Asianet Suvarna News Asianet Suvarna News

ಫಡ್ನವೀಸ್‌ ಪತ್ನಿ ಮುಖ್ಯ ಹುದ್ದೆ ಹೊಂದಿರೋ ಆ್ಯಕ್ಸಿಸ್‌ ಬ್ಯಾಂಕ್‌ಗೆ ಮಹಾರಾಷ್ಟ್ರ ಕೊಕ್‌!

ಫಡ್ನವೀಸ್‌ ಪತ್ನಿ ಮುಖ್ಯ ಹುದ್ದೆ ಹೊಂದಿರೋ ಆ್ಯಕ್ಸಿಸ್‌ ಬ್ಯಾಂಕ್‌ಗೆ ಮಹಾ ಕೊಕ್‌| ಫಡ್ನವೀಸ್‌ರ ಪತ್ನಿ ಆ್ಯಕ್ಸಿಸ್‌ ಬ್ಯಾಂಕ್‌ನ ಉಪಾಧ್ಯಕ್ಷೆ ಹಾಗೂ ಪಶ್ಚಿಮ ಭಾರತ ಕಾರ್ಪೋರೆಟ್‌ ಹೆಡ್‌ ಆಗಿರುವುದರಿಂದಲೇ ುದ್ಧವ್ ಇಂತಹ ನಿರ್ಧಾರ ತೆಗೆದುಕೊಂಡಿದ್ದಾರೆಂದು ಸೋಶಿಯಲ್ ಮೀಡಿಯಾದಲ್ಲಿ ವದಂತಿ

CM Uddhav to decide on withdrawing police departments salary accounts from Axis bank
Author
Bangalore, First Published Dec 26, 2019, 9:26 AM IST
  • Facebook
  • Twitter
  • Whatsapp

ಮುಂಬೈ[ಡಿ.26]: ಮಹಾರಾಷ್ಟ್ರದಲ್ಲಿ ಶಿವಸೇನೆ ನೇತೃತ್ವದ ಮಹಾ ಅಘಾಡಿ ಸರ್ಕಾರ ಅಧಿಕಾರಕ್ಕೆ ಬಂದ ಬೆನ್ನಲ್ಲೇ, 2 ಲಕ್ಷ ಪೊಲೀಸರ ವೇತನ ಖಾತೆಯನ್ನು ಖಾಸಗಿ ಸ್ವಾಮ್ಯದ ಆ್ಯಕ್ಸಿಸ್‌ ಬ್ಯಾಂಕ್‌ನಿಂದ ಸರ್ಕಾರಿ ಬ್ಯಾಂಕ್‌ಗೆ ವರ್ಗಾವಣೆ ಮಾಡಲು ನಿರ್ಧಾರಿಸಿದೆ.

'ದೇವೇಂದ್ರ'ನ ಹಿಂದಿನ ಶಕ್ತಿಯೇ ಈ 'ಅಮೃತಾ'!

ವಾರ್ಷಿಕವಾಗಿ ಈ ಖಾತೆಗಳ ಮೂಲಕ 10 ಸಾವಿರ ಕೋಟಿ ವಹಿವಾಟು ನಡೆಯುತ್ತದೆ. ವಿಶೇಷವೆಂದರೆ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಅವರ ಪತ್ನಿ ಅಮೃತಾ, ಆ್ಯಕ್ಸಿಸ್‌ ಬ್ಯಾಂಕ್‌ನ ಉನ್ನತ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಫಡ್ನವೀಸ್‌ರ ಪತ್ನಿ ಆ್ಯಕ್ಸಿಸ್‌ ಬ್ಯಾಂಕ್‌ನ ಉಪಾಧ್ಯಕ್ಷೆ ಹಾಗೂ ಪಶ್ಚಿಮ ಭಾರತ ಕಾರ್ಪೋರೆಟ್‌ ಹೆಡ್‌ ಆಗಿರುವುದರಿಂದ ಪೊಲೀಸರ ವೇತನ ಖಾತೆಯನ್ನು ಆ್ಯಕ್ಸಿಸ್‌ ಬ್ಯಾಂಕ್‌ನಲ್ಲಿ ತೆರೆಯಲಾಗಿದೆ ಎಂದು ನಾಗ್ಪುರ ಮೂಲದ ಸಾಮಾಜಿಕ ಕಾರ್ಯಕರ್ತ ಮೊಹ್ನಿಶ್‌ ಜಬಲ್‌ಪುರ್‌ ಎಂಬವರು ಜಾರಿ ನಿರ್ದೇಶನಾಲಯಕ್ಕೆ ದೂರು ಸಲ್ಲಿಸಿದ್ದರು.

'ಮಹಾ' ಬಿಕ್ಕಟ್ಟು ಅಂತ್ಯ: ಮಹಾರಾಷ್ಟ್ರ ರಾಜಕಾರಣದಲ್ಲಿ ಏನೇನಾಯ್ತು..?

ಹಾಗಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹಣಕಾಸು ಸಚಿವ ಜಯಂತ್‌ ಪಾಟೀಲ್‌ ಹೇಳಿದ್ದಾರೆ. ಆದರೆ ಫಡ್ನವೀಸ್‌ ಅವರು ಅಮೃತಾರನ್ನು ಮದುವೆಯಾಗುವ ಕೆಲ ತಿಂಗಳು ಮೊದಲೇ ಅಂದಿನ ಮಹಾ ಸರ್ಕಾರ, ರಾಜ್ಯದ 2 ಲಕ್ಷ ಪೊಲೀಸರ ಬ್ಯಾಂಕ್‌ ಖಾತೆಗಳನ್ನು ಆ್ಯಕ್ಸಿಸ್‌ ಬ್ಯಾಂಕ್‌ನಲ್ಲಿ ತೆರೆದಿತ್ತು.

ಬನ್ನಿ ಅಣ್ಣ: ಶಾ, ಫಡ್ನವೀಸ್ ಎದುರು ಮೋದಿ ಬರಮಾಡಿಕೊಂಡ ಉದ್ಧವ್!

Follow Us:
Download App:
  • android
  • ios