Asianet Suvarna News Asianet Suvarna News

Pensioners Jeevan Pramaan Patra: ಪಿಂಚಣಿದಾರರಿಗೆ ಶುಭಸುದ್ದಿ, ಜೀವಿತಾವಧಿ ಪ್ರಮಾಣ ಪತ್ರ ಸಲ್ಲಿಕೆ ಗಡುವು ವಿಸ್ತರಣೆ

ಸರ್ಕಾರದ ಪ್ರತಿ ನಿವೃತ್ತ ಉದ್ಯೋಗಿ ಪಿಂಚಣಿ ಮುಂದುವರಿಕೆಗೆ ನವೆಂಬರ್ 30ರೊಳಗೆ ಜೀವಿತಾವಧಿ ಪ್ರಮಾಣಪತ್ರ ಸಲ್ಲಿಸೋದು ಕಡ್ಡಾಯ. ಆದ್ರೆ ಈ ಬಾರಿ ಸರ್ಕಾರ ಈ ಗಡುವನ್ನು ಡಿ.31ರ ತನಕ ವಿಸ್ತರಿಸಿದೆ.

Deadline for submitting jeevan pramaan certificate extended till dec 31 2021 anu
Author
Bangalore, First Published Dec 2, 2021, 7:26 PM IST


ನವದೆಹಲಿ (ಡಿ.2): ಸರ್ಕಾರ ಪಿಂಚಣಿದಾರರಿಗೆ (Pensioners) ನಿರಾಳತೆ ನೀಡುವಂಥ ಸುದ್ದಿಯೊಂದನ್ನು ಪ್ರಕಟಿಸಿದೆ. ಸಿಬ್ಬಂದಿ, ಸಾವರ್ಜನಿಕ ಕೊಂದುಕೊರತೆ ಹಾಗೂ ಪಿಂಚಣಿ ಸಚಿವಾಲಯವು ಜೀವಿತಾವಧಿ ಪ್ರಮಾಣ ಪತ್ರ (Life Certificate) ಸಲ್ಲಿಸೋ ಗಡುವನ್ನುನವೆಂಬರ್ 30ರಿಂದ ಡಿಸೆಂಬರ್ 31ರವರೆಗೆ ವಿಸ್ತರಿಸಿದೆ. ಕೇಂದ್ರ ಸರ್ಕಾರದ ಪ್ರತಿ ನಿವೃತ್ತ  ಉದ್ಯೋಗಿ ಪಿಂಚಣಿ (Pension) ಮುಂದುವರಿಕೆಗೆ ನವೆಂಬರ್ ತಿಂಗಳಲ್ಲಿ ಜೀವಿತಾವಧಿ ಪ್ರಮಾಣಪತ್ರ ಸಲ್ಲಿಸೋದು ಕಡ್ಡಾಯ. ಈ ಕಾರ್ಯಕ್ಕಾಗಿ ದೊಡ್ಡ ಸಂಖ್ಯೆಯಲ್ಲಿ ಪಿಂಚಣಿದಾರರು ಬ್ಯಾಂಕ್ (Bank) ಶಾಖೆಗಳಿಗೆ ಭೇಟಿ ನೀಡುತ್ತಾರೆ. ನಿವೃತ್ತ ನೌಕರರಾಗಿರೋ ಕಾರಣ ಇವರೆಲ್ಲರೂ ವಯಸ್ಸಾದವರೇ ಆಗಿರುತ್ತಾರೆ. ಆದ್ರೆ ಕೋವಿಡ್ -19 (COVID-19)ಪ್ರಕರಣಗಳು ಕೆಲವು ರಾಜ್ಯಗಳಲ್ಲಿ ಹೆಚ್ಚುತ್ತಿರೋದನ್ನು ಗಮನಿಸಿ ನಿವೃತ್ತ ನೌಕರರ ಆರೋಗ್ಯದ ದೃಷ್ಟಿಯಿಂದ  ಸಿಬ್ಬಂದಿ, ಸಾವರ್ಜನಿಕ ಕೊಂದುಕೊರತೆ ಹಾಗೂ ಪಿಂಚಣಿ ಸಚಿವಾಲಯವು ಜೀವಿತಾವಧಿ ಪ್ರಮಾಣಪತ್ರ ಸಲ್ಲಿಕೆ ಗಡುವನ್ನು ವಿಸ್ತರಿಸಿದೆ. ಹೀಗಾಗಿ ನವೆಂಬರ್ 30ರೊಳಗೆ ಪಿಂಚಣಿ ಪ್ರಮಾಣಪತ್ರ ಸಲ್ಲಿಸಲು ಸಾಧ್ಯವಾಗದ ನಿವೃತ್ತ ಉದ್ಯೋಗಿಗಳು ಆತಂಕಪಡಬೇಕಾದ ಅಗತ್ಯವಿಲ್ಲ. ಡಿಸೆಂಬರ್ 31ರ ತನಕ ಸಮಯಾವಕಾಶ ನೀಡಲಾಗಿದ್ದು, ಅಷ್ಟರೊಳಗೆ ಸಲ್ಲಿಕೆ ಮಾಡಿದರೆ ಸಾಕು.

