2018-19ನೇ ಸಾಲಿನ ಟಿಡಿಎಸ್‌ ವಿತರಣೆಯಲ್ಲಿ ವಿಳಂಬವಾಗಿರುವ ಹಿನ್ನೆಲೆ| ಆದಾಯ ತೆರಿಗೆ ರಿಟರ್ನ್ಸ್‌ ಸಲ್ಲಿಕೆ ಅವಧಿ ಆ.31ರವರೆಗೆ ವಿಸ್ತರಿಸಿದ ಸರ್ಕಾರ

ನವದೆಹಲಿ[ಜು.24]: ಆದಾಯ ತೆರಿಗೆ ರಿಟರ್ನ್ಸ್‌ ಸಲ್ಲಿಕೆಗೆ ಇದ್ದ ಜುಲೈ 31ರ ಗಡುವನ್ನು ಆ.31ರವರೆಗೆ ವಿಸ್ತರಣೆ ಮಾಡಲಾಗಿದೆ. ಲೆಕ್ಕಪರಿಶೋಧನೆಗೆ ಒಳಪಡದ ವೈಯಕ್ತಿಕ, ವೇತನದಾರರು ಮತ್ತು ಸಂಸ್ಥೆಗಳು 2018-19ನೇ ಸಾಲಿನ ತಮ್ಮ ಆದಾಯ ತೆರಿಗೆ ರಿಟನ್ಸ್‌ರ್‍ ಅನ್ನು ದಂಡ ರಹಿತವಾಗಿ 2019ರ ಆ.31ರೊಳಗೆ ಸಲ್ಲಿಕೆ ಮಾಡಬಹುದಾಗಿದೆ ಎಂದು ಕೇಂದ್ರೀಯ ನೇರ ತೆರಿಗೆ ಮಂಡಳಿ ಸೋಮವಾರ ಪ್ರಕಟಣೆ ಹೊರಡಿಸಿದೆ.

2018-19ನೇ ಸಾಲಿನ ಟಿಡಿಎಸ್‌ ವಿತರಣೆಯಲ್ಲಿ ವಿಳಂಬವಾಗಿರುವ ಹಿನ್ನೆಲೆಯಲ್ಲಿ, ಆದಾಯ ತೆರಿಗೆ ರಿಟನ್ಸ್‌ರ್‍ ಸಲ್ಲಿಕೆ ದಿನಾಂಕ ವಿಸ್ತರಿಸಬೇಕೆಂಬ ಬೇಡಿಕೆ ಕೇಳಿಬಂದಿತ್ತು. ಅದಕ್ಕೆ ತೆರಿಗೆ ಮಂಡಳಿ ಸಮ್ಮತಿಸಿದೆ.

ಕಳೆದ ತಿಂಗಳಷ್ಟೇ ಆದಾಯ ತೆರಿಗೆ ಇಲಾಖೆಯು, ಉದ್ಯೋಗದಾತರು ಫಾರಂ 16 ಟಿಡಿಎಸ್‌ ಸರ್ಟಿಫಿಕೇಟ್‌ ವಿತರಿಸಲು ಇದ್ದ ಗಡುವನ್ನು ಜುಲೈ 10ರವರೆಗೆ ಅಂದರೆ 25 ದಿನಗಳ ಕಾಲ ವಿಸ್ತರಿಸಿತ್ತು. ಪರಿಣಾಮ ವೇತನದಾರ ತೆರಿಗೆದಾರರಿಗೆ ತಮ್ಮ ಆದಾಯ ರಿಟನ್ಸ್‌ರ್‍ ಸಲ್ಲಿಸಲು ಕೇವಲ 20 ದಿನಗಳ ಮಾತ್ರ ಸಮಯ ಸಿಕ್ಕಂತೆ ಆಗಿತ್ತು.