ವಾಹನ,ಅಡುಗೆ ಅನಿಲ ಬೆಲೆ ಇಳಿಕೆ; ಸಿಎನ್ ಜಿ, ಪಿಎನ್ ಜಿ ದರ ಕಡಿತಗೊಳಿಸಿದ ಮಹಾನಗರ್ ಗ್ಯಾಸ್
*ಮುಂಬೈನಲ್ಲಿ ಸಿಎನ್ ಜಿ,ಪಿಎನ್ ಜಿ ಬೆಲೆ ಇಳಿಕೆ
*ಆಗಸ್ಟ್ 2ರಂದು ಸಿಎನ್ ಜಿ, ಪಿಎನ್ ಜಿ ಬೆಲೆ ಹೆಚ್ಚಳ ಮಾಡಿದ್ದ ಎಂಜಿಎಲ್
*ಸಿಎನ್ ಜಿ ಬೆಲೆ 6ರೂ. ಹಾಗೂ ಪಿಎನ್ ಜಿ ಬೆಲೆಯಲ್ಲಿ 4ರೂ. ಕಡಿತ
ಮುಂಬೈ (ಆ.17): ಪೈಪ್ ನಲ್ಲಿ ಬರುವ ನೈಸರ್ಗಿಕ ಅನಿಲ ಹಾಗೂ ವಾಹನ ಇಂಧನ ಕಂಪ್ರೆಸ್ಡ್ ನ್ಯಾಚುರಲ್ ಗ್ಯಾಸ್ (ಸಿಎನ್ ಜಿ) ಬೆಲೆಯಲ್ಲಿ ಇಳಿಕೆಯಾಗಿದೆ. ಈ ಬಗ್ಗೆ ಮುಂಬೈ ಮಹಾನಗರ್ ಗ್ಯಾಸ್ ಪ್ರಕಟಣೆ ಹೊರಡಿಸಿದೆ. ಸರ್ಕಾರ ದೇಶೀಯವಾಗಿ ಉತ್ಪಾದಿಸಿದ ನೈಸರ್ಗಿಕ ಅನಿಲದ ಹಂಚಿಕೆಯನ್ನು ಹೆಚ್ಚಿಸಿದ ಬೆನ್ನಲ್ಲೇ ಹಂಚಿಕೆದಾರರು ಸಿಎನ್ ಜಿ ಹಾಗೂ ಪಿಎನ್ ಜಿ ಬೆಲೆಗಳನ್ನು ತಗ್ಗಿಸಿದ್ದಾರೆ. ಪಿಎನ್ ಜಿ ಬೆಲೆಯಲ್ಲಿ 4ರೂ. ಇಳಿಕೆ ಮಾಡಿ ಪ್ರತಿ ಎಸ್ ಸಿಎಂಗೆ 48.50ರೂ. ನಿಗದಿಪಡಿಸಲಾಗಿದೆ. ಇನ್ನು ಸಿಎನ್ ಜಿ ಬೆಲೆಯನ್ನು ಕೆಜಿಗೆ 6ರೂ. ಕಡಿತ ಮಾಡಿ ಪ್ರತಿ ಕೆಜಿಗೆ 80ರೂ. ನಿಗದಿಪಡಿಸಲಾಗಿದೆ. ಅತೀಹೆಚ್ಚು ಗೃಹ ಬಳಕೆಗೆ ಉಪಯೋಗಿಸುವ ಎಲ್ ಪಿಜಿಗೆ ಹೋಲಿಸಿದ್ರೆ ಪಿಎನ್ ಜಿ ಬಳಕೆದಾರರಿಗೆ ಶೇ.18ರಷ್ಟು ಹಣ ಉಳಿತಾಯವಾಗುತ್ತದೆ. ಇನ್ನು ಮುಂಬೈನಲ್ಲಿ ಪ್ರಸ್ತುತ ಇರುವ ಪೆಟ್ರೋಲ್ ಬೆಲೆಗೆ ಹೋಲಿಸಿದ್ರೆ ವಾಹನ ಸವಾರರು ಸಿಎನ್ ಜಿ ಬಳಕೆ ಮಾಡೋದ್ರಿಂದ ಸುಮಾರು ಶೇ. 48ರಷ್ಟು ಉಳಿತಾಯವಾಗುತ್ತದೆ. ಇನ್ನು ಎಲ್ ಪಿಜಿ ಗ್ಯಾಸ್ ಗೆ ಹೋಲಿಸಿದ್ರೆ ಪಿಎನ್ ಜಿ ಗ್ರಾಹಕರಿಗೆ ಸುರಕ್ಷಿತ, ನಂಬಿಕಾರ್ಹ ಹಾಗೂ ಪರಿಸರಸ್ನೇಹಿ ವ್ಯವಸ್ಥೆಯಾಗಿದೆ ಎಂದು ಕಂಪನಿ ಹೇಳಿಕೆಯಲ್ಲಿ ತಿಳಿಸಿದೆ ಕೂಡ.
