ಚೀನಾಗೆ ಹೋಗಿ ಅವಮಾನ ಎದುರಿಸಿದ ಪಾಕ್ ಪ್ರಧಾನಿ! ಆರ್ಥಿಕ ಸಹಾಯಕ್ಕಾಗಿ ಚೀನಾ ಮೊರೆ ಇಡುತ್ತಿರುವ ಪಾಕಿಸ್ತಾನ! ಪಾಕ್ ಸಹಾಯ ಮಾಡುವುದಾಗಿ ವಾಗ್ದಾನ ನೀಡಿದ ಚೀನಾ! ಈ ಕುರಿತು ಮತ್ತಷ್ಟು ಮಾತುಕತೆ ಅವಶ್ಯ ಎಂದ ಚೀನಾ! ಆದರೆ ಮಾತುಕತೆ ಹೆಸರಲ್ಲಿ ಹೆಚ್ಚಿನ ಷರತ್ತು ವಿಧಿಸಲು ಚೀನಾ ಪ್ಲ್ಯಾನ್ 

ಬೀಜಿಂಗ್(ನ.3): ಪಾಕಿಸ್ತಾನಕ್ಕೆ ಚೀನಾ ಆರ್ಥಿಕ ನೆರವು ನೀಡಲು ಸಿದ್ಧವಿದ್ದು, ಆದರೆ ಆ ಬಗ್ಗೆ ಮತ್ತಷ್ಟು ಸ್ಪಷ್ಟತೆಗಾಗಿ ಮಾತುಕತೆಯ ಅಗತ್ಯವಿದೆ ಎಂದು ಚೀನಾ ಸ್ಪಷ್ಟಪಡಿಸಿದೆ.

Scroll to load tweet…

ಚೀನಾ ಪ್ರವಾಸದಲ್ಲಿರುವ ಪಾಕ್‌ನ ನೂತನ ಪ್ರಧಾನಿ ಇಮ್ರಾನ್ ಖಾನ್‌, ಚೀನೀ ಪ್ರಧಾನಿ ಲಿ ಕೆಖಿಯಾಂಗ್ ಅವರನ್ನು ಭೇಟಿ ಮಾಡಿದ ಬಳಿಕ ಚೀನಾದಿಂದ ಈ ಹೇಳಿಕೆ ಹೊರಬಿದ್ದಿದೆ.

Scroll to load tweet…

ಪಾಕಿಸ್ತಾನದ ವಿದೇಶೀ ಮೀಸಲು ನಿಧಿ ಶೇ 42ರಷ್ಟು ಕುಸಿದಿದ್ದು, ಪ್ರಸ್ತುತ 800 ಕೋಟಿ ಡಾಲರ್‌ಗಳಷ್ಟು ಮಾತ್ರವಿದೆ. ಇದು ಎರಡು ತಿಂಗಳ ಆಮದು ವೆಚ್ಚಕ್ಕೂ ಸಾಲದು. ಇದೇ ಕಾರಣಕ್ಕೆ ಚೀನಾದ ಆರ್ಥಿಕ ಸಹಾಯಕ್ಕಾಗಿ ಪಾಕಿಸ್ತಾನ ಕಾದು ಕುಳಿತಿದೆ.

ಪಾಕಿಸ್ತಾನ ಕಳೆದ ತಿಂಗಳು ಸೌದಿ ಅರೇಬಿಯಾದಿಂದ 600 ಕೋಟಿ ಡಾಲರ್‌ ರಕ್ಷಣಾ ಪ್ಯಾಕೇಜ್‌ ಸ್ವೀಕರಿಸಿತ್ತು. ಆದರೆ ಇದು ಸಾಕಾಗದ ಹಿನ್ನೆಲೆಯಲ್ಲಿ ಪಾವತಿ ಬಿಕ್ಕಟ್ಟು ನಿಭಾಯಿಸಲು ಅಂತಾರಾಷ್ಟ್ರೀಯ ಹಣಕಾಸು ನಿಧಿಯಿಂದ ಪಾರುಗಾಣಿಕೆ ಹಣ ಪಡೆಯಲು ಯೋಚಿಸುತ್ತಿದೆ. 1980ರಿಂದೀಚೆಗೆ ಪಾಕಿಸ್ತಾನ ಈ ರೀತಿ ವಿದೇಶಗಳಿಂದ 13ನೇ ಬಾರಿಗೆ ಪಾರುಗಾಣಿಕೆ ಪ್ಯಾಕೇಜ್‌ ಪಡೆಯುತ್ತಿದೆ.

Scroll to load tweet…

ಚೀನೀ ಪ್ರಧಾನಿಯನ್ನು ಇಮ್ರಾನ್‌ ಖಾನ್ ಭೇಟಿಯಾಗಿ ನೆರವು ಕೋರಿದ ಹಿನ್ನೆಲೆಯಲ್ಲಿ, ತಮ್ಮ ದೇಶ ಪಾಕ್ ನೆರವಿಗೆ ಸಿದ್ಧವಿರುವುದಾಗಿ ಚೀನೀ ವಿದೇಶಾಂಗ ಸಚಿವ ಕಾಂಗ್ ಕ್ಸುವಾನ್ಯು ತಿಳಿಸಿದರು. ಆದರೆ ಈ ನಿಟ್ಟಿನಲ್ಲಿ ಸ್ಪಷ್ಟತೆಗಾಗಿ ಮತ್ತಷ್ಟು ಮಾತುಕತೆಗಳು ಅಗತ್ಯವಿದೆ ಎಂದು ಚೀನೀ ಸಚಿವರು ಹೇಳಿದ್ದಾರೆ.

Scroll to load tweet…

ಚೀನಾದ ಈ ನಡೆ ಹಿಂದೆ ಕುತಂತ್ರ ಅಡಗಿದೆ ಎಂಬುದು ಕೆಲವರ ಆರೋಪವಾಗಿದೆ. ಮಾತುಕತೆ ಹೆಸರಲ್ಲಿ ಪಾಕ್ ಮೇಲೆ ಮತ್ತಷ್ಟು ಷರತ್ತು ವಿಧಿಸಿ ಆ ಮೂಲಕ ತನ್ನ ಅಡಿಯಾಳು ರಾಷ್ಟ್ರವನ್ನಾಗಿ ಮಾಡಿಕೊಳ್ಳುವ ಹುನ್ನಾರ ಇದು ಎಂಬ ಮಾತುಗಳು ಕೇಳಿ ಬರುತ್ತಿವೆ.

ಕೇವಲ ಮೂಲ ಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡದೆ, ಸಾಮಾಜಿಕ ಪ್ರಗತಿಗೂ ಈ ಯೋಜನೆಯಿಂದ ನೆರವಾಗಬೇಕು ಎಂಬುದು ಪಾಕಿಸ್ತಾನದ ಬಯಕೆಯಾಗಿದೆ.