Asianet Suvarna News Asianet Suvarna News

DA Update:ಸರ್ಕಾರಿ ಉದ್ಯೋಗಿಗಳಿಗೆ ಶುಭಸುದ್ದಿ; ಈ ತಿಂಗಳು ಶೇ.4ರಷ್ಟು ತುಟ್ಟಿ ಭತ್ಯೆ ಏರಿಕೆ?

*ಜನವರಿ ಹಾಗೂ ಜುಲೈನಲ್ಲಿ ವರ್ಷದಲ್ಲಿ ಎರಡು ಬಾರಿ ಡಿಎ ಹೆಚ್ಚಳ
*ಪ್ರಸ್ತುತ ಸರ್ಕಾರಿ ಉದ್ಯೋಗಿಗಳಿಗೆ ಮೂಲವೇತನದ ಶೇ.34ರಷ್ಟು ಡಿಎ
*ಡಿಎ ಹೆಚ್ಚಳದಿಂದ 50ಲಕ್ಷ ಸರ್ಕಾರಿ ಉದ್ಯೋಗಿಗಳು ಹಾಗೂ  65ಲಕ್ಷ ಪಿಂಚಣಿದಾರರಿಗೆ ಪ್ರಯೋಜನ

DA Update Government Employee Salary To Rise Soon As Dearness Allowance May Be Hiked 4percent
Author
Bangalore, First Published Jul 24, 2022, 6:27 PM IST

ನವದೆಹಲಿ (ಜು.24): ಸರ್ಕಾರಿ ಉದ್ಯೋಗಿಗಳಿಗೆ ಶೀಘ್ರದಲ್ಲೇ ವೇತನ ಹೆಚ್ಚಳದ ಶುಭ ಸುದ್ದಿ ಸಿಗುವ ನಿರೀಕ್ಷೆಯಿದೆ. ಏಕೆಂದ್ರೆ ಅವರ ತುಟ್ಟಿ ಭತ್ಯೆಯನ್ನು (ಡಿಎ) ಕೇಂದ್ರ ಸರ್ಕಾರ ಶೇ.4ರಷ್ಟು ಹೆಚ್ಚಳ ಮಾಡುವ ನಿರೀಕ್ಷೆಯಿದೆ ಎಂದು ಕೆಲವು ವರದಿಗಳು ತಿಳಿಸಿವೆ. ಅಖಿಲ ಭಾರತ ಗ್ರಾಹಕರ ಬೆಲೆ ಸೂಚ್ಯಂಕದ (ಕೈಗಾರಿಕ ಉದ್ಯೋಗಿಗಳು) ಮೇ ಅಂಕಿಅಂಶಗಳು ಕೂಡ ಡಿಎಯಲ್ಲಿ ಹೆಚ್ಚಳವಾಗುವ ಸಾಧ್ಯತೆಯಿದೆ ಎಂದು ಸಲಹೆ ನೀಡಿದೆ. ಡಿಎಯನ್ನು ವರ್ಷದಲ್ಲಿ ಎರಡು ಬಾರಿ ಅಂದರೆ ಜನವರಿ ಹಾಗೂ ಜುಲೈನಲ್ಲಿ ಪರಿಷ್ಕರಿಸಲಾಗುತ್ತದೆ. ಹೀಗಾಗಿ ಈ ತಿಂಗಳು ಡಿಎ ಹೆಚ್ಚಳವಾಗೋದು ಬಹುತೇಕ ಖಚಿತ. ಡಿಎ ಪರಿಷ್ಕರಣೆಗೆ ಅಖಿಲ ಭಾರತ ಗ್ರಾಹಕ ಬೆಲೆ ಸೂಚ್ಯಂಕ (ಎಐಸಿಪಿಐ) ಮಾನದಂಡವಾಗಿದ್ದು,ಅದರ ಆಧಾರದಲ್ಲಿ ಡಿಎಯನ್ನು ಪರಿಷ್ಕರಿಸಲಾಗುತ್ತದೆ. ಈಗ ಎಐಸಿಪಿಐ ಆರ್ ಬಿಐಯ ಸಹನ ಮಟ್ಟಕ್ಕಿಂತ ಮೇಲಿದ್ದು, ಸರ್ಕಾರಿ ಉದ್ಯೋಗಿಗಳ ಡಿಎಯಲ್ಲಿ ಹೆಚ್ಚಳವಾಗುವ ಸಾಧ್ಯತೆ ಕೂಡ ಅಧಿಕವಿದೆ. ಜೂನ್ ನಲ್ಲಿ ಚಿಲ್ಲರೆ ಹಣದುಬ್ಬರ ಶೇ. 7.01ರಷ್ಟಿದ್ದು,
ಆರ್ ಬಿಐ ಸಹನ ಮಟ್ಟವಾದ ಶೇ.2-6ಕ್ಕಿಂತ ಹೆಚ್ಚಿದೆ. ಇತ್ತೀಚಿನ ಮಾಧ್ಯಮ ವರದಿಗಳ ಪ್ರಕಾರ ಉದ್ಯೋಗಿಗಳ ತುಟ್ಟಿ ಭತ್ಯೆಯಲ್ಲಿ ಶೇ.4ರಷ್ಟು ಹೆಚ್ಚಳವಾಗುವ ಸಾಧ್ಯತೆಯಿದೆ, ಆ ಬಳಿಕ ಡಿಎ ಶೇ.38ಕ್ಕೆ ಏರಿಕೆಯಾಗಲಿದೆ. ಏಳನೇ ವೇತನ ಆಯೋಗದಡಿಯಲ್ಲಿ ಡಿಎಯನ್ನು ಶೇ.3ಕ್ಕೆ ಏರಿಕೆ ಮಾಡಲು ಮಾರ್ಚ್ ನಲ್ಲಿ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಪರಿಣಾಮ ಡಿಎ ಅನ್ನು ಮೂಲವೇತನದ ಶೇ.34ಕ್ಕೆ ಹೆಚ್ಚಳವಾಗಿತ್ತು. ಈ ನಡೆಯಿಂದ  50ಲಕ್ಷ ಸರ್ಕಾರಿ ಉದ್ಯೋಗಿಗಳು ಹಾಗೂ 65ಲಕ್ಷ ಪಿಂಚಣಿದಾರರಿಗೆ ಪ್ರಯೋಜನವಾಗಿದೆ. 