ಎಂಜಿಎಲ್ ಆಗಸ್ಟ್ 2ರಂದು ಮುಂಬೈ (Mumbai) ಮಹಾನಗರ ಪ್ರದೇಶದಲ್ಲಿ ಸಿಎನ್ ಜಿ (CNG) ಹಾಗೂ ಪಿಎನ್ ಜಿ (PNG) ಬೆಲೆಯನ್ನು ಕ್ರಮವಾಗಿ 6ರೂ./ಕೆಜಿ ಹಾಗೂ 4ರೂ,/ಎಸ್ ಸಿಎಂ ಏರಿಕೆ ಮಾಡಿತ್ತು. ಆದರೆ, ಮುಂಬೈ ರಿಕ್ಷಾ (Ato) ಹಾಗೂ ಟ್ಯಾಕ್ಸಿ (Taxi) ಸಂಘಟನೆಗಳು ಬಾಡಿಗೆ ಹೆಚ್ಚಳದ ಬೇಡಿಕೆಯಿಟ್ಟ ಬೆನ್ನಲ್ಲೇ ದರ ಇಳಿಕೆ ಮಾಡಲಾಗಿದೆ. ಈ ವರ್ಷದ ಏಪ್ರಿಲ್ ಬಳಿಕ ಇದು ಆರನೇ ಬೆಲೆ ಏರಿಕೆಯಾಗಿತ್ತು. ಮುಂಬೈನಲ್ಲಿ ಟ್ಯಾಕ್ಸಿ ಹಾಗೂ ಅಟೋಗಳ ಕನಿಷ್ಠ ಬಾಡಿಗೆ ರೂ.21 ಆಗಿದ್ದು, 2021ರ ಫೆಬ್ರವರಿಯಲ್ಲಿ 3ರೂ. ಏರಿಕೆಯಾಗಿದ್ದು ಬಿಟ್ಟರೆ ಈ ತನಕ ಯಾವುದೇ ಬದಲಾವಣೆಯಾಗಿಲ್ಲ. ಆಗ ಅಟೋಗೆ (Auto) ಕನಿಷ್ಠ ಬಾಡಿಗೆ 18ರೂ. ಆಗಿದ್ದು, 3ರೂ. ಏರಿಕೆ ಮಾಡಿ 21ರೂ. ಮಾಡಲಾಗಿತ್ತು. ಇನ್ನು ಆ ಸಂದರ್ಭದಲ್ಲೇ ಖಾಲಿ ಪಿಲಿ ಟ್ಯಾಕ್ಸಿ ಗಳ ಬಾಡಿಗೆಯನ್ನು 22ರೂ.ನಿಂದ 25ರೂ.ಗೆ ಹೆಚ್ಚಳ ಮಾಡಲಾಗಿತ್ತು.
