Asianet Suvarna News Asianet Suvarna News

ನೋಡೋಮ್ಮೆ ಈ ದೋಸ್ತಿನಾ: ಪಾಕ್’ನಲ್ಲಿ 1 ಬಿಲಿಯನ್ ಸುರಿಯುತ್ತಿದೆ ಚೀನಾ!

ದಿನಗಳೆದಂತೆ ಜಾಗತಿಕವಾಗಿ ಒಬ್ಬಂಟಿಯಾಗುತ್ತಿದೆ ಪಾಕಿಸ್ತಾನ| ಪಾಕ್’ಗೆ ಮುಂದುವರೆದ ಚೀನಾದ ಆರ್ಥಿಕ, ರಾಜಕೀಯ, ನೈತಿಕ ಸಹಾಯ|ಆರ್ಥಿಕವಾಗಿ ದಿವಾಳಿಯಾಗಿರುವ ಪಾಕಿಸ್ತಾನಕ್ಕೆ ಚೀನಾ ಧನ ಸಹಾಯ| ಪಾಕ್'ಗೆ 1 ಬಿಲಿಯನ್ ಯುಎಸ್ ಡಾಲರ್ ಆರ್ಥಿಕ ಸಹಾಯ ಘೋಷಣೆ| ಪಾಕಿಸ್ತಾನದಲ್ಲಿ ಅಭಿವೃದ್ಧಿ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಚೀನಾ ನಿರ್ಧಾರ| ಭಾರತಕ್ಕೆ ಮಾರಕವಾಗಿ ಪರಿಣಮಿಸಲಿದೆ CPEC, CPFTA ವಿಸ್ತರಣೆಗೆ ಚೀನಾ ಒಲವು|

China Announce To Invest 1 Billion Dollar In Pak Development Projects
Author
Bengaluru, First Published Sep 8, 2019, 5:06 PM IST

ಬಿಜಿಂಗ್(ಸೆ.08): ದಿನಗಳೆಂದತೆ ಪಾಕಿಸ್ತಾನ ಜಾಗತಿಕವಾಗಿ ಒಬ್ಬಂಟಿಯಾಗುತ್ತಿದೆ. ಆದರೆ ಚೀನಾ ಮಾತ್ರ ಪಾಕಿಸ್ತಾನಕ್ಕೆ ಆರ್ಥಿಕ, ರಾಜಕೀಯ ಹಾಗೂ ನೈತಿಕ ಸಹಾಯಕ್ಕೆ ನಿಲ್ಲುತ್ತಾ ಬಂದಿದೆ.

ಅದರಂತೆ ಆರ್ಥಿಕವಾಗಿ ಬಹುತೇಕ ದಿವಾಳಿಯಾಗಿರುವ ಪಾಕಿಸ್ತಾನಕ್ಕೆ ಬರೋಬ್ಬರಿ 1 ಬಿಲಿಯನ್ ಯುಎಸ್ ಡಾಲರ್ ಆರ್ಥಿಕ ಸಹಾಯ ನೀಡಲು ಚೀನಾ ಮುಂದಾಗಿದೆ.

ಈ ಕುರಿತು ಮಾಹಿತಿ ನೀಡಿರುವ ಪಾಕಿಸ್ತಾನಕ್ಕೆ ಚೀನಾದ ರಾಯಭಾರಿ ಯಾವೋ ಜಿಂಗ್, ಪಾಕ್ ಪ್ರಧಾನಿ ಇಮ್ರಾನ್ ಖಾನ್ ಚೀನಾ ಭೇಟಿ ವೇಳೆ ನಿರ್ಧರಿಸಿದಂತೆ ಪಾಕಿಸ್ತಾನಕ್ಕೆ ಚೀನಾ 1 ಬಿಲಿಯನ್ ಯುಎಸ್ ಡಾಲರ್ ಆರಥಿಕ ಸಹಾಯ ನೀಡುತ್ತಿರುವುದಾಗಿ ಘೋಷಿಸಿದ್ದಾರೆ.

ಇಷ್ಟೇ ಅಲ್ಲದೇ ಪಾಕಿಸ್ತಾನದಲ್ಲಿ ಹಲವು ಅಭಿವೃದ್ಧಿ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಚೀನಾ ನಿರ್ಧಿರಿಸಿದ್ದು, ಈ ಮೂಲಕ ಪಾಕಿಸ್ತಾನದೊಳಗೆ ಅಧಿಕೃತ ಪ್ರವೇಶ ಪಡೆಯುವ ತನ್ನ ದೀರ್ಘಕಾಲದ ಯೋಜನೆಯನ್ನು ಮತ್ತಷ್ಟು ವಿಸ್ತರಿಸಿದೆ.

ಚೀನಾ-ಪಾಕಿಸ್ತಾನ ಎಕನಾಮಿಕ್ ಕಾರಿಡಾರ್(CPEC), ಚೀನಾ-ಪಾಕಿಸ್ತಾನ ಫ್ರೀ ಟ್ರೇಡ್ ಅಗ್ರಿಮೆಂಟ್(CPFTA)ವಿಸ್ತರಣೆಗೆ ಒಲವು ತೋರಿದ್ದು, ಇದು ಭಾರತದ ಹಿತಾಸಕ್ತಿಗೆ ಮಾರಕವಾಗಿ ಪರಿಣಮಿಸುವ ಸಂಭವ ಹೆಚ್ಚಾಗಿದೆ.

Follow Us:
Download App:
  • android
  • ios