್ಟು ಸಾಲದ ಹೊರೆಯನ್ನು ಕಡಿಮೆ ಮಾಡಿಕೊಳ್ಳಬಹುದು. 

3.ಅಧಿಕ ಬಡ್ಡಿ ಸಾಲ ಮರುಪಾವತಿಗೆ ಹೆಚ್ಚಿನ ಆದ್ಯತೆ: ಅಧಿಕ ಬಡ್ಡಿದರದ ಸಾಲವನ್ನು ತೀರಿಸಲು ಮೊದಲ ಆದ್ಯತೆ ನೀಡಿ. ಏಕೆಂದ್ರೆ ಅಧಿಕ ಬಡ್ಡಿದರದ ಸಾಲಗಳು ದೀರ್ಘಾವಧಿಯಲ್ಲಿ ಹೆಚ್ಚು ದುಬಾರಿಯಾಗುತ್ತವೆ. ಹೀಗಾಗಿ ಅಧಿಕ ಬಡ್ಡಿದರದ ಸಾಲಗಳನ್ನು ಮೊದಲು ತೀರಿಸಲು ಪ್ರಯತ್ನಿಸಿ. ಇದರಿಂದ ಒಟ್ಟು ಸಾಲದ ಮೊತ್ತವನ್ನು ದೀರ್ಘಾವಧಿಯಲ್ಲಿ ತಗ್ಗಿಸಲು ಸಾಧ್ಯವಾಗುತ್ತದೆ. 

ಗೃಹಸಾಲ ಸೇರಿದಂತೆ ವಿವಿಧ ಸಾಲಗಳ ಬಡ್ಡಿದರದಲ್ಲಿ ಏರಿಕೆ; 8 ಬ್ಯಾಂಕುಗಳ ಪರಿಷ್ಕೃತ ಬಡ್ಡಿದರ ಹೀಗಿದೆ

4.ಅಧಿಕ ಬಡ್ಡಿದರದ ಸಾಲ ಮೊದಲು ತೀರಿಸಿ: ಅಧಿಕ ಬಡ್ಡಿದರದ ಸಾಲವನ್ನು ಮೊದಲು ತೀರಿಸಿ. ಹಾಗಂತ ಕಡಿಮೆ ಬಡ್ಡಿದರದ ಸಾಲವನ್ನು ನಿರ್ಲಕ್ಷಿಸಬೇಡಿ. ಅಧಿಕ ಬಡ್ಡಿದರದ ಸಾಲ ತೀರಿಸಿದ ಬಳಿಕ ಆ ನಂತರದ ಹೆಚ್ಚಿನ ಬಡ್ಡಿದರದ ಸಾಲ ತೀರಿಸಿ. ಹಾಗೆಯೇ ಇತರ ಸಾಲಗಳಿಗೆ ಕನಿಷ್ಠ ಮೊತ್ತ ಪಾವತಿಸೋದನ್ನು ಮರೆಯಬೇಡಿ. 

5.ಕಡಿಮೆ ಬಡ್ಡಿ ಸಾಲ ನಿರ್ಲಕ್ಷಿಸಬೇಡಿ: ಅಧಿಕ ಬಡ್ಡಿದರದ ಸಾಲವನ್ನು ಮೊದಲು ತೀರಿಸಬೇಕು ಎಂಬ ಧಾವಂತಕ್ಕೆ ಬಿದ್ದು ಕಡಿಮೆ ಬಡ್ಡಿದರದ ಸಾಲಗಳನ್ನು ನಿರ್ಲಕ್ಷಿಸಬೇಡಿ. ಕಡಿಮೆ ಬಡ್ಡಿದರದ ಸಾಲಗಳ ಪಾವತಿಗೂ ಗಮನ ನೀಡಿ. 

Latest Videos
Follow Us:
Download App:
  • android
  • ios