ಜಗತ್ತಿನ 6 ಕಾಸ್ಮೋಪಾಲಿಟನ್ ಹಾಟ್‌ಸ್ಪಾಟ್‌ಗಳಲ್ಲಿ ಬೆಂಗಳೂರಿಗೆ ಸ್ಥಾನ..!
ಮುಂಬೈ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 8 ಲಕ್ಷಕ್ಕೂ ಅಧಿಕ ಸಿಎನ್ ಜಿ (CNG) ಗ್ರಾಹಕರಿದ್ದಾರೆ. ಇದರಲ್ಲಿ ಅಟೋ-ಟ್ಯಾಕ್ಸಿ, ಬಸ್ ಮಾಲೀಕರು ಹಾಗೂ 3ಲಕ್ಷಕ್ಕೂ ಅಧಿಕ ಖಾಸಗಿ ಕಾರು ಬಳಕೆದಾರರು ಸೇರಿದ್ದಾರೆ. ಪೆಟ್ರೋಲ್ (Petrol) ಹಾಗೂ ಡಿಸೇಲ್ ಗಿಂತ (Diesel) ಅಗ್ಗ ಹಾಗೂ ಪರಿಸರಸ್ನೇಹಿ ಎಂಬ ಕಾರಣಕ್ಕೆ ಇವರೆಲ್ಲ ಸಿಎನ್ ಜಿ (CNG) ಬಳಸುತ್ತಿದ್ದಾರೆ. ಇನ್ನು ಮುಂಬೈನಲ್ಲಿ 18ಲಕ್ಷ ಮನೆಗಳಲ್ಲಿ ಪಿಎನ್ ಜಿ (PNG) ಬಳಸಲಾಗುತ್ತಿದೆ.
WPI Inflation:ಜುಲೈನಲ್ಲಿ ಸಗಟು ಹಣದುಬ್ಬರ ಕೂಡ ಇಳಿಕೆ; ಜನಸಾಮಾನ್ಯರು ತುಸು ನಿರಾಳ
ಒಂದೇ ವರ್ಷದ ಅವಧಿಯಲ್ಲಿ ಸಿಎನ್‌ಜಿ (CNG) ಬೆಲೆಯನ್ನು ದುಪ್ಪಟ್ಟು ಮಾಡಲಾಗಿದೆ ಎಂದು ಆರೋಪಿಸಿ ಕರ್ನಾಟಕದಲ್ಲಿ(Karnataka) ಕೂಡ ಆಟೋ (Auto) ಹಾಗೂ ಟ್ಯಾಕ್ಸಿ(Taxi) ಚಾಲಕರು ಪ್ರತಿಭಟನೆ ನಡೆಸಿದ್ದರು. ಸಿಎನ್‌ಜಿ ಸರಬರಾಜು ಗುತ್ತಿಗೆ ಪಡೆದ ಕಂಪನಿಗಳು ಸರಿಯಾಗಿ ಸಿಎನ್‌ಜಿ ಗ್ಯಾಸ್ (CNG gas) ಸಮರ್ಪಕವಾಗಿ ಪೂರೈಸುತ್ತಿಲ್ಲ. ಸಿಎನ್‌ಜಿ ಕಿಟ್ ಬೆಲೆಯನ್ನು ಖಾಸಗಿ ಕಂಪನಿಗಳು ಹೆಚ್ಚಿನ ಬೆಲೆಗೆ ಮಾರುತ್ತಿದ್ದರೂ ಸರ್ಕಾರ (Government) ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಹೊಸ ಸಿಎನ್‌ಜಿ ವಾಹನಗಳ (Vehicles) ಬೆಲೆ ಪೆಟ್ರೋಲ್ (Petrol) ವಾಹನಕ್ಕಿಂತ 2 ಲಕ್ಷ ಹೆಚ್ಚು ವಿಧಿಸಲಾಗುತ್ತಿದೆ ಎಂದು ಆಟೋ (Auto) ಹಾಗೂ ಟ್ಯಾಕ್ಸಿ (Taxi) ಚಾಲಕರು ಆರೋಪಿಸಿದ್ದರು.