ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ದರಬೆಂಗಳೂರಿನಲ್ಲಿ ಬೆಳ್ಳಿ ದರದಲ್ಲಿ ಇಂದು ದೊಡ್ಡ ಮಟ್ಟದ ಏರಿಕೆಬೆಂಗಳೂರಿನಲ್ಲಿ ಇಂದು ಚಿನ್ನ, ಬೆಳ್ಳಿಯ ದರ ಹೇಗಿದೆ

ಬೆಂಗಳೂರು (ಜ.17): ಚಿನ್ನಾಭರಣಗಳ ವಿಚಾರದಲ್ಲಿ ಭಾರತೀಯರಿಗೆ ಎಲ್ಲಿಲ್ಲದ ಪ್ರೀತಿ. ಹಾಗಾಗಿ ಹಳದಿ ಲೋಹದ ಬೆಲೆಯಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬೇಡಿಕೆ ಕುಸಿಯುವ ಮಾತೇ ಇರುವುದಿಲ್ಲ. ಏರಿಳಿತ ಕಾಣುತ್ತಲೇ ಇರುವ ಚಿನ್ನ ಬೆಳ್ಳಿ ದರದ (Price) ಮೇಲೆ ಅಂತಾರಾಷ್ಟ್ರೀಯ ವಿಚಾರಗಳು ಸಾಕಷ್ಟು ಪ್ರಭಾವ ಬೀರುತ್ತದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಾಗುವ ಸಣ್ಣ ಬದಲಾವಣೆಗಳೂ ಕೂಡ ಭಾರತದಲ್ಲಿ ಚಿನ್ನ ಹಾಗೂ ಬೆಳ್ಳಿ ದರದಲ್ಲಿ ಬಹಳಷಟು ಬದಲಾವಣೆಗೆ ಕಾರಣವಾಗುತ್ತದೆ. ಕೋವಿಡ್ ಸಂಖ್ಯೆಯಲ್ಲೂ ಏರಿಳಿತ ಕಾಣುತ್ತಿರುವುದರಿಂದ ಮಳಿಗೆಗಳಿಗೆ ಹೋಗಿ ಚಿನ್ನ, ಬೆಳ್ಳಿ ಆಭರಣಗಳನ್ನು ಖರೀದಿ ಮಾಡುವವರ ಸಂಖ್ಯೆ ಕಡಿಮೆ. ಆದರೆ, ಇವುಗಳ ಬೆಲೆಗಳ ಮೇಲೆ ಗಮನ ನೀಡುವ ದೊಡ್ಡ ವರ್ಗವೇ ಇದೆ. ಇನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನ, ಬೆಳ್ಳಿ ಪೂರೈಕೆಯಲ್ಲಿ ವ್ಯತ್ಯಯವಾದ್ರೆ ಬೆಲೆ ಮೇಲೆ ಪರಿಣಾಮ ಬೀರುತ್ತದೆ. ಇನ್ನು ದೇಶದಲ್ಲಿನ ಚಿನ್ನದ ಸಂಗ್ರಹ ಕೂಡ ಬೆಲೆ ನಿರ್ಧರಣೆ ಮೇಲೆ ಪರಿಣಾಮ ಬೀರುತ್ತದೆ. ಚಿನ್ನ ಹಾಗೂ ಬೆಳ್ಳಿ ಮೇಲೆ ಖರೀದಿಸೋದು ಅಥವಾ ಹೂಡಿಕೆ ಮಾಡೋದು ಅಂದ್ರೆ ಲಕ್ಷಾಂತರ ರೂಪಾಯಿ ವ್ಯವಹಾರವಾಗಿರೋ ಕಾರಣ ಯಾವುದೇ ನಿರ್ಧಾರ ಕೈಗೊಳ್ಳೋ ಮುನ್ನ ಮಾರುಕಟ್ಟೆ ದರ ಪರಿಶೀಲನೆ ನಡೆಸೋದು ಅಗತ್ಯ. ಹಾಗಾದ್ರೆ ದೇಶದ ಪ್ರಮುಖ ಮಾರುಕಟ್ಟೆಗಳಲ್ಲಿ ಜನವರಿ 19 ರಂದು ಚಿನ್ನ ಹಾಗೂ ಬೆಳ್ಳಿ ದರ ಎಷ್ಟಿದೆ ?
"

ಬೆಂಗಳೂರಿನಲ್ಲಿ ದರ ಎಷ್ಟಿದೆ?
ಬೆಂಗಳೂರಿನಲ್ಲಿ (Bengaluru)ಚಿನ್ನದ ಬೆಲೆಯಲ್ಲಿ ಬದಲಾವಣೆಯಾಗಿಲ್ಲ. 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ 44,970ರೂ.ಇದ್ದು, ಇಂದೂ ಕೂಡ ಅದೇ ಮೊತ್ತದಲ್ಲಿದೆ. 24 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ 49,070 ರೂಪಾಯಿ ಆಗಿದ್ದು ಯಾವುದೇ ಬದಲಾವಣೆ ಆಗಿಲ್ಲ. ಇನ್ನು ಬೆಳ್ಳಿ ದರದಲ್ಲಿ ದೊಡ್ಡ ಮಟ್ಟದ ಬದಲಾವಣೆಯಾಗಿದ್ದು. ಒಂದು ಕೆ.ಜಿ.ಬೆಳ್ಳಿಯಲ್ಲಿ4300 ರೂಪಾಯಿ ಕಡಿಮೆಯಾಗಿದೆ. ನಿನ್ನೆ61,700 ರೂ.ಇದ್ದ ಬೆಳ್ಳಿ ದರ ಇಂದು 66,000ರೂಪಾಯಿ ಆಗಿದೆ.

