Asianet Suvarna News Asianet Suvarna News

ಬೇಡುತ್ತಿದೆ ಚೀನಾ ‘ಒಂದಾಗೋಣ’: ಮೋದಿ ಅಂತಿದ್ದಾರೆ ‘ನೋಡೊಣ’!

‘ಬನ್ನಿ ಒಂದಾಗಿ ಅಮೆರಿಕ ಮಣಿಸೋಣ’! ಅಮೆರಿಕದೊಂದಿಗಿನ ವಾಣಿಜ್ಯ ಸಮರದಿಂದ ಬಳಲಿದ ಚೀನಾ! ಭಾರತದತ್ತ ಆಸೆಗಣ್ಣಿನಿಂದ ನೋಡುತ್ತಿರುವ ಚೀನಾ! ವಾಣಿಜ್ಯ ಸಂಬಂಧ ವೃದ್ಧಿಗೆ ಮನವಿ ಮಾಡಿಕೊಂಡ ಡ್ರ್ಯಾಗನ್ ರಾಷ್ಟ್ರ! ವಾಣಿಜ್ಯ ಸಂಬಂಧ ಉತ್ತಮಗೊಳಿಸಲು ಚೀನಾ ರಾಯಭಾರ ಕಚೇರಿ ಮನವಿ

China Wants to strengthen Trade Relations with India Amid Trade War With US
Author
Bengaluru, First Published Oct 10, 2018, 5:10 PM IST

ನವದೆಹಲಿ(ಅ.10): ಅಮೆರಿಕದೊಂದಿಗಿನ ವಾಣಿಜ್ಯ ಸಮರದಿಂದ ಚೀನಾ ತುಸು ಹೈರಾಣಾದಂತೆ ಕಂಡು ಬರುತ್ತಿದೆ. ಅಮೆರಿಕದ ಜೊತೆಗಿನ ಪ್ರತಿಷ್ಠೆಯ ದಿನ ನಿತ್ಯದ ವಾಣಿಜ್ಯ ಜಗಳದಿಂದಾಗಿ ಚೀನಾ ಬಳಲಿದೆ. ಇದೇ ಕಾರಣಕ್ಕೆ ಭಾರತದತ್ತ ಆಸೆಗಣ್ಣಿನಿಂದ ನೋಡುತ್ತಿರುವ ಚೀನಾ, ವಾಣಿಜ್ಯ ಒಪ್ಪಂದಗಳ ಮೂಲಕ ಸಂಬಂಧ ವೃದ್ಧಿಯ ಮಾತನಾಡುತ್ತಿದೆ.

ಅಮೆರಿಕ-ಚೀನಾ ವಾಣಿಜ್ಯ ಸಮರ ಜಾಗತಿಕ ಆರ್ಥಿಕತೆ ಮೇಲೂ ಪರಿಣಾಮ ಬೀರುತ್ತಿರುವುದು ಸುಳ್ಳಲ್ಲ. ಇದರಿಂದ ಭಾರತಕ್ಕೂ ಕೊಂಚ ಎಫೆಕ್ಟ್ ಆಗಿದ್ದು ಹೌದಾದರೂ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಫಲಪ್ರದ ಆರ್ಥಿಕ ನೀತಿಗಳಿಂದ ಈ ವಾಣಿಜ್ಯ ದಾಳಿಯನ್ನು ಬಹುಮಟ್ಟಿಗೆ ತಡೆಯುವಲ್ಲಿ ಭಾರತ ಯಶಸ್ವಿಯಾಗಿದೆ.

