ಬೀಜಿಂಗ್‌:(ಏ.11): ವ್ಯಾಪಾರಿಗಳು ಅನ್ಯ ಆನ್‌ಲೈನ್‌ ಇ-ಕಾಮರ್ಸ್‌ ತಾಣಗಳಲ್ಲಿ ತಮ್ಮ ಉತ್ಪನ್ನ ಮಾರದಂತೆ 2015ರಿಂದಲೂ ಅಡ್ಡಿಪಡಿಸುವ ಮೂಲಕ ಏಕಸ್ವಾಮ್ಯ ಸೃಷ್ಟಿಸಿದ ಕಾರಣಕ್ಕಾಗಿ ಪ್ರಸಿದ್ಧ ಇ-ಕಾಮರ್ಸ್‌ ಕಂಪನಿ ಆಲಿಬಾಬಾ ಗ್ರೂಪ್‌ ಮೇಲೆ ಚೀನಾ ಸರ್ಕಾರ ಬರೋಬ್ಬರಿ 20 ಸಾವಿರ ಕೋಟಿ ರು. ದಂಡ ವಿಧಿಸಿದೆ.

ವಿಶ್ವದ ಅತಿದೊಡ್ಡ ಮೊಬೈಲ್‌ ಚಿಪ್‌ ಪೂರೈಕೆದಾರ ಸಂಸ್ಥೆ ಅಮೆರಿಕದ ಬಹುರಾಷ್ಟ್ರೀಯ ಕಂಪನಿ ಕ್ವಾಲ್‌ಕಾಮ್‌ಗೆ 2015ರಲ್ಲಿ ಚೀನಾ 7 ಸಾವಿರ ಕೋಟಿ ರು. ದಂಡ ವಿಧಿಸಿತ್ತು. ಅದಕ್ಕೆ ಹೋಲಿಸಿದರೆ ಆಲಿಬಾಬಾ ಮೇಲೆ ವಿಧಿಸಿರುವುದು ಸುಮಾರು 3 ಪಟ್ಟು ಅಧಿಕ ದಂಡವಾಗಿದೆ ಎಂದು ಸೌತ್‌ ಚೀನಾ ಮಾರ್ನಿಂಗ್‌ ಪೋಸ್ಟ್‌ ಪತ್ರಿಕೆ ವರದಿ ಮಾಡಿದೆ. ಈ ದಂಡವನ್ನು ವಿನಮ್ರವಾಗಿ ಒಪ್ಪಿಕೊಳ್ಳುತ್ತೇವೆ ಎಂದು ಆಲಿಬಾಬಾ ಕಂಪನಿ ತಿಳಿಸಿದೆ.

2019ರಲ್ಲಿ ದೇಶೀಯವಾಗಿ ಆಲಿಬಾಬಾ ಎಷ್ಟುಆದಾಯವನ್ನು ಗಳಿಸಿತ್ತೋ ಅದರಲ್ಲಿ ಈ ದಂಡದ ಪಾಲು ಶೇ.4ರಷ್ಟಾಗಲಿದೆ ಎಂದು ದಂಡ ವಿಧಿಸಿರುವ ಚೀನಾದ ಮಾರುಕಟ್ಟೆನಿಯಂತ್ರಣ ಸಂಸ್ಥೆ ತಿಳಿಸಿದೆ.