ಬೆಂಗಳೂರು(ಅ.14): ಹಬ್ಬದ ಋತುವಿನ ಸಂದರ್ಭಗಳಲ್ಲಿ ದೊಡ್ಡ ದೊಡ್ಡ ಆನ್ ಲೈನ್ ಮಾರಾಟದ ಕಂಪನಿಗಳು ರಿಯಾಯಿತಿ ನೀಡಲು ಸಾಲುಗಟ್ಟಿ ನಿಂತಿರುತ್ತವೆ. ಈ ಹಂತದಲ್ಲಿ ಹಣದ ಉಳಿತಾಯಕ್ಕೆ ತಕ್ಕಂತೆ ಮೌಲ್ಯವನ್ನು ಹುಡುಕುವುದು ಉತ್ತಮ ಮಾರ್ಗವಾಗಿದ್ದರೂ ಆನ್'= ಲೈನ್ ಮಾರಾಟ ಜಗತ್ತಿನಲ್ಲಿ ಹಣದ ನಷ್ಟವನ್ನು ತಪ್ಪಿಸಲು ಎಚ್ಚರಿಕೆಯಿಂದ ನಿರ್ವಹಿಸುವುದು ಅಗತ್ಯವಾಗಿರುತ್ತದೆ.

ನಿಮ್ಮ ಆನ್ ಲೈನ್ ಶಾಪಿಂಗ್ ಪಾವತಿಯನ್ನು ಸುರಕ್ಷಿತವಾಗಿ ಖಚಿತಪಡಿಸಿಕೊಳ್ಳಲು 5 ಪ್ರಮುಖ ಅಂಶಗಳು

ಸುರಕ್ಷಿತ ಎಸ್‌ಎಸ್‌ಎಲ್ ರೀತಿಯ ವೆಬ್‌ಸೈಟ್‌ಗಳಿಂದ ಮಾತ್ರ ಖರೀದಿಸಿ:

ಇತ್ತೀಚಿನ ದಿನಗಳಲ್ಲಿ ಆನ್ಲೈನ್ ಶಾಪಿಂಗ್'ನ ಜನಪ್ರಿಯತೆ ಹೆಚ್ಚುತ್ತಿದ್ದು,ಈ ಜನಪ್ರಿಯ ವೇದಿಕೆಯಲ್ಲಿ ಅನೇಕ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಇಂತಹ ವ್ಯಾಪಾರಿಗಳು ನೀಡುವ ಹಬ್ಬದ ಋತುಮಾನ ಮತ್ತು ರಿಯಾಯಿತಿಗಳು ಕೆಲವೊಮ್ಮೆ ತುಂಬಾ ಲಾಭದಾಯಕವಾಗುವ ಕಾರಣ ನಿರ್ಲಕ್ಷಿಸಲು ಸಾಧ್ಯವಾಗದೆ ಇರಬಹುದು. ಆದಾಗ್ಯೂ ವ್ಯಾಪಾರಿ ಸಂಸ್ಥೆಗಳಿಗೆ ಸುರಕ್ಷಿತ ಪಾವತಿಯ ಗೇಟ್ ವೇ ಇಲ್ಲದಿದ್ದರೆ ಹಣಕಾಸಿನ ತೊಂದರೆಗೆ ಸಿಲುಕುವ ಸಾಧ್ಯತೆಗಳಿರುತ್ತವೆ. ಈ ಕಾರಣದಿಂದ ಸುರಕ್ಷಿತ ಸಾಕೇಟ್ಸ್ ಲೇಯರ್ಸ್ ಪ್ರಮಾಣಿತ ಇ ಕಾಮರ್ಸ್ ವೆಬ್'ಸೈಟ್'ನಲ್ಲಿ ಶಾಪಿಂಗ್ ಮಾಡುವುದು ಉತ್ತಮ. ಇದನ್ನು ಪರಿಶೀಲಿಸುವ ಸುಲಭ ಮಾರ್ಗವೆಂದರೆ 'ವೆಬ್'ಸೈಟ್'ನ ಅಡ್ರಸ್ ಬಾರ್'ನ 'https' ಪ್ರೊಟೊಕಾಲ್. ಇದು ನಿಮ್ಮ ಎಲ್ಲಾ ಹಣಕಾಸಿನ ಮಾಹಿತಿಯನ್ನೂ ಆನ್'ಲೈನ್ ಸಂಸ್ಥೆಯಿಂದ ಸ್ವೀಕರಿಸಿದ ಸಮಯದಿಂದ ಎನ್ಕ್ರಿಪ್ಟ್ ಮಾಡಿ ಸುರಕ್ಷಿತವಾಗಿರುವ ಬಗ್ಗೆ  ಖಾತ್ರಿಪಡಿಸುತ್ತದೆ.