ವಿಸ್ತರಿಸಿದ ಅವಧಿಯಲ್ಲಿ ಪಿಂಚಣಿ ಸಿಗುತ್ತೆ
ಗಡುವು ವಿಸ್ತರಿಸಿರೋ ಕಾರಣ ಈ ತಿಂಗಳು ಪಿಂಚಣಿ ಹಣ ಸಿಗುತ್ತದೆಯೋ ಇಲ್ಲವೋ ಎಂಬ ಆತಂಕ ಬೇಡ. ಪಿಂಚಣಿ ಹಂಚಿಕೆ ಅಧಿಕಾರಿಗಳು (PDAs) ಪಿಂಚಣಿ ಹಣವನ್ನು ಈ ತಿಂಗಳು ಎಲ್ಲರಿಗೂ ನೀಡುತ್ತಾರೆ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ. ಜೀವಿತ ಪ್ರಮಾಣಪತ್ರಗಳನ್ನು ಪಡೆಯೋ ಸಂದರ್ಭದಲ್ಲಿ ಶಾಖೆಗಳಲ್ಲಿ ಜನಜಂಗುಳಿ ಉಂಟಾಗದಂತೆ ಕ್ರಮ ಕೈಗೊಳ್ಳಬೇಕು. ಸಾಮಾಜಿಕ ಅಂತರದ ಜೊತೆಗೆ ಮಾಸ್ಕ್ ಸೇರಿದಂತೆ ಕೋವಿಡ್ -19ಗೆ ಸಂಬಂಧಿಸಿದ ಎಲ್ಲ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವಂತೆ  ಪಿಂಚಣಿ ಹಂಚಿಕೆ ಅಧಿಕಾರಿಗಳಿಗೆ ಸಚಿವಾಲಯ ಸೂಚಿಸಿದೆ. 

21.38 ಕೋಟಿ ಇಪಿಎಫ್ ಖಾತೆಗೆ ಬಡ್ಡಿ ಜಮೆ, ಬ್ಯಾಲೆನ್ಸ್ ಚೆಕ್ ಮಾಡೋದು ಹೇಗೆ?

80 ವರ್ಷ ಮೇಲ್ಪಟ್ಟವರು ಅಕ್ಟೋಬರ್ ನಲ್ಲೇ ಸಲ್ಲಿಸಬಹುದು
80 ವರ್ಷ ಮೇಲ್ಪಟ್ಟ ಪಿಂಚಣಿದಾರರು ಪ್ರತಿ ವರ್ಷ ಅಕ್ಟೋಬರ್ 1ರಿಂದಲೇ ಜೀವಿತ ಪ್ರಮಾಣಪತ್ರವನ್ನು ಸಲ್ಲಿಕೆ ಮಾಡಬಹುದು. ಆದ್ರೆ ಇದಕ್ಕಿಂತ ಕಡಿಮೆ ವಯಸ್ಸಿನ ಇತರ ಸರ್ಕಾರಿ ನಿವೃತ್ತ ನೌಕರರು ಪ್ರತಿವರ್ಷ ನವೆಂಬರ್ 1ರಿಂದ ನವೆಂಬರ್ 30ರೊಳಗೆ ಜೀವಿತ ಪ್ರಮಾಣಪತ್ರ ಸಲ್ಲಿಸಬೇಕು. ಇನ್ನು ನೌಕರರ ಪಿಂಚಣಿ ಯೋಜನೆ 1995 ಅಡಿಯಲ್ಲಿ ಪಿಂಚಣಿ ಪಡೆಯುತ್ತಿರೋರು ಒಂದು ವರ್ಷದ ಅವಧಿ ಮುಗಿಯು ಮುನ್ನ ಯಾವ ಸಮಯದಲ್ಲಿ ಬೇಕಾದ್ರೂ ಜೀವಿತ ಪ್ರಮಾಣಪತ್ರ ಸಲ್ಲಿಸಬಹುದು. 

