Gold Silver Price: ಚಿನ್ನ,ಬೆಳ್ಳಿ ದರದಲ್ಲಿ ಮುಂದುವರಿದ ಏರಿಳಿತ, ಇಂದಿನ ದರ ಎಷ್ಟಿದೆ?
ಇಂದಿನ ಚಿನ್ನ ಹಾಗೂ ಬೆಳ್ಳಿ ದರ
ಬೆಂಗಳೂರಿನಲ್ಲಿ ಚಿನ್ನದ ದರದಲ್ಲಿ ಬದಲಾವಣೆಯಿಲ್ಲ
2022ರ ಜನವರಿ 8 ಗೋಲ್ಡ್, ಸಿಲ್ವರ್ ರೇಟ್ ಇಲ್ಲಿದೆ

ಬೆಂಗಳೂರು (ಜ. 8): ಹೊಸ ವರ್ಷದ ಆರಂಭದ ದಿನದಿಂದಲೂ ಚಿನ್ನ ಹಾಗೂ ಬೆಳ್ಳಿ ದರದಲ್ಲಿ ಏರಿಳಿತ ಕಂಡುಬರುತ್ತಿದೆ. ಆದರೆ, ಶನಿವಾರ ಬೆಂಗಳೂರಿನಲ್ಲಿ ಚಿನ್ನದ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಚಿನ್ನ (Gold) ಹಾಗೂ ಬೆಳ್ಳಿ (Silver) ಬೆಲೆಯಲ್ಲಿ(Price) ನಿರಂತರ ಏರಿಳಿತ ಕಂಡುಬರುತ್ತಲೇ ಇರುತ್ತದೆ. ಕೆಲವೊಮ್ಮೆ ಗಗನಕ್ಕೇರೋ ಚಿನ್ನ, ಬೆಳ್ಳಿ ದರಗಳು ಇನ್ನೊಮ್ಮೆ ಅಷ್ಟೇ ವೇಗವಾಗಿ ಕೆಳಗಿಳಿಯುತ್ತವೆ ಕೂಡ. ಕೊರೋನಾ(Corona) ಕಾಣಿಸಿಕೊಂಡ ಬಳಿಕ ಚಿನ್ನ ಹಾಗೂ ಬೆಳ್ಳಿ ಎರಡರ ಬೆಲೆಯೂ ಗಗನಕ್ಕೇರಿತ್ತು. ಲಾಕ್ ಡೌನ್ , ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಬೆಳವಣಿಗೆಗಳು, ಭಾರತದ ಷೇರು ಮಾರುಕಟ್ಟೆಯಲ್ಲಿನ ಕುಸಿತ ಕಳೆದ ವರ್ಷ ಚಿನ್ನ ಹಾಗೂ ಬೆಳ್ಳಿ ದರದ ಮೇಲೆ ಗಮನಾರ್ಹ ಪರಿಣಾಮ ಬೀರಿದ್ದವು. ಮುಂಬೈ ಹಾಗೂ ದೆಹಲಿಯಲ್ಲಿ ಚಿನ್ನದ ಬೆಲೆಯಲ್ಲಿ ಕೊಂಚ ಇಳಿಕೆಯಾಗಿದ್ದರೆ, ಚೆನ್ನೈನಲ್ಲಿ ಮಾತ್ರ 60 ರೂಪಾಯಿ ಏರಿಕೆ ಕಂಡಿದೆ.
"
ಬೆಂಗಳೂರಿನಲ್ಲಿ( Bangalore) ದರ ಎಷ್ಟಿದೆ?
ಬೆಂಗಳೂರಿನಲ್ಲಿ ಚಿನ್ನದ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಶುಕ್ರವಾರ 350 ರೂಪಾಯಿ ಕಡಿತಗೊಂಡಿದ್ದರಿಂದ 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ 44, 600 ರೂಪಾಯಿ ಆಗಿತ್ತು. ಶನಿವಾರವೂ ಇದೇ ದರ ಮುಂದುವರಿದಿದೆ. ಇನ್ನು 24 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆಯಲ್ಲೂ ಯಾವುದೇ ಬದಲಾವಣೆಯಾಗಿಲ್ಲ. 10 ಗ್ರಾಂ ಚಿನ್ನಕ್ಕೆ 48, 650 ರೂಪಾಕಯಿ ಆಗಿದೆ. 1 ಕೆಜಿ ಬೆಳ್ಳಿ ದರದಲ್ಲಿ ಮಾತ್ರ 300 ರೂಪಾಯಿ ಏರಿಕೆ ಕಂಡಿದೆ. ಬೆಂಗಳೂರಿನಲ್ಲಿ 1 ಕೆಜಿ ಬೆಳ್ಳಿಗೆ 60, 700 ರೂಪಾಯಿ ಆಗಿದೆ.
