ಇಂದಿನ ಚಿನ್ನ ಹಾಗೂ ಬೆಳ್ಳಿ ದರಚಿನ್ನದ ದರದಲ್ಲಿ ಅಲ್ಪ ಇಳಿಕೆ2022ರ ಜನವರಿ 6 ಗೋಲ್ಡ್, ಸಿಲ್ವರ್ ರೇಟ್ ಇಲ್ಲಿದೆ
ಬೆಂಗಳೂರು (ಜ.6): ದೇಶದ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಏರಿಳಿತದ ಹಾವು ಏಣಿ ಆಟ ಮುಂದುವರಿದಿದೆ. ಆಯಾಯ ರಾಜ್ಯಗಳಲ್ಲಿ ಅಲ್ಲಿನ ಬೇಡಿಕೆಗೆ ತಕ್ಕಂತೆ ಹಳದಿಲೋಹದ ಬೆಲೆಯಲ್ಲಿ ವ್ಯತ್ಯಾಸವಾಗಿದೆ. ಚೆನ್ನೈ ಹೊರತುಪಡಿಸಿ, ಮುಂಬೈ, ದೆಹಲಿ ಹಾಗೂ ಬೆಂಗಳೂರಿನಲ್ಲಿ ಚಿನ್ನದ ಬೆಲೆಯಲ್ಲಿ ಅಲ್ಪ ಕಡಿತವಾಗಿದ್ದರೆ, ಚೆನ್ನೈನಲ್ಲಿ ಮಾತ್ರ 180 ರೂಪಾಯಿ ಕಡಿತವಾಗಿದೆ. ಆದರೆ, ಬೆಳ್ಳಿಯ ಬೆಲೆಯಲ್ಲಿ ದೇಶದಾದ್ಯಂತ ಏಕರೂಪದಲ್ಲಿ ಇಳಿಕೆಯಾಗಿದೆ. ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯವನ್ನಾಧರಿಸಿ ಆಯಾ ದಿನದ ಬಂಗಾರ ಹಾಗೂ ಬೆಳ್ಳಿ ದರ ನಿರ್ಧಾರವಾಗುತ್ತದೆ. ಒಂದೆಡೆ ದೇಶದಲ್ಲಿ ಕರೋನಾ ಪ್ರಕರಣಗಳು ಏರಿಕೆ ಕಾಣುವ ಮೂಲಕ ವಿವಿಧ ರಾಜ್ಯಗಳಲ್ಲಿ ಶುಭ ಕಾರ್ಯಗಳು ಮದುವೆ ಸಮಾರಂಭಗಳಿಗೆ ಸಾಕಷ್ಟು ಕಟ್ಟುನಿಟ್ಟಿನ ನಿಯಮವನ್ನು ವಿಧಿಸಲಾಗುತ್ತಿದೆ. ಇದರ ನಡುವೆ ಚಿನ್ನ ಹಾಗೂ ಬೆಳ್ಳಿ ದರದಲ್ಲೂ ಏರಿಳಿಕೆಯಾಗುತ್ತಿರುವುದು ಗ್ರಾಹಕರ ಚಿಂತೆಗೆ ಕಾರಣವಾಗಿದೆ. ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಚಿನ್ನ ಹಾಗೂ ಬೆಳ್ಳಿ ದರದಲ್ಲಿ ಯಾವ ರೀತಿಯ ಏರಿಕೆ-ಇಳಿಕೆ ಕಂಡಿದೆ ಎನ್ನುವುದರ ವಿವರ ಇಲ್ಲಿದೆ.
"
ಬೆಂಗಳೂರಿನಲ್ಲಿ( Bangalore) ದರ ಎಷ್ಟಿದೆ?
ಬುಧವಾರ ಚಿನ್ನದ ದರದಲ್ಲಿ 250 ರೂಪಾಯಿ ಏರಿಕೆ ಕಂಡಿತ್ತು. ಗುರುವಾರ ಈ ಬೆಲೆಯಲ್ಲಿ 200 ರೂಪಾಯಿ ಕಡಿತವಾಗಿದೆ. 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ 44,950 ರೂಪಾಯಿ ಆಗಿದೆ. ಇನ್ನು 24 ಕ್ಯಾರಟ್ 10 ಗ್ರಾಂ ಚಿನ್ನದ ದರ 49, 040 ಆಗಿದ್ದು, 210 ರೂಪಾಯಿ ಇಳಿಕೆ ಕಂಡಿದೆ. 1 ಕೆಜಿ ಬೆಳ್ಳಿ ದರದಲ್ಲಿ 900 ರೂಪಾಯಿ ಇಳಿಕೆಯಾಗಿದ್ದು, 61,400 ರೂಪಾಯಿ ಆಗಿದೆ.
