Asianet Suvarna News Asianet Suvarna News

Earn Money:ಈ 5ರೂ.ನೋಟು ನಿಮ್ಮ ಬಳಿಯಿದ್ರೆ ಮನೆಯಲ್ಲೇ ಕುಳಿತು ಲಕ್ಷಾಂತರ ರೂಪಾಯಿ ಗಳಿಸಬಹುದು!

ನಿಮಗೆ ಹಳೆಯ ಹಾಗೂ ವಿರಳ ನಾಣ್ಯ ಹಾಗೂ ನೋಟುಗಳನ್ನು ಸಂಗ್ರಹಿಸೋ ಹವ್ಯಾಸವಿದೆಯಾ? ಹಾಗಾದ್ರೆ ನೀವು ಮನೆಯಲ್ಲೇ ಕುಳಿತು ಲಕ್ಷಾಂತರ ರೂಪಾಯಿ ಗಳಿಸಬಹುದು!

Collecting old rare coins notes hobby help you in becoming a millionaire anu
Author
Bangalore, First Published Dec 2, 2021, 3:41 PM IST
  • Facebook
  • Twitter
  • Whatsapp

ಕೆಲವೊಮ್ಮೆ ಮನೋಲ್ಲಾಸಕ್ಕಾಗಿ ರೂಢಿಸಿಕೊಂಡ ಹವ್ಯಾಸ (hobby) ಆದಾಯದ (Income) ಮೂಲವೂ ಆಗುತ್ತದೆ. ಇಂಥ ಹವ್ಯಾಸಗಳ ಸಾಲಿಗೆ ಈಗ ಹಳೆಯ ನಾಣ್ಯಗಳು ((Old Coins)) ಹಾಗೂ ನೋಟುಗಳನ್ನು (Notes) ಸಂಗ್ರಹಿಸೋ ಅಭ್ಯಾಸವನ್ನೂ ಸೇರಿಸಬಹುದು. ಕೆಲವರಿಗೆ ಹಳೆಯ ನಾಣ್ಯಗಳು ((Old Coins)  ಹಾಗೂ ನೋಟುಗಳ ಮೇಲೆ ವಿಪರೀತ ವ್ಯಾಮೋಹ. ಹೋದಲ್ಲಿ, ಬಂದಲ್ಲಿ ಹಳೆಯ ನಾಣ್ಯ ಹಾಗೂ ನೋಟುಗಳನ್ನು ಸಂಗ್ರಹಿಸೋ ಅಭ್ಯಾಸ ಬೆಳೆಸಿಕೊಂಡಿರುತ್ತಾರೆ. ಕೆಲವರ ಸಂಗ್ರಹದಲ್ಲಂತೂ ಅಪಾರ ಪ್ರಮಾಣದ ವಿಶಿಷ್ಟವಾಗಿರೋ ನಾಣ್ಯಗಳು, ನೋಟುಗಳಿರುತ್ತವೆ. ಪ್ರಸ್ತುತ ಚಲಾವಣೆಯಿಲ್ಲದ ಈ ನಾಣ್ಯಗಳು, ನೋಟುಗಳಿಂದ ಏನ್ ಪ್ರಯೋಜನ ಎಂದು ಕೇಳಬೇಡಿ. ಇಂದು ಇಂಥ ಅಪರೂಪದ ನಾಣ್ಯ ಹಾಗೂ ನೋಟುಗಳಿಂದ ನೀವು ಮನೆಯಲ್ಲೇ ಕುಳಿತು ಲಕ್ಷಾಂತರ ರೂಪಾಯಿ ಗಳಿಸಬಹುದು. ಇತ್ತೀಚೆಗೆ ಹಳೆಯ ನಾಣ್ಯ ಹಾಗೂ ನೋಟುಗಳ ಖರೀದಿ ಹಾಗೂ ಮಾರಾಟ ಟ್ರೆಂಡ್ ಆಗಿದ್ದು, ಅನೇಕ ವೆಬ್ ಸೈಟ್ ಗಳು (Websites) ಇದಕ್ಕೆ ವೇದಿಕೆ ಕಲ್ಪಿಸಿವೆ. 

