ಸೂರತ್‌[ಫೆ.06]: ಕೊರೋನಾ ವೈರಸ್‌ನಿಂದಾಗಿ ಹಾಂಗ್‌ಕಾಂಗ್‌ ಜೊತೆಗಿನ ರಫ್ತು ವ್ಯವಹಾರ ಸಂಪೂರ್ಣ ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ಸೂರತ್‌ ವಜ್ರೋದ್ಯಮ ಭಾರೀ ನಷ್ಟದತ್ತ ಮುಖ ಮಾಡಿದೆ.

ಸೂರತ್‌ನಿಂದ ಪಾಲಿಶ್‌ ಮಾಡಿದ ವಜ್ರಾಭರಣ ಆಮದು ಮಾಡಿಕೊಳ್ಳುವ ದೇಶಗಳ ಪೈಕಿ ಹಾಂಕಾಂಗ ಮುಂಚೂಣಿಯಲ್ಲಿದೆ. ಸೂರತ್‌ ಒಂದರಿಂದಲೇ ಪ್ರತಿವರ್ಷ 50000 ಕೋಟಿ ರು.ಮೌಲ್ಯದ ಪಾಲಿಶ್‌ ಮಾಡಿದ ವಜ್ರ ಹಾಂಕಾಂಗ್‌ಗೆ ರಫ್ತಾಗುತ್ತದೆ.

ಆದರೆ ಕೊರೋನಾ ಭೀತಿ ಕಾರಣ ಹಾಂಕಾಂಗ್‌ನಲ್ಲಿ ತುರ್ತುಪರಿಸ್ಥಿತಿ ಘೋಷಿಸಲಾಗಿದೆ. ಹೀಗಾಗಿ ಇನ್ನು 2 ತಿಂಗಳ ಅವಧಿಗೆ ಅಲ್ಲಿಗೆ ವಜ್ರ ರಫ್ತು ಸ್ಥಗಿತಗೊಳುವ ಸಾಧ್ಯತೆ ಇದೆ. ಹೀಗಾದಲ್ಲಿ ಸುಮಾರು 8000 ಕೋಟಿ ರು. ವಹಿವಾಟು ನಷ್ಟವಾಗುತ್ತದೆ ಎಂದು ಸ್ಥಳೀಯ ಉದ್ಯಮಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

"

ಕೊರೋನಾ ಎಫೆಕ್ಟ್: ವರ ಇಲ್ಲದೆ ನಡೀತು ರಿಸೆಪ್ಷನ್‌!

ಚೀನಾದಲ್ಲಿ ಮತ್ತೆ 65 ಬಲಿ: ಸಾವಿನ ಸಂಖ್ಯೆ 490ಕ್ಕೇರಿಕೆ

ಇತ್ತೀಚಿನ ವರ್ಷಗಳಲ್ಲೇ ಅತ್ಯಂತ ಮಾರಕ ಎನಿಸಿರುವ ಕೊರೋನಾವೈರಸ್‌ಗೆ ಚೀನಾದಲ್ಲಿ ಮತ್ತೆ 65 ಮಂದಿ ಬಲಿಯಾಗಿದ್ದಾರೆ. ಇದರಿಂದಾಗಿ ಈ ಸೋಂಕು ಕಾಣಿಸಿಕೊಂಡಾಗಿನಿಂದ ಈವರೆಗೆ ಸಾವಿಗೀಡಾದವರ ಸಂಖ್ಯೆ ಬರೋಬ್ಬರಿ 490ಕ್ಕೇರಿಕೆಯಾಗಿದೆ. ಈ ನಡುವೆ, ಹೊಸದಾಗಿ 3887 ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿದ್ದು, ವೈರಾಣುಬಾಧೆಯಿಂದ ಸಮಸ್ಯೆಗೆ ತುತ್ತಾದವರ ಸಂಖ್ಯೆ 24324ಕ್ಕೆ ಹೆಚ್ಚಳವಾಗಿದೆ.

ಹೊಸದಾಗಿ ಸೋಂಕು ಪತ್ತೆಯಾದವರ ಪೈಕಿ 431 ಮಂದಿಯ ಪರಿಸ್ಥಿತಿ ಗಂಭೀರವಾಗಿದೆ. ಒಟ್ಟಾರೆ 3219 ಮಂದಿ ಚಿಂತಾಜನಕ ಸ್ಥಿತಿಯಲ್ಲೇ ಮುಂದುವರಿದಿದ್ದಾರೆ ಎಂದು ಹೇಳಲಾಗಿದೆ. ಕೊರೋನಾ ಸೋಂಕಿನ ಕೇಂದ್ರ ಬಿಂದುವಾಗಿರುವ ಹುಬೆ ಪ್ರಾಂತ್ಯ ಹಾಗೂ ಅದರ ರಾಜಧಾನಿ ವುಹಾನ್‌ನಲ್ಲೇ ಎಲ್ಲ 65 ಸಾವುಗಳೂ ವರದಿಯಾಗಿವೆ ಎಂದು ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗ ವರದಿ ನೀಡಿದೆ. ಸೋಂಕು ನಿವಾರಣೆಯಾದ ಹಿನ್ನೆಲೆಯಲ್ಲಿ 892 ಮಂದಿಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.