ಅಸುರಕ್ಷಿತ ಶಾಪಿಂಗ್ ಆ್ಯಪ್‌ಗಳನ್ನು ಬಳಸದಿರಿ:

ನೀವು ಮೊಬೈಲ್ ಆಪ್'ನಿಂದ ಶಾಪಿಂಗ್ ಮಾಡಬೇಕೆಂದಿದ್ದರೆ ಸುರಕ್ಷಿತ ವೆರಿಫೈ ಆದ ಆಪ್'ಗಳಿಂದ ಶಾಪಿಂಗ್ ಮಾಡಿದರೆ ಉತ್ತಮ. ಬಹುತೇಕ ಶಾಪಿಂಗ್ ಅಪ್ಲಿಕೇಷನ್'ಗಳು ಪಾಸ್'ವರ್ಡ್, ನೆಟ್ ಬ್ಯಾಂಕಿಂಗ್ ಪಾಸ್'ವರ್ಡ್ ಅಥವಾ ಕ್ರೆಡಿಟ್ ಕಾರ್ಡ್ ಮಾಹಿತಿಗಳನ್ನು ಕೇಳುತ್ತವೆ. ಈ ಕಾರಣದಿಂದ ಪ್ರತಿಷ್ಟಿತ ಅತ್ಯುತ್ತಮ ಆಪ್'ಗಳನ್ನು ಇನ್'ಸ್ಟಾಲ್ ಮಾಡಿಕೊಂಡು ವ್ಯವಹಾರ ನಡೆಸಿ

ಲಾಗಿಂಗ್‌ಗೆ ವರ್ಚುಯಲ್ ಕೀಬೋರ್ಡ್ ಬಳಸಿ:
ಆನ್ ಲೈನ್ ನಲ್ಲಿ ಶಾಪಿಂಗ್ ಮಾಡುವಾಗ ಎರಡೂ ರೀತಿಯಲ್ಲಿರುವ ಪಾಸ್ ವರ್ಡ್ ಗಳು ಅಥವಾ ಸಿ.ವಿ.ವಿ ಸಂಖ್ಯೆಗಳನ್ನು ಒಳಗೊಂಡ ವರ್ಚುವಲ್ ಕೀಬೋರ್ಡ್ ಬಳಸಿ ಲಾಗಿಂಗ್ ಆಗುವುದು ಉತ್ತಮ. ಏಕ ರೀತಿಯಲ್ಲಿ ಪಾಸ್ ವರ್ಡ್ ಬಳಸಿ ಲಾಗಿಂಗ್ ಮಾಡಲು ಪ್ರಯತ್ನಿಸಿದರೆ ಹ್ಯಾಕರ್ಸ್ ಗಳು ನಿಮ್ಮ ಹಣ ಲಪಟಾಯಿಸುವ ಸಾಧ್ಯತೆಯಿರುತ್ತದೆ. 

ವರ್ಚುಯಲ್ ಕೀಬೋರ್ಡ್ ಗಳು ಅತೀ ಸುರಕ್ಷಿತವಾಗಿರುವ ಕಾರಣ ಹಾಕರ್ಸ್ ಗಳು ಇಲ್ಲಿಂದ ಹ್ಯಾಕ್ ಮಾಡಲು ಸಾಧ್ಯವಿಲ್ಲದ ಕಾರಣ ಲಾಗಿಂಗ್ ಗೆ ಇದನ್ನು ಬಳಸುವುದು ಉತ್ತಮ.