ದೆಹಲಿಯಲ್ಲಿ ಹೇಗಿದೆ?
ದೆಹಲಿಯಲ್ಲಿ (Delhi)ಕೂಡ ಚಿನ್ನದ ಬೆಲೆಯಲ್ಲಿ ಇಂದು ಯಾವುದೇ ಬದಲಾವಣೆಯಾಗಿಲ್ಲ. 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ ಇಂದು 47,140ರೂ. ಆಗಿದೆ. ಸತತ ಮೂರನೇ ದಿನ ದೆಹಲಿಯಲ್ಲಿ ಚಿನ್ನದ ಬೆಲೆಯಲ್ಲಿ ಯಾವ ಬದಾವಣೆಯೂ ಆಗಿಲ್ಲ. 24 ಕ್ಯಾರಟ್ 10 ಗ್ರಾಂ ಚಿನ್ನದ ದರ 51,430 ರೂಪಾಯಿ ಆಗಿದ್ದು, ಅದೇ ದರ ಕಾಯ್ದುಕೊಂಡಿದೆ. ಬೆಳ್ಳಿ ದರದಲ್ಲಿ ಕೂಡ 1500 ರೂಪಾಯಿ ಏರಿಕೆಯಾಗಿದೆ. ನಿನ್ನೆ 61,700 ರೂಪಾಯಿ ಇದ್ದ 1 ಕೆಜಿ ಬೆಳ್ಳಿ ದರ ಇಂದು 63,200 ರೂಪಾಯಿ ಆಗಿದೆ.

ATM Safety Tips : ಎಟಿಎಂ ಬಳಸುವ ಮುನ್ನ ಹಸಿರು ಲೈಟ್ ಬಗ್ಗೆ ಗಮನವಿರಲಿ!
ಮುಂಬೈನಲ್ಲಿಎಷ್ಟಿದೆ ದರ?

ಮುಂಬೈನಲ್ಲಿ (Mumbai) 22 ಕ್ಯಾರಟ್ 10 ಗ್ರಾಂ ಚಿನ್ನದ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. 47,090 ದರವೇ ಉಳಿದುಕೊಂಡಿದೆ. 24 ಕ್ಯಾರಟ್ ನ 10 ಗ್ರಾಂ ಚಿನ್ನದ ದರದಲ್ಲೂ ಯಾವುದೇ ಬದಲಾವಣೆಯಾಗದೆ 49,090 ಯಲ್ಲಿದೆ. 1 ಕೆಜಿ ಬೆಳ್ಳಿ ದರದಲ್ಲಿ1500 ರೂಪಾಯಿ ಇಳಿಕೆಯಾಗಿದ್ದು, ನಿನ್ನೆ 61,700 ರೂಪಾಯಿ ಇದ್ದ ಬೆಳ್ಳಿ ದರ ಇಂದು 63,200 ರೂಪಾಯಿ ಆಗಿದೆ.

Devas Multimedia Deal ಕಾಂಗ್ರೆಸ್‌‌ನ ಅತೀ ದೊಡ್ಡ ಹಗರಣ, ಸುದ್ದಿಗೋಷ್ಠಿಯಲ್ಲಿ ದೇವಾಸ್ ಆಂತರಿಕ್ಷ್ ಡೀಲ್ ಬಿಚ್ಚಿಟ್ಟ ನಿರ್ಮಲಾ!
ಚೆನ್ನೈಯಲ್ಲಿ ದರ ಹೀಗಿದೆ

ಚೆನ್ನೈಯಲ್ಲಿ (Chennai) 22 ಕ್ಯಾರಟ್ 10 ಗ್ರಾಂ ಚಿನ್ನದ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. 45, 320 ರೂಪಾಯಿಯಲ್ಲೇ ಚಿನ್ನದ ದರವಿದೆ. 24 ಕ್ಯಾರಟ್ 10 ಗ್ರಾಂ ಚಿನ್ನದ ದರದಲ್ಲೂ ಬದಲಾವಣೆಯಾಗದೇ 49, 420 ರೂಪಾಯಿ ಆಗಿದೆ. ಇನ್ನು 1 ಕೆಜಿ ಬೆಳ್ಳಿ ದರದಲ್ಲಿ 1500 ರೂಪಾಯಿ ಏರಿಕೆಯಾಗಿದ್ದು, 67,300 ರೂಪಾಯಿ ಆಗಿದೆ.