ದೆಹಲಿಯಲ್ಲಿ (Delhi) ಹೇಗಿದೆ?
ದೇಶದ ರಾಜಧಾನಿ ದೆಹಲಿಯಲ್ಲಿ ಚಿನ್ನದ ದರದಲ್ಲಿ ಕೊಂಚ ಮಟ್ಟದ ಇಳಿಕೆಯಾಗಿದೆ. 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ ಮತ್ತೆ 10 ರೂಪಾಯಿ ಇಳಿಕೆಯಾಗಿದ್ದು ಇಂದು 47,290 ತಲುಪಿದೆ. ಇನ್ನು 24 ಕ್ಯಾರಟ್ 10 ಗ್ರಾಂ ಚಿನ್ನದ ದರದಲ್ಲೂ ಕೊಂಚ ಇಳಿಕೆಯಾಗಿದ್ದು 51,570 ರೂಪಾಯಿ ತಲುಪಿದೆ. 1 ಕೆಜಿ ಬೆಳ್ಳಿ ದರದಲ್ಲಿ 900 ರೂಪಾಯಿ ಇಳಿಕೆಯಾಗಿ 61,400 ರೂಪಾಯಿಯ ಆಗಿದೆ.
ಮುಂಬೈನಲ್ಲಿ(Mumbai) ಎಷ್ಟಿದೆ ದರ?
ಮುಂಬೈನಲ್ಲಿ ಚಿನ್ನದ ದರ ಕೊಂಚ ಇಳಿಕೆಯಾಗಿದೆ. ಹೌದು 22 ಕ್ಯಾರಟ್ 10 ಗ್ರಾಂ ಚಿನ್ನದ ದರ, 47,070 ರೂ.ಆಗಿದೆ. 24 ಕ್ಯಾರಟ್ 10 ಗ್ರಾಂ ಚಿನ್ನದ ದರ 49,070ರೂ ಆಗಿದೆ. ಇನ್ನು ಬೆಳ್ಳಿ ದರದಲ್ಲಿ 900 ರೂಪಾಯಿ ಇಳಿಕೆಯಾಗಿದ್ದು, 61,400 ರೂಪಾಯಿ ತಲುಪಿದೆ.
ಚೆನ್ನೈಯಲ್ಲಿ(Chennai) ದರ ಹೀಗಿದೆ
ಚೆನ್ನೈಯಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನದ ದರದಲ್ಲಿ 180 ರೂಪಾಯಿ ಇಳಿಕೆ ಕಂಡು, ಇಂದು 45,170ರೂ. ಆಗಿದೆ. 24 ಕ್ಯಾರಟ್ 10 ಗ್ರಾಂ ಚಿನ್ನದ ದರದಲ್ಲಿ 250 ರೂಪಾಯಿ ಇಳಿಕೆ ಕಂಡು 49,230 ರೂಪಾಯಿ ಆಗಿದೆ. ಒಂದು ಕೆ.ಜಿ. ಬೆಳ್ಳಿ ದರದಲ್ಲಿ 700 ರೂಪಾಯಿ ಇಳಿಕೆ ಕಂಡಿದ್ದು, 65,400 ರೂಪಾಯಿ ಆಗಿದೆ.
ಒಂದು ದಿನ ಕುಸಿಯುವ ಚಿನ್ನದ ದರ ಮರುದಿನವೇ ಏರಿಕೆಯ ಹಾದಿ ಹಿಡಿರುವುದು ಗ್ರಾಹಕರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಹೀಗಿರುವಾಗ ಚಿನ್ನ ಖರೀದಿಸಲು ಇದು ಉತ್ತಮ ಸಮಯವಾ? ಅಥವಾ ಇನ್ನೂ ಕೊಂಚ ಕಾಯುವುದು ಸರಿನಾ? ಎಂಬ ಪ್ರಶ್ನೆಯೂ ಈ ಗೊಂದಲಕ್ಕೆ ಕಾರಣವಾಗಿದೆ. ಒಮಿಕ್ರಾನ್ ಆತಂಕ ಹೆಚ್ಚುತ್ತಿರುವಾಗಲೇ ದೇಶದ ವಿವಿದೆಡೆ ಲಾಕ್ ಡೌನ್ ನಿಯಮಗಳು ಜಾರಿಯಾಗಿವೆ. ಮದುವೆ ಸೇರಿದಂತೆ ಎಲ್ಲಾ ಸಮಾರಂಭಗಳ ಮೇಲೆ ಸರ್ಕಾರ ಕಠಿಣ ನಿಯಮ ಜಾರಿ ಮಾಡಿದೆ.
