ನೋಟ್ ಬ್ಯಾನ್ ಕುರಿತು ಸರ್ಕಾರ ಒಪ್ಪಿಕೊಂಡ ಸತ್ಯವೇನು?| 2 ವರ್ಷಗಳ ಬಳಿಕ ಪರಿಣಾಮ ಗೊತ್ತಿರಲಿಲ್ಲ ಎಂದ ಕೇಂದ್ರ| ವಿತ್ತ ಸಚಿವಾಲಯದ ಸಹಾಯಕ ಸಚಿವ ಪೊನ್‌ ರಾಧಾಕೃಷ್ಣನ್‌| ನೋಟ್ ಬ್ಯಾನ್ ಪರಿಣಾಮಗಳ ಅರಿವಿರಲಿಲ್ಲ ಎಂದ ಸಚಿವ| ‘ನಿಷೇಧದ ನಂತರದ ಬೆಳವಣಿಗೆಗಳ ಮೌಲ್ಯಮಾಪನ ಮಾಡಿರಲಿಲ್ಲ’ 

ನವದೆಹಲಿ(ಡಿ.16): ನೋಟು ನಿಷೇಧವನ್ನು ನಿರಂತರವಾಗಿ ಸಮರ್ಥಿಸಿಕೊಂಡು ಬಂದಿದ್ದ ಮೋದಿ ಸರ್ಕಾರ, ಇದೀಗ ನೋಟು ನಿಷೇಧದ ನಂತರದ ಪರಿಣಾಮಗಳ ಅರಿವಿರಲಿಲ್ಲ ಎಂದು ಒಪ್ಪಿಕೊಂಡಿದೆ. 

ಲೋಕಸಭೆಯಲ್ಲಿ ಕಾಸರಗೋಡು ಕ್ಷೇತ್ರದ ಸಿಪಿಐ ಸಂಸದ ಪಿ ಕರುಣಾಕರನ್‌ ಕೇಳಿದ ಪ್ರಶ್ನೆಗೆ, ಕೇಂದ್ರ ವಿತ್ತ ಸಚಿವಾಲಯದ ಸಹಾಯಕ ಸಚಿವ ಪೊನ್‌ ರಾಧಾಕೃಷ್ಣನ್‌ ಈ ರೀತಿ ಉತ್ತರ ನೀಡಿದ್ದಾರೆ. 

ನೋಟು ನಿಷೇಧದ ನಂತರ ಭಾರತದ ಆರ್ಥಿಕತೆ ಮೇಲೆ ಯಾವ ಪರಿಣಾಮ ಬೀರಲಿದೆ ಎಂದು ಕೇಂದ್ರ ಸರ್ಕಾರ ಮೌಲ್ಯಮಾಪನ ಮಾಡಿರಲಿಲ್ಲ ಎಂದು ರಾಧಾಕೃಷ್ಣನ್‌ ತಿಳಿಸಿದ್ದಾರೆ. 

ಇದೇ ವೇಳೆ ಕೇವಲ ಕಪ್ಪುಹಣ ಮತ್ತು ಕಳ್ಳ ನೋಟುಗಳಿಗೆ ಕಡಿವಾಣ ಹಾಕಲು ನೋಟು ನಿಷೇಧಕ್ಕೆ ಮುಂದಾದ ಕ್ರಮಕ್ಕೆ ಭಾರತೀಯ ರಿಸರ್ವ್‌ ಬ್ಯಾಂಕ್‌ ಸಮ್ಮತಿ ಬಗ್ಗೆ ವಿತ್ತ ಸಚಿವ ಅರುಣ್‌ ಜೇಟ್ಲಿ ಉತ್ತರಿಸಲು ನಿರಾಕರಿಸಿದ್ದಾರೆ.

ನೋಟ್ ಬ್ಯಾನ್: ಉತ್ತರ ಸಿಗದ ಪ್ರಶ್ನೆಗಳು, ಮೋದಿ ಅರಿಯದ ವಿಪಕ್ಷಗಳು!

ನೋಟ್ ಬ್ಯಾನ್ ಸಾಧಿಸಿದ್ದೇನು?: ಮೋದಿ ಬೈದವರಿಗೆ ಇಲ್ಲಿದೆ ಉತ್ತರ!