ವಾಷಿಂಗ್ಟನ್‌[ಮಾ.11]: ಕೊರೋನಾ ಹಾಗೂ ಜಾಗತಿಕ ಮಾರುಕಟ್ಟೆಯಲ್ಲಿ ತೀವ್ರ ಪ್ರಮಾಣದ ತೈಲ ಬೆಲೆ ಕುಸಿತದ ಪರಿಣಾಮ ವಿಶ್ವದ 500 ಶ್ರೀಮಂತರ ಆಸ್ತಿ ಸೋಮವಾರ ಒಂದೇ ದಿನ ಬರೋಬ್ಬರಿ 15 ಲಕ್ಷ ಕೋಟಿ ರು.ನಷ್ಟು ಕರಗಿದೆ.

ಈ ಪ್ರಕಾರ ಭಾರತದ ಅತೀ ಶ್ರೀಮಂತ ಉದ್ಯಮಿ ಎಂದೇ ಖ್ಯಾತರಾಗಿದ್ದ ಮುಕೇಶ್‌ ಅಂಬಾನಿ ಅವರ ಆಸ್ತಿ ಒಂದೇ ದಿನಕ್ಕೆ 43,000 ಕೋಟಿ ರು. ಕುಸಿತವಾಗಿದೆ.

ಕೊರೋನಾ ವೈರಸ್ ಸಂಬಂಧಿತ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಅಲ್ಲದೆ, ಅಮೆಜಾನ್‌ ಸಂಸ್ಥಾಪಕ ಜೆಫ್‌ ಬಿಜೋಸ್‌, ಬರ್ಕ್ಶೈರ್‌ ಹ್ಯಾಥ್‌ವೇ ಮಾಲಿಕ ವಾರನ್‌ ಬಫೆಟ್‌ ಅವರ ಆಸ್ತಿ 4.4 ಬಿಲಿಯನ್‌ ಡಾಲರ್‌(32 ಸಾವಿರ ಕೋಟಿ ರು.) ಇಳಿಕೆ ದಾಖಲಿಸಿದೆ.