ತುಟ್ಟಿ ಭತ್ಯೆ ಅಥವಾ ಡಿಎ ಅನ್ನು ಸರ್ಕಾರಿ ನೌಕರರಿಗೆ ನೀಡಿದ್ರೆ, ಡಿಯರನೆಸ್ ರಿಲೀಫ್ (DR) ಅನ್ನು ಪಿಂಚಣಿದಾರರಿಗೆ ನೀಡಲಾಗುತ್ತದೆ. ವರದಿಗಳ ಅನ್ವಯ ಸರ್ಕಾರಿ ಉದ್ಯೋಗಿಗಳು ಡಿಎ ಹೆಚ್ಚಳದ ಜೊತೆಗೆ  2ಲಕ್ಷ ರೂ. ಬಾಕಿ ಡಿಎ ಶಿಲ್ಕು ಹಣವನ್ನು ಕೂಡ ಪಡೆಯಲಿದ್ದಾರೆ. ಡಿಎ ಶಿಲ್ಕು ಮೊತ್ತವನ್ನು ಉದ್ಯೋಗಿಗಳ ವೇತನ ಹಾಗೂ ಅದರ ಸ್ವರೂಪದ ಆಧಾರದಲ್ಲಿ ನಿರ್ಧರಿಸಲಾಗುತ್ತದೆ. 

ಜಿಎಸ್‌ಟಿ ತಪ್ಪಿಸಲು ಇನ್ಮುಂದೆ 26 ಕೇಜಿ ಚೀಲದಲ್ಲಿ ಅಕ್ಕಿ..!