ಇನ್ನು ಆರಂಭದಲ್ಲಿ ಬಹಳ ಉತ್ಸಾಹದಿಂದಲೇ ವಾಣಿಜ್ಯ ಸಮರದಲ್ಲಿ ಪಾಲ್ಗೊಂಡ ಚೀನಾ, ಇದೀಗ ತುಸು ಬಳಲಿದೆ. ಅಮೆರಿದೊಂದಿಗಿನ ನಿತ್ಯದ ಈ ಕೋಳಿ ಜಗಳ ಚೀನಾಗೆ ಸಾಕಾಗಿ ಹೋಗಿದೆ. ಹೀಗಾಗಿ ಅಮೆರಿಕದ ಜೊತೆ ಬಡಿದಾಡುವುದಕ್ಕಿಂತ ಭಾರತದೊಂದಿಗೆ ವ್ಯಾಪಾರ ಸಂಬಂಧ ಗಟ್ಟಿಗೊಳಿಸುವುದೇ ಉತ್ತಮ ಎಂಬ ನಿಧಾರ್ಧಾರಕ್ಕೆ ಚೀನಾ ಬಂದಂತಿದೆ.

China Wants to strengthen Trade Relations with India Amid Trade War With US

ಚೀನಾ ರಾಯಭಾರ ಕಚೇರಿ ಹೇಳಿದ್ದೇನು?:

ಇದಕ್ಕೆ ಪುಷ್ಠಿ ಎಂಬಂತೆ ಅಮೆರಿಕದ ಅನ್ಯಾಯದ ವಾಣಿಜ್ಯ ನೀತಿಗೆ ವಿರುದ್ಧವಾಗಿ ಭಾರತ ಮತ್ತು ಚೀನಾ ತನ್ನ ವ್ಯಾಪಾರ ಸಂಬಂಧವನ್ನು ಮತ್ತಷ್ಟು ಉತ್ತಮಗೊಳಿಸಬೇಕಿದೆ ಎಂದು ಚೀನಾದ ಭಾರತೀಯ ರಾಯಭಾರ ಕಚೇರಿ ಹೇಳಿದೆ. ನಾವು ವಾಣಿಜ್ಯ ಸಂಬಂಧ ಗಟ್ಟಿ ಮಾಡಿಕೊಂಡರೆ ಭವಿಷ್ಯವನ್ನು ನಿರ್ಧರಿಸುವ ಶಕ್ತಿಗಳಾಗಿ ಬೆಳೆಯಲು ಸಾಧ್ಯ ಎಂದು ಅದು ಅಭಿಪ್ರಾಯಪಟ್ಟಿದೆ.

ವಿಶ್ವದ ಎರಡು ಉದಯೋನ್ಮುಖ ಆರ್ಥಿಕತೆ ಹೊಂದಿರುವ ರಾಷ್ಟ್ರಗಳು ವಾಣಿಜ್ಯ ಒಪ್ಪಂದಗಳ ಮೂಲಕ ಮತ್ತಷ್ಟು ಹತ್ತಿರವಾಗಬಹುದು ಎಂದು ರಾಯಭಾರ ಕಚೇರಿ ಹೇಳಿದೆ. ಈ ಮೂಲಕ ವಾಣಿಜ್ಯ ಸಮರದ ಮೂಲಕ ವಿಶ್ವವವನ್ನು ಬೆದರಿಸುತ್ತಿರುವ ಅಮೆರಿಕವನ್ನು ನಿಯಂತ್ರಿಸಲೂಬಹುದು ಎಂಬುದು ಚೀನಾ ಲೆಕ್ಕಾಚಾರವಾಗಿದೆ.

ಇನ್ನು ಚೀನಾದ ಈ ಮನವಿಗೆ ಭಾರತ ಇನ್ನೂ ಸ್ಪಂದಿಸಬೇಕಿದ್ದು, ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ, ತೈಲದರ ಏರಿಕೆ ಮುಂತಾದ ಆರ್ಥಿಕ ಸಮಸ್ಯೆಯಿಂದ ಬಳಲುತ್ತಿರುವ ಭಾರತ ಏನು ನಿರ್ಧಾರ ಕೈಗೊಳ್ಳಲಿದೆ ಎಂಬುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.

Follow Us:
Download App:
  • android
  • ios