Asianet Suvarna News Asianet Suvarna News

Gold Silver Price: ನೆರೆ ರಾಜ್ಯದಲ್ಲಿ ಚಿನ್ನದ ದರ ಇಳಿಕೆ, ಕರ್ನಾಟಕದಲ್ಲಿ ಹೀಗಿದೆ ದರ!

* ಚಿನ್ನ, ಬೆಳ್ಳಿ ದರ ಹೇಗಿದೆ?

* ಕೊರೋನಾ ಮೂರನೇ ಅಲೆ ಮಧ್ಯೆ ಇಳಿಕೆಯಾಗಿದ್ಯಾ ಚಿನ್ನದ ದರ

* ಹೀಗಿದೆ ಡಿಸೆಂಬರ್ 12, 2021ರ ಗೋಲ್ಡ್‌ ಹಾಗೂ ಸಿಲ್ವರ್ ರೇಟ್

Check Gold Silver rate in Bengaluru and major cities of India Dec 12 2021 pod
Author
Bangalore, First Published Dec 12, 2021, 12:06 PM IST
  • Facebook
  • Twitter
  • Whatsapp

ಬೆಂಗಳೂರು(ಡಿ.12): ಚಿನ್ನ (Gold) ಅಂದ್ರೆ ಯಾರಿಗಿಷ್ಟ ಇಲ್ಲ? ಹೆಣ್ಮಕ್ಕಳಿಗೆ ಚಿನ್ನದ ಮೇಲೆ ವಿಶೇಷ ಪ್ರೀತಿ. ಅದರಲ್ಲೂ ಈಗ ಮದುವೆ ಸೀಜನ್. ಹೀಗಾಗಿ ಚಿನ್ನ ಖರೀದಿ ಅನಿವಾರ್ಯವಾಗಿದೆ. ಇನ್ನು ಇತ್ತ ಈ ಶುಭ ಕಾರ್ಯಗಳಿಗೆ ಒಮಿಕ್ರಾನ್ ಭೀತಿ ತೊಡಕುಂಟು ಮಾಡುವ ಸಾಧ್ಯತೆ ಇದೆ. ಈಗಾಗಲೇ ತಜ್ಞರು ಈ ವಿಚಾರದಲ್ಲಿ ಎಚ್ಚರಿಕೆ ನಿಡಿದ್ದು, ಮೂರನೇ ಅಲೆ (Corona Third Wavew) ಆರಂಭವಾಗುವ ಸೂಚನೆ ನೀಡಿದ್ದಾರೆ. ಹೀಗಿರುವಾಗ ಜನರೂ ಏನು ಮಾಡೋದೆಂದು ತೋಚದೆ ಕಂಗಾಲಾಗಿದ್ದಾರೆ. ಹೀಗಿದ್ದರೂ ಚಿನ್ನದ ದರವೇನು? ಬೆಳ್ಳಿ ರೇಟ್ ಕಡಿಮೆಯಾಗಿದಾ ಎಂಬ ಕುತೂಹಲ ಹಲವರಲ್ಲಿ ಇರುತ್ತದೆ. ಹೀಗಿರುವಾಗ ಇಂದು 12 ಡಿಸೆಂಬರ್ 2021, ಭಾನುವಾರದ ಗೋಲ್ಡ್‌ ರೇಟ್‌ ಇಲ್ಲಿದೆ ನೋಡಿ.

"

ಒಮಿಕ್ರಾನ್ ಭೀತಿ ಆರಂಭವಾದಾಗಿನಿಂದಲೂ ಚಿನ್ನ, ಬೆಳ್ಳಿ ದರ ಹಾವೇಣಿ ಆಟ ಆರಂಭಿಸಿದೆ. ಒಂದು ದಿನ ಕುಸಿಯುವ ಚಿನ್ನದ ದರ ಮರುದಿನವೇ ಏರಿಕೆಯ ಹಾದಿ ಹಿಡಿರುವುದು ಗ್ರಾಹಕರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಹೀಗಿರುವಾಗ ಚಿನ್ನ ಖರೀದಿಸಲು ಇದು ಉತ್ತಮ ಸಮಯವಾ? ಅಥವಾ ಇನ್ನೂ ಕೊಂಚ ಕಾಯುವುದು ಸರಿನಾ? ಎಂಬ ಪ್ರಶ್ನೆಯೂ ಈ ಗೊಂದಲಕ್ಕೆ ಕಾರಣವಾಗಿದೆ. ಈ ಏರಿಳಿತದ ಆಟದ ಮಧ್ಯೆ ಚಿನ್ನ ಖರೀದಿಗೆ ಕೊಂಚ ಸಮಯ ಕಾಯೋದು ಸೂಕ್ತ ಎನ್ನುತ್ತಿದೆ ಇಂದಿನ ಗೋಲ್ಡ್‌ ರೇಟ್‌. ಹೌದು ಇಂದು ಚೆನ್ನೈ ಹೊರತುಪಡಿಸಿ ಉಳಿದೆಡೆ ಚಿನ್ನದ ಬೆಲೆಯಲ್ಲಿ 10 ರೂ. ಹೆಚ್ಚಳವಾಗಿದೆ. ಹೀಗಿರುವಾಗ ಒಮಿಕ್ರಾನ್ ಆತಂಕದ ಮಧ್ಯೆ ಚಿನ್ನದ ದರ ಕುಸಿಯಲಿದೆ ಎಂಬ ಮಾತುಗಳು ಆರ್ಥಿಕ ತಜ್ಞರದ್ದಾಗಿದೆ. 