5ರೂ. ನೋಟಿಗೆ ಒಂದು ಲಕ್ಷ
ಕಳೆದ ಕೆಲವು ದಿನಗಳಿಂದ 5ರೂ. ನೋಟಿಗೆ ಭಾರೀ ಬೇಡಿಕೆ ಸೃಷ್ಟಿಯಾಗಿದೆಯಂತೆ. ವರದಿಗಳ ಪ್ರಕಾರ ರೈತನೊಬ್ಬ(Farmer) ಟ್ರ್ಯಾಕ್ಟರ್ (tractor)ಚಲಾಯಿಸುತ್ತಿರೋ ಫೋಟೋ ಹಾಗೂ 786 ಸಂಖ್ಯೆ ಪ್ರಿಂಟ್ ಆಗಿರೋ 5ರೂ. ನೋಟಿಗೆ ಕೆಲವು ವೆಬ್ ಸೈಟ್ ಗಳು 1ಲಕ್ಷ ರೂ. ಬೆಲೆ ಕಟ್ಟಿವೆ.

10ಲಕ್ಷಕ್ಕಿಂತ ಕಡಿಮೆ ವೇತನ ಹೊಂದಿದ್ದೀರಾ? ಮಾಸಿಕ ಕೇವಲ 3,306ರೂ.ಉಳಿಸಿ 9 ಕೋಟಿ ಒಡೆಯರಾಗೋದು ಹೇಗೆ ಗೊತ್ತಾ?

ಆನ್ ಲೈನ್ ಹರಾಜು (Online Auction)
ಅನೇಕ ವರ್ಷಗಳಿಂದ ಪುರಾತನ ಕಾಲದ ನಾಣ್ಯಗಳು ಹಾಗೂ ನೋಟುಗಳ ಆನ್ ಲೈನ್ ಹರಾಜು (Online auction) ನಡೆಯುತ್ತಿದೆ. ಕೆಲವರು ಈ ಆನ್ ಲೈನ್ ಹರಾಜಿನ ಮೂಲಕ ತಮ್ಮ ಬಳಿಯಿರೋ ಹಳೆಯ ಹಾಗೂ ಅಪರೂಪದ ನಾಣ್ಯಗಳ ಬದಲಿಗೆ ಕೋಟ್ಯಂತರ ರೂಪಾಯಿ ಗಳಿಸಿದ್ದಾರೆ ಕೂಡ. ನೀವು ನಿಮ್ಮ ಬಳಿಯಿರೋ ಹಳೆಯ ನಾಣ್ಯಗಳು, ನೋಟುಗಳನ್ನು ಇ-ಬೇ (eBay) ಮಾದರಿಯ ವೆಬ್ ಸೈಟ್ ಗಳ ಮೂಲಕ ಹಳೆಯ ನಾಣ್ಯಗಳು ಹಾಗೂ ನೋಟುಗಳನ್ನು ಸುಲಭವಾಗಿ ಹರಾಜು ಮಾಡಬಹುದು. ಒಂದು ವೇಳೆ ನಿಮ್ಮ ಬಳಿ ಈ ಮೇಲೆ ತಿಳಿಸಿರೋ ಎಲ್ಲ ಅಂಶಗಳನ್ನೊಳಗೊಂಡ 5ರೂ. ನೋಟಿನ ಸ್ಪಷ್ಟವಾದ ಫೋಟೋ ಇದ್ರೆ ಅದನ್ನು ವೆಬ್ ಸೈಟ್ ನಲ್ಲಿ ಅಪ್ ಲೋಡ್ ಮಾಡಿ. ನೀವು ವೆಬ್ ಸೈಟ್ನಲ್ಲಿ  5ರೂ. ನೋಟಿನ ಫೋಟೋ ಅಪ್ ಲೋಡ್ ಮಾಡಿದ ತಕ್ಷಣ ಹರಾಜು ಪ್ರಕ್ರಿಯೆ ಪ್ರಾರಂಭವಾಗುತ್ತದೆ. ವರದಿಗಳ ಪ್ರಕಾರ 1018 ವರ್ಷಗಳಷ್ಟು ಹಳೆಯದಾದ ಮೆಕ್ಕಾ ಮದೀನದ ನಾಣ್ಯವು  2.5  ಕೋಟಿ ರೂ.ಗೆ ಹರಾಜಾಗಿದೆ. ಈ ನಾಣ್ಯದ ಮೇಲೆ ಮೆಕ್ಕಾ ಮದೀನದ ಚಿತ್ರವಿರೋ ಜೊತೆ 786 ಎಂಬ ಸಂಖ್ಯೆಯೂ ಇತ್ತು. ಮಾತಾ ವೈಷ್ಣೋದೇವಿ ಮಂದಿರದ ಮಂಡಳಿಗೆ ಸೇರಿದ ನಾಣ್ಯವೊಂದು  50ಲಕ್ಷ ರೂ.ಗೆ ಮಾರಾಟವಾಗಿದೆ. ಈ ನಾಣ್ಯದ ಮೇಲೆ ದುರ್ಗೆಯ ಚಿತ್ರವಿತ್ತು. 