ದೆಹಲಿಯಲ್ಲಿ (Delhi) ಹೇಗಿದೆ?
ದೇಶದ ರಾಜಧಾನಿ ದೆಹಲಿಯಲ್ಲಿ ಚಿನ್ನದ ದರದಲ್ಲಿ ಕೊಂಚ ಮಟ್ಟದ ಇಳಿಕೆಯಾಗಿದೆ. 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ ಮತ್ತೆ 10 ರೂಪಾಯಿ ಇಳಿಕೆಯಾಗಿದ್ದು ಇಂದು 46, 740 ತಲುಪಿದೆ. ಇನ್ನು 24 ಕ್ಯಾರಟ್ 10 ಗ್ರಾಂ ಚಿನ್ನದ ದರದಲ್ಲೂ ಕೊಂಚ ಇಳಿಕೆಯಾಗಿದ್ದು 50, 990 ರೂಪಾಯಿ ತಲುಪಿದೆ. 1 ಕೆಜಿ ಬೆಳ್ಳಿ ದರದಲ್ಲಿ 300 ರೂಪಾಯಿ ಏರಿಕೆಯಾಗಿ 60,700 ರೂಪಾಯಿಯ ಆಗಿದೆ.
ಮುಂಬೈನಲ್ಲಿ(Mumbai) ಎಷ್ಟಿದೆ ದರ?
ಮುಂಬೈನಲ್ಲಿ ಚಿನ್ನದ ದರ ಕೊಂಚ ಇಳಿಕೆಯಾಗಿದೆ. ಹೌದು 22 ಕ್ಯಾರಟ್ 10 ಗ್ರಾಂ ಚಿನ್ನದ ದರ, 46,500 ರೂ.ಆಗಿದೆ. 24 ಕ್ಯಾರಟ್ 10 ಗ್ರಾಂ ಚಿನ್ನದ ದರ 48, 500 ರೂ ಆಗಿದೆ. ಇನ್ನು ಬೆಳ್ಳಿ ದರದಲ್ಲಿ 300 ರೂಪಾಯಿ ಏರಿಕೆಯಾಗಿದ್ದು, 60,700 ರೂಪಾಯಿ ತಲುಪಿದೆ.
ಚೆನ್ನೈಯಲ್ಲಿ(Chennai) ದರ ಹೀಗಿದೆ
ಚೆನ್ನೈಯಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನದ ದರದಲ್ಲಿ 60 ರೂಪಾಯಿ ಏರಿಕೆ ಕಂಡು, ಇಂದು 44,920ರೂ. ಆಗಿದೆ. 24 ಕ್ಯಾರಟ್ 10 ಗ್ರಾಂ ಚಿನ್ನದ ದರದಲ್ಲಿ 60 ರೂಪಾಯಿ ಇಳಿಕೆ ಕಂಡು 49,000 ರೂಪಾಯಿ ಆಗಿದೆ. ಒಂದು ಕೆ.ಜಿ. ಬೆಳ್ಳಿ ದರದಲ್ಲಿ 100 ರೂಪಾಯಿ ಇಳಿಕೆ ಕಂಡಿದ್ದು, 64,600 ರೂಪಾಯಿ ಆಗಿದೆ.
ಚಿನ್ನ ಹಾಗೂ ಬೆಳ್ಳಿ ದರದಲ್ಲಿ ಕೊಂಚ ಮಟ್ಟದ ಇಳಿಕೆಯಾಗಿದೆ. ಬೆಳ್ಳಿ ದರದಲ್ಲಿ ದೇಶಾದ್ಯಂತ ಏಕರೂಪದಲ್ಲಿ ಏರಿಕೆಯಾಗಿದೆ. ಒಂದೆಡೆ ಕೋವಿಡ್ ನಿಯಮಾವಳಿಗಳು ಮತ್ತೊಂದೆ ಚಿನ್ನ ಹಾಗೂ ಬೆಳ್ಳಿ ದರದಲ್ಲಿ ಏರಿಳಿತ ಗ್ರಾಹಕರ ಚಿಂತೆಗೆ ಕಾರಣವಾಗಿದೆ. ಮದುವೆ ಸಮಾರಂಭಗಳಿಗೆ ಕೋವಿಡ್ ಸೂಕ್ತ ನಿಯಮಾವಳಿಗಳು ಮಿತಿ ಹೇರಿರುವುದು ಕೂಡ ಚಿನ್ನಾಭರಣಗಳ ಮೇಲೆ ಬೇಡಿಕೆ ಮೇಲೆ ಪರಿಣಾಮ ಬೀರಿದೆ.