ಬೆಂಗಳೂರಿನಲ್ಲಿ( Bangalore) ದರ ಎಷ್ಟಿದೆ?

ಬೆಂಗಳೂರಿನಲ್ಲಿ ಚಿನ್ನದ ಬೆಲೆಯಲ್ಲಿಇಂದು ನಿನ್ನೆಗಿಂತ 10 ರೂ. ಏರಿಕೆಯಾಗಿದೆ. 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ 45,110 ರೂ.ಇದ್ದು, ನಿನ್ನೆ 45,100ರೂ.ಇತ್ತು. 24 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ ನಿನ್ನೆ 49,200 ರೂ.ಇದ್ದು,ಇಂದು 10ರೂ.ಏರಿಕೆಯಾಗಿ 49,210ರೂ.ಇದೆ. ಇನ್ನು ಕಳೆದ ಕೆಲವು ದಿನಗಳಿಂದ ಇಳಿಕೆಯತ್ತ ಮುಖ ಮಾಡಿದ್ದ ಬೆಳ್ಳಿ ದರದಲ್ಲಿಇಂದು ಯಾವುದೇ ಬದಲಾವಣೆಯಾಗಿಲ್ಲ. ಒಂದು ಕೆ.ಜಿ.ಬೆಳ್ಳಿಗೆ 61,200ರೂ. ಆಗಿದೆ.

ದೆಹಲಿಯಲ್ಲಿ (Delhi) ಹೇಗಿದೆ?

ದೆಹಲಿಯಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ ಇಂದು 47,260ರೂ.ಆಗಿದ್ದು, ನಿನ್ನೆ 47,250ರೂ. ಇತ್ತು. ಅಂದ್ರೆ ನಿನ್ನೆಗಿಂತ ಇಂದು 10ರೂ. ಏರಿಕೆಯಾಗಿದೆ. 24 ಕ್ಯಾರಟ್ 10 ಗ್ರಾಂ ಚಿನ್ನದ ದರದಲ್ಲಿ ಕೂಡ 10 ರೂ. ಏರಿಕೆಯಾಗಿದೆ. ನಿನ್ನೆ 51,550 ರೂ. ಇತ್ತು,ಇಂದು 51,560ರೂ. ಆಗಿದೆ. ನಿನ್ನೆಇಳಿಕೆ ಕಂಡಿದ್ದ ಬೆಳ್ಳಿ ದರದಲ್ಲಿಇಂದು 500ರೂ.ಏರಿಕೆಯಾಗಿದೆ. ನಿನ್ನೆಒಂದು ಕೆ.ಜಿ.ಬೆಳ್ಳಿ ದರದಲ್ಲೂ ಯಾವುದೇ ಬದಲಾವಣೆಯಾಗಿಲ್ಲ. ಬೆಳ್ಳಿ ದರ 61,200ರೂ. ಆಗಿದೆ. 

ಮುಂಬೈನಲ್ಲಿ(Mumbai) ಎಷ್ಟಿದೆ ದರ?

ಮುಂಬೈನಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ ನಿನ್ನೆ 46,790 ರೂ.ಇದ್ದು,ಇಂದು 10ರೂ, ಇಳಿಕೆ ಕಂಡು 46,780ರೂ.ಆಗಿದೆ. 24 ಕ್ಯಾರಟ್ 10 ಗ್ರಾಂ ಚಿನ್ನದ ದರ ನಿನ್ನೆ 47,790ರೂ.ಇತ್ತು, ಇಂದು 10ರೂ. ಇಳಿಕೆಯಾಗಿ 47,780ರೂ. ಆಗಿದೆ. ಒಂದು ಕೆ.ಜಿ. ಬೆಳ್ಳಿಗೆ ದರದಲ್ಲೂ ಯಾವುದೇ ಬದಲಾವಣೆಯಾಗಿಲ್ಲ. ಇಂದಿನ ಬೆಳ್ಳಿ ದರ 61,200ರೂ. ಆಗಿದೆ. 

ಚೆನ್ನೈಯಲ್ಲಿ(Chennai) ದರ ಹೀಗಿದೆ

ಚೆನ್ನೈಯಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ ಇಂದು 45,390ರೂ.ಇದೆ. ನಿನ್ನೆ 45,380ರೂ.ಇತ್ತು. ಅಂದ್ರೆ ನಿನ್ನೆಗಿಂತ ಇಂದು 10ರೂ. ಏರಿಕೆಯಾಗಿದೆ. 24 ಕ್ಯಾರಟ್ 10 ಗ್ರಾಂ ಚಿನ್ನದ ದರದಲ್ಲಿ ಕೂಡ ನಿನ್ನೆಗಿಂತ ಇಂದು 10ರೂ. ಏರಿಕೆಯಾಗಿದೆ. ನಿನ್ನೆ 49,500 ರೂ.ಇತ್ತು,ಇಂದು 49,510 ರೂ.ಇದೆ. ಒಂದು ಕೆ.ಜಿ. ಬೆಳ್ಳಿ ದರದಲ್ಲಿ ಯಾವುದೇ ಬದಲಾವಣೆ ಯಾಗಿಲ್ಲ. ಇಂದಿನ ದರ 65,100ರೂ. ಆಗಿದೆ. 
 

Follow Us:
Download App:
  • android
  • ios