ಕೋವಿಡ್ -19 ಕಾರಣದಿಂದ ಸೃಷ್ಟಿಯಾದ ಹೆಚ್ಚುವರಿ ವೆಚ್ಚಗಳನ್ನು ಭರಿಸಲು ಕೇಂದ್ರ ಸರ್ಕಾರ ಡಿಎ (DA) ಹಾಗೂ ಡಿಆರ್ (DR) ದರ ಹೆಚ್ಚಳದ ಮೂರು ಕಂತುಗಳನ್ನು ತಡೆ ಹಿಡಿದಿತ್ತು. 2020 ಜನವರಿ 1, 2020 ಜುಲೈ 1 ಹಾಗೂ 2021ರ ಜನವರಿ 1ರ ಡಿಎ ಹಾಗೂ ಡಿಆರ್ ಕಂತುಗಳನ್ನು ಸರ್ಕಾರ ತಡೆ ಹಿಡಿದಿತ್ತು. ಕೇಂದ್ರ ಸರ್ಕಾರಿ ನೌಕರರ ಡಿಎ ಹಾಗೂ ಡಿಆರ್ ದರವನ್ನು ವರ್ಷಕ್ಕೆ ಎರಡು ಬಾರಿ ಜನವರಿ ಮತ್ತು ಜುಲೈಯಲ್ಲಿ ನವೀಕರಿಸಲಾಗುತ್ತದೆ.  ಡಿಎ ಹಾಗೂ ಡಿಆರ್ ದರ ಏರಿಕೆಯನ್ನು ತಡೆ ಹಿಡಿಯೋ ಮೂಲಕ ಸುಮಾರು 34,402 ಕೋಟಿ ರೂ. ಉಳಿತಾಯ ಮಾಡಲಾಗಿದೆ ಎಂದು ಕಳೆದ ವರ್ಷ ಆಗಸ್ಟ್ ನಲ್ಲಿ ರಾಜ್ಯಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ವಿತ್ತ ಸಚಿವೆ (Finance Minister) ನಿರ್ಮಲಾ ಸೀತಾರಾಮನ್ (Nirmala Sitharaman ) ಮಾಹಿತಿ ನೀಡಿದ್ದರು. 2021ರ ಜುಲೈನಲ್ಲಿ ಡಿಎ ಹಾಗೂ ಡಿಆರ್ ಹೆಚ್ಚಳದ ಮೇಲಿನ ತಡೆಯನ್ನು ಹಿಂಪಡೆದ ಸರ್ಕಾರ, ಆ ಬಳಿಕ ಒಟ್ಟು ಮೂರು ಬಾರಿ ಡಿಎ ಹಾಗೂ ಡಿಆರ್ ಭತ್ಯೆಗಳಲ್ಲಿ ಹೆಚ್ಚಳ ಮಾಡಿತ್ತು. 

ಕರ್ಣಾಟಕ ಬ್ಯಾಂಕಿಗೆ 114 ಕೋಟಿ ಲಾಭ

ಡಿಎ ಲೆಕ್ಕಚಾರ ಹೀಗೆ
ಉದ್ಯೋಗಿಗಳ ಜೀವನ ನಿರ್ವಹಣಾ ವೆಚ್ಚದ ಆಧಾರದಲ್ಲಿ ಡಿಎ ನಿಗದಿಪಡಿಸಲಾಗುತ್ತದೆ. ಉದ್ಯೋಗಿ ನಗರ, ಗ್ರಾಮೀಣ, ಅರೆಪಟ್ಟಣ ಹೀಗೆ ಯಾವ ಪ್ರದೇಶದಲ್ಲಿ ವಾಸಿಸುತ್ತಾನೆ ಎಂಬ ಆಧಾರದಲ್ಲಿ ಡಿಎ ನಿಗದಿಪಡಿಸಲಾಗುತ್ತದೆ. ಕೇಂದ್ರ ಸರ್ಕಾರಿ ನೌಕರರು ಹಾಗೂ ಪಿಂಚಣಿದಾರರ ಡಿಎ ಲೆಕ್ಕಾಚಾರ ಮಾಡೋ ಫಾರ್ಮುಲಾವನ್ನು ಕೇಂದ್ರ ಸರ್ಕಾರ 2006ರಲ್ಲಿ ಬದಲಾಯಿಸಿತ್ತು.ಅದು ಈ ಕೆಳಗಿನಂತಿದೆ.
ತುಟ್ಟಿ ಭತ್ಯೆ %= (ಅಖಿಲ ಭಾರತ ಗ್ರಾಹಕ ದರ ಸೂಚ್ಯಂಕದ ಸರಾಸರಿ (ಮೂಲ ವರ್ಷ 2001=100) ಕಳೆದ 3 ತಿಂಗಳು-126.33)/126.33)x100.
 

Follow Us:
Download App:
  • android
  • ios