21.38 ಕೋಟಿ ಇಪಿಎಫ್ ಖಾತೆಗೆ ಬಡ್ಡಿ ಜಮೆ, ಬ್ಯಾಲೆನ್ಸ್ ಚೆಕ್ ಮಾಡೋದು ಹೇಗೆ?

ಹಳೆಯ 2ರೂ. ನಾಣ್ಯಕ್ಕೆ 5ಲಕ್ಷ ರೂ.
ನಿಮ್ಮ ಬಳಿ ಕೆಲವು ನಿರ್ದಿಷ್ಟ ವರ್ಷಗಳಿಗೆ ಸಂಬಂಧಿಸಿದ ನಾಣ್ಯಗಳಿದ್ರೆ ಲಕ್ಷಾಂತರ ರೂಪಾಯಿ ಗಳಿಸಬಹುದು.  1994, 1995, 1997 ಹಾಗೂ 2000 ಸರಣಿ ವರ್ಷಗಳಿಗೆ ಸೇರಿದ 2ರೂ. ನಾಣ್ಯಗಳು ನಿಮ್ಮ ಬಳಿಯಿದ್ರೆ ಆನ್ ಲೈನ್ ನಲ್ಲಿ ಮಾರಾಟ ಮಾಡಿ 5ಲಕ್ಷ ರೂ. ಗಳಿಸಬಹುದು. ಈ ನಾಣ್ಯವನ್ನು ನೀವು OLX ನಲ್ಲಿ ಮಾರಾಟ ಮಾಡಬಹುದು. ಇದಕ್ಕೆ ನೀವು OLX ನಲ್ಲಿ ಮಾರಾಟಗಾರರಾಗಿ ಹೆಸರು ನೋಂದಾಯಿಸಬೇಕು. ಆ ಬಳಿಕ ನಾಣ್ಯದ ಎರಡೂ ಮುಖಗಳ ಫೋಟೋ ಅಪ್ ಲೋಡ್ ಮಾಡಿ. ಆ ಬಳಿಕ ನಿಮ್ಮ ಮೊಬೈಲ್ ಹಾಗೂ ಇ-ಮೇಲ್ ವಿಳಾಸ ನಮೂದಿಸಿ. ನೀವು ನೀಡಿರೋ ಎಲ್ಲ ಮಾಹಿತಿಗಳನ್ನು ಒಮ್ಮೆ ಪರಿಶೀಲಿಸಿಕೊಳ್ಳಿ. ಖರೀದಿದಾರರು ನಿಮ್ಮನ್ನು ನೇರವಾಗಿ ಸಂಪರ್ಕಿಸುತ್ತಾರೆ. 
 

Follow Us:
Download App:
  • android
  • ios