ನೀವಿನ್ನೂ ಈ ಅಪ್ಡೇಟ್‌ ಮಾಡದಿದ್ದರೆ, ಮುಂದಿನ ತಿಂಗಳಿನಿಂದ EPF ಹಣ ಬಂದ್!

ಸಲ್ಲಿಕೆ ವಿಧಾನ
ಸಿಬ್ಬಂದಿ, ಸಾವರ್ಜನಿಕ ಕೊಂದುಕೊರತೆ ಹಾಗೂ ಪಿಂಚಣಿ ಸಚಿವಾಲಯವು 2021ರ ಸೆಪ್ಟೆಂಬರ್ ನಲ್ಲಿ ಹೊರಡಿಸಿರೋ ಅಧಿಸೂಚನೆಯಲ್ಲಿ ಪಿಂಚಣಿದಾರರು ಯಾವೆಲ್ಲ ವಿಧಾನಗಳ ಮೂಲಕ ಜೀವಿತ ಪ್ರಮಾಣಪತ್ರ ಸಲ್ಲಿಕೆ ಮಾಡಬಹುದು ಎಂಬ ಮಾಹಿತಿ ನೀಡಿದೆ. ಇದರ ಅನ್ವಯ ಒಬ್ಬ ಪಿಂಚಣಿದಾರ ಬ್ಯಾಂಕ್, ಪೋಸ್ಟ್ ಆಫೀಸ್ ಗೆ ಭೇಟಿ ನೀಡಿ ಅಥವಾ ಆನ್ ಲೈನ್ ಮೂಲಕ ಜೀವಿತ ಪ್ರಮಾಣಪತ್ರ ಸಲ್ಲಿಕೆ ಮಾಡಬಹುದು. ಜೀವನ್ ಪ್ರಮಾಣ್ ಫೋಟರ್ಲ್ (https://jeevanpramaan.gov.in/) ಮೂಲಕ ಜೀವಿತ ಪ್ರಮಾಣಪತ್ರ ಸಲ್ಲಿಸಬಹುದು. ಇದಕ್ಕೆ ಪಿಂಚಣಿದಾರರು ಈ ಪೋರ್ಟಲ್ ನಿಂದ ಜೀವನ್ ಪ್ರಮಾಣ್ ಅಪ್ಲಿಕೇಷನ್ ಡೌನ್ ಲೋಡ್ ಮಾಡಿಕೊಳ್ಳಬೇಕು. ಇತ್ತೀಚೆಗೆ SBI  ವಿಡಿಯೋ ಜೀವಿತ ಪ್ರಮಾಣಪತ್ರ ಸಲ್ಲಿಕೆ ಸೌಲಭ್ಯ ಕಲ್ಪಿಸಿದ್ದು, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಉಳಿತಾಯ ಖಾತೆ ಮೂಲಕ ಪಿಂಚಣಿ ಪಡೆಯುತ್ತಿರೋರು ಮನೆಯಲ್ಲೇ ಕುಳಿತು ಜೀವಿತ ಪ್ರಮಾಣಪತ್ರ ಸಲ್ಲಿಕೆ ಮಾಡಬಹುದಾಗಿದೆ. ಕೋರೋನಾ ಹಾವಳಿ ಹೆಚ್ಚುತ್ತಿರೋ ಕಾರಣ ಆನ್ ಲೈನ್ ಮೂಲಕ ಜೀವಿತ ಪ್ರಮಾಣ ಪತ್ರ ಸಲ್ಲಿಸೋದು ಹೆಚ್ಚು ಸುರಕ್ಷಿತ ಕೂಡ ಹೌದು. 

Follow Us:
Download App:
  • android
  • ios