ನವದೆಹಲಿ(ಮೇ.27): ಕೊರೋನಾ ವೈರಸ್‌ ಬಿಕ್ಕಟ್ಟಿನಿಂದಾಗಿ ದೇಶದ ಆರ್ಥಿಕತೆಗೆ ಎಷ್ಟುನಷ್ಟವಾಗಿದೆ ಎಂಬುದರ ಮೊದಲ ಅಧಿಕೃತ ಅಂದಾಜು ಕೊನೆಗೂ ಹೊರಬಿದ್ದಿದೆ. ಕೋವಿಡ್‌-19 ಸಮಸ್ಯೆ ಆರಂಭವಾದ ನಂತರ ಒಟ್ಟಾರೆ ಇಲ್ಲಿಯವರೆಗೆ ದೇಶಕ್ಕೆ 30.3 ಲಕ್ಷ ಕೋಟಿ ರು. ನಷ್ಟವಾಗಿದೆ ಎಂದು ಎಸ್‌ಬಿಐನ ಇಕೋರಾರ‍ಯಪ್‌ ವಿಭಾಗದ ಅಧ್ಯಯನ ವರದಿ ಹೇಳಿದೆ.

"

 

ಈ ನಷ್ಟಇತ್ತೀಚೆಗೆ ಕೇಂದ್ರ ಸರ್ಕಾರ ಪ್ರಕಟಿಸಿದ 20 ಲಕ್ಷ ಕೋಟಿ ರು. ಆರ್ಥಿಕ ಪ್ಯಾಕೇಜ್‌ನ ಶೇ.50ರಷ್ಟುಹೆಚ್ಚು ಎಂಬುದು ಗಮನಾರ್ಹ.

ಅತಿಹೆಚ್ಚು ನಷ್ಟಅನುಭವಿಸಿದ ರಾಜ್ಯಗಳ ಪಟ್ಟಿಯಲ್ಲಿ ಕೊರೋನಾ ಸೋಂಕಿತರು ಹೆಚ್ಚಿರುವ ಮಹಾರಾಷ್ಟ್ರ ನಂ.1 ಸ್ಥಾನದಲ್ಲಿ, ತಮಿಳುನಾಡು ನಂ.2, ಗುಜರಾತ್‌ ನಂ.3 ಸ್ಥಾನದಲ್ಲಿವೆ. ಮಹಾರಾಷ್ಟ್ರಕ್ಕೆ 4.7 ಲಕ್ಷ ಕೋಟಿ ರು., ತಮಿಳುನಾಡಿಗೆ 2.9 ಲಕ್ಷ ಕೋಟಿ ರು. ಹಾಗೂ ಗುಜರಾತ್‌ಗೆ 2.6 ಲಕ್ಷ ಕೋಟಿ ರು. ನಷ್ಟವಾಗಿದೆ. ನಷ್ಟದಲ್ಲಿ ಕರ್ನಾಟಕ ನಂ.5 ಸ್ಥಾನದಲ್ಲಿದ್ದು, ಕೊರೋನಾದಿಂದಾಗಿ ರಾಜ್ಯದ ಆರ್ಥಿಕತೆಗೆ 2,02,407 ಕೋಟಿ ರು. ನಷ್ಟವಾಗಿದೆ.

ಮಹಿಳಾ ಉದ್ಯಮಿಗಳ ಪರ ರಾಜೀವ್ ಚಂದ್ರಶೇಖರ್ ವಕಾಲತ್ತು. ವಿತ್ತ ಸಚಿವರಿಗೆ ಸಲಹೆಗಳು

ಕೊರೋನಾ ಹರಡುವುದನ್ನು ತಡೆಯಲು ಲಾಕ್‌ಡೌನ್‌ ಘೋಷಿಸಿದ ಮೇಲೆ ದೇಶದ ಆರ್ಥಿಕತೆಗೆ ಎಷ್ಟುನಷ್ಟವಾಗಿದೆ ಎಂಬುದರ ಕುರಿತು ನಡೆಸಲಾದ ಮೊದಲ ಅಧ್ಯಯನ ಇದಾಗಿದೆ. ಎಸ್‌ಬಿಐ ಸಮೂಹದ ಮುಖ್ಯ ಆರ್ಥಿಕ ಸಲಹೆಗಾರ ಸೌಮ್ಯಕಾಂತಿ ಘೋಷ್‌ ಇದಕ್ಕೆ ಸಂಬಂಧಿಸಿದ ವರದಿ ಸಿದ್ಧಪಡಿಸಿದ್ದಾರೆ. ಕೊರೋನಾ ಸೋಂಕಿನಿಂದ ಯಾವ್ಯಾವ ಜಿಲ್ಲೆಗಳಿಗೆ ಎಷ್ಟುನಷ್ಟವಾಗಿದೆ ಮತ್ತು ಹಸಿರು, ಕಿತ್ತಳೆ ಹಾಗೂ ಕೆಂಪು ವಲಯಗಳಿಗೆ ಎಷ್ಟುನಷ್ಟವಾಗಿದೆ ಎಂಬ ತಳಮಟ್ಟದ ಅಧ್ಯಯನ ನಡೆಸಿ ಒಟ್ಟಾರೆ ದೇಶದ ಸಮಗ್ರ ರಾಷ್ಟ್ರೀಯ ಉತ್ಪನ್ನ (ಜಿಡಿಪಿ)ಕ್ಕೆ ಎಷ್ಟುನಷ್ಟವಾಗಿದೆ ಎಂಬುದನ್ನು ಕಂಡುಹಿಡಿಯಲಾಗಿದೆ.

ಜಿಡಿಪಿಗೆ ಆದ ಒಟ್ಟು ನಷ್ಟದಲ್ಲಿ ಮೊದಲ 10 ರಾಜ್ಯಗಳ ಕೊಡುಗೆಯೇ ಶೇ.75ರಷ್ಟಿದೆ. ಇನ್ನು, ಕೆಂಪು ವಲಯಗಳಿಂದಲೇ ಶೇ.50ರಷ್ಟುನಷ್ಟವಾಗಿದೆ. ಹಸಿರು ವಲಯಗಳಲ್ಲಿ ಅತಿ ಕಡಿಮೆ ನಷ್ಟವಾಗಿದೆ. ಏಕೆಂದರೆ ಹಸಿರು ವಲಯಗಳೆಲ್ಲ ಹೆಚ್ಚಾಗಿ ಗ್ರಾಮೀಣ ಭಾಗದಲ್ಲಿವೆ.

2021ರಲ್ಲಿ ಜಿಡಿಪಿ -6.8% ಬೆಳವಣಿಗೆ

ಕೊರೋನಾ ಬಿಕ್ಕಟ್ಟಿನಿಂದಾಗಿ 2020ನೇ ಸಾಲಿನ 4ನೇ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆ ದರ ಶೇ.1.2 ಇರಲಿದೆ. 2020ರ ಒಟ್ಟಾರೆ ಜಿಡಿಪಿ ಅಭಿವೃದ್ಧಿ ದರ ಶೇ.4.2 ಇರಲಿದೆ. ಆದರೆ, 2021ರ ಜಿಡಿಪಿ ಅಭಿವೃದ್ಧಿ ದರ ಶೂನ್ಯಕ್ಕಿಂತ ಕೆಳಗಿಳಿಯಲಿದ್ದು, ಶೇ.-6.8 ಆಗಲಿದೆ ಎಂದು ಇಕೋರಾರ‍ಯಪ್‌ ವರದಿ ಹೇಳಿದೆ.

ಮಹಿಳಾ ಉದ್ಯಮಿಗಳ ಪರ ರಾಜೀವ್ ಚಂದ್ರಶೇಖರ್ ವಕಾಲತ್ತು. ವಿತ್ತ ಸಚಿವರಿಗೆ ಸಲಹೆಗಳು

ಲಾಕ್‌ಡೌನ್‌ನಿಂದ ರಾಜ್ಯಕ್ಕೆ ಜಿಡಿಪಿಯ ಶೇ.11.4 ನಷ್ಟ

ಕೊರೋನಾ ಲಾಕ್‌ಡೌನ್‌ನಿಂದಾಗಿ ಕರ್ನಾಟಕಕ್ಕೆ ರಾಜ್ಯದ ಜಿಡಿಪಿಯ (ಎಸ್‌ಡಿಜಿಪಿ) ಶೇ.11.4ರಷ್ಟುನಷ್ಟವಾಗಿದೆ. ರಾಜ್ಯಕ್ಕೆ ಒಟ್ಟು 2,02,407 ಕೋಟಿ ರು. ನಷ್ಟವಾಗಿದ್ದು, ಇದು ದೇಶದ ಜಿಡಿಪಿಗಾದ ನಷ್ಟದ ಶೇ.6.7 ಆಗಿದೆ. ದೇಶದಲ್ಲಿ ಕೊರೋನಾದಿಂದ ನಷ್ಟಅನುಭವಿಸಿದ ಟಾಪ್‌ ರಾಜ್ಯಗಳಲ್ಲಿ ಕರ್ನಾಟಕ 5ನೇ ಸ್ಥಾನದಲ್ಲಿದೆ. ಕರ್ನಾಟಕಕ್ಕೆ ಹಸಿರು ವಲಯಗಳಿಂದ ಶೇ.22ರಷ್ಟು, ಕಿತ್ತಳೆ ವಲಯಗಳಿಂದ ಶೇ.41.3 ಹಾಗೂ ಕೆಂಪು ವಲಯಗಳಿಂದ ಶೇ.36.7ರಷ್ಟುನಷ್ಟವಾಗಿದೆ ಎಂದು ಎಸ್‌ಬಿಐ ಇಕೋರಾರ‍ಯಪ್‌ ವರದಿ ಹೇಳಿದೆ.

ನಷ್ಟದಲ್ಲಿ ಟಾಪ್‌ 10 ರಾಜ್ಯಗಳು

ರಾಜ್ಯ| ನಷ್ಟ(ಲಕ್ಷ ಕೋಟಿ ರು.)| ದೇಶದ ನಷ್ಟದಲ್ಲಿ ಪಾಲು

ಮಹಾರಾಷ್ಟ್ರ 4.72 15.6%

ತಮಿಳುನಾಡು 2.86 9.4%

ಗುಜರಾತ್‌ 2.61 8.6%

ಉತ್ತರ ಪ್ರದೇಶ 2.53 8.3%

ಕರ್ನಾಟಕ 2.02 6.7%

ಪಶ್ಚಿಮ ಬಂಗಾಳ 1.99 6.6%

ದೆಹಲಿ 1.69 5.6%

ರಾಜಸ್ಥಾನ 1.54 5.1%

ಆಂಧ್ರಪ್ರದೇಶ 1.49 4.9%

ತೆಲಂಗಾಣ 1.46 4.8%