ವರ್ಚುಯಲ್ ಕಾರ್ಡ್ ಗಳನ್ನು ಬಳಸುವವರಿಗಾಗಿ:

ನೀವು ನಿಯಮಿತವಾಗಿ ಶಾಪಿಂಗ್ ಮಾಡುವವರಾಗಿದ್ದರೆ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಬದಲಾಗಿ ವರ್ಚುಯಲ್ ಕಾರ್ಡ್'ಗಳನ್ನು ಆಯ್ಕೆ ಮಾಡಿಕೊಳ್ಳಿ. ವರ್ಚುಯಲ್ ಕಾರ್ಡ್'ಗಳು ನೆಟ್ ಹಾಗೂ ಡೆಬಿಟ್ ಎರಡೂ ರೀತಿಯ ನೆಟ್ ಅಕೌಂಟ್'ಗಳಲ್ಲಿ ಸುಲಭವಾಗಿ ಲಾಗಿನ್ ಮಾಡಬಹುದು. ಸಾಮಾನ್ಯವಾಗಿ ವರ್ಚುಯಲ್ ಕಾರ್ಡ್'ಗಳಿಗೆ ಹೆಚ್ಚಿನ ಶುಲ್ಕವಿರುವುದಿಲ್ಲ ಜೊತೆಗೆ ಸುರಕ್ಷಿತ ಕೂಡ.

ರಿಯಾಯಿತಿ ಕೂಪನ್ ಕೋಡ್‌ಗಳ ಬಗ್ಗೆ ಎಚ್ಚರಿಕೆಯಿಂದಿರಿ:

ಹಬ್ಬಗಳ ಸಂದರ್ಭಗಳಲ್ಲಿ ಮೇಲ್'ಗಳು, ರಿಯಾಯಿತಿ, ಆಫರ್'ಗಳು ಕೂಪನ್'ಗಳು ಇತ್ಯಾದಿ ರೀತಿಯಲ್ಲಿ ಪ್ರಚಾರ ಮಾಡಲಾಗುತ್ತದೆ. ನೀವು ಈ ಸಂದರ್ಭಗಳಲ್ಲಿ ರಿಯಾಯಿತಿ, ಆಫರ್ ಮುಂತಾದವನ್ನು ಬಳಸಬೇಕಾದರೆ ಎಚ್ಚರಿಕೆಯಿಂದಿರಬೇಕು. ನೇರವಾಗಿ ಅಧಿಕೃತ ಸಂಸ್ಥೆಯಿಂದ ಬಂದ ಮಾಹಿತಿಗಳೆ ಎಂಬುದನ್ನು ಪರಿಶೀಲಿಸಿ. ಅನೇಕ ಬಾರಿ ಖರೀದಿದಾರರು ಅಂತಹ ರಿಯಾಯಿತಿ ಕೂಪನ್ಗಳ ಇ-ಮೇಲ್ ಗಳಲ್ಲಿ ನೈಜ ವ್ಯಾಪಾರಿಗಳಿಂದ ಬಂದಂತೆ ಪರಿಗಣಿಸಿರುವ ಲಿಂಕ್ ಅನ್ನು ಸರಳವಾಗಿ ಬಳಸಿರುತ್ತಾರೆ. 

ಆದರೆ ಅನಂತರ ಅವರಿಗೆ ಗೊತ್ತಾಗುತ್ತದೆ ಇವು ಸುಳ್ಳು ನಾವು ಮೋಸ ಹೋಗಿದ್ದೇವೆ ಎಂದು. ಈ ರೀತಿಯ ಮೇಲ್ ಗಳು ಲಿಂಕ್ ಗಳು ಹ್ಯಾಕರ್ಸ್ ಗಳು ನಿಮ್ಮ ವೈಯುಕ್ತಿಕ ಮಾಹಿತಿಗಳು ಹಾಗೂ ಹಣ ಕದಿಯುವ ತಂತ್ರವಾಗಿರುತ್ತದೆ. ಆದ ಕಾರಣ ಅಧಿಕೃತ ಸಂಸ್ಥೆಯೆಂದು ನೀವು ಖಚಿತಪಡಿಸಕೊಂಡ ನಂತರ ಮುಂದುವರಿಯಬೇಕು. 

ಈ ರೀತಿಯ ಸುರಕ್ಷತೆ ಶಿಷ್ಟಾಚಾರಗಳನ್ನು ಅನುಸರಿಸುವುದರಿಂದ ಹಬ್ಬದ ಋತುವಿನಲ್ಲಿ ನಿಮ್ಮ ಶಾಪಿಂಗ್ ಸಂತೋಷದಾಯಕವಾಗಿರುತ್ತದೆ. ಹಣಕಾಸಿನ ತೊಂದರೆಗಳಿಂದ ತಪ್ಪಿಸಿಕೊಳ್ಳುತ್